'ಶಾನುಭೋಗರ ಮಗಳು' ಲುಕ್‌ನಲ್ಲಿ ಡೈನಾಮಿಕ್ ಪ್ರಿನ್ಸ್ ಪತ್ನಿ ರಾಗಿಣಿ ಪ್ರಜ್ವಲ್; ರಿಲೀಸ್ ಯಾವಾಗ?
ಪ್ಯಾನ್ ಇಂಡಿಯಾ ಹಾಗೂ ಕಮರ್ಷಿಯಲ್ ಸಿನಿಮಾ ಮಧ್ಯೆ ಸ್ಮಾಲ್ ಬಜೆಟ್ ಸಿನಿಮಾಗಳು ಕಳೆದು ಹೋಗಿವೆ. ಅದಕ್ಕೂ ಹೆಚ್ಚಾಗಿ ಕಾದಂಬರಿ ಆಧಾರಿತ ಸಿನಿಮಾಗಳಂತೂ ಈಗ ಅಪರೂಪವಾಗಿಬಿಟ್ಟಿದೆ. ಕೇವಲ ಲವ್ ಸ್ಟೋರಿ, ಆಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳನ್ನೇ ಹೆಚ್ಚಾಗಿ ನಿರ್ಮಾಣ ಮಾಡುತ್ತಿದ್ದಾರೆ. ಇಂತಹ ಸಿನಿಮಾಗಳ ಮಧ್ಯೆ ಕಾದಂಬರಿ ಆಧಾರಿತ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ.
ಸದ್ಯ ಯುವ ಪ್ರತಿಭೆಗಳು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪರಿಕಲ್ಪನೆಯ ಸಿನಿಮಾಗಳನ್ನು ನಿರ್ಮಾಣ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಈ ಮಧ್ಯೆ ನಿರ್ಮಾಣಗೊಂಡಿರುವ ಕಾದಂಬರಿ ಆಧಾರಿತ ಸಿನಿಮಾವೇ 'ಶಾನುಭೋಗರ ಮಗಳು'. ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಈ ಸಿನಿಮಾದಲ್ಲಿ ಶಾನುಭೋಗರ ಮಗಳಾಗಿ ಕಾಣಿಸಿಕೊಂಡಿದ್ದಾರೆ.

ಕಾದಂಬರಿ ಆಧಾರಿತ ಸಿನಿಮಾಗಳು ಸ್ಯಾಂಡಲ್‌ವುಡ್‌ನಲ್ಲಿ ಮರೀಚಿಕೆ ಆಗಿರುವಾಗಲೇ, ಇಂತಹದ್ದೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. ವಿಶೇಷ ಅಂದ್ರೆ, ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಈ ಸಿನಿಮಾದಲ್ಲಿ ಶಾನುಭೋಗರ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ, ಈ ಸಿನಿಮಾದ ಹೆಸರು ಕೂಡ 'ಶಾನುಭೋಗರ ಮಗಳು'.
ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ ರಚಿಸಿದ್ದ 'ಶಾನುಭೋಗರ ಮಗಳು' ಕಾದಂಬರಿ ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ಆಕ್ಷನ್ ಕಟ್ ಹೇಳಿದ್ದು, ರಾಗಿಣಿ ಪ್ರಜ್ವಲ್‌ರನ್ನು ಪವರ್‌ಫುಲ್ ಪಾತ್ರದ ಮೂಲಕ ತೆರೆಮೇಲೆ ತರುವುದಕ್ಕೆ ಹೊರಟಿದ್ದಾರೆ. ಸದ್ಯ ಈ ಸಿನಿಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿದ್ದು, ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಯು/ಎ' ಸರ್ಟಿಫಿಕೇಟ್ ನೀಡಿದೆ.


Click it and Unblock the Notifications











