ಚಿನ್ನಸ್ವಾಮಿ ಸ್ಟೇಡಿಯಂಗೆ 50 ವರ್ಷ; ಎವರ್‌ಗ್ರೀನ್ ಕನ್ನಡ ಹಾಡು ಕೇಳಿ ಎಂಜಾಯ್ ಮಾಡಿದ ರಾಹುಲ್ ದ್ರಾವಿಡ್

ಭಾರತೀಯರಿಗೆ ಕ್ರಿಕೆಟ್ ಮತ್ತು ಸಿನಿಮಾ ಎರಡೂ ಜೀವವಿದ್ದಂತೆ. ಇವೆರಡನ್ನೂ ಇನ್ನಿಲ್ಲದಂತೆ ಎಂಜಾಯ್ ಮಾಡುತ್ತಾರೆ. ಕ್ರಿಕೆಟ್ ಹಾಗೂ ಸಿನಿಮಾ ತಾರೆಯರಿಗಾಗಿ ಭಾರತೀಯರು ಪ್ರಾಣವನ್ನೇ ಕೊಡುವುದಕ್ಕೂ ರೆಡಿ. ಹೀಗಾಗಿ ಎರಡೂ ಕ್ಷೇತ್ರಗಳಿಗೂ ಬಹಳ ಹಿಂದಿನ ನಂಟಿದೆ. ಸಿನಿಮಾದಲ್ಲಿ ಕ್ರಿಕೆಟಿಗರು ಕಾಣಿಸಿಕೊಳ್ಳುವುದು. ಕ್ರಿಕೆಟ್ ಸಮಾರಂಭಗಳಲ್ಲಿ ಸಿನಿಮಾ ಮಂದಿ ಕಾಣಿಸಿಕೊಳ್ಳುವುದು ಕಾಮನ್.

ಇತ್ತೀಚೆಗೆ ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಅಂತರರಾಷ್ಟ್ರೀಯ ಪಂದ್ಯವಾಗಿ 50 ವರ್ಷಗಳಾಗಿವೆ. ಈ ಮೈಲಿಗಲ್ಲು ಸಾಧಿಸಿದ ಸಲುವಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಕ್ರಿಕೆಟ್ ಲೋಕದ ದಿಗ್ಗಜರಾದ 'ದಿ ವಾಲ್' ರಾಹುಲ್ ದ್ರಾವಿಡ್, ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ ಹಾಗೂ ಶಾಂತಾ ರಂಗಸ್ವಾಮಿ ಆಗಮಿಸಿದ್ದರು.

Rahul Dravid asked to sing Kannada song in Golden Jubilee of Iconic Chinnaswamy Stadium Bengaluru

ಇವರು ಮಾಡಿದ ಸಾಧನೆಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಹಾಗೂ ಶಾಂತಾ ರಂಗಸ್ವಾಮಿಯವರ ಹೆಸರುಗಳನ್ನು ನಾಮಕರಣ ಮಾಡಲಾಗಿದೆ. ಈ ಖುಷಿಯ ಸಂದರ್ಭದಲ್ಲಿ ಸಂಗೀತ ಸಂಜೆಯನ್ನೂ ಆಯೋಜನೆ ಮಾಡಲಾಗಿತ್ತು. ಗಾಯಕ ಅನೂಪ್ ಶಂಕರ್ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ವೇಳೆ ರಾಹುಲ್ ದ್ರಾವಿಡ್ ಬಳಿಗೆ ಬಂದು ಯಾವ ಭಾಷೆಯ ಹಾಡನ್ನು ನಿಮಗಾಗಿ ಹಾಡಲಿ ಎಂದು ಕೇಳಿದ್ದರು. ಅದಕ್ಕೆ ರಾಹುಲ್ ದ್ರಾವಿಡ್ ಕೊಟ್ಟ ಉತ್ತರ ಹೀಗಿತ್ತು.

ಅನೂಪ್ ಶಂಕರ್ ಹಾಡಿಗೆ ಕ್ರಿಕೆಟ್ ದಿಗ್ಗಜರು ಕೂಡ ಎಂಜಾಯ್ ಮಾಡಿದರು. ಈ ವೇಳೆ ರಾಹುಲ್ ದ್ರಾವಿಡ್ ಬಳಿಗೆ ಬಂದ ಗಾಯಕ "ನಿಮಗಾಗಿ ಯಾವ ಭಾಷೆಯಲ್ಲಿ ಹಾಡಲಿ? ಹಿಂದಿ, ಕನ್ನಡ, ತೆಲುಗು, ತಮಿಳು ಯಾವ ಭಾಷೆಯಲ್ಲಿ ಹಾಡಲಿ ಎಂದು ಕೇಳಿದರು. ಅದಕ್ಕೆ ರಾಹುಲ್ ದ್ರಾವಿಡ್ "ಒಂದು ಒಳ್ಳೆಯ ಕನ್ನಡ ಹಾಡು ಹಾಡಿ" ಎಂದು ಹೇಳಿದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಹೀಗೆ ಹೇಳುತ್ತಿದ್ದಂತೆ ಗಾಯಕ ಅನೂಪ್ ಕನ್ನಡದ ಎವರ್‌ಗ್ರೀನ್ ಸಾಂಗ್ 'ಗೀತಾ' ಸಿನಿಮಾದ "ಜೊತೆಯಲಿ ಜೊತೆಯಲಿ.." ಎಂದು ಹಾಡುವುದಕ್ಕೆ ಶುರು ಮಾಡಿದರು. ಸಂಗೀತ ಮಾಂತ್ರಿ ಇಳಯರಾಜ ಕಂಪೋಸ್ ಮಾಡಿದ ಈ ಹಾಡಿಗೆ ಸಿನಿ ಸಾಹಿತ್ಯ ಲೋಕದ ಲೆಜೆಂಡ್ ಉದಯಶಂಕರ್ ಪದಗಳನ್ನು ಪೋಣಿಸಿದ್ದರು. ಈ ಹಾಡನ್ನು ಎಸ್‌ಪಿ ಬಾಲಸುಬ್ರಮಣ್ಯಂ ಹಾಗೂ ಎಸ್.ಜಾನಕಿಯವರು ಹಾಡಿದ್ದರು. ಈ ಹಾಡನ್ನು ರಾಹುಲ್ ದ್ರಾವಿಡ್ ಮುಂದೆ ಹಾಡಿದ್ದರು.

Rahul Dravid asked to sing Kannada song in Golden Jubilee of Iconic Chinnaswamy Stadium Bengaluru

ರಾಹುಲ್ ದ್ರಾವಿಡ್ "ಜೊತೆಯಲಿ ಜೊತೆಯಲಿ.." ಹಾಡನ್ನು ಕೇಳಿ ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ರಾಹುಲ್ ದ್ರಾವಿಡ್ ಕನ್ನಡ ಹಾಡನ್ನು ಕೇಳಿದ್ದು ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ. "ರಾಹುಲ್ ದ್ರಾವಿಡ್ ಕನ್ನಡ ಹಾಡನ್ನು ಕೇಳಿದರು. ಗಾಯಕ ಜೊತೆಜೊತೆಯಲಿ ಹಾಡನ್ನು ಆಯ್ಕೆ ಮಾಡಿದರು. ಎಂತಹ ಅದ್ಭುತ ಸೆಲೆಕ್ಷನ್", "ವಾವ್ಹ್.. ರಾಹುಲ್ ದ್ರಾವಿಡ್ ಕನ್ನಡ ಹಾಡನ್ನು ಆಯ್ಕೆ ಮಾಡಿದ್ರು" ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂಗೆ 50 ವರ್ಷಗಳ ಸಂಭಮ್ರದ ವೇಳೆ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಹೊಸ ಹೆಸರನ್ನು ನೀಡಲಾಗಿದೆ. ಪೆವಿಲಿಯನ್ ಎಂಡ್‌ಗೆ ಅನಿಲ್ ಕುಂಬ್ಳೆ ಎಂಡ್ ಅಂತಲೂ, ನಾರ್ತ್ ಎಂಡ್‌ಗೆ ರಾಹುಲ್ ದ್ರಾವಿಡ್ ಎಂಡ್ ಅಂತಲೂ ಹಾಗೂ ಇನ್ನೊಂದು ಪ್ರಮುಖ ಸ್ಟ್ಯಾಂಡ್‌ಗೆ ಶಾಂತಾ ರಂಗಸ್ವಾಮಿ ಸ್ಟ್ಯಾಂಡ್ ಅಂತಲೂ ನಾಮಕರಣ ಮಾಡಲಾಗಿದೆ. ಈ ವೇಳೆ ದ್ರಾವಿಡ್ " ಚಿನ್ನಾಸ್ವಾಮಿ ಸ್ಟೇಡಿಯಂ ನನಗೆ ಎರಡನೇ ಮನೆಯಿದ್ದಂತೆ" ಎಂದು ಹೇಳಿ ತಮ್ಮ ಹಾಗೂ ಸ್ಟೇಡಿಯಂನೊಂದಿಗಿನ ಒಡನಾಟವನ್ನು ಹಂಚಿಕೊಂಡರು.

More from Filmibeat

English summary
Rahul Dravid asked to sing Kannada song in Golden Jubilee of Iconic Chinnaswamy Stadium Bengaluru.
Read more about: rahul dravid kannada song geetha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X