ರಾಜ್ ಬಿ ಶೆಟ್ಟಿಯ 'ಬಿಗ್ ಬಜೆಟ್' ಸಿನಿಮಾ 90% ಮುಗಿದೇ ಹೋಗಿದೆಯಂತೆ:'ಸ್ವಾತಿ ಮುತ್ತಿನ ಮಳೆ ಹನಿಯೇ' ಕಥೆಯೇನು?

ಸ್ಯಾಂಡಲ್‌ವುಡ್‌ನ ಸೆನ್ಸೇಷನಲ್ ಡೈರೆಕ್ಟರ್ ರಾಜ್ ಬಿ ಶೆಟ್ಟಿ. ಕೆಲವು ತಿಂಗಳ ಹಿಂದಷ್ಟೇ ರಿಲೀಸ್ ಆಗಿದ್ದ 'ಗರುಡ ಗಮನ ವೃಷಭ ವಾಹನ' ಸಿನಿಮಾ ಭಾರತದಾದ್ಯಂತ ಸಿನಿಪ್ರಿಯರ ಮನಗೆದ್ದಿತ್ತು. ಬಾಲಿವುಡ್ ಫಿಲ್ಮ್ ಮೇಕರ್‌ಗಳು ಕೂಡ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಬೆನ್ನಲ್ಲೇ ರಾಜ್‌ ಬಿ ಶೆಟ್ಟಿ ಹೊಸ ಸಿನಿಮಾ ಅನೌನ್ಸ್ ಮಾಡಿದ್ದರು. ಅದುವೇ 'ಸ್ವಾತಿ ಮುತ್ತಿನ ಮಳೆ ಹನಿಯೇ'. ಈ ಸಿನಿಮಾ ರಾಜ್‌ ಬಿ ಶೆಟ್ಟಿ ಹಾಗೂ ರಮ್ಯಾ ಕಾಂಬಿನೇಷನ್‌ನಲ್ಲಿ ಬರಬೇಕಿತ್ತು. ಕೊನೆಯ ಕ್ಷಣದಲ್ಲಿ ರಮ್ಯಾ ಹಿಂದೆ ಸರಿದು, ಕೇವಲ ನಿರ್ಮಾಪಕಿಯಾಗಿಯೇ ಉಳಿದುಕೊಂಡಿದ್ದರು. ಈಗಾಗಲೇ ಈ ಸಿನಿಮಾದ ಶೂಟಿಂಗ್ ಕೂಡ ಮುಗಿಸಿದ್ದಾರೆ.

ಆದರೆ, ಮ್ಯಾಟರ್ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದ್ದಲ್ಲವೇ ಅಲ್ಲ. ಈ ಗ್ಯಾಪ್‌ನಲ್ಲೇ ಹೊಸ ಬಿಗ್ ಬಜೆಟ್ ಸಿನಿಮಾವೊಂದಕ್ಕೆ ಕೈ ಹಾಕಿದ್ದಾರಂತೆ. ವಿಶೇಷ ಅಂದ್ರೆ, ಆ ಸಿನಿಮಾ ಶೇ.90ರಷ್ಟು ಶೂಟಿಂಗ್ ಕೂಡ ಮುಗಿದಿದೆಯಂತೆ. ಅಸಲಿಗೆ ಆ ಸಿನಿಮಾ ಯಾವುದು? ವಿಶೇಷತೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ರಾಜ್ ಬಿ ಶೆಟ್ಟಿ ಬಿಗ್ ಬಜೆಟ್ ಸಿನಿಮಾ ಕಥೆಯೇನು?

ರಾಜ್ ಬಿ ಶೆಟ್ಟಿ ಬಿಗ್ ಬಜೆಟ್ ಸಿನಿಮಾ ಕಥೆಯೇನು?

ರಾಜ್‌ ಬಿ ಶೆಟ್ಟಿ ಯಾವಾಗ 'ಸ್ವಾತಿ ಮುತ್ತಿನ ಮಳೆ ಹನಿಯೇ' ಶೂಟಿಂಗ್ ಮುಗಿಸಿದ್ರು ಅನ್ನೋದು ಗೊತಾಗಿಲ್ಲ. ಅಷ್ಟು ಬೇಗ ಸಿನಿಮಾ ಕಂಪ್ಲೀಟ್ ಆಗಿತ್ತು. ಈ ವಿಷಯ ಬಹಿರಂಗ ಆಗುತ್ತಿದ್ದಂತೆ ಹಲವು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದರು. ಆದ್ರೀಗ ರಾಜ್ ಬಿ ಶೆಟ್ಟಿ ಸಿನಿಪ್ರಿಯರಿಗೆ ಮತ್ತೊಂದು ಶಾಕ್ ಕೊಟ್ಟಿದ್ದಾರೆ. 'ಸ್ವಾತಿ ಮುತ್ತಿನ ಮಳೆ ಹನಿಯೇ' ರಿಲೀಸ್‌ಗೂ ಮುನ್ನವೇ ಮತ್ತೊಂದು ಸಿನಿಮಾ ಶೂಟಿಂಗ್ ಶೇ.90ರಷ್ಟು ಮುಗಿಸಿದ್ದಾರಂತೆ. ಅಷ್ಟಕ್ಕೂ ಈ ಸಿನಿಮಾ ಯಾವಾಗ ಶುರು ಮಾಡಿದ್ರು? ಅನ್ನೋದೇ ಯಾರಿಗೂ ಗೊತ್ತಿಲ್ಲ.

ಯಾವಾಗ ಸಿನಿಮಾ ಆರಂಭ ಮಾಡಿದ್ರು?

ಯಾವಾಗ ಸಿನಿಮಾ ಆರಂಭ ಮಾಡಿದ್ರು?

ಎಲ್ಲರೂ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಬಗ್ಗೆ ಮಾತಾಡುತ್ತಿರುವಾಗಲೇ ಶೆಟ್ಟರು ತಮ್ಮ ಕರಿಯರ್‌ನ ಬಿಗ್ ಬಜೆಟ್ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಸಿ ಕೂತಿದ್ದಾರೆ. ಈಗಾಗಲೇ ಸಿನಿಮಾವನ್ನು ಮಂಗಳೂರು, ಉಡುಪಿ ಸೇರಿದಂತೆ ಹಲವೆಡೆ ಶೂಟಿಂಗ್ ಮಾಡಲಾಗಿದೆ ಎಂದು ನ್ಯೂಸ್ 18 ಕನ್ನಡ ವರದಿ ಮಾಡಿದೆ. ರಾಜ್‌ ಬಿ ಶೆಟ್ಟಿ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರೋದು ಕೂಡ ಅಷ್ಟೇ ವಿಶೇಷ.

ಲವ್ ಸ್ಟೋರಿ ಅಲ್ಲದಿದ್ರೂ, ಇಬ್ಬರು ಹೀರೊಯಿನ್

ರಾಜ್ ಬಿ ಶೆಟ್ಟಿಯ ಬಿಗ್ ಬಜೆಟ್ ಸಿನಿಮಾಗೆ ಇಬ್ಬರು ನಾಯಕಿಯರು ಇದ್ದಾರಂತೆ. ಆದರೆ, ಇದು ರೊಮ್ಯಾಂಟಿಕ್ ಸಿನಿಮಾ ಅಲ್ಲವಂತೆ. ಮೊದಲೇ ವಿಭಿನ್ನ ಕಾನ್ಸೆಪ್ಟ್‌ಗಳನ್ನು ತೆರೆಮೇಲೆ ತರೋ ರಾಜ್, ಈ ಬಾರಿ ಅದೆಂತಹ ಸಿನಿಮಾ ಮಾಡಿದ್ದಾರೆ ಅನ್ನೋ ಕುತೂಹಲವಿದೆ. ಅಂದ್ಹಾಗೆ, ಇಬ್ಬರು ನಾಯಕಿಯರಲ್ಲಿ ಒಬ್ಬರು ಸಂಯುಕ್ತ ಹೊರನಾಡು. ಮತ್ತೊಬ್ಬರು ಯಾರು ಅನ್ನೋದು ಇನ್ನೂ ರಿವೀಲ್ ಮಾಡಿಲ್ಲ. ಎರಡು ತಿಂಗಳ ಹಿಂದಷ್ಟೇ ರಾಜ್ ಕಾಸ್ಟಿಂಗ್ ಕಾಲ್ ಮಾಡಿದ್ದರು.

'ಸ್ವಾತಿ ಮುತ್ತಿನ ಮಳೆ ಹನಿಯೇ' ಕಥೆಯೇನು?

'ಸ್ವಾತಿ ಮುತ್ತಿನ ಮಳೆ ಹನಿಯೇ' ಕಥೆಯೇನು?

ರಾಜ್ ಬಿ ಶೆಟ್ಟಿ ಸಿನಿಮಾಗಳಿಗೆ ರಮ್ಯಾ ಫಿದಾ ಆಗಿದ್ದರು. ಹೀಗಾಗಿ ಇವರ ಸಿನಿಮಾದಿಂದಲೇ ಕಮ್‌ ಬ್ಯಾಕ್ ಮಾಡುವುದಕ್ಕೆ ನಿರ್ಧರಿಸಿದ್ದರು. ಆದರೆ, ಮಧ್ಯೆದಲ್ಲಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರಕ್ಕೆ ನಿರ್ಮಾಪಕಿಯಾಗಿ ಮಾತ್ರ ಉಳಿದುಕೊಳ್ಳಲು ನಿರ್ಧರಿಸಿದ್ದರು. ಇದು ರಾಜ್ ಬಿ ಶೆಟ್ಟಿಗೆ ಬೇಸರ ತರಿಸಿತ್ತು ಅನ್ನೋ ಸುದ್ದಿ ಆ ಹರಿದಾಡಿತ್ತು. ಆದರೆ, ಅಂದುಕೊಂಡಿದ್ದಕ್ಕಿಂತ ಬೇಗನೇ ಸಿನಿಮಾ ಮುಗಿಸಿಕೊಟ್ಟಿದ್ದಾರೆ. ಈಗ ರಾಜ್‌ ಬಿ ಶೆಟ್ಟಿಯ ಹೊಸ ಬಿಗ್ ಬಜೆಟ್ ಸಿನಿಮಾ ಮಾಡುತ್ತಿರುವ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಿದ್ರೆ, 'ಸ್ವಾತಿ ಮುತ್ತಿನ ಮಳೆ ಹನಿಯೇ' ಕಥೆಯೇನು? ಯಾವಾಗ ರಿಲೀಸ್ ಮಾಡುತ್ತಾರೆ? ಅನ್ನೋದು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

More from Filmibeat

English summary
Raj B Shetty Finished Almost 90 Percent Shooting Of His Next Big Budget Movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X