Rakkasapuradhol:'ಸು ಫ್ರಮ್ ಸೋ' ಹಾದಿ ಹಿಡಿದ ರಾಜ್ ಬಿ ಶೆಟ್ಟಿ 'ರಕ್ಕಸಪುರದೋಳ್' ಸಿನಿಮಾಗೆ ಮೈಸೂರಿನಲ್ಲಿ ರೆಸ್ಪಾನ್ಸ್ ಹೇಗಿದೆ?
2025ರಲ್ಲಿ ಕನ್ನಡ ಚಿತ್ರರಂಗಕ್ಕೆ ಮೊದಲ ಬಿಗ್ ಸಕ್ಸಸ್ ಕೊಟ್ಟ ಸಿನಿಮಾ 'ಸು ಫ್ರಮ್ ಸೋ'. ರಾಜ್ ಬಿ ಶೆಟ್ಟಿ ನಿರ್ಮಿಸಿ, ನಟಿಸಿದ್ದ ಈ ಸಿನಿಮಾ ಫಿಲ್ಮ್ ಮೇಕರ್ಸ್‌ಗೆ ಅಚ್ಚರಿ ಮೂಡಿಸಿತ್ತು. ರಾಜ್ ಬಿ ಶೆಟ್ಟಿ ಒಬ್ಬರನ್ನು ಬಿಟ್ಟು ಆ ಸಿನಿಮಾದಲ್ಲಿ ನಟಿಸಿದವರೆಲ್ಲರೂ ಕನ್ನಡಿಗರಿಗೆ ಹೊಸ ಮುಖಗಳೇ ಆಗಿದ್ದವು. ಸಿನಿಮಾರಂಗದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರೂ, ಪ್ರಮುಖ ಪಾತ್ರಗಳಲ್ಲಿ ನಟಿಸಿರಲಿಲ್ಲ.
ಸ್ಟಾರ್‌ಗಳೇ ಇಲ್ಲದ ಸಿನಿಮಾವನ್ನು ರಾಜ್ ಬಿ ಶೆಟ್ಟಿ ಅದ್ಭುತವಾಗಿ ಪ್ರಚಾರ ಮಾಡಿದ್ದರು. ಸಿನಿಮಾ ರಿಲೀಸ್‌ಗೂ ಮುನ್ನ ಕರ್ನಾಟಕದ ಪ್ರಮುಖ ನಗರಗಳಲ್ಲಿ ಪ್ರೀಮಿಯರ್ ಮಾಡಿದ್ದರು. ಮಂಗಳೂರಿನಿಂದ ಶುರುವಾಗಿದ್ದ ಈ ಪ್ರೀಮಿಯರ್ ಪಯಣ ಮೈಸೂರಿನವರೆಗೂ ಬಂದು ನಿಂತಿತ್ತು. ಈಗ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮತ್ತೊಂದು ಸಿನಿಮಾ ಅದೇ ಹಾದಿಯಲ್ಲಿ ಸಾಗುತ್ತಿದೆ. ಅದುವೇ 'ರಕ್ಕಸಪುರದೋಳ್'.

ಭಾರತೀಯ ಚಿತ್ರರಂಗದ ಜನಪ್ರಿಯ ಸಾಹಸ ನಿರ್ದೇಶಕ ರವಿಮರ್ಮಾ ಇದೇ ಮೊದಲ ಬಾರಿಗೆ ನಿರ್ಮಾಣ ಮಾಡಿರುವ ಸಿನಿಮಾ 'ರಕ್ಕಸಪುರದೋಳ್'. ಈಗಾಗಲೇ ಈ ಸಿನಿಮಾ ಕರ್ನಾಟಕದಲ್ಲಿ ಸದ್ದು ಮಾಡುತ್ತಿದೆ. ಚಿತ್ರತಂಡ ಕೂಡ ಕಳೆದ ಕೆಲವು ದಿನಗಳಿಂದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವುದಕ್ಕೆ ಸಾಕಷ್ಟು ಪ್ರಚಾರ ಮಾಡಿತ್ತು. ಅದಕ್ಕೆ ಸಿಕ್ಕಿರುವ ಮೊದಲ ಪ್ರತಿಕ್ರಿಯೆ ಮೈಸೂರು ಪ್ರೀಮಿಯರ್.
ಮೈಸೂರಿನಲ್ಲಿ 'ರಕ್ಕಸಪುರದೋಳ್' ಪ್ರೀಮಿಯರ್
'ರಕ್ಕಸಪುರದೋಳ್' ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದರೂ, ಅವರ ರಗಡ್ ಲುಕ್ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ಇದರಲ್ಲಿ ರಾಜ್ ಬಿ ಶೆಟ್ಟಿಯದ್ದು ಕಾಂಪ್ಲೆಕ್ಸ್ ಪೊಲೀಸ್ ಆಫೀಸರ್ ಪಾತ್ರ. ಸಣ್ಣ ಹಳ್ಳಿಯೊಂದರಲ್ಲಿ ಆಗಿರುವ ನಿಗೂಢ ಕೊಲೆಯ ಕೇಸ್ ಅನ್ನು ರಾಜ್ ಹ್ಯಾಂಡಲ್ ಮಾಡುತ್ತಾರೆ. ಹೀಗಾಗಿ ಇದೊಂದು ಥ್ರಿಲ್ಲರ್, ಆಕ್ಷನ್ ಸಿನಿಮಾವೆಂದು ಹೇಳಬಹುದು.
ಪ್ರಿಮಿಯರ್‌ಗೆ ಮಸ್ತ್ ರೆಸ್ಪಾನ್ಸ್
'ರಕ್ಕಸಪುರದೋಳ್' ಸಿನಿಮಾದ ಮೊದಲ ಪ್ರೀಮಿಯರ್ ಇಂದು (ಜನವರಿ 4) ಮೈಸೂರಿನಲ್ಲಿ ನಡೆಯುತ್ತಿದೆ. ಅದಕ್ಕೆ ಸಿಕ್ಕಾಪಟ್ಟೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ಪ್ರಿಮಿಯರ್ ಹೌಸ್‌ಫುಲ್ ಆಗಿದೆ. 24 ಗಂಟೆಗಳಲ್ಲಿ ಎಲ್ಲಾ ಟಿಕೆಟ್‌ಗಳು ಸೋಲ್ಡ್‌ಔಟ್ ಆಗಿವೆ. ಮೈಸೂರಿನಲ್ಲಿ ನಡೆಯಲಿರುವ ಪ್ರೀಮಿಯರ್ ಶೋ ನೋಡಿದ ಬಳಿಕ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆಂಬ ಕುತೂಹಲವಿದೆ.

'ಸು ಫ್ರಂ ಸೋ' ಹಾದಿಯಲ್ಲಿ
ಒಳ್ಳೆಯ ಕಂಟೆಂಟ್ ಅನ್ನು ಪ್ರೇಕ್ಷಕರಿಗೆ ತಲುಪಿಸುವುದಕ್ಕೆ ರಾಜ್ ಬಿ ಶೆಟ್ಟಿ ಎತ್ತಿದ ಕೈ. ಅದಕ್ಕೆ 'ಸು ಫ್ರಮ್ ಸೋ'ನೇ ಕಾರಣ. ಮಂಗಳೂರು, ಶಿವಮೊಗ್ಗ, ಬೆಂಗಳೂರು, ಮೈಸೂರು ಸೇರಿದಂತೆ ಹಲವು ಭಾಗಗಳಲ್ಲಿ ಸಿನಿಮಾ ಪ್ರೀಮಿಯರ್ ಕಂಡಿತ್ತು. ಅದೇ ರೀತಿ ಈಗ 'ರಕ್ಕಸಪುರದೋಳ್' ಸಿನಿಮಾವನ್ನು ಪ್ರೀಮಿಯರ್ ಮಾಡಲಾಗುತ್ತಿದೆ. 'ಸು ಫ್ರಮ್ ಸೋ'ನಂತ ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಾ? ಫೆಬ್ರವರಿ 6ರಂದು ಗೊತ್ತಾಗಲಿದೆ.
'ರಕ್ಕಸಪುರದೋಳ್' ಲೆಕ್ಕಾಚಾರವೇನು?
'ರಕ್ಕಸಪುರದೋಳ್' ಸಿನಿಮಾವನ್ನು ರವಿ ಸಾರಂಗ ನಿರ್ದೇಶನ ಮಾಡಿದ್ದಾರೆ. ಜೋಗಿ ಪ್ರೇಮ್ ಗರಡಿಯಲ್ಲಿ ಪಳಗಿರುವ ರವಿ ಸಾರಂಗ್ ಕಥೆಯನ್ನು ರವಿವರ್ಮಾ ಹಾಗೂ ರಾಜ್ ಬಿ ಶೆಟ್ಟಿಗೆ ಇಷ್ಟ ಆಗಿತ್ತು. ಅಲ್ಲದೆ ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ತುಣುಕುಗಳು ಪ್ರೇಕ್ಷಕರಿಗೆ ಇಷ್ಟ ಆಗಿವೆ. ಹೀಗಾಗಿ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತೆ ಎಂಬ ನಿರೀಕ್ಷೆಯಲ್ಲಿ ಸ್ಯಾಂಡಲ್‌ವುಡ್ ಮಂದಿ ಇದ್ದಾರೆ.


Click it and Unblock the Notifications











