"ಕೆಟ್ಟ ಸಿನಿಮಾ ಮಾಡಿದಾಗ ಯಾಕೆ ಸಪೋರ್ಟ್ ಮಾಡಬೇಕು?"; ರಾಜ್ ಬಿ ಶೆಟ್ಟಿ
ಕಳೆದ ಎರಡು ಮೂರು ವರ್ಷಗಳಿಂದ ಕನ್ನಡ ಚಿತ್ರರಂಗದ ಪರಿಸ್ಥಿತಿ ಹದಗೆಟ್ಟಿದೆ. ಅಪರೂಪಕ್ಕೆ ಎಂಬಂತೆ ಸೂಪರ್‌ಸ್ಟಾರ್‌ಗಳ ಸಿನಿಮಾಗಳು ರಿಲೀಸ್ ಆಗುತ್ತಿವೆ. ಇದರಲ್ಲಿ ಕೆಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದರೆ, ಮತ್ತೆ ಕೆಲವು ಮಖಾಡೆ ಮಲಗಿವೆ. ಇನ್ನು ಹೊಸಬರ ಸಿನಿಮಾಗಳಿಗಂತೂ ಬಾಕ್ಸಾಫೀಸ್‌ನಲ್ಲಿ ನಿಲ್ಲುತ್ತಲೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಎಂಬ ಕೂಗು ಬಹಳ ದಿನಗಳಿಂದಲೂ ಕೇಳಿ ಬರುತ್ತಿದೆ.
ಕನ್ನಡ ಚಿತ್ರರಂಗ ಈಗೀಗ ಸಮಸ್ಯೆಗಳ ಆಗಾರವಾಗಿಬಿಟ್ಟಿದೆ. ಪರಭಾಷಾ ಸಿನಿಮಾಗಳ ಪೈಪೋಟಿ, ಥಿಯೇಟರ್ ಸಮಸ್ಯೆ, ಪೈರಸಿ, ಫಿಲ್ಮ್ ಮೇಕಿಂಗ್ ಹೀಗೆ ಹತ್ತು ಹಲವು ಸಮಸ್ಯೆಗಳು ಇವೆ. ಇವುಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಸಮಸ್ಯೆ ಬಂದಾಗ ಮಾತ್ರ ಧ್ವನಿ ಎತ್ತಿ ಮರೆಯಾಗುತ್ತಾರೆ. ಇನ್ನೊಂದು ಕಡೆ, ಒಬ್ಬ ಸೂಪರ್‌ಸ್ಟಾರ್ ಇನ್ನೊಬ್ಬರ ಸೂಪರ್ ಸ್ಟಾರ್ ಸಿನಿಮಾಗೆ ಸಪೋರ್ಟ್ ಮಾಡೋದಿಲ್ಲ ಎಂಬ ಆರೋಪ ಕೂಡ ಇದೆ.

ಹಲವು ದಿನಗಳಿಂದ ಕನ್ನಡ ಸ್ಟಾರ್‌ಗಳ ಬಗ್ಗೆ ಇಂತಹದ್ದೊಂದು ಆರೋಪ ಮಾಡಲಾಗುತ್ತಿದೆ. ಇದೇ ವಿಷಯದ ಬಗ್ಗೆ ರಾಜ್ ಬಿ ಶೆಟ್ಟಿ ಸ್ಪೀಡ್ ಪ್ಲಸ್ ಕರ್ನಾಟಕಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇದೆಯಾ? ಇಲ್ವಾ? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಒಬ್ಬ ಸ್ಟಾರ್ ಇನ್ನೊಬ್ಬ ಸ್ಟಾರ್‌ಗೆ ಸಪೂರ್ಟ್ ಮಾಡುತ್ತಾರಾ? ಈ ಪ್ರಶ್ನೆಗಳಿಗೆ ಸ್ಯಾಂಡಲ್‌ವುಡ್ ನಟ ರಾಜ್ ಬಿ ಶೆಟ್ಟಿ ಓಪನ್ ಆಗಿ ಮಾತಾಡಿದ್ದಾರೆ.
ಮುಂದೆ ಓದಿ
'ಒಂದು ಮೊಟ್ಟೆಯ ಕಥೆ', 'ಗರುಡ ಗಮನ' ನೋಡಿ ಬೆಂಬಲ
ಕೆಟ್ಟ ಸಿನಿಮಾ ಮಾಡಿದಾಗ ಯಾಕೆ ಸಪೋರ್ಟ್ ಮಾಡಬೇಕು?
ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇದೆಯೋ.. ಇಲ್ವೋ?
ಮಲಯಾಳಂ ಚಿತ್ರರಂಗದ ಬಜೆಟ್ ಮೂರು ಪಟ್ಟು ಜಾಸ್ತಿ
ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲ ಎನ್ನುವ ಬಗ್ಗೆ ರಾಜ್ ಬಿ ಶೆಟ್ಟಿ ಓಪನ್ ಆಗಿ ಮಾತಾಡಿದ್ದಾರೆ. "ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಅನ್ನೋದು ನನಗೆ ಗೊತ್ತಿಲ್ಲ. ಅದು ನನಗೆ ಇಲ್ಲಿವರೆಗೂ ಅರ್ಥ ಆಗಿಲ್ಲ. ಒಂದು ಮೊಟ್ಟೆಯ ಕಥೆ ನೋಡಿ ಎಲ್ಲರೂ ಸಪೋರ್ಟ್ ಮಾಡಿದರು. ಗರುಡ ಗಮನ ನೋಡಿದಾಗ ಎಲ್ಲರೂ ಸಪೋರ್ಟ್ ಮಾಡಿದರು. ನಾನು ಒಳ್ಳೆಯ ಸಿನಿಮಾ ಮಾಡಿದಾಗ ಎಲ್ಲರೂ ಸಪೋರ್ಟ್ ಮಾಡಿದರು." ಎಂದು ಕನ್ನಡ ಚಿತ್ರರಂಗದ ಬಗ್ಗೆ ಮಾತಾಡಿದ್ದಾರೆ.
ಚಿತ್ರರಂಗದಲ್ಲಿ ಒಗ್ಗಟ್ಟಿದೆಯಾ?
"ಕೆಟ್ಟ ಸಿನಿಮಾ ಮಾಡಿದಾಗ ಸಪೋರ್ಟ್ ಮಾಡಿಲ್ಲ. ಅದರಲ್ಲಿ ಒಗ್ಗಟ್ಟಿಲ್ಲ ಅಂತ ಅನಿಸಲಿಲ್ಲ. ಕೆಟ್ಟ ಸಿನಿಮಾ ಮಾಡಿದಾಗ ಯಾಕೆ ಸಪೋರ್ಟ್ ಮಾಡಬೇಕು? ನನಗೆ ಇಲ್ಲಿವರೆಗೂ ಸಪೋರ್ಟ್ ಸಿಕ್ಕಿದೆ. ಒಗ್ಗಟ್ಟಿಲ್ಲ ಎನ್ನುವ ಕೂಗು ತುಂಬಾನೇ ಉತ್ಪ್ರೇಕ್ಷೆಯಾಗುತ್ತೆ. ನಾವೆಲ್ಲರೂ ನೊಂದುಕೊಂಡಿದ್ದೀವಿ. ನಮ್ಮ ಹೆಜ್ಜೆಯನ್ನು ಕಂಡುಕೊಳ್ಳುವುದಕ್ಕೆ ಕಷ್ಟ ಪಡುತ್ತಿದ್ದೇವೆ ಬಿಟ್ಟರೆ, ಒಗ್ಗಟ್ಟಿಲ್ಲ ಅನ್ನೋದೆಲ್ಲ ಸುಳ್ಳು. ನನಗೆ ಇದೂವರೆಗೂ ಹಾಗೆ ಅನಿಸಿಲ್ಲ." ಎನ್ನುತ್ತಾರೆ ರಾಜ್ ಬಿ ಶೆಟ್ಟಿ.
ಮಲಯಾಳಂ ಸಿನಿಮಾ ಬಜೆಟ್ 3 ಪಟ್ಟು ದೊಡ್ಡದು
ಕನ್ನಡ ಸಿನಿಮಾಗಳನ್ನು ತೆಗಳಿ ಮಲಯಾಳಂ ಸಿನಿಮಾಗಳನ್ನು ಹೊಗಳುವವರಿಗೂ ರಾಜ್ ಬಿ ಶೆಟ್ಟಿ ತಿರುಗೇಟು ಕೊಟ್ಟಿದ್ದಾರೆ. "ಕಾಂತಾರ ಸಿನಿಮಾ ಬಜೆಟ್ ಎಷ್ಟು 10, 12, 15 ಕೋಟಿ ರೂಪಾಯಿ ಅಂದುಕೊಳ್ಳಿ. ಮಲಯಾಳಂನ ಆವೇಶಂ ಕೂಡ ಆಯ್ತು. ಅದರ ಬಜೆಟ್ ಎಷ್ಟು? ₹30 ಕೋಟಿ. ಅದು ದೊಡ್ಡ ಬಜೆಟ್ ನಮಗೆ ಲೆಕ್ಕ ಹಾಕುವುದಕ್ಕೆ ಬರೋದಿಲ್ಲ ಅಷ್ಟೇ. ಮಂಜುಮಲ್ ಬಾಯ್ಸ್ ಬಂತು ಅದರ ಬಜೆಟ್ ಎಷ್ಟು? ₹30 ಕೋಟಿ ನಮಗೆ ಲೆಕ್ಕ ಹಾಕುವುದಕ್ಕೆ ಬರೋದಿಲ್ಲ ಅಷ್ಟೇ. ಅಲ್ಲಿ ಫೈಟ್ ಇಲ್ಲ ಅನ್ನೋದು ಬಿಟ್ಟರೆ, ಆ ಸಿನಿಮಾಗಳ್ಯಾವುವೂ ಸಣ್ಣ ಬಜೆಟ್ ಸಿನಿಮಾ ಅಲ್ಲ." ಎಂದಿದ್ದಾರೆ.
ಹಾಗೇ ಮಲಯಾಳಂ ಸಿನಿಮಾಗಳಿಗಿಂತ ಕಾಂತಾರಕ್ಕಿಂತ ಮೂರು ನಾಲ್ಕು ಪಟ್ಟು ಜಾಸ್ತಿ ಬಜೆಟ್ ಇತ್ತು. ಆ ಕೆಲಸವನ್ನು ಕಾಂತಾರ ₹10 ರಿಂದ ₹15 ಕೋಟಿಯಲ್ಲಿ ಮಾಡಿದೆ. ನಾವು ಅದನ್ನು ಮರೆಯುತ್ತಿದ್ದೇವೆ. ನಮ್ಮಲ್ಲಿ ಆ ಕೆಲಸಗಳು ಆಗಿದೆ. ಮಲಯಾಳಂ ಸಿನಿಮಾ ಕಂಟೆಂಟ್‌ಗಳು ಚೆನ್ನಾಗಿವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ." ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.


Click it and Unblock the Notifications











