25 ದಿನ ಪೂರೈಸಿದ ರಾಜ್ ಬಿ ಶೆಟ್ಟಿಯ 'ರಕ್ಕಸಪುರದೋಳ್'; ಇನ್ನು 50ನೇ ದಿನಗಳ ಗುರಿ

ಕಳೆದ ತಿಂಗಳು ಬಿಡುಗಡೆಯಾಗಿದ್ದ ಕನ್ನಡದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ರಕ್ಕಸಪುರಧೋಳ್'. ರಾಜ್ ಬಿ ಶೆಟ್ಟಿ ಮಾಸ್ ಲುಕ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದ ಈ ಸಿನಿಮಾ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಕನ್ನಡದ ಸಾಹಸ ನಿರ್ದೇಶಕ ಡಾ. ರವಿವರ್ಮಾ ಮೊದಲ ಬಾರಿಗೆ ಈ ಕನ್ನಡ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅದೇ ಸಿನಿಮಾ ಈಗ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ.

ರಾಜ್ ಬಿ ಶೆಟ್ಟಿ ಮೆಗಾ ಬ್ಲಾಕ್‌ ಬಸ್ಟರ್ 'ಸು ಫ್ರಮ್‌ ಸೋ' ಹಾಗೂ '45' ಸಿನಿಮಾ ಬಳಿಕ ಸೋಲೋ ನಾಯಕನಾಗಿ ನಟಿಸಿದ ಸಿನಿಮಾವಿದು. 'ರಕ್ಕಸಪುರಧೋಳ್' ಬಿಡುಗಡೆಗೂ ಮುನ್ನವೇ ಟ್ರೈಲರ್ ಹಾಗೂ ಟೀಸರ್‌ನಿಂದ ಗಮನ ಸೆಳೆದಿತ್ತು. ಈ ಸಿನಿಮಾ ಈಗ 25 ದಿನಗಳನ್ನು ಪೂರೈಸಿ, 50ನೇ ದಿನದತ್ತ ಮುನ್ನುಗ್ಗುತ್ತಿದೆ. ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ.

Raj b Shetty starrer Rakkasapuradhol movie completed 25 days in theaters

'ರಕ್ಕಸಪುರಧೋಳ್' ಸಿನಿಮಾವನ್ನು ಜೋಗಿ ಪ್ರೇಮ್ ಗರಡಿಯಲ್ಲಿ ಪಳಗಿದ ರವಿ ಸಾರಂಗ ನಿರ್ದೇಶನ ಮಾಡಿದ್ದಾರೆ. ಸಾಹಸ ನಿರ್ದೇಶಕ ರವಿವರ್ಮಾ ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿದ್ದ ಸಿನಿಮಾವನ್ನ ಕನ್ನಡ ಪ್ರೇಕ್ಷಕರು ಮನಸಾರೆ‌ ಮೆಚ್ಚಿಕೊಂಡಿದ್ದಾರೆ. ಕಳೆದ ಕೆಲವುಗಳಿಂದ ಸಾಲು ಸಾಲು‌ ಸಿನಿಮಾಗಳು ಬಿಡುಗಡೆಯಾದ್ದರೂ 'ರಕ್ಕಸಪುರಧೋಳ್' ಸಿನಿಮಾ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ.

ರಾಜ್ ಬಿ ಶೆಟ್ಟಿ ನಟಿಸಿದ ಈ ಸಿನಿಮಾ ಮಲ್ಟಿಪ್ಲೆಕ್ಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಶೇಷವಾಗಿ ರಾಜ್ಯದಾದ್ಯಂತ ಮಲ್ಟಿಪ್ಲೆಕ್ಸ್ ಗಳಲ್ಲಿ ವೀಕೆಂಡ್‌ನಲ್ಲಿ ಹೌಸ್ ಫುಲ್ ಪ್ರದರ್ಶನಗಳು ಕಾಣುತ್ತಿವೆ. 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವ 'ರಕ್ಕಸಪುರಧೋಳ್' ಈಗ 50 ದಿನಗಳತ್ತ ಮುನ್ನುಗುತ್ತಿದೆ. ಈಗ ಯಶಸ್ಸಿಯಾಗಿ 50 ಪೂರೈಸುತ್ತಾ? ಅನ್ನೋ ಕುತೂಹಲವಿದೆ.

'ರಕ್ಕಸಪುರಧೋಳ್' ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಜೊತೆ ಅನಿರುದ್ಧ್ ಭಟ್, ಅರ್ಚನಾ ಕೊಟ್ಟಿಗೆ, ಸ್ವಾತಿಷ್ಟ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಸ್ಟೋರಿ, ಬರುವ ಒಂದೊಂದು ಪಾತ್ರಗಳು, ಸಂಗೀತ, ಕ್ಯಾಮರಾ ವರ್ಕ್ ಎಲ್ಲವಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. 'ರಕ್ಕಸಪುರಧೋಳ್' ಒಂದು ಥ್ರಿಲ್ಲರ್ ಸಬ್ಜೆಕ್ಟ್. ಈ ಸಿನಿಮಾ ಕನ್ನಡ ಪ್ರೇಕ್ಷಕರಿಗೆ ಥ್ರಿಲ್‌ ಕೊಡುವಲ್ಲಿ ಯಶಸ್ವಿಯಾಗಿದೆ.

Raj b Shetty starrer Rakkasapuradhol movie completed 25 days in theaters

ಕನ್ನಡದ ಸಿನಿಮಾಗಳು ಇತ್ತೀಚೆಗೆ ಎರಡ್ಮೂರು ವಾರ ಥಿಯೇಟರ್‌ನಲ್ಲಿ‌ ನಿಲ್ಲೋದೇ ಕಷ್ಟ. ಅಂತಹ ದಿನಗಳಲ್ಲಿ 'ರಕ್ಕಸಪುರಧೋಳ್' ಯಶಸ್ವಿಯಾಗಿ 25 ದಿನ ಪೂರೈಸಿ, 50ನೇ ದಿನದತ್ತ ಮುನ್ನುಗುತ್ತಿದೆ. ಚಿತ್ರತಂಡದ ಪ್ರಕಾರ, ಸುಮಾರು 50 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಚೈನತ್ಯವನ್ನಂತೂ ತುಂಬಿದೆ. ಅಂದ್ಹಾಗೆ ಈ ಸಿನಿಮಾಗೆ ಹಾಕಿದ ಬಜೆಟ್‌ನ ಎರಡು ಪಟ್ಟು ಬರೀ ಥಿಯೇಟರಿನಿಂದಲೇ ಬಂದಿದೆಯಂತೆ ಎಂದು ಚಿತ್ರತಂಡದ ಮೂಲಗಳು ಹೇಳಿಕೊಂಡಿವೆ.

ಸದ್ಯದಲ್ಲೇ ಚಿತ್ರತಂಡ ಗೆಲುವಿನ ಸಂಭ್ರಮಾಚರಣೆಯನ್ನು ಅದ್ಧೂರಿಯಾಗಿ ಮಾಡುವ ಆಲೋಚನೆಯನ್ನು ಹೊಂದಿದೆ. ಅಂದು 'ರಕ್ಕಸಪುರಧೋಳ್ ಸಿನಿಮಾದ ಅಸಲಿ ಬಾಕ್ಸ್ ಆಫೀಸ್ ಗಳಿಕೆಯನ್ನ ರಿವೀಲ್ ಮಾಡಲಿದೆ ಎಂಬ ಸುದ್ದಿ ಹೊರಬಿದ್ದಿದೆ.

ಇನ್ನು 'ರಕ್ಕಸಪುರಧೋಳ್' ಸಿನಿಮಾ ಬಗ್ಗೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರವಿವರ್ಮಾ ಕೇವಲ ಕನ್ನಡ ಅಷ್ಟೇ ಅಲ್ಲ. ಜೊತೆಗೆ ಹಿಂದಿ ಸಿನಿಮಾಗಳಿಗೂ ಸಾಹಸ ನಿರ್ದೇಶನ ಮಾಡಿದ್ದಾರೆ. ಸಸಲ್ಮಾನ್ ಖಾನ್ ನಟಿಸಿದ ಹಲವು ಸಿನಿಮಾಗಳಿಗೆ ಇವರೇ ಸಾಹಸ ನಿರ್ದೇಶಕ. ಹೀಗಾಗಿ ಸಲ್ಮಾನ್ ಖಾನ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರೋ, ರವಿವರ್ಮಾ ತಮ್ಮ ಸಿನಿಮಾದ ಟ್ರೈಲರ್ ತೋರಿಸಿದ್ದರು. ಟ್ರೈಲರ್ ಮೆಚ್ಚಿಕೊಂಡ ಸಲ್ಮಾನ್ ಖಾನ್ ಹಿಂದಿಯಲ್ಲಿ ತೋರಿಸುವಂತೆ ಹೇಳಿದ್ದರು. ಹೀಗಾಗಿ ಹಿಂದಿಯಲ್ಲೂ ಸಿನಿಮಾ ರಿಲೀಸ್ ಮಾಡುವ ಸಾಧ್ಯತೆಯಿದೆ.

More from Filmibeat

English summary
Raj b Shetty starrer Rakkasapuradhol movie completed 25 days in theaters.
Read more about: raj b shetty kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X