Toby Trailer: "ಟೋಬಿ ಕಣ್ಮುಚ್ಚಿದ್ರೆ ಒಳ್ಳೆಯದು.. ಆದರೆ, ಕಣ್ಬಿಟ್ಟಾಗಿದೆ.".. ಮುಂದೆ ಕಾದಿದೆ ಮಾರಿ ಹಬ್ಬ!
ಸ್ಯಾಂಡಲ್‌ವುಡ್‌ನಲ್ಲಿ ಎಂಟು ತಿಂಗಳು ಮುಗಿದೇ ಹೋಗಿದೆ. ಆದರೆ, ಹೇಳಿಕೊಳ್ಳುವಂತಹ ಸಿನಿಮಾ ಬಂದಿಲ್ಲ. ಅದಕ್ಕೆ ಎಲ್ಲರೂ ಕಣ್ಣು ರಾಜ್ ಬಿ ಶೆಟ್ಟಿಯ 'ಟೋಬಿ' ಸಿನಿಮಾದ ಮೇಲಿದೆ. ಅದರಲ್ಲೂ 'ಟೋಬಿ'ಯ ಲುಕ್ ನೋಡಿ ಸಿನಿಮಾ ಟ್ರೈಲರ್ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು.
'ಟೋಬಿ' ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲೊಂದು. ರಾಜ್ ಬಿ ಶೆಟ್ಟಿಯನ್ನು ಮಾಸ್ ಕಮರ್ಷಿಯಲ್ ಹೀರೊ ಅವತಾರದಲ್ಲಿ ನೋಡಬಹುದು. ಅದಕ್ಕೆ ಪೀಠಿಕೆಯಂತೆ 'ಟೋಬಿ' ಟ್ರೈಲರ್ ರಿಲೀಸ್ ಆಗಿದೆ.

ಮುಗ್ಧ ಕುರಿಯ ಮನಸ್ಸಿನಂತಿರೋ ವ್ಯಕ್ತಿ ತಿರುಗಿ ಬಿದ್ದರೆ ಹೇಗೆ ಮಾರಿಯಾಗುತ್ತಾನೆ ಅನ್ನೋದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಹಾಗಿದ್ದರೆ 'ಟೋಬಿ' ಟ್ರೈಲರ್‌ನಲ್ಲಿ ಏನೇನಿದೆ? ಪಕ್ಕಾ ಕಮರ್ಷಿಯಲ್ ಸಿನಿಮಾನಾ? ಗೆಟಪ್, ಲುಕ್ ಎಲ್ಲಾ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
"ಹರಿಕೆ ಕುರಿ ತಪ್ಪಿಸಿಕೊಂಡಿದೆ.."
"ಹರಿಕೆ ಕುರಿ ತಪ್ಪಿಸಿಕೊಂಡಿದೆ.." 'ಟೋಬಿ' ಸಿನಿಮಾದ ಟ್ರೈಲರ್‌ನ ಆರಂಭದಲ್ಲಿ ಬರುವ ಪವರ್‌ಫುಲ್ ಡೈಲಾಗ್ ಇದು. ಇದು ಸಿನಿಮಾ ಹೀರೊ ಎಷ್ಟು ಡೇಂಜರ್ ಅನ್ನೋದಕ್ಕೆ ಮಾರ್ಮಿಕವಾದ ವಿವರಣೆ ಕೊಡುತ್ತೆ. ಈ ಡೈಲಾಗ್ ಮುಗಿಯುತ್ತಿದ್ದಂತೆ 'ಟೋಬಿ'ಗಾಗಿ ಹುಡುಕಾಟ ಆರಂಭ. ಈ ಟ್ರೈಲರ್‌ನಲ್ಲಿ ಹರಕೆ ಕುರಿ ತಪ್ಪಿಸಿಕೊಂಡಿದೆ ಅನ್ನೋದೇ ಹೈಲೈಟ್. ಕುರಿ ತಪ್ಪಿಸಿಕೊಳ್ಳುವಂತಹ ಕೆಲಸ ಏನು ಮಾಡ್ತು..? ಕುರಿಯ ಸೇಡು ಎಂತಹದ್ದು? ಇಂತಹ ಒಂದಿಷ್ಟು ಅನುಮಾನಗಳಿಗೆ ಟ್ರೈಲರ್ ಮುಂದೆ ಉತ್ತರ ಸಿಗುತ್ತೆ.
ರಾಜ್ ಬಿ ಶೆಟ್ಟಿ ಗೆಟಪ್ ಹೈಲೈಟ್
ರಾಜ್ ಬಿ ಶೆಟ್ಟಿಯ 'ಟೋಬಿ' ಗೆಟಪ್ ನೋಡಿಯೇ ಫ್ಯಾನ್ಸ್ ಫಿದಾ ಆಗಿದ್ದರು. ಈ ಕಾರಣಕ್ಕೆ ಟ್ರೈಲರ್ ನೋಡಲು ತುದಿಗಾಲಲ್ಲಿ ನಿಂತಿದ್ದರು. ನಿರೀಕ್ಷೆಯಂತೆ ಟ್ರೈಲರ್‌ನಲ್ಲಿ 'ಟೋಬಿ' ಮಾಸ್ ಗೆಟಪ್ ಕೂಡ ರಿವೀಲ್ ಆಗಿದೆ. ಮೇಲ್ನೋಟಕ್ಕೆ ಇಡೀ ಸಿನಿಮಾದ ಹೈಲೈಟ್ ಇದೇ ಗೆಟಪ್ ಇರಬಹುದು. 'ಟೋಬಿ' ಯಾರ ಊಹೆಗೂ ನಿಲುಕದವನು. ಹೀಗಾಗಿ ಈ ಮಾಸ್ ಅವತಾರ ಇಂಟ್ರೆಸ್ಟಿಂಗ್ ಅಂತ ಅನಿಸುತ್ತಿದೆ.

ಟೋಬಿಯ ಮೂರು ಗೆಟಪ್ ಹೇಗಿದೆ?
ಬೆಸಿಲ್ ನಿರ್ದೇಶಿಸಿರುವ 'ಟೋಬಿ' ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲನೆಯದು ಯುವಕನ ಪಾತ್ರ. ಈ ಪಾತ್ರದ ವಿಶೇಷ ಅಂದ್ರೆ, ರಾಜ್ ಬಿ ಶೆಟ್ಟಿ ತಲೆಯಲ್ಲಿ ಕೂದಲಿದೆ. ಎರಡನೇ ಮಧ್ಯ ವಯಸ್ಸಿನದು. ಇನ್ನೇ ಟೋಬಿ ಮಾರಿಯಾಗುವುದೇ ಮೂರನೇ ಗೆಟಪ್. ಈ ಮೂರು ಗೆಟಪ್‌ಗಳೂ ಟೋಬಿಯ ಒಂದು ಕಾಲ ಘಟ್ಟದ ಕಥೆಯನ್ನು ಹೇಳುತ್ತಿದೆ.
'ಟೋಬಿ'ಯಲ್ಲಿ ಇನ್ನೇನಿದೆ?
'ಟೋಬಿ' ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಜೊತೆ ಚೈತ್ರಾ ಜೆ ಆಚಾರ್, ಸಂಯುಕ್ತ ಹೊರನಾಡು, ಗೋಪಾಲ ಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಿಥುನ್ ಮುಕುಂದನ್ ಮ್ಯೂಸಿಕ್ ಹಾಗೂ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಟ್ರೈಲರ್‌ನ ಹೈಲೈಟ್. ಈ ಸಿನಿಮಾ ಇದೇ ಆಗಸ್ಟ್ 25ರಂದು ರಿಲೀಸ್ ಆಗುತ್ತಿದ್ದು, ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋ ಕುತೂಹಲವಿದೆ.


Click it and Unblock the Notifications











