ಕಾರವಾರದ ರಿಯಲ್ ಲೈಫ್ ವ್ಯಕ್ತಿಯೊಬ್ಬನ ಕಥೆ ಈ 'ಟೋಬಿ': ಕಥೆ ಕಾಲ್ಪನಿಕ ಅಲ್ಲ.. ಸಿನಿಮಾ ಕಾಲ್ಪನಿಕ?
ರಾಜ್ ಬಿ ಶೆಟ್ಟಿಯ ಸಿನಿಮಾಗಳು ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ. ಅವರೇ ಹೇಳಿಕೊಂಡಂತೆ ಮೊದಲ ಸಿನಿಮಾದಿಂದ ಇಲ್ಲಿವರೆಗೂ ಒಂದೊಂದು ಸಿನಿಮಾವೂ ಎಕ್ಸ್‌ಪೆರಿಂಟ್. ಅವರು ಮಾಡಲಾಗದ ಕಥೆಯನ್ನು ಚಾಲೆಂಜ್ ಆಗಿ ತೆಗೆದುಕೊಂಡು ಸಿನಿಮಾ ಮಾಡಿ ಗೆದ್ದಿದ್ದಾರೆ.
'ಒಂದು ಮೊಟ್ಟೆಯ ಕಥೆ'ಯಿಂದ ಆರಂಭ ಆದ ಜರ್ನಿ 'ಗರುಡ ಗಮನ ವೃಷಭ ವಾಹನ'ದವರೆಗೂ ಪ್ರಯೋಗಗಳನ್ನು ಕಂಡಿವೆ. ಈಗ 'ಟೋಬಿ' ಕೂಡ ಅದೇ ಹಾದಿಯಲ್ಲೇ ಕಾಡುವ ಕಥೆಯೊಂದಿಗೆ ಮಾಸ್ ಸಿನಿಮಾ ನೀಡುವುದಕ್ಕೆ ರಾಜ್ ಬಿ ಶೆಟ್ಟಿ ಮುಂದಾಗಿದ್ದಾರೆ.

ಹಾಗಂತ ಟೋಬಿ ಕಾಲ್ಪನಿಕ ಕಥೆಯಲ್ಲ. ರಿಯಲ್ ಲೈಫ್ ವ್ಯಕ್ತಿಯ ಕಥೆಯನ್ನೇ ಸಿನಿಮಾ ಮಾಡಿದ್ದಾರೆ. ಹಾಗಾಗಿ ಕಥೆಯಲ್ಲಿರುವ ವ್ಯಕ್ತಿ ರಿಯಲ್. ಸಿನಿಮಾ ಮಾತ್ರ ಕಾಲ್ಪನಿಕ. ಹಾಗಿದರೆ, 'ಟೋಬಿ' ಯಾರು? ಎಲ್ಲಿಯವನು? ಇವನ ಕಥೆಯೇನು? ಲೇಖಕರಿಗೆ ಈತ ಕಾಡಿದ್ದೇಗೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
"ಟೋಬಿ ಸಿನಿಮಾಗೆ ಬರೆದ ಕಥೆಯಲ್ಲ"
ರಾಜ್ ಬಿ ಶೆಟ್ಟಿ ಈಗಾಗಲೇ 'ಟೋಬಿ' ಅನ್ನೋದು ಒಬ್ಬ ವ್ಯಕ್ತಿಯ ಹೆಸರು ಅಂತ ಹೇಳಿದ್ದರು. ಆದರೆ, 'ಟೋಬಿ' ಯಾರು? ಅವನ ವ್ಯಕ್ತಿತ್ವ ಎಂತಹದ್ದು ಅನ್ನೋದನ್ನು ಬಿಟ್ಟುಕೊಟ್ಟಿರಲಿಲ್ಲ. ಆದ್ರೀಗ ಸಿನಿಮಾಗೆ ಕಥೆ ನೀಡಿದ ಲೇಖಕ ಟಿಕೆ ದಯಾನಂದ್ ಈ ಸಿನಿಮಾದ ಪ್ರಮುಖ ಪಾತ್ರಧಾರಿ 'ಟೋಬಿ' ಯಾರು ಅನ್ನೋದನ್ನು ರಿವೀಲ್ ಮಾಡಿದ್ದಾರೆ.
"ಟೋಬಿಯನ್ನು ಸಿನಿಮಾಗೆ ಅಂತಲೇ ಬರೆದ ಕಥೆಯಲ್ಲ. ನನಗೆ ಈ ಕಥೆ ಸಿಕ್ಕಿದ್ದು ಕಾರವಾರದಲ್ಲಿ. ಅಲ್ಲಿ ಸಿಕ್ಕಿ ಒಬ್ಬ ವಿಲಕ್ಷಣ ವ್ಯಕ್ತಿತ್ವದ ವ್ಯಕ್ತಿಯ ಕಥೆಯಿದು. ಆತನ ಕಥೆಗೆ ನಾನು ಎಕ್ಸ್‌ಪ್ಲೋರ್ ಆದ್ಮೇಲೆ, ಅದನ್ನು ಬರೋ ತನಕವೂ ಟೋಬಿ ನನ್ನನ್ನು ಕಾಡುತ್ತಲೇ ಇದ್ದ. ಡಿಸ್ಟರ್ಬ್ ಮಾಡುತ್ತಲೇ ಇದ್ದ. ಒಬ್ಬ ವ್ಯಕ್ತಿಯನ್ನು ನೋಡಿದ ತಕ್ಷಣ ಅವನು ಈ ಪರ್ಸನಾಲಿಟಿ ಇರುವ ವ್ಯಕ್ತಿಯ ಜನ ಅಂತ ಆ ಬಾಕ್ಸ್ ಒಳಗೆ ಹಾಕಬಹುದು. ಆದರೆ, ಟೋನಿ ಈ ತರಹದ ಯಾವುದೇ ಒಂದು ಬಾಕ್ಸಿಗೂ ಫಿಟ್ ಆಗಲು ನಿರಾಕರಿಸುವಂತಹ ವ್ಯಕ್ತಿತ್ವ" ಎಂದು ದಯಾನಂದ್ ಹೇಳಿದ್ದಾರೆ.
"ಟೋಬಿ ಬಗ್ಗೆ ಬರೆಯುವಾಗ ಡಿಸ್ಟರ್ಬ್ ಆಗಿದ್ದೆ"
ಲೇಖಕ ಟಿಕೆ ದಯಾನಂದ್ 'ಟೋಬಿ' ಕಥೆ ಬರೆಯುವಾಗ ತುಂಬಾನೇ ಡಿಸ್ಟರ್ಬ್ ಆಗಿದ್ದಾಗಿ ಹೇಳಿದ್ದಾರೆ. ಕಾರವಾರದ ವ್ಯಕ್ತಿಯೊಬ್ಬ ಲೇಖಕರನ್ನು ನಗಿಸುತ್ತಿದ್ದ, ಅಳಿಸುತ್ತಿದ್ದ. ಇತ್ತ ರಾಜ್ ಬಿ ಶೆಟ್ಟಿ ಕೂಡ ಈ ಪಾತ್ರ ತುಂಬಾನೇ ಡಿಸ್ಟರ್ಬ್ ಮಾಡಿತ್ತು ಎಂದಿದ್ದಾರೆ.
" ಆತನ ಬಗ್ಗೆ ಕೇಳುವಾಗಲೂ ಡಿಸ್ಟರ್ಬ್ ಆಗಿದ್ದೆ. ಬರೆಯುವಾಗಲೂ ಡಿಸ್ಟರ್ಬ್ ಆಗಿದ್ದೆ. ಆ ಕ್ಯಾರೆಕ್ಟರ್ ಕೈಗೆ ಸಿಗುತ್ತಿರಲಿಲ್ಲ. ತುಂಬಾ ಜಾರಿಕೊಳ್ಳುತ್ತಿದ್ದ ಪಾತ್ರ. ಒಂದೊಂದು ಸಾರಿ ಅಳಿಸುತ್ತಿತ್ತು. ಒಂದೊಂದು ಸಾರಿ ನಗಿಸುತ್ತಿತ್ತು. ಸಿಟ್ಟು ಬರಿಸುತ್ತಿತ್ತು. ಡಿಸ್ಟರ್ಬ್ ಮಾಡುತ್ತಿತ್ತು. " ಎನ್ನತ್ತಾರೆ ದಯಾನಂದ್
ಎರಡು ಕಥೆಯಲ್ಲಿ 'ಟೋಬಿ' ಆಯ್ಕೆ
ಹೆಚ್ಚು ಕಡಿಮೆ ಆಗಿದ್ದರೆ ಕನ್ನಡದಲ್ಲಿ ಇನ್ನೊಂದು ಶ್ವಾನದ ಕಥೆ ಬರುತ್ತಿತ್ತು. ಕಥೆ ಕೇಳಿಕೊಂಡು ಬಂದಾಗ ರಾಜ್ ಬಿ ಶೆಟ್ಟಿ ಮುಂದೆ ದಯಾನಂದ್ ಎರಡು ಕಥೆಯನ್ನು ಇಟ್ಟಿದ್ದರು. ಒಂದು ಶ್ವಾನದ ಕಥೆ. ಇನ್ನೊಂದು 'ಟೋಬಿ'ಯ ಕಥೆ.
"ಟೋಬಿಯನ್ನು ಸಿನಿಮಾ ಮಾಡಬಹುದು ಅಂತ ರಾಜ್ ಬಿ ಶೆಟ್ಟಿ ಹೇಳಿದಾಗ ನಾನು ಅವರ ಮುಂದೆ ಎರಡು ಕಥೆ ಇಟ್ಟಿದೆ. ಒಂದು ಟೋಬಿ, ಇನ್ನೊಂದು ಶ್ವಾನದ ಕಥೆ. ಎರಡೂ ಕಥೆಯನ್ನು ಓದಿ. ಈಗಾಗಲೇ ಚಾರ್ಲಿ ಕಥೆ ಬಂದಿದೆ ಎಂದು ಟೋಬಿಯನ್ನು ಆಯ್ಕೆ ಮಾಡಿಕೊಂಡರು. ಟೋಬಿಯ ಲೈಫ್ ಅನ್ನು ಬಿಗ್ ಸ್ಕ್ರೀನ್‌ನಲ್ಲಿ ನೋಡುವುದಕ್ಕೆ ನಾನೂ ಕಾಯುತ್ತಿದ್ದೇನೆ.


Click it and Unblock the Notifications











