ರಾಜ್ ಬಿ ಶೆಟ್ಟಿ 'ಟೋಬಿ' ಸಿನಿಮಾದ ಬಜೆಟ್ ಎಷ್ಟು ಕೋಟಿ? ಏನಿದು ರಿವೇಂಜ್ ಸ್ಟೋರಿ?

ಸ್ಯಾಂಡಲ್‌ವುಡ್‌ ಸಿನಿಮಾ ಶೈಲಿಯ ದಿಕ್ಕನ್ನು ಬದಲಿಸಿದವರಲ್ಲಿ ರಾಜ್ ಬಿ ಶೆಟ್ಟಿ ಕೂಡ ಒಬ್ಬರು. ಅದ್ಯಾವಾಗ ಸಿನಿಮಾ ಸೆಟ್ಟೇರುತ್ತೋ? ಅದ್ಯಾವಾಗ ಸಿನಿಮಾ ಮುಗಿಸುತ್ತಾರೋ? ಗೊತ್ತೇ ಆಗುವುದಿಲ್ಲ. ಈಗಾಗಲೇ ಎರಡು ಸಿನಿಮಾಗಳನ್ನು ಮುಗಿಸಿ ಮತ್ತೊಂದು ಪ್ರಾಜೆಕ್ಟ್‌ನಲ್ಲಿ ಶೆಟ್ಟರು ಬ್ಯುಸಿಯಾಗಿದ್ದಾರೆ.

ಕಳೆದೆರಡು ದಿನಗಳಿಂದ ರಾಜ್ ಬಿ ಶೆಟ್ಟಿ ಸಿನಿಮಾ ಬಗ್ಗೆನೇ ಚರ್ಚೆಯಾಗುತ್ತಿದೆ. ಯಾಕಂದ್ರೆ, ಇದು 'ಗರುಡ ಗಮನ ವೃಷಭ ವಾಹನ' ನಟನ ಮೊದಲ ಬಿಗ್ ಬಜೆಟ್ ಸಿನಿಮಾ. ಇದೇ ಸಿನಿಮಾ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಸಿನಿಮಾದ ಬಜೆಟ್ 'ಟೋಬಿ'.

Raj B. Shettys First Big Budget Movie Toby Estimation Is 15 crore rupees

ರಮ್ಯಾ ನಿರ್ಮಾಣದ ಮೊದಲ ಸಿನಿಮಾ 'ಸ್ವಾತಿ ಮುತ್ತಿನ ಮಳೆ ಹನಿಯೇ'ಯನ್ನು ರಾಜ್ ಬಿ ಶೆಟ್ಟಿ ಮುಗಿಸಿದ್ದಾರೆ. ಇದರ ಹಿಂದೆನೇ ತನ್ನ ಮೊದಲ ಬಿಗ್ ಬಜೆಟ್ ಸಿನಿಮಾದ ಶೂಟಿಂಗ್ ಅನ್ನೂ ಸದ್ದಿಲ್ಲದೆ ಮುಗಿಸಿಕೊಟ್ಟಿದ್ದಾರೆ. ಅಷ್ಟಕ್ಕೂ 'ಟೋಬಿ'ಯ ಬಜೆಟ್ ಏನು? ಏನಿದು ರಿವೇಂಜ್ ಸ್ಟೋರಿ? ತಿಳಿಯಲು ಮುಂದೆ ಓದಿ.

ರಾಜ್ ಬಿ ಶೆಟ್ಟಿ 'ಟೋಬಿ' ಬಜೆಟ್ ಎಷ್ಟು?

ರಾಜ್ ಬಿ ಶೆಟ್ಟಿ ಸ್ಯಾಂಡಲ್‌ವುಡ್‌ನಲ್ಲಿ ಸಂಚಲ ಸೃಷ್ಟಿಸಿರುವ ಹೆಸರು. ಚಿಕ್ಕ ಬಜೆಟ್‌ನಲ್ಲಿ ಸಿನಿಮಾ ಮಾಡಿ, ಬೇಜಾನ್ ಸದ್ದು ಮಾಡುತ್ತಾರೆ. ಇದೂವರೆಗೂ ರಾಜ್ ಬಿ ಶೆಟ್ಟಿ ನಟಿಸಿದ ಹಾಗೂ ನಿರ್ದೇಶಿಸಿದ ಸಿನಿಮಾಗಳ ಬಜೆಟ್ ತೀರಾ ಕಡಿಮೆ. ಆದರೆ, 'ಟೋಬಿ' ಬಜೆಟ್ ಇವರ ಹಿಂದಿನ ಎಲ್ಲಾ ಸಿನಿಮಾಗಳಿಗಿಂತಲೂ ದೊಡ್ಡದು ಎನ್ನಲಾಗುತ್ತಿದೆ.

ಸ್ಯಾಂಡಲ್‌ವುಡ್ ಮೂಲಗಳ ಪ್ರಕಾರ, 'ಟೋಬಿ' ಬಜೆಟ್ ಬರೋಬ್ಬರು 15 ಕೋಟಿ ರೂ. ಪಕ್ಕಾ ಕಮರ್ಷಿಯಲ್ ಸಿನಿಮಾ ಆಗಿರುವುದರಿಂದ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲಾಗಿದೆಯಂತೆ. 'ಗರುಡ ಗಮನ ವೃಷಭ ವಾಹನ' ಸಿನಿಮಾ ನಿರ್ಮಾಣ ಮಾಡಿದ್ದ ರವಿ ರೈ ಹಾಗೂ ರಾಜ್‌ ಬಿ ಶೆಟ್ಟಿಯ ಲಾಫಿಂಗ್ ಬುದ್ಧ ಫಿಲಂಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ.

Raj B. Shettys First Big Budget Movie Toby Estimation Is 15 crore rupees

ಜಾತ್ರೆ ಸೆಟ್ಟಿಗೆ ₹3-4 ಕೋಟಿ ಖರ್ಚು

ಇತ್ತೀಚೆಗೆ 'ಟೋಬಿ' ಸಿನಿಮಾದ ಶೂಟಿಂಗ್‌ಗಾಗಿ ಜಾತ್ರೆ ಸೆಟ್ ಹಾಕಲಾಗಿತ್ತು. ಆ ಒಂದು ಸೆಟ್ಟಿಗಾಗಿಯೇ ಸುಮಾರು 3 ರಿಂದ 4 ಕೋಟಿ ರೂ. ಖರ್ಚು ಮಾಡಲಾಗಿದೆ ಎನ್ನುಲಾಗುತ್ತಿದೆ. ಹೀಗಾಗಿ ರಾಜ್ ಬಿ ಶೆಟ್ಟಿ ಬಿಗ್ ಬಜೆಟ್ ಸಿನಿಮಾ ಹೇಗಿರುತ್ತೆ ಅನ್ನೋದನ್ನು ನೋಡುವುದಕ್ಕೆ ಸಿನಿಪ್ರೇಮಿಗಳು ಕಾದು ಕೂತಿದ್ದಾರೆ.

'ಟೋಬಿ' ಸಿನಿಮಾವನ್ನು ಬಹುತೇಕ ಕರಾವಳಿ ಭಾಗಗಳಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಮಂಗಳೂರು, ಉಡುಪಿ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹೀಗಾಗಿ 'ಟೋಬಿ' ಕಥೆಯ ಬಗ್ಗೆ ಕುತೂಹಲ ಕೆರಳಿಸಿದೆ. ಅಂದ್ಹಾಗೆ ಈ ಸಿನಿಮಾವನ್ನು ರಾಜ್ ಬಿ ಶೆಟ್ಟಿ ಸಿನಿಮಾಗಳಲ್ಲಿ ಸಹಾಯಕರಾಗಿದ್ದ ಬಾಸಿಲ್ ಅಲ್‌ಚಕ್ಕಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಟೋಬಿ'ಗೆ ಇಬ್ಬರು ನಾಯಕಿಯರು

ರಾಜ್‌ ಬಿ ಶೆಟ್ಟಿ ಸಿನಿಮಾಗೆ ಇಬ್ಬರು ನಾಯಕಿಯರು. ಒಬ್ಬರು ಸಂಯುಕ್ತ ಹೊರನಾಡು. ಇನ್ನೊಬ್ಬರು ಚೈತ್ರಾ ಆಚಾರ್. ಇವರಿಬ್ಬರ ಪಾತ್ರವೇನು? ಅನ್ನೋದು ಸದ್ಯಕ್ಕೆ ರಿವೀಲ್ ಆಗಿಲ್ಲ. ಆದರೆ, ಇದೊಂದು 'ರಿವೇಂಜ್ ಸ್ಟೋರಿ' ಎಂದು ಹೇಳಲಾಗುತ್ತಿದೆ. 'ಗರುಡ ಗಮನ ವೃಷಭ ವಾಹನ' ಕೂಡ ರಿವೇಂಜ್ ಸ್ಟೋರಿನೇ ಆಗಿತ್ತು.

ರಾಜ್‌ ಬಿ ಶೆಟ್ಟಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಹಾಗೂ 'ಟೋಬಿ' ಎರಡೂ ಸಿನಿಮಾವನ್ನೂ ಮುಗಿಸಿದ್ದಾರೆ. ಈ ಎರಡು ಸಿನಿಮಾಗಳ ಬಳಿಕ ಮಲಯಾಳಂನ 'ರುಧೀರಂ' ಬ್ಯುಸಿಯಾಗಿದ್ದಾರೆ. ಅಲ್ಲದೆ ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿರುವ 45 ಸಿನಿಮಾದಲ್ಲಿ ಶಿವಣ್ಣ, ಉಪೇಂದ್ರ ಜೊತೆ ರಾಜ್‌ ಬಿ ಶೆಟ್ಟಿ ಕೂಡ ನಟಿಸುತ್ತಿದ್ದಾರೆ. ಸದ್ಯಕ್ಕೆ 'ಟೋಬಿ' ಎಲ್ಲರ ಕುತೂಹಲವನ್ನು ದುಪ್ಪಟ್ಟು ಮಾಡುತ್ತಿದೆ.

More from Filmibeat

English summary
Raj B. Shetty's First Big Budget Movie Toby Estimation Is 15 crore rupees. Samyukta Hornad and Chaitra J Achar are the lead actress.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X