Gowri Shankar: 5 ವರ್ಷಗಳ ಬಳಿಕ ಮತ್ತೆ 'ರಾಜಹಂಸ' ಹೀರೊ ಸ್ಯಾಂಡಲ್‌ವುಡ್‌ಗೆ ಎಂಟ್ರಿ.. ಯಾವುದು ಆ ಸಿನಿಮಾ?

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸ ಹೊಸ ಪ್ರಯೋಗಗಳು ಆಗುತ್ತಿವೆ. ವಿಭಿನ್ನ ಕಥೆಯನ್ನು ಹುಡುಕಿ ಸಿನಿಮಾ ಮಾಡುತ್ತಿದ್ದಾರೆ. ಕೆಲವು ಫಿಲ್ಮ್ ಮೇಕರ್ಸ್‌ ಕನ್ನಡ ಮಣ್ಣಿನ ಕಥೆಯನ್ನು ತೆರೆಮೇಲೆ ತರುವುದಕ್ಕೆ ಹೊರಟಿದ್ದಾರೆ. ಅಂತಹ ಒಂದು ಪ್ರಯತ್ನಕ್ಕೆ 'ರಾಜಹಂಸ' ಸಿನಿಮಾದ ಹೀರೊ ಗೌರಿ ಶಂಕರ್ ಮುಂದಾಗಿದ್ದಾರೆ.

ಗೌರಿ ಶಂಕರ್ ಈಗಾಗೇ ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. 2010ರಲ್ಲಿ ಅಣಜಿ ನಾಗರಾಜ್ ನಿರ್ಮಿಸಿದ್ದ 'ಜೋಕಾಲಿ' ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ಆ ಬಳಿಕ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ 'ರಾಜಹಂಸ' ಸಿನಿಮಾದಲ್ಲೂ ಇವರೇ ಹೀರೊ. ಈ ಸಿನಿಮಾದ ಗೌರಿ ಶಂಕರ್ ಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದ್ರೀಗ ಮತ್ತೆ ಮತ್ತೊಂದು ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಮತ್ತೆ ಗ್ರ್ಯಾಂಡ್ ಎಂಟ್ರಿ ಕೊಡುವುದಕ್ಕೆ ಮುಂದಾಗಿದ್ದಾರೆ.

Rajahamsa movie actor Gowri Shankar is making a comeback after 5 years

'ರಾಜಹಂಸ' ಸಿನಿಮಾ ಬಿಡುಗಡೆಯಾಗಿ ಸುಮಾರು 5 ವರ್ಷಗಳ ಮೇಲಾಗಿದೆ. ಇಷ್ಟು ವರ್ಷಗಳ ಬಳಿಕ ಮತ್ತೊಂದು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುವುದಕ್ಕೆ ಸಜ್ಜಾಗಿದ್ದಾರೆ. 'ರಾಜಹಂಸ' ಸಿನಿಮಾ ಕೌಟುಂಬಿಕ ಸಿನಿಮಾ ಆಗಿತ್ತು. ಹಾಡುಗಳು ಕೂಡ ಸೂಪರ್‌ಹಿಟ್ ಆಗಿದ್ದವು. ಈಗ ಲಾಂಗ್ ಗ್ಯಾಪ್ ಕೊಟ್ಟು ಮತ್ತೊಂದು ವಿಶಿಷ್ಠ ಕತೆಯ ಮೂಲಕ ಮತ್ತೆ ಕನ್ನಡ ಚಿತ್ರರಂಗ ತಮ್ಮದೇ ಸ್ಟೈಲ್‌ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ.

ಈ ಬಾರಿ ಪಕ್ಕ ಮಲೆನಾಡಿನ ಕಥೆಯೊಂದನ್ನು ತೆರೆಮೇಲೆ ತರುವುದಕ್ಕೆ ಹೊರಟಿದ್ದಾರೆ. ಗೌರಿ ಶಂಕರ್ ಹಳ್ಳಿ ಸೊಗಡಿನ ಕಥೆಯನ್ನು ಸಿನಿಪ್ರಿಯರಿಗೆ ಕಮರ್ಷಿಯಲ್ ರೂಪದಲ್ಲಿ ಹೇಳುವುದಕ್ಕೆ ರೆಡಿಯಾಗಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

ಗೌರಿ ಶಂಕರ್ ತಮ್ಮದೇ ಜನಮನ ಸಂಸ್ಥೆಯಿಂದ ಈ ಹಳ್ಳಿ ಸೊಗಡಿನ ಕಥೆಯನ್ನು ಆಧರಿಸಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. 'ರಾಜಹಂಸ' ಸಿನಿಮಾ ಕೂಡ ಇದೇ ಸಂಸ್ಥೆಯಿಂದಲೇ ನಿರ್ಮಾಣಗೊಂಡಿತ್ತು. ಈ ಕಮ್‌ಬ್ಯಾಕ್ ಸಿನಿಮಾವನ್ನು ಕೂಡ ಗೌರಿ ಶಂಕರ್ ಅವರೇ ನಿರ್ಮಾಣ ಮಾಡಿದ್ದಾರೆ.

ಈ ಹೊಸ ಸಿನಿಮಾದ ಗೌರಿ ಶಂಕರ್ ಸುಳಿವು ಬಿಟ್ಟುಕೊಟ್ಟಿಲ್ಲ. ಕೇವಲ ಮಲೆನಾಡಿನ ಕಥೆಯಂದಷ್ಟೇ ಹೇಳಿದ್ದಾರೆ. ಈ ಸಿನಿಮಾದ ಟೈಟಲ್ ಪೋಸ್ಟರ್ ಇದೇ ಅಕ್ಟೋಬರ್ 24 ವಿಜಯ ದಶಮಿಯ ಶುಭ ಸಂದರ್ಭದಲ್ಲಿ ರಿವೀಲ್ ಮಾಡುತ್ತಿದ್ದಾರೆ. ಬೆಳಗ್ಗೆ 11.11 ನಿಮಿಷಕ್ಕೆ ಈ ಸಿನಿಮಾ ಟೈಟಲ್ ಪೋಸ್ಟರ್ ರಿವೀಲ್ ಆಗಲಿದೆ. "ಇದುವರೆಗೂ ಯಾರು ನೋಡಿರದ, ಮಾಡಿರದ ಸಬ್ಜೆಕ್ಟ್ ಇದಾಗಿದ್ದು ಖಂಡಿತವಾಗಿಯೂ ಕನ್ನಡ ಚಿತ್ರಪ್ರಿಯರಿಗೆ ಇಷ್ಟವಾಗುತ್ತದೆ" ಎಂದು ಗೌರಿ ಶಂಕರ್ ಹೇಳಿದ್ದಾರೆ.

ಗೌರಿ ಶಂಕರ್ ನಟಿಸುತ್ತಿರುವ ಹೊಸ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದ್ದು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇದೀಗ ಫಸ್ಟ್ ಲುಕ್ ಪೋಸ್ಟರ್ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದೆ. ಇನ್ನು ಸಿನಿಮಾ ಕಥೆಯೇನು? ಮಲೆನಾಡಿನ ಯಾವ ಭಾಗದ ಕಥೆ. ಇದೆಲ್ಲವನ್ನೂ ಅಕ್ಟೋಬರ್ 24ಕ್ಕೆ ರಿವೀಲ್ ಆಗಲಿದೆ. ಅಲ್ಲಿವರೆಗೂ ಕಾಯಲೇಬೇಕು.

More from Filmibeat

English summary
Rajahamsa movie actor Gowri Shankar new movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X