ರಾಜೇಶ್ ನಟರಂಗ ಅವರ 'ಲವ್ ಸೀಸನ್ಸ್' ಟೀಸರ್ ನೋಡಿದ್ರಾ? ಟ್ರೆಂಡ್ ಆಗ್ತಿರೋದ್ಯಾಕೆ?

ಚಿತ್ರರಂಗ ಯಾವುದೇ ಇರಲಿ ಹೊಸಬರು ಬರಬೇಕು. ಹೊಸ ಹೊಸ ಆಲೋಚನೆಗಳು ಹೊತ್ತು ಬಂದರೆ ಆ ಸಿನಿಮಾ ಇಂಡಸ್ಟ್ರಿ ಯಶಸ್ಸು ಕಾಣುತ್ತದೆ. ಕನ್ನಡ ಚಿತ್ರರಂಗದಲ್ಲಿ ಹೊಸತಂಡಗಳು ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತವೆ. ವಿಭಿನ್ನ ಕಾನ್ಸೆಪ್ಟ್ ಹೊಂದಿರುವ ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತವೆ. ಈಗ ಇನ್ನೊಂದು ಹೊಸಬರ ತಂಡ ಇಂತಹದ್ದೇ ವಿಶಿಷ್ಠವಾದ ಸಿನಿಮಾವನ್ನು ಹೊತ್ತು ಬಂದಿದೆ.

ರಾಜೇಶ್ ನಟರಂಗ ಮುಖ್ಯ ಪಾತ್ರದಲ್ಲಿ ನಟಿಸಿರುವ ಆ ಸಿನಿಮಾವೇ 'ಲವ್ ಸೀಸನ್ಸ್'. ಈ ಸಿನಿಮಾ ತಂಡ ತಿಂಗಳ ಹಿಂದಷ್ಟೇ ಶೂಟಿಂಗ್ ಮುಗಿಸಿದೆ. ಇತ್ತೀಚೆಗಷ್ಟೇ 'ಲವ್ ಸೀಸನ್ಸ್' ಸಿನಿಮಾದ ಟೀಸರ್ ಮೂಲಕ ಸುದ್ದಿ ಮಾಡಿದೆ. ಈ ಸಿನಿಮಾದ ಟೀಸರ್ ರಿಲೀಸ್ ಆದ ಬೆನ್ನಲ್ಲೇ ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿದೆ. ಈ ವೇಳೆ ತಮ್ಮ ಸಿನಿಮಾದ ಬಗ್ಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿವೆ.

Rajesh Nataranga Mukunda Ramaswamy in pivotal role Love Seasons movie teaser is trending

'ಲವ್ ಸೀನ್ಸ್‌'ನಲ್ಲಿ ಕನ್ನಡದ ಹಿರಿಯ ನಟ ರಾಜೇಶ್ ನಟರಂಗ ಬಹುಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಹೊಸ ಸಿನಿಮಾಗೆ ತಮ್ಮ ಪಾತ್ರದ ಮೂಲಕ ಜೀವ ತುಂಬಿದ್ದಾರೆ. ಈ ಸಿನಿಮಾ ಬಗ್ಗೆ ರಾಜೇಶ್ ನಟರಂಗ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕರ ಕೆಲಸವನ್ನು ಮೆಚ್ಚಿಕೊಳ್ಳುತ್ತಲೇ ಈ ಸಿನಿಮಾ ಜವಾಬ್ದಾರಿಯುತ ತಂದೆಯ ಪಾತ್ರದಲ್ಲಿ ನಟಿಸಿರುವ ಸುಳಿವನ್ನು ಬಿಟ್ಟು ಕೊಟ್ಟಿದ್ದಾರೆ. "ಪ್ರೀತಿಯೆಂಬುದು ಯಾವ ಕಾಲಕ್ಕೂ ಹಳೆಯದಾಗದ ವಿಚಾರ. ಈ ಭೂಮಿಕೆಯಲ್ಲಿಯೇ ರೂಪುಗೊಂಡಿರುವ ಈ ಸಿನಿಮಾವನ್ನು ಬೆಂಬಲಿಸಿ, ಪ್ರೋತ್ಸಾಹಿಸಿ" ಎಂದು ರಾಜೇಶ್ ನಟರಂಗ ಕೇಳಿಕೊಂಡರು.

ಹೊಸ ಪ್ರತಿಭೆಗಳು ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಲವ್ ಸೀಸನ್ಸ್' ಸಿನಿಮಾವನ್ನು ಎನ್.ಆರ್ ಮಂಜುನಾಥ (ನೀಲೇರಿ) ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ನಿರ್ಮಾಪಕರಿಗೆ ಚೊಚ್ಚಲ ಪ್ರಯತ್ನ. ಇನ್ನು ರಂಗಭೂಮಿಯಲ್ಲಿ ಅನುಭವ ಪಡೆದುಕೊಂಡು ಆ ಬಳಿಕ 'ಕ್ಷತ್ರಿಯ', 'ಬುದ್ಧಿವಂತ 2', 'ಗುರುದೇವ ಹೊಯ್ಸಳ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಕೃತ್ವಿಕ್ 'ಲವ್ ಸೀಸನ್ಸ್' ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಚೊಚ್ಚಲ ಸಿನಿಮಾ ಮೂಲಕ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

Also Read
"ದರ್ಶನ್‌ಗೆ ಒಂದು ತಪ್ಪು ಮಾಡಿದ್ದೀಯ ಅಂತ ಅವತ್ತೇ ಹೇಳಿದ್ದೆ" ಸ್ನೇಕ್ ಶ್ಯಾಮ್

'ಲವ್ ಸೀಸನ್ಸ್‌' ಸಿನಿಮಾದ ಪ್ರಮುಖ ಪಾತ್ರದಲ್ಲಿ ಮುಕುಂದ ರಾಮಸ್ವಾಮಿ ನಟಿಸಿದ್ದಾರೆ. ಇವರು ರಂಗಭೂಮಿ ಕಲಾವಿದರು ಕೂಡ ಹೌದು. ರಂಗಭೂಮಿಯಲ್ಲಿ ನಟನೆಗೆ ತರಬೇತಿ ಪಡೆದು ಮುಕುಂದ ರಾಮಸ್ವಾಮಿ ಬಂದಿದ್ದಾರೆ. ಇವರಿಗೆ ನಾಯಕಿಯರಾಗಿ ದಿಯಾ ಕೀರ್ತಿ ಮತ್ತು ಚಂದನಾ ಗೌಡ ನಟಿಸಿದ್ದಾರೆ. ಇವರು ಕೂಡ ತಮ್ಮ ಪಾತ್ರಗಳ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ಈ ಸಿನಿಮಾಗೆ ವೀರ್ ಸಮರ್ಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಹಾಡುಗಳು ಭಿನ್ನವಾಗಿವೆ ಎಂಬ ಸುಳಿವನ್ನು ನೀಡಿದ್ದಾರೆ.

Rajesh Nataranga Mukunda Ramaswamy in pivotal role Love Seasons movie teaser is trending

ಇನ್ನು 'ಲವ್ ಸೀಸನ್ಸ್' ಸಿನಿಮಾದ ಟೀಸರ್ ಬಿಡುಗಡೆ ಮಾಡಿದ ಸಂದರ್ಭದಲ್ಲಿಯೇ ಜೂನ್ ತಿಂಗಳಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ. ಇದರ ಮೊದಲ ಹಂತದಲ್ಲಿಯೇ ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಾಡುಗಳು ಮತ್ತು ಟ್ರೈಲರ್ ಬಿಡುಗಡೆಗೊಳ್ಳಲಿದೆ. ಇದು ಯಾರು ಯಾರನ್ನೂ ನಂಬಲು ಕಷ್ಟವಾಗುವಂತಹ ಕಾಲ. ನಂಬಿಕೆಯೆಂಬ ಚುಂಬಕ ಶಕ್ತಿಯ ಸುತ್ತ ಹೊಸೆಯಲ್ಪಟ್ಟಿರುವ, ಪ್ರೇಮದ ಪರಾಗ ಮೆತ್ತಿಕೊಂಡಿರುವ ಕಥೆ 'ಲವ್ ಸೀಸನ್ಸ್'ನಲ್ಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾವನ್ನು ಬೆಂಗಳೂರು ಹಾಗೂ ಅದರ ಸುತ್ತಮುತ್ತಲಿನ ಏರಿಯಾಗಳಲ್ಲಿ ಸಿನಿಮಾವನ್ನು ಶೂಟಿಂಗ್ ಮಾಡಲಾಗಿದೆ.

'ಲವ್ ಸೀಸನ್ಸ್' ಸಿನಿಮಾವನ್ನು ಎನ್.ಆರ್ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಎನ್.ಆರ್ ಮಂಜುನಾಥ (ನೀಲೇರಿ) ನಿರ್ಮಾಣ ಮಾಡಿದ್ದಾರೆ. ಕೃತ್ವಿಕ್‌ ನಿರ್ದೇಶನ, ವೀರ್ ಸಮರ್ಥ್ ಸಂಗೀತ ನಿರ್ದೇಶನ ಈ ಸಿನಿಮಾಗಿದೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಸೇರಿದಂತೆ ಹಲವರು ಸಾಹಿತ್ಯ ರಚಿಸಿದ್ದಾರೆ. ಅವಿನಾಶ ಶಾಸ್ತ್ರಿ ಕ್ಯಾಮರಾವರ್ಕ್ ಇದ್ದು, ಮಧು ತುಂಬಕೆರೆ ಸಂಕಲನ, ಭಜರಂಗಿ ಮೋಹನ್‌ ಕೊರಿಯೋಗ್ರಫಿ ಈ ಸಿನಿಮಾಗಿದೆ. ಮುಕುಂದ ರಾಮಸ್ವಾಮಿ ನಾಯಕ, ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿದ್ದಾರೆ. ಇವರೊಂದಿಗೆ ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರು ನಟಿಸಿದ್ದಾರೆ.

English summary
Rajesh Nataranga, Mukunda Ramaswamy in pivotal role Love Seasons movie teaser is trending.
Read more about: kannada movie sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X