ಕರ್ನಾಟಕದಲ್ಲೂ ಅಬ್ಬರಿಸುತ್ತಿರೋ ರಜನಿ 'ಕೂಲಿ'; ಮೊದಲ ದಿನ ಈ ಸಿಂಗಲ್ ಸ್ಕ್ರೀನ್‌ಗಳ ಕಲೆಕ್ಷನ್ ಎಷ್ಟು?

ವಿಶ್ವದಾದ್ಯಂತ ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾದ ಜ್ವರ ಶುರುವಾಗಿದೆ. ರಜನಿಯನ್ನು ಕಣ್ತುಂಬಿ ಕೊಳ್ಳುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ತಮಿಳುನಾಡಿನಲ್ಲೆಷ್ಟೇ ಅಲ್ಲ. ಕರ್ನಾಟಕದಲ್ಲೂ ರಜನಿಕಾಂತ್ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಸಿನಿಮಾದ ಟಿಕೆಟ್ ಬೆಲೆ ಗಗನಕ್ಕೇರಿಸಿದರೂ 'ಕೂಲಿ' ಫಸ್ಟ್ ಡೇ ಫಸ್ಟ್ ಶೋ ನೋಡುವ ಕಾತುರ ಮಾತ್ರ ಕಮ್ಮಿಯಾಗಿಲ್ಲ. ಹೀಗಾಗಿ ಕರ್ನಾಟಕದ ಬಹುತೇಕ ಚಿತ್ರಮಂದಿರಗಳು ಮೊದಲ ದಿನವೇ ಹೌಸ್‌ಫುಲ್ ಆಗಿವೆ.

ಬೆಂಗಳೂರಿನ ಸಿಂಗಲ್ ಸ್ಕ್ರೀನ್‌ನಲ್ಲಿ 'ಕೂಲಿ' ಸಿನಿಮಾದ ಸೆಲೆಬ್ರೆಷನ್ ಅದ್ಧೂರಿಯಾಗಿದೆ. ಶೇ.80 ಸಿಂಗಲ್ ಸ್ಕ್ರೀನ್‌ಗಳು ಹೌಸ್‌ಫುಲ್ ಆಗಿವೆ. ರಜನಿ ಮ್ಯಾನರಿಸಂ, ಸ್ಟೈಲ್ ಹೇಗಿರುತ್ತೋ? ಡೈಲಾಗ್ ಡಿಲೇವರಿ ಹೇಗಿರುತ್ತೋ? ಅಂತ ಕನಸು ಕಾಣುತ್ತಿದ್ದ ಅಭಿಮಾನಿಗಳು ಇನ್ನೇನು ಕೆಲವೇ ಗಂಟೆಗಳಲ್ಲಿ ಕಣ್ತುಂಬಿ ಕೊಳ್ಳಲಿದ್ದಾರೆ. ಈ ಕಾರಣಕ್ಕೆ ಟಿಕೆಟ್ ಬೆಲೆ ಏರಿಕೆ ಬಗ್ಗೆ ಹೆಚ್ಚೇನು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

Rajinikanth Aamir Khan Nagarjuna Upendra Coolie Movie First Day Collections in Bengaluru Theatres

ಸಾಮಾನ್ಯವಾಗಿ ರಜನಿಕಾಂತ್ ಸಿನಿಮಾ ರಿಲೀಸ್ ಅಂದರೆ, ತಮಿಳುನಾಡಿನಲ್ಲಿ ಇದ್ದಷ್ಟೇ ಕ್ರೇಜ್ ಬೆಂಗಳೂರಿನಲ್ಲೂ ಇರುತ್ತೆ. ರಜನಿ ಸಿನಿಮಾ ರಿಲೀಸ್ ಆದರೆ, ಇಲ್ಲಿನ ಥಿಯೇಟರ್‌ಗಳು ತುಂಬಿ ತುಳುಕುತ್ತವೆ. ಆದರೆ, ಹಿಂದೆಂದಿಗಿಂತಲೂ 'ಕೂಲಿ' ಕ್ರೇಜ್ ಬೇರೆ ಲೆವೆಲ್‌ನಲ್ಲೇ ಇದೆ. ಟಿಕೆಟ್ ಬೆಲೆ ಏರಿಕೆ ಮಾಡಿದ್ದರಿಂದಲೋ? ಇಲ್ಲ ರಜನಿ ಸಿನಿಮಾ ನೋಡುವುದಕ್ಕೋ ಗೊತ್ತಿಲ್ಲ. ಬೆಂಗಳೂರಿನ ಕೆಲವು ಚಿತ್ರಮಂದಿರಗಳ ಮೊದಲ ದಿನದ ಕಲೆಕ್ಷನ್ ಕೂಡ ಅಷ್ಟೇ ಕ್ರೇಜಿಯಾಗಿದೆ.


ಬೆಂಗಳೂರಿನಲ್ಲಿ 'ಕೂಲಿ' ಕ್ರೇಜ್

ಕಳೆದೊಂದು ವಾರದಿಂದ ಬೆಂಗಳೂರಿನ ಚಿತ್ರಮಂದಿರಗಳ ಮುಂದೆ 'ಕೂಲಿ' ಮೇನಿಯಾ ಶುರುವಾಗಿದೆ. ಬೆಂಗಳೂರಿನ ಸುಮಾರು 160 ಮಲ್ಟಿಪ್ಲೆಕ್ಸ್‌ನಲ್ಲಿ 'ಕೂಲಿ' ರಿಲೀಸ್ ಆಗುತ್ತಿದ್ದರೆ, 60 ರಿಂದ 70 ಸಿಂಗಲ್‌ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣಲಿದೆ. ಇಲ್ಲಿನ ಬಹುತೇಕ ಎಲ್ಲಾ ಸ್ಕ್ರೀನ್‌ಗಳ, ಎಲ್ಲಾ ಶೋಗಳು ಫುಲ್ ಆಗಿವೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ತಮಿಳು ಸಿನಿಮಾ ಪ್ರದರ್ಶನ ಕಾಣುವ ಕೆಲವು ಥಿಯೇಟರ್‌ಗಳಲ್ಲಿ ಭರ್ಜರಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.

ಬೆಂಗಳೂರಿನ ಪ್ರಮುಖ ಥಿಯೇಟರ್‌ಗಳ ಕಲೆಕ್ಷನ್

'ಕೂಲಿ' ಸಿನಿಮಾ ಕರ್ನಾಟಕ ವಿತರಣೆಯ ಹಕ್ಕನ್ನು ಎವಿ ಮೀಡಿಯಾ ಖರೀದಿ ಮಾಡಿತ್ತು. ಎವಿ ಮೀಡಿಯಾದ ಪರವಾಗಿ ಜಯಣ್ಣ ಫಿಲ್ಮ್ಸ್ ಈ ಸಿನಿಮಾವನ್ನು ಕರ್ನಾಟಕದಾದ್ಯಂತ ವಿತರಣೆ ಮಾಡುತ್ತಿದೆ. 'ಕೂಲಿ' ಅಡ್ವಾನ್ಸ್ ಬುಕಿಂಗ್ ಓಪನ್ ಆದ ಕ್ಷಣದಿಂದಲೇ ಅಭಿಮಾನಿಗಳು ಮುಗಿಬಿದ್ದು ಖರೀದಿ ಮಾಡಿದ್ದರು. ವಿತರಕರ ವಲಯದಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಈ ಕೆಳಕಂಡ ಸಿಂಗಲ್‌ ಸ್ಕ್ರೀನ್‌ಗಳ ಅಂದಾಜು ಕಲೆಕ್ಷನ್ ಹೀಗಿದೆ.

ಊರ್ವಶಿ ಥಿಯೇಟರ್ ₹30 ಲಕ್ಷ
ಸ್ವಾಗತ್ ಶಂಕರ್‌ನಾಗ್ ₹27 ಲಕ್ಷ
ಮುಕುಂದ ₹27 ಲಕ್ಷ
ಲಕ್ಷ್ಮಿ (ತಾವರೆಕೆರೆ) ₹24 ಲಕ್ಷ
ಪುಷ್ಪಾಂಜಲಿ ₹18 ಲಕ್ಷ
ಕೃಷ್ಣ (ಬೊಮ್ಮನಹಳ್ಳಿ) ₹17 ಲಕ್ಷ
ಅರುಣ್ ₹12 ಲಕ್ಷ
ಸಂಪಿಗೆ ₹12 ಲಕ್ಷ
ಬೃಂದಾ (ಹೊಂಗಸಂದ್ರ) ₹17 ಲಕ್ಷ
ಪುಷ್ಟಾಂಜಲಿ (ಸುಲ್ತಾನ್‌ಪಾಳ್ಯ) ₹13 ಲಕ್ಷ
ಸಂಧ್ಯಾ (ಮಡಿವಾಳ) ₹15 ಲಕ್ಷ

Rajinikanth Aamir Khan Nagarjuna Upendra Coolie Movie First Day Collections in Bengaluru Theatres


ಕರ್ನಾಟಕದಾದ್ಯಂತ ಎಷ್ಟು ಸ್ಕ್ರೀನ್

ಇನ್ನು ಕರ್ನಾಟಕದಾದ್ಯಂತ ಸುಮಾರು 420ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ 'ಕೂಲಿ' ರಿಲೀಸ್ ಆಗುತ್ತಿದ್ದು, ಮೊದಲ ದಿನ 1800 ರಿಂದ 2000 ಶೋಗಳು ಪ್ರದರ್ಶನ ಕಾಣುವ ಬಗ್ಗೆ ಅಂದಾಜಿಸಲಾಗಿದೆ. ಒಂದು ಅಂದಾಜಿನ ಪ್ರಕಾರ, ಕರ್ನಾಟಕದಲ್ಲಿ ಮೊದಲ ದಿನ ದಾಖಲೆ ಕಲೆಕ್ಷನ್ ಆಗಲಿದೆ. ಈಗಾಗಲೇ ವಿತರಕರು ಲಾಭದಲ್ಲಿ ಇದ್ದಾರೆಂದು ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ.

ಮೊದಲ ದಿನ ಲೆಕ್ಕಚಾರವೇನು?

ರಜನಿಕಾಂತ್ ಸಿನಿಮಾಗಳು ಕರ್ನಾಟಕದಲ್ಲಿ ದಾಖಲೆ ಕಲೆಕ್ಷನ್ ಮಾಡಿವೆ. ಇತ್ತೀಚೆಗೆ ತೆರೆಕಂಡಿದ್ದ 'ಜೈಲರ್' ಸಿನಿಮಾ ಸುಮಾರು 35 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈಗ 'ಕೂಲಿ' ಈ ಸಿನಿಮಾದ ದಾಖಲೆಯನ್ನು ಮೂರು ದಿನಗಳಲ್ಲಿ ಹೊಡೆದು ಹಾಕಲಿದ್ದು, ಮೊದಲ ದಿನ ಕೇವಲ ಕರ್ನಾಟಕದಲ್ಲಿ 18 ರಿಂದ 20 (Gross) ಕಲೆಕ್ಷನ್ ಆದರೂ ಅಚ್ಚರಿ ಪಡೆಬೇಕಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Disclaimer: ಅಂದ್ಹಾಗೆ ಈ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ಚಿತ್ರತಂಡ ಆಗಲಿ, ಸಿನಿಮಾ ವಿತರಕರಾಗಲಿ ಅಥವಾ ಚಿತ್ರಮಂದಿರದ ಮಾಲೀಕರಾಗಲಿ ಅಧಿಕೃತ ಹೇಳಿಕೆ ಕೊಟ್ಟಿಲ್ಲ. ಈ ಅಂಕಿ ಅಂಶಗಳಲ್ಲಿ ಕುರಿತದ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Rajinikanth, Aamir Khan, Nagarjuna Upendra starrer Coolie Movie First Day Collections in Bengaluru Theatres.
Read more about: rajinikanth bengaluru theaters
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X