ಮತ ಚಲಾಯಿಸಿದ ರಜನಿಕಾಂತ್ ಮತ್ತು ಕಮಲ್ ಹಾಸನ್
Recommended Video
ಲೋಕಸಭಾ ಚುನಾವಣೆ ಹಿನ್ನೆಲೆ ಸೂಪರ್ ಸ್ಟಾರ್ ರಜನಿಕಾಂತ್ ಬಳಗ್ಗೆಯೇ ಮತದಾನ ಮಾಡಿದ್ದಾರೆ. ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿದ ತಲೈವಾ ಸರತಿ ಸಾಲಲ್ಲಿ ನಿಂತು ಮತದಾನ ಮಾಡಿ ಅಭಿಮಾನಿಗಳಿಗೆ ಪ್ರೇರಣೆಯಾಗಿದ್ದಾರೆ. ಸದ್ಯ 'ದರ್ಬಾರ್' ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿತ್ತು. ಶೂಟಿಂಗ್ ನಲ್ಲಿ ಬ್ಯುಸಿಯಿದ್ದ ಸೂಪರ್ ಸ್ಟಾರ್ ಚಿತ್ರೀಕರಣದಿಂದ ಬ್ರೇಕ್ ಪಡಿದು ಮತದಾನ ಮಾಡಲು ಚೆನ್ನೈಗೆ ಆಗಮಿಸಿದ್ದಾರೆ.
ಇನ್ನು ಸಕಲಕಲಾವಲ್ಲಭ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಜೊತೆ ಬಂದು ಮತದಾನ ಮಾಡಿದ್ದಾರೆ. ಮಕ್ಕಳ್ ನೀಧಿ ಮೈಯಮ್ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ತಮ್ಮ ಪುತ್ರಿ ಶ್ರುತಿ ಹಾಸನ್ ಇಬ್ಬರು ಅಲ್ವಾರ್ ಪೇಟ್ನ ಕಾರ್ಪೋರೇಷನ್ ಸ್ಕೂಲ್ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ. ಶ್ರುತಿ ಹಾಸನ್ ಹಾಗೂ ಕಮಲ್ ಹಾಸನ್ ಬೆಳಗ್ಗೆ 8ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದ್ದಾರೆ.

ತಮಿಳು ಸ್ಟಾರ್ಸ್ ಗಳಾದ ತಲಾ ಅಜಿತ್, ಇಳಯದಳಪತಿ ವಿಜಯ್, ಸೂರ್ಯ ದಂಪತಿ, ಕಾರ್ತಿಕ್, ಸಿದ್ಧಾರ್ತ್ ಸೇರಿದಂತೆ ಬಹುತೇಕ ನಟರು ಬಳಗ್ಗೆಯೇ ವೋಟ್ ಮಾಡುವ ಮೂಲಕ ಅಭಿಮಾನಿಗಳಿಗೂ ಮತ ಚಲಾಯಿಸುವಂತೆ ಸಂದೇಶ ನೀಡಿದ್ದಾರೆ.


Click it and Unblock the Notifications











