For Quick Alerts
  ALLOW NOTIFICATIONS  
  For Daily Alerts

  ರಜನಿ 'ಅನ್ನಾತ್ತೆ' 100 ಕೋಟಿ.. ಅಕ್ಷಯ್ 'ಸೂರ್ಯವಂಶಿ' 50 ಕೋಟಿ ಬಾಕ್ಸಾಫೀಸ್ ಧೂಳೀಪಟ

  |

  ಕೊರೊನಾದಿಂದ ಕಂಗಾಲಾಗಿದ್ದ ಭಾರತೀಯ ಚಿತ್ರರಂಗಕ್ಕೆ ಹೊಸ ಹುರುಷು ಸಿಕ್ಕಿದೆ. ಒಂದೂವರೆ ವರ್ಷದಿಂದ ಸೊರಗಿ ಹೋಗಿದ್ದ ಬಾಲಿವುಡ್ ಮಂದಿಯ ಮುಖದಲ್ಲಿ ಮಂದಹಾಸ ಮೂಡಿದೆ. ಇತ್ತ ದಕ್ಷಿಣ ಭಾರತದಲ್ಲೂ ಸೂಪರ್ ಸ್ಟಾರ್ ರಜನಿಕಾಂತ್ ಎರಡು ದಿನಗಳಲ್ಲೇ ದಾಖಲೆ ಬರೆದಿದ್ದಾರೆ. ಬೆಳಕಿನ ಹಬ್ಬ ದೀಪಾವಳಿಗೆ ಅದ್ಧೂರಿಯಾಗಿ ತೆರೆಕಂಡಿದ್ದ ಸಿನಿಮಾಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಾಕ್ಸಾಫೀಸ್ ದಾಖಲೆಗಳ ಮೇಲೆ ದಾಖಲೆ ಬರೆದಿದೆ.

  ಬೆಳಕಿನ ಹಬ್ಬದಲ್ಲಿ ತೆರೆಕಂಡ ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿವೆ. ತಲೈವಾ ರಜನಿಕಾಂತ್ ನಟಿಸಿದ ಅನ್ನಾತ್ತೆ ಗಲ್ಲಾಪೆಟ್ಟಿಗೆಯನ್ನು ಲೂಟಿ ಮಾಡುತ್ತಿದೆ. ಇತ್ತ ಅಕ್ಷಯ್ ಕುಮಾರ್, ಕತ್ರಿನಾ ಕೈಫ್ ನಟಿಸಿದ ಸೂರ್ಯವಂಶಿ ಎರಡು ದಿನದ ಗಳಿಕೆ 50 ಕೋಟಿ ದಾಟಿದೆ. ಮೂರನೇ ದಿನವೂ ಭರ್ಜರಿ ಕಲೆಕ್ಷನ್ ಮಾಡುತ್ತೆ ಅಂತ ಬಾಲಿವುಡ್ ಮಂದಿ ಭವಿಷ್ಯ ನುಡಿದಿದ್ದಾರೆ. ಹಾಗಿದ್ರೆ, ಯಾರ ಸಿನಿಮಾ ಎಷ್ಟು ಗಳಿಕೆ ಕಂಡಿದೆ? ಬಾಕ್ಸಾಫೀಸ್ ಉಡೀಸ್ ಮಾಡಿದ ಎರಡು ಸಿನಿಮಾಗಳ ಗಳಿಕೆ ಎಷ್ಟು? ಅನ್ನುವುದರ ಮಾಹಿತಿ ಇಲ್ಲಿದೆ.

  ಮಿಶ್ರ ಪ್ರತಿಕ್ರಿಯೆ ಸಿಕ್ಕಿದರೂ 100 ಕೋಟಿ ಬಾಚಿದ ರಜನಿ 'ಅನ್ನಾತ್ತೆ'

  ಶಿವ ನಿರ್ದೇಶಿಸಿದ ಅನ್ನಾತ್ತೆ ಸಿನಿಮಾಗೆ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಿದ್ದರೂ ರಜನಿಕಾಂತ್ ಅನ್ನಾತ್ತೆ ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತಿದೆ. ವಿಮರ್ಶಕರಿಂದ ಕಟುಟೀಕೆಗೆ ಒಳಗಾಗಿದ್ದರೂ, ರಜನಿಕಾಂತ್ ಅಭಿಮಾನಿಗಳು ತಲೈವಾ ಕೈ ಬಿಡದೆ ಕಾಪಾಡಿದ್ದಾರೆ. ಅನ್ನಾತ್ತೆ ನವೆಂಬರ್ 04 ರಂದು ವಿಶ್ವದಾದ್ಯಂತ ತೆರೆಕಂಡಿದ್ದ ಸಿನಿಮಾ ಬಾಕ್ಸಾಫೀಸ್ ಅನ್ನು ಬಾಚಿಕೊಂಡಿದೆ. ಎರಡೇ ದಿನಗಳಲ್ಲಿ ಸೂಪರ್‌ಸ್ಟಾರ್ ಸಿನಿಮಾ 100 ಕೋಟಿ ದಾಟಿ ಅಚ್ಚರಿ ಮೂಡಿಸಿದೆ. 2021ರಲ್ಲೇ ಇಷ್ಟು ವೇಗವಾಗಿ ನೂರು ಕೋಟಿ ಗಳಿಕೆ ಸಿನಿಮಾ ಎಂಬ ದಾಖಲೆ ಬರೆದಿದೆ.

  Diwali Boxoffice effect Rajinikanth Annaatte 100 crore and Akshay Kumar Sooryavanshi 50 crore crossed

  ಅನ್ನಾತ್ತೆ ಎರಡು ದಿನ ಎಷ್ಟೆಷ್ಟು ಗಳಿಕೆ ಕಂಡಿದೆ?

  ಅನ್ನಾತ್ತೆ ವಿಮರ್ಶೆ ಕಂಡು ಇಲ್ಲಿಗೆ ಸೂಪರ್‌ಸ್ಟಾರ್ ರಜನಿಕಾಂತ್ ಅಧ್ಯಾಯ ಮುಗಿಯಿತು ಅಂತಲೇ ಭಾವಿಸಲಾಗಿತ್ತು. ಆದರೆ ಅನ್ನಾತ್ತೆ ಮೊದಲ ದಿನದ ಗಳಿಕೆ ಆಡಿಕೊಂಡವರ ಬಾಯಿಗೆ ಬೀಗ ಜಡಿದಿದೆ. ಟ್ರೇಡ್ ಅನಲಿಸ್ಟ್ ಮನೋಬಲ ವಿಜಯಬಾಲನ್ ಪ್ರಕಾರ, ಅನ್ನಾತ್ತೆ ಮೊದಲ ದಿನ ಬರೋಬ್ಬರಿ 70.19 ಕೋಟಿ ಗಳಿಕೆ ಕಂಡಿದೆ. ಅದೆ ಎರಡನೇ ದಿನ ಗಳಿಕೆಯಲ್ಲಿ ದಾಖಲೆ ಇಳಿಕೆ ಕಂಡರೂ 42.43 ಕೋಟಿ ಗಳಿಕೆ ಕಂಡಿದೆ. 3ನೇ ದಿನ 33.71 ಕೋಟಿ ಗಳಿಸಿದೆ. ಹೀಗಾಗಿ ಒಟ್ಟು ಮೂರ ದಿನದ ಗಳಿಕೆ 146. 53 ಕೋಟಿ ಕೆಲಕ್ಷನ್ ಮಾಡಿದೆ. ಕೇವಲ ಅಮೆರಿಕವೊಂದರಲ್ಲೇ ಮೂರು ದಿನಕ್ಕೆ 5 ಕೋಟಿ ಗಳಿಕೆ ಕಂಡಿದೆ. ನಯನತಾರಾ, ಕೀರ್ತಿ ಸುರೇಶ್, ಮೀನಾ, ಖುಷ್ಬು, ಪ್ರಕಾಶ್ ರಾಜ್, ಜಗಪತಿಬಾಬು ರಂತಹ ದಿಗ್ಗಜರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ.

  ಅಕ್ಷಯ್ ಕುಮಾರ್ ಸೂರ್ಯವಂಶಿ 2 ದಿನಕ್ಕೆ 50 ಕೋಟಿ

  ಇತ್ತ ಬಾಲಿವುಡ್‌ ಕೂಡ ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿದೆ. ಅಕ್ಷಯ್ ಕುಮಾರ್, ಕತ್ರಿನಾ ಕೈಫ್ ಸೂರ್ಯವಂಶಿಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಅಜಯ್ ದೇವಗನ್, ರಣ್‌ವೀರ್ ಸಿಂಗ್ ಅತಿಥಿಗಳಾಗಿ ಕಾಣಿಸಿಕೊಂಡ ಸೂರ್ಯವಂಶಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ. ಮೊದಲ ದಿನ ಸೂರ್ಯವಂಶಿ 26.29 ಕೋಟಿ ದಾಖಲೆ ಕಲೆ ಹಾಕಿತ್ತು. ಮೊದಲ ದಿನವೇ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಎರಡನೇ ದಿನವೂ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದಿದೆ. ಎರಡನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ 23.85 ಕೋಟಿ ದಾಟಿದ್ದು, ಒಟ್ಟು ಗಳಿಕೆ 50.14 ಕೋಟಿ ಎನ್ನಲಾಗಿದೆ.

  ಸೂರ್ಯವಂಶಿ ಮೂರನೇ ದಿನದ ಗಳಿಕೆಯಲ್ಲಿ ಶೇ.20ರಷ್ಟು ಏರಿಕೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಮೂಲಕ ಸೂರ್ಯವಂಶಿ 3ನೇ ದಿನ ಬಾಕ್ಸಾಫೀಸ್ ಗಳಿಕೆ 30 ಕೋಟಿ ದಾಟಲಿದೆ. ದೀಪಾವಳಿಗೆ ತೆರೆಕಂಡ ಅನ್ನಾತ್ತೆ ಹಾಗೂ ಸೂರ್ಯವಂಶಿ ಮುಂದೆ ತೆರೆಕಾಣಲಿರುವ ಸಿನಿಮಾಗಳಿಗೆ ಹೊಸ ಭರವಸೆಯನ್ನಂತೂ ಕೊಟ್ಟಿದೆ.

  English summary
  On the occation of diwali Rajinikanth Starrer Annaatte crossed 100 crore and Akshay kumar Sooryavanshi crossed 50 crore at the boxoffice in 2 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X