Rajinikanth: ಒಂದ್ ಕಪ್ ಕಾಫಿ.. ಬಿಎಂಟಿಸಿ ಡಿಪೋಗೆ ಭೇಟಿ ಕೊಟ್ಟು 'ಈ ಫೋಟೊಗೆ ಫ್ರೇಮ್ ಹಾಕಿಸು' ಎಂದ ತಲೈವಾ!

ಸೂಪರ್‌ಸ್ಟಾರ್ ರಜನಿಕಾಂತ್‌ಗೂ ಬೆಂಗಳೂರಿಗೂ ಇವರು ನಂಟಿನ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ರಜನಿಕಾಂತ್‌ಗೆ ಬಿಡುವು ಸಿಕ್ಕಾಗಲೆಲ್ಲಾ ಬೆಂಗಳೂರಿಗೆ ವಿಸಿಟ್ ಹಾಕುತ್ತಾರೆ. ಆದರೆ, ರಜನಿಕಾಂತ್ ಯಾವಾಗ ಬರುತ್ತಾರೆ? ಯಾವಾಗ ಹೋಗುತ್ತಾರೆ? ಅನ್ನೋದೇ ಗೊತ್ತಾಗೋದಿಲ್ಲ.

ಗೆಳೆಯ ರಾಜ್‌ಬಹದ್ದೂರ್ ಹೇಳುವಂತೆ ರಜನಿಕಾಂತ್ ಸಾಮಾನ್ಯರಂತೆ ಓಡಾಡಿಕೊಂಡಿರುತ್ತಾರೆ. ಅವರು ವೇಷ ಬದಲಿಸಿಕೊಂಡು ಬರುತ್ತಾರೆ. ಆದರೆ, ಈ ಬಾರಿಗೆ ಹೇಗಿದ್ದಾರೋ ಹಾಗೇ ಬಂದಿದ್ದಾರೆ. ಬೆಂಗಳೂರಿನಲ್ಲಿ ಒಂದು ರೌಂಡ್ ಹಾಕಿದ್ದಾರೆ. ಸುಮಾರು 5 ದಶಕಗಳ ಹಿಂದೆ ಕೆಲಸ ಮಾಡುತ್ತಿದ್ದ ಜಯನಗರದ ಬಿಎಂಟಿಸಿ ಡಿಪೋಗೆ ದಿಢೀರನೇ ಭೇಟಿ ಕೊಟ್ಟಿದ್ದಾರೆ.

rajinikanth-and-rajbahaddur-photo-bmtc-depot

ಈ ವೇಳೆ ಗೆಳೆಯ ರಾಜ್‌ಬಹದ್ದೂರ್ ಕೂಡ ರಜನಿಕಾಂತ್‌ಗೆ ಸಾಥ್ ಕೊಟ್ಟಿದ್ದರು. ಈ ವೇಳೆ ಜಯನಗರದ ಬಿಎಂಟಿಸಿ ಮುಂಭಾಗದಲ್ಲಿ ಗೆಳೆಯನೊಂದಿಗೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡಿದ್ದು ಈ ಫೋಟೊಗೆ ಫ್ರೇಮ್ ಹಾಕಿಸುವಂತೆ ಗೆಳೆಯನಿಗೆ ಹೇಳಿದ್ದಾರೆ.

ಫೋಟೊ ಫ್ರೇಮ್ ಹಾಕಿಸು ಎಂದು ರಜನಿ

ರಜನಿಕಾಂತ್ ಹಾಗೂ ರಾಜ್‌ಬಹದ್ದೂರ್ ಅದೆಷ್ಟೋ ಬಾರಿ ಬೆಂಗಳೂರಿನ ಗಲ್ಲಿಗಳಲ್ಲಿ ಓಡಾಡಿದ್ದಾರೆ. ರಜನಿ ವೇಷ ಮರೆಸಿಕೊಂಡು ತಮ್ಮೊಂದಿಗೆ ಸುತ್ತಾಡಿದ ಕ್ಷಣಗಳನ್ನು ಅದೆಷ್ಟೋ ಬಾರಿ ಸಂದರ್ಶನದಲ್ಲಿ ರಾಜ್‌ಬಹದ್ದೂರ್ ಅವರೇ ಹೇಳಿಕೊಂಡಿದ್ದಾರೆ. ಆದರೆ, ಈ ಬಾರಿ ಇಬ್ಬರು 53 ವರ್ಷಗಳ ಹಿಂದೆ ಭೇಟಿಯಾಗಿದ್ದ ಜಾಗದಲ್ಲಿಯೇ ಫೋಟೊ ತೆಗೆಸಿಕೊಂಡಿದ್ದಾರೆ. ಆ ಫೋಟೊವನ್ನು ನೆನಪಿಗಾಗಿ ಫೇಮ್‌ ಹಾಕಿಸುವಂತೆ ಹೇಳಿ ಚೆನ್ನೈಗೆ ಪಯಣ ಬೆಳೆಸಿದ್ದಾರೆ.

rajinikanth-and-rajbahaddur-photo-bmtc-depot

ರಜನಿ ಬೆಂಗಳೂರು ರೌಂಡ್ಸ್

ಸೂಪರ್‌ಸ್ಟಾರ್ ರಜನಿಕಾಂತ್ ಬೆಂಗಳೂರಿನಲ್ಲಿರೋ ತಮ್ಮ ನೆಚ್ಚಿನ ಸ್ಥಳಗಳಿಗೆ ಭೇಟಿ ಕೊಟ್ಟಿದ್ದಾರೆ. ಮೊದಲು ಗೆಳೆಯ ರಾಜ್‌ಬಹದ್ಧೂರ್ ಅವರನ್ನು ಕರೆದುಕೊಂಡು ಜಯನಗರದ ರಾಘವೇಂದ್ರ ಸ್ವಾಮಿ ಮಠಕ್ಕೆ ಹೋಗಿದ್ದರು. ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಯ್ಯಾಸ್‌ಗೆ ಹೋಗಿ ಕಾಫಿ ಸೇವಿಸಿದ್ದಾರೆ. ಆ ಬಳಿಕ ಜಯನಗರದ ಬಿಎಂಟಿಸಿ ಬಸ್ ಡಿಪೋಗೆ ಭೇಟಿ ನೀಡಿದ್ದಾರೆ. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

100 ಸಿನಿಮಾ ನೋಡಿದ್ರೂ ಕಂಡು ಹಿಡಿಯೋಕೆ ಆಗಲ್ಲ

"ರಜನಿಕಾಂತ್‌ಗೆ ಎಲ್ಲಾ ಕಡೆ ಭೇಟಿ ಕೊಡಬೇಕು ಅಂತ ಆಸೆ. ಆದರೆ, ಅವರನ್ನು ನೋಡಿದ ಕೂಡ ಜನರು ಮುತ್ತಿಕೊಳ್ಳುತ್ತಾರೆ. ಸ್ಪೆಲ್ಫಿ, ಫೋಟೊ ಅಂತ ಅಟ್ಯಾಕ್ ಮಾಡುತ್ತಾರೆ. ಈ ಕಾರಣಕ್ಕೆ ಅವನು ಮಾರು ವೇಷದಲ್ಲಿ ಬರುತ್ತಾನೆ. ಅವನು ನಟಿಸಿದ 100 ಸಿನಿಮಾ ನೋಡಿರಬಹುದು. ಆದರೆ, ಮಾರು ವೇಷದಲ್ಲಿ ಬಂದರೆ ಕಂಡು ಹಿಡಿಯುವುದಕ್ಕೆ ಸಾಧ್ಯವಿಲ್ಲ" ಎಂದು ಈ ಸಂದರ್ಭದಲ್ಲಿ ರಜನಿ ಗೆಳೆಯ ರಾಜ್‌ ಬಹದ್ದೂರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮುಂದಿನ ತಿಂಗಳು ಹೊಸ ಸಿನಿಮಾ ಶುರು

ರಜನಿಕಾಂತ್‌ಗೆ 'ಜೈಲರ್' ಸಿನಿಮಾ ಸೂಪರ್‌ ಸಕ್ಸಸ್ ಕೊಟ್ಟಿದೆ. 600 ಕೋಟಿ ರೂ. ಕಲೆಕ್ಷನ್ ಮಾಡುತ್ತಿದೆ. 'ಬಾಷಾ' ಬಳಿಕ ರಜನಿಗೆ 'ಜೈಲರ್' ಸೂಪರ್ ಸಕ್ಸಸ್ ಕೊಟ್ಟಿದೆ. ಹೀಗಾಗಿ ಮುಂದಿನ ಸಿನಿಮಾ ಇದಕ್ಕಿಂತ ಚೆನ್ನಾಗಿ ತೆಗೆಯುತ್ತಾರೆ. ಮುಂದಿನ ತಿಂಗಳು ಅಂದ್ರೆ ಸೆಪ್ಟೆಂಬರ್ 18 ರಂದು ಆರಂಭ ಆಗುತ್ತಿದೆ ಎಂದು ರಾಜ್‌ಬಹದ್ದೂರ್ ಮಾಹಿತಿ ನೀಡಿದ್ದಾರೆ.

More from Filmibeat

English summary
Rajinikanth said his best friend Rajbahaddur to photo frame after BMTC Visit
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X