"ಅಶ್ವಿನಿ ಮೇಡಂ ಎಲಿಜಬೆತ್ ರಾಣಿ ಹಾಗೆ ಬದುಕ್ಬಹುದಿತ್ತು.. ಮದರ್ ತೆರೆಸಾ ತರ ಇದ್ದಾರೆ"; ರಾಜವಂಶದ ಫ್ಯಾನ್ಸ್!
ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಯೊಬ್ಬ ಹಾಕಿದ ಪೋಸ್ಟ್ ರಾಜವಂಶದ ಅಭಿಮಾನಿಗಳ ನಿದ್ದೆ ಕೆಡಿಸಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ನಿಂದಿಸಿದ್ದಕ್ಕೆ ರಾಜವಂಶದ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಕೂಡಲೇ ಕಿಡಿಗೇಡಿಯನ್ನು ಬಂಧಿಸಿದ ಶಿಕ್ಷೆ ನೀಡಬೇಕು ಎಂದು ರಾಜ್ಯದ ಗೃಹ ಮಂತ್ರಿ ಡಾ.ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್ ಹಾಗೂ ಅಣ್ಣಾವ್ರ ಅಭಿಮಾನಿಗಳು ಒಗ್ಗಟಾಗಿ ತುಮಕೂರಿನಲ್ಲಿ ಡಾ. ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದರು. ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಕಿಡಿಗೇಡಿಯನ್ನು ಬಂಧಿಸುವಂತೆ ಆಗ್ರಹಿಸಿದ್ದು, ಡಾ. ಜಿ. ಪರಮೇಶ್ವರ್ ಕೂಡ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅಭಿಮಾನಿಗಳು ನಿರಂತರವಾಗಿ ಇಂತಹ ನಿಂದಿಸುವ ಪೋಸ್ಟ್‌ಗಳನ್ನು ಮಾಡುತ್ತಲೇ ಇದ್ದಾರೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದೇವೆ. ಒಂದು ವೇಳೆ ಅದು ಸಾಧ್ಯವಾಗದೇ ಹೋದರೆ ನಾವೇ ಮುಂದಿನ ಕ್ರಮಕ್ಕೆ ಮುಂದಾಗಿತ್ತೇವೆ ಎಂದೂ ಹೇಳಿಕೊಂಡಿದ್ದಾರೆ. ಅಲ್ಲದೆ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಕೆಲಸವನ್ನು ಹೊಗಳಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಅದರ ಝಲಕ್ ಇಲ್ಲಿದೆ.
"ಆರ್‌ಸಿಬಿ ಗೆಲ್ಲುವ ಯೋಗ್ಯತೆಯಿಲ್ಲ"
ಅಶ್ವಿನಿ ಪುನೀತ್ ರಾಜ್‌ಕುಮಾರ್ ಇದೇ ಮೊದಲ ಬಾರಿಗೆ ಕ್ರಿಕೆಟ್‌ಗೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಇದೇ ಮೊದಲ ಬಾರಿಗೆ ಹೋಗಿದ್ದರು. ಅದರಲ್ಲಿ ಅವರದ್ದೇನು ತಪ್ಪಿದೆ? ಎಂದು ಪ್ರಶ್ನೆ ಮಾಡಿದ್ದಾರೆ. "ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು 15 ವರ್ಷಗಳಿಂದ ಯಾವುದೇ ಕ್ರಿಕೆಟ್ ಕಾರ್ಯಕ್ರಮಕ್ಕೂ ಭಾಗವಹಿಸಿರಲಿಲ್ಲ. ಈ ಆರ್‌ಸಿಬಿಯವ್ರಿಗೆ ಗೆಲ್ಲುವುದಕ್ಕೆ ಯೋಗ್ಯತೆಯಿಲ್ಲ ಅಂದರೆ, ಬೇರೆಯವರ ಮೇಲೆ ಯಾಕೆ ಅಪವಾದ ಮಾಡಬೇಕು." ಎಂದು ರಾಜವಂಶದ ಅಭಿಮಾನಿಗಳು ಕಿಡಿಕಾರಿದ್ದಾರೆ.
ಎಲಿಜಬೆತ್ ರಾಣಿ ಹಾಗೆ ಜೀವನ ನಡೆಸ್ಬಹುದು
ಇಷ್ಟೇ ಅಲ್ಲದೆ, ಅಶ್ವಿನಿ ಪುನೀತ್‌ರಾಜ್‌ಕುಮಾರ್ ಮನಸ್ಸು ಮಾಡಿದರೆ, ಎಲಿಜಬೆತ್ ರಾಣಿ ಹಾಗೆ ಬದುಕಿ ನಡೆಸಬಹುದು. ಆದರೆ, ಮದರ್ ತೆರೆಸಾ ತರ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆಂದು ಹೇಳಿದ್ದಾರೆ. "ಅಶ್ವಿನಿ ಮೇಡಂ ಅವರು ಎಲಿಜಬೆತ್ ರಾಣಿ ಹಾಗೆ ಜೀವನ ನಡೆಸಬಹುದು. ಆದರೆ, ಮದರ್ ತೆರೆಸಾ ತರ ಸಂತ ರೀತಿಯಲ್ಲಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಅವರನ್ನು ಅವಹೇಳನ ಮಾಡುತ್ತಿರುವುದು ನಮ್ಮೆಲ್ಲರಿಗೂ ಅವಮಾನವಾಗಿದೆ." ಎಂದು ರಾಜವಂಶದ ಅಭಿಮಾನಿಗಳು ಹೇಳಿಕೊಂಡಿದ್ದಾರೆ.

"ನಾವು ತಲಾಷ್ ಮಾಡುತ್ತಿದ್ದೇವೆ"
ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿಂದಿಸಿರುವ ಕಿಡಿಗೇಡಿಯನ್ನು ನಾವೂ ತಲಾಷ್ ಮಾಡುತ್ತಿದ್ದೇವೆ. ರಾಜವಂಶದ ಅಭಿಮಾನಿಗಳು ಕೂಡ ನಿಂದಿಸುವ ಪೋಸ್ಟ್‌ಗಳನ್ನು ಹಾಕಬಾರದು ಎಂದಿದ್ದಾರೆ. "ನಾವು ಕೂಡ ಆ ಕಿಡಿಗೇಡಿ ಯಾರು ಅಂತ ತಲಾಷ್ ಮಾಡುತ್ತಿದ್ದೇವೆ. ನಾವು ಇಂತಹವರ ಅಭಿಮಾನಿ ಅಂತಾನೇ ಹೇಳುತ್ತಿಲ್ಲ. ಇಂತಹ ಹೀರೊ ಅಂತಾನೇ ಹೇಳುತ್ತಿಲ್ಲ. ನಮ್ಮ ಅಭಿಮಾನಿಗಳೂ ಅಷ್ಟೇ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಬಾರದು. ಅವರೇನೋ ಗೊಬ್ಬರ ತಿಂತಾರೆ ಅಂದರೆ, ನಮ್ಮ ಅಭಿಮಾನಿಗಳು ಗೊಬ್ಬರ ತಿನ್ನುವ ಕೆಲಸ ಮಾಡಬಾರದು. ಅವರು ಏನಾದರೂ ಆಗಲಿ, ಅಣ್ಣಾವ್ರು, ಪುನೀತ್ ಹಾಕಿಕೊಟ್ಟ ಹಾದಿಯಲ್ಲಿ ನಾವು ನಡೆಯೋಣ." ಎಂದಿದ್ದಾರೆ.
ಕಿಡಿಗೇಡಿಯನ್ನು ಬಂಧಿಸುವ ಭರವಸೆ
"ಇತ್ತೀಚೆಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ಕುಟುಂಬದವರಿಗೆ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ, ಅಣ್ಣಾವ್ರ ಅಭಿಮಾನಿಗಳಿಗೆ, ಅಣ್ಣಾವ್ರ ಮನೆತನಕ್ಕೆ ಅವಹೇಳನಕಾರಿಯಾಗಿ ನಿಂದಿಸುತ್ತಿರುವಂತಹ ಪೋಸ್ಟ್‌ಗಳನ್ನು ಸಾಕಷ್ಟು ವೈರಲ್ ಮಾಡುತ್ತಿದ್ದಾರೆ. ಅದರ ವಿರುದ್ಧವಾಗಿ ಪ್ರತಿಭಟನೆಯ ಮುಖಾಂತರ ಜಿ ಪರಮೇಶ್ವರ್ ಅವರಿಗೆ ಮನವಿ ಕೊಟ್ಟಿದ್ದೇವೆ. ಅವರು ಕೂಡ ಮನವಿ ಸ್ವೀಕರಿಸಿ ಕಿಡಿಗೇಡಿಗಳನ್ನು ಈ ಕೂಡಲೇ ಬಂಧಿಸಿ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ." ಎಂದು ಅಭಿಮಾನಿಗಳು ಹೇಳಿದ್ದಾರೆ.


Click it and Unblock the Notifications











