ದೊಡ್ಮನೆ ಮತ್ತೊಂದು ಕುಡಿಯ ಸ್ಯಾಂಡಲ್‌ವುಡ್ ಎಂಟ್ರಿ: ಅಣ್ಣಾವ್ರ ಮೊಮ್ಮಗನ ಮೊದಲ ಸಿನಿಮಾದ ಟೈಟಲ್ ರಿವೀಲ್

ಕನ್ನಡ ಚಿತ್ರರಂಗಕ್ಕೆ ಡಾ.ರಾಜ್‌ಕುಮಾರ್ ಕುಟುಂಬದ ಕುಡಿ ಒಬ್ಬೊಬ್ಬರಾಗಿಯೇ ಎಂಟ್ರಿ ಕೊಡುತ್ತಿದ್ದಾರೆ. ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್, ಮೊಮ್ಮಗ ಧೀರೇನ್ ರಾಮ್ ಕುಮಾರ್ ಬಳಿಕ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟದೆ.

ಅಣ್ಣಾವ್ರ ಮಗಳು ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ದಂಪತಿ ಪುತ್ರ ಷಣ್ಮುಖ ಗೋವಿಂದರಾಜು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಾಗಿದೆ. ಹೊಚ್ಚ ಹೊಸ ಸಿನಿಮಾದ ಟೈಟಲ್ ಕೂಡ ರಿವೀಲ್ ಮಾಡಲಾಗಿದೆ.

Rajkumar Grandson Shanmukha Govindhraju Movie title as Chinnada Mallige Hoove

ಜನಪ್ರಿಯ ಲೇಖಕಿ ಸಾರಾ ಅಬೂಬಕ್ಕರ್ ಬರೆದ 'ವಜ್ರಗಳು' ಅನ್ನೋ ಕಾದಂಬರಿಯನ್ನು ಆಧರಿಸಿದ 'ಸಾರಾ ವಜ್ರ' ಅನ್ನೋ ಸಿನಿಮಾವನ್ನು ನಿರ್ದೇಶಿಸಿದ್ದ ನಿರ್ದೇಶಕಿ ಆರ್‍ನಾ ಸಾಧ್ಯ ಈ ಸಿನಿಮಾ ಮೂಲಕ ಈಗ ನಿರ್ಮಾಪಕಿಯಾಗಿದ್ದಾರೆ. ಸಂಭ್ರಮ ಮೀಡಿಯಾ ಹೌಸ್ ಎಂಬ ಸಂಸ್ಥೆಯಿಂದ 'ಚಿನ್ನದ ಮಲ್ಲಿಗೆ ಹೂವೇ' ಅನ್ನೋ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆ ಸಿನಮಾದಲ್ಲಿಯೇ ಷಣ್ಮುಖ ಗೋವಿಂದರಾಜು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

'ಚಿನ್ನದ ಮಲ್ಲಿಗೆ ಹೂವೇ' ಸಿನಿಮಾದ ಟೈಟಲ್ ಅನ್ನು ತಮ್ಮ ಮುದ್ದಾದ ಅಕ್ಷರದ ಮೂಲಕ ಖ್ಯಾತ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಬರೆದುಕೊಟ್ಟಿದ್ದಾರೆ. ನಟ ರಾಘವೇಂದ್ರ ರಾಜಕುಮಾರ್ ಟೈಟಲ್ ರಿವೀಲ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನವಿಲುಗರಿ ನವೀನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸೆಪ್ಟೆಂಬರ್‌ನಿಂದ ಸಿನಿಮಾ ಸೆಟ್ಟೇರುತ್ತಿದೆ.

Rajkumar Grandson Shanmukha Govindhraju Movie title as Chinnada Mallige Hoove

ಡಾ.ರಾಜಕುಮಾರ್ ಮೊಮ್ಮಗ ಷಣ್ಮುಖ ಗೋವಿಂದರಾಜ್ ಈ ಸಿನಿಮಾದ ನಾಯಕರಾಗಿ ನಟಿಸುತ್ತಿದ್ದು, ಸಿನಿ ಸಾಹಿತಿ ನಾಗೇಂದ್ರ ಪ್ರಸಾದ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನುಳಿದ ಪಾತ್ರಗಳ ಆಯ್ಕೆ ನಡೆಯುತ್ತಿದೆ. ಪ್ರಣವ್ ಸತೀಶ್ ಸಂಗೀತ ನೀಡುತ್ತಿದ್ದಾರೆ. ಅಣ್ಣಾವ್ರ ಸಿನಿಮಾದ ಹಾಡಿನ ಸಾಲನ್ನೇ ಟೈಟಲ್ ಆಗಿಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಹೀಗಾಗಿ ಈ ಸಿನಿಮಾ ಆರಂಭದಲ್ಲೇ ಪ್ರೇಕ್ಷಕರ ಮನಗೆಲ್ಲಲು ಸಜ್ಜಾಗಿದೆ.

ಈ ಸಿನಿಮಾ ಸೆಟ್ಟೇರುವುದಕ್ಕೂ ಮುನ್ನ ಷಣ್ಮುಖ ಗೋವಿಂದರಾಜು ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದರು. ಅದರಲ್ಲಿ ತಮ್ಮ ಮೊದಲ ಸಿನಿಮಾ ಬಗ್ಗೆ ಮಾತಾಡಿದ್ದರು. ಮಾಹಿತಿಯನ್ನು ಹಂಚಿಕೊಳ್ಳುವ ಮೊದಲೇ ಸಿನಿಮಾದ ಕೆಲವು ಭಾಗದ ಚಿತ್ರೀಕರಣದಲ್ಲೂ ಭಾಗಿಯಾಗಿದ್ದರು.

ಆ ವೇಳೆ ತಮ್ಮ ಮೊದಲ ದಿನದ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದರು. ಈಗ ಮತ್ತೊಂದು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಈ ಸಿನಿಮಾದ ಶುಭ ಹಾರಿಸಿದ್ದು ಚಿತ್ರತಂಡಕ್ಕೆ ಬಲ ಬಂದಂತಾಗಿದೆ.

More from Filmibeat

English summary
Rajkumar Grandson Shanmukha Govindhraju Movie title revealed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X