"ಗಾಂಜಾದಿಂದ 50 ಸಾವಿರ ಉತ್ಪನ್ನಗಳನ್ನು ತಯಾರಿಸಬಹುದು" ನಟ ರಾಕೇಶ್ ಅಡಿಗ

ಸ್ಯಾಂಡಲ್‌ವುಡ್ ನಟ, ಬಿಗ್ ಬಾಸ್ ಕನ್ನಡ ಸೀಸನ್ 9ರ ಸ್ಪರ್ಧಿ ರಾಕೇಶ್ ಅಡಿಗ ಈ ಹಿಂದೆ ಒಂದು ಕಾರಣಕ್ಕೆ ವಿವಾದಕ್ಕೆ ಸಿಲುಕಿದ್ದರು. ಗಾಂಜಾವನ್ನು ಕಾನೂನು ಬಾಹಿರಗೊಳಿಸಬೇಕು ಎಂದು ರಾಕೇಶ್ ಅಡಿಗ ಕೆಲವು ವರ್ಷಗಳ ಹಿಂದೆ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆ ವಿರುದ್ಧ ಗಂಭೀರ ಟೀಕೆಗಳು ವ್ಯಕ್ತವಾಗಿದ್ದವು. ಈಗ ಮತ್ತೆ ಗಾಂಜಾ ಬಗ್ಗೆ ಧ್ವನಿ ಎತ್ತಿದ್ದಾರೆ.

ಕೆಲವು ವರ್ಷಗಳ ಹಿಂದೆ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ನಟ-ನಟಿಯರ ಹೆಸರು ಕೇಳಿ ಬಂದಿತ್ತು. ಈ ವೇಳೆ ರಾಕೇಶ್ ಅಡಿಗ ಮಾಧ್ಯಮದಲ್ಲಿ "ಗಾಂಜಾ ಬಗ್ಗೆ ತಪ್ಪು ಕಲ್ಪನೆ ಇದೆ. ಅದನ್ನು ತೊಲಗಿಸಬೇಕು. ಗಾಂಜಾವನ್ನು ಕಾನೂನು ಬದ್ದಗೊಳಿಸಬೇಕು" ಎಂದು ಹೇಳಿಕೆ ಕೊಟ್ಟಿದ್ದರು. ಆಗ ಕೆಲವರು ರಾಕೇಶ್ ಅಡಿಗ ವಿರುದ್ಧ ಕಿಡಿಕಾರಿದ್ದರು.

Rakesh Adiga again open up about Ganja and its benefits

ಈಗ ಮತ್ತೆ ರಾಕೇಶ್ ಅಡಿಗ ಸ್ಪೀಡ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಗಾಂಜಾ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ರಾಕೇಶ್ ಅಡಿಗ ಗಾಂಜಾ ನನ್ ಮಗ, ಡಗ್ ಅಡಿಕ್ಟ್ ಅಂತ ಬೈಯ್ಯುತ್ತಾರೆ ಅಂತ ಹೇಳಿಕೊಂಡಿದ್ದಾರೆ. ಅಲ್ಲದೆ, ಗಾಂಜಾದಿಂದ 50 ಸಾವಿರ ಉತ್ಪನ್ನಗಳನ್ನು ಮಾಡಬಹುದು ಎಂದು ಹೇಳಿಕೊಂಡಿದ್ದಾರೆ. ಆ ಸಂದರ್ಶನದ ಝಲಕ್ ಇಲ್ಲಿದೆ.

ಬಿಗ್‌ಬಾಸ್‌ನಲ್ಲಿ 150 ದಿನ ಹೇಗಿರುತ್ತಿದ್ದೆ?

ಬಿಗ್‌ಬಾಸ್ ಕನ್ನಡ ಸೀಸನ್ 9ರ ರನ್ನರ್ ಅಪ್ ಆಗಿದ್ದ ರಾಕೇಶ್ ಅಡಿಗ ಮೇಲೆ ಡ್ರಗ್ ಅಡಿಕ್ಟ್ ಅನ್ನುವ ಗಂಭೀರ ಆರೋಪವಿದೆ. ಈ ಬಗ್ಗೆ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಡ್ರಗ್ ಅಡಿಕ್ಟ್ ಆಗಿದ್ರೆ, ಬಿಗ್ ಬಾಸ್ ಮನೆಯಲ್ಲಿ 150 ದಿನಗಳು ಹೇಗಿರುತ್ತಿದ್ದೆ? ಪಬ್ಲಿಕ್ ಫೀಲ್ಡ್‌ನಲ್ಲಿ ಇರುವಾಗ ಟೀಕೆಗಳನ್ನು ಒಪ್ಪಿಕೊಳ್ಳಬೇಕು ಅಂತ ನನಗೆ ಅನಿಸುತ್ತೆ. ಟೀಕೆ ಮಾಡುವುದನ್ನು ನಾವು ಒಪ್ಪಿಕೊಳ್ಳಬೇಕು. ಅದರ ವಿರುದ್ಧ ನಾವು ಫೈಟ್ ಮಾಡುವುದಕ್ಕೆ ಆಗುವುದಿಲ್ಲ. ತಪ್ಪಾಗಿ ಟೀಕೆಗಳನ್ನು ಮಾಡುತ್ತಾರಲ್ಲ. ಅಂತಹವರ ಮುಂದೆ ನಾವು ಸಾಬೀತು ಮಾಡಲು ಸಾಧ್ಯವಾಗುವುದೇ ಇಲ್ಲ." ಎಂದು ಹೇಳಿಕೊಂಡಿದ್ದಾರೆ.

"ಇವನು ಗಾಂಜಾ ನನ್ಮಗ ಅಂತಾರೆ"

ಇದೇ ಸಂದರ್ಶನದಲ್ಲಿ ಜನರು ರಾಕೇಶ್ ಅಡಿಗಗೆ ಹೇಗೆ ಬೈಯ್ಯುತ್ತಾರೆ ಅನ್ನೋದನ್ನು ಹೇಳಿಕೊಂಡಿದ್ದಾರೆ. "ನಾನು ಈಗ ಯಾವ ಮನ:ಸ್ಥಿತಿಯಲ್ಲಿ ಇದ್ದೀನಿ ಅಂದರೆ, ನನಗೆ ಇವನು ಡ್ರಗ್ ಅಡಿಕ್ಟ್ ನನ್ ಮಗ. ಆ ಮಗ. ಇವನು ಗಾಂಜಾ ನನ್ಮಗ ಅಂತ ಬೈತಾರಲ್ಲ. ಅವನು ಬೆಳೆದು ಬಂದಿರುವ ವಾತಾವರಣದಲ್ಲಿ ಅದೆಲ್ಲ ನಿಜವಾಗಲೂ ಕೆಟ್ಟದು. ಸಿನಿಮಾಗಳಲ್ಲೆಲ್ಲ ಹಾಗೇ ತೋರಿಸಿರುವುದು. ಅದು 1986ರಿಂದ ಅಮೆರಿಕದಿಂದ ಬಂದಿರೋ ರೋಗವಿದು." ಎಂದಿದ್ದಾರೆ.

Rakesh Adiga again open up about Ganja and its benefits

"50 ಸಾವಿರ ಉತ್ಪನ್ನ ಮಾಡಬಹುದು"

ರಾಕೇಶ್ ಅಡಿಗ ಗಾಂಜಾ ಗಿಡದ ಉಪಯೋಗಗಳ ಬಗ್ಗೆನೂ ಮಾತಾಡಿದ್ದಾರೆ. ಗಾಂಜಾದಿಂದ 50 ಸಾವಿರ ಉತ್ಪನ್ನಗಳನ್ನು ಮಾಡಬಹುದು ಎಂದಿದ್ದಾರೆ. "ಗಾಂಜಾ ಬಗ್ಗೆ ಯಾಕೆ ಜಾಗೃತಿ ಸಿಗುತ್ತಿಲ್ಲ ಅಂದರೆ, ಆ ಪದ ಬಂದ ಕೂಡಲೇ, ಗಾಂಜಾ ಮತ್ತಿನಲ್ಲಿ ಕೊಂದುಬಿಟ್ಟ. ಅದರಿಂದ ಏನಾಗುತ್ತಿದರೆ ಅಂದ್ರೆ, ಆಗಬೇಕಿರುವ ಉಪಯೋಗ ನಮಗೆ ಗೊತ್ತಾಗುತ್ತಿಲ್ಲ. ಈಗಲೂ ಹೇಳುತ್ತೇನೆ ಒಂದು ಗಿಡದಿಂದ 50 ಸಾವಿರ ಉತ್ಪನ್ನಗಳನ್ನು ಮಾಡಬಹುದು. ಪ್ಲಾಸ್ಟಿಕ್ ರಿಪ್ಲೇಸ್ ಮಾಡಬಹುದು. ಬಟ್ಟೆ ಮಾಡಬಹುದು. ಹತ್ತಿ ಬಹಳಷ್ಟು ಬಾರಿ ಬೆಳೆದ ಮೇಲೆ ಮಣ್ಣು ಹಾಳಾಗುತ್ತೆ. ತುಂಬಾ ನೀರು ಕುಡಿಯುತ್ತೆ. ಇದು ಕುಡಿಯುವುದಿಲ್ಲ." ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ಇಟ್ಟಿಗೆ ಮಾಡಬಹುದು"

ಗಾಂಜಾ ಗಿಡಗಳಿಂದ ಏನೆಲ್ಲ ಉಪಯೋಗವಿದೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಗಾಂಜಾದಲ್ಲಿ ಗಂಡು ಮತ್ತು ಹೆಣ್ಣು ಜಾತಿ ಇವೆ. ಹೆಣ್ಣು ಜಾತಿಯ ಗಿಡ ನಶೆ. ಇದನ್ನು ಜೌಷಧಿಗಳಿಗೂ ಬಳಸುತ್ತಾರೆ. ಆದರೆ, ಗಂಡು ಕೈಗಾರಿಕಾ ಉಪಯೋಗಕ್ಕೆ ಬರುತ್ತೆ. ಅದರಲ್ಲಿ ನಶೆ ಬರೋದಿಲ್ಲ. ಇದರಿಂದ ಇಟ್ಟಿಗೆ ಮಾಡಬಹುದು. ಎಷ್ಟು ಸ್ಟ್ರಾಂಗ್ ಇಟ್ಟಿಗೆ ಮಾಡಬಹುದು ಗೊತ್ತಾ? ಕಾರಿನ ಸ್ಟೀಲ್ ಅನ್ನು ರೀ ಪ್ಲೇಸ್ ಮಾಡಬಹುದು. ಜೈವಿಕ ಇಂಧನವಾಗಿ ಬಳಸಬಹುದು. ಜೌಷಧಿಯನ್ನಂತೂ ಲೆಕ್ಕವೇ ಇಲ್ಲದಂತೆ ಬಳಸಬಹುದು." ಎಂದು ರಾಕೇಶ್ ಅಡಿಗ ಹೇಳಿದ್ದಾರೆ.

More from Filmibeat

English summary
Bigg Boss fame Rakesh Adiga about Ganja benefits:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X