ಜೈಲು ಸೇರಿರೋ ಸೋನು ಶ್ರೀನಿವಾಸ್ ಗೌಡ ಗೆಳೆಯ ರಾಕೇಶ್ ಅಡಿಗ ಮುಂದೆ ಹೇಳಿಕೊಂಡಿದ್ದೇನು?
ಸೋಶಿಯಲ್ ಮೀಡಿಯಾ ಸ್ಟಾರ್ ಹಾಗೂ ಬಿಗ್‌ಬಾಸ್ ಓಟಿಟಿಯ ಸ್ಪರ್ಧಿಯಾಗಿದ್ದ ಸೋನು ಶ್ರೀನಿವಾಸ್ ಗೌಡ ಜೈಲು ಸೇರಿದ್ದಾರೆ. ರಾಯಚೂರು ಮೂಲದ ಬಡ ಕುಟುಂಬವೊಂದರ ಹೆಣ್ಣು ಮಗಳನ್ನು ಅಕ್ರಮವಾಗಿ ದತ್ತು ಪಡೆದ ಆರೋಪವನ್ನು ಸೋನು ಗೌಡ ಎದುರಿಸುತ್ತಿದ್ದರು. ಈ ಬೆನ್ನಲ್ಲೇ ನ್ಯಾಯಾಲಯ ಸೋನು ಗೌಡಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನದ ಆದೇಶ ನೀಡಿತ್ತು.
ಸೋನು ಗೌಡ ಜೈಲು ಸೇರಿದ ಬೆನ್ನಲ್ಲೇ ಬಿಗ್‌ಬಾಸ್ ಕನ್ನಡ ಸೀಸನ್ 9ರ ರನ್ನರ್ ಅಪ್ ಆಗಿರುವ ರಾಕೇಶ್ ಅಡಿಗೆ ಭೇಟಿ ಮಾಡಿದ್ದರು. ಈ ವೇಳೆ ಜೈಲಿನಲ್ಲಿ ಸೋನು ಗೌಡ ಭೇಟಿ ಬಳಿಕ ತಮ್ಮೊಂದಿಗೆ ಏನು ಹೇಳಿಕೊಂಡರು ಅನ್ನುವುದನ್ನು ರಾಕೇಶ್ ಅಡಿಗ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.

ಜೈಲಿನಲ್ಲಿ ಸೋನು ಶ್ರೀನಿವಾಸ್ ಗೌಡ ಮನ:ಸ್ಥಿತಿಯ ಬಗ್ಗೆ ರಾಕೇಶ್ ಅಡಿಗ ಫಸ್ಟ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಸೋನು ಗೌಡ ಜೈಲಿನಲ್ಲಿ ತುಂಬಾನೇ ಕನ್ಫ್ಯೂಷನ್ ಆಗಿದ್ದಾರೆಂದು ಹೇಳಿಕೊಂಡಿದ್ದಾರೆ. ಜೈಲಿನಲ್ಲಿ ರಾಕೇಶ್ ಹಾಗೂ ಸೋನು ಗೌಡ ಜೊತೆ ನಡೆದ ಸಂಭಾಷಣೆ ಏನು? ತಿಳಿಯಲು ಮುಂದೆ ಓದಿ..
ರಾಕೇಶ್ ಅಡಿಗ ಹಾಗೂ ಸೋನು ಶ್ರೀನಿವಾಸ್ ಗೌಡ ನಡುವೆ ಬಿಗ್‌ಬಾಸ್ ಮನೆಯಲ್ಲಿ ಆತ್ಮೀಯತೆ ಬೆಳೆದಿತ್ತು. ಮನೆಯೊಳಗೆ ಇಬ್ಬರೂ ಉತ್ತಮ ಸ್ನೇಹಿತರಾಗಿ ಕಾಣಿಸಿಕೊಂಡಿದ್ದರು. ಅದೇ ಆತ್ಮೀಯತೆಯಲ್ಲಿಯೇ ಸೋನು ಶ್ರೀನಿವಾಸ್ ಗೌಡರನ್ನು ಭೇಟಿ ಮಾಡುವುದಕ್ಕೆ ಪರಪ್ಪನ ಅಗ್ರಹಾರ ಜೈಲಿಗೆ ರಾಕೇಶ್ ಅಡಿಗ ಹೋಗಿದ್ದರು. ಆ ಸಂದರ್ಭವನ್ನು ಮಾಧ್ಯಮಕ್ಕೆ ವಿವರಿಸಿದ್ದಾರೆ.
"ತುಂಬಾ ಅಳುತ್ತಾ ಜೈಲಿನ ಒಳಗೆ ಹೋದಳಂತೆ. ಜೈಲಿನಲ್ಲೂ ತುಂಬಾ ಅಳುತ್ತಿದ್ದಾಳೆ ಅಂತ ನನಗೆ ತಿಳಿದು ಬಂತು. ನಾನು ಹೋಗಿ ನೋಡಿದಾಗ ತುಂಬಾನೇ ಕನ್ಫ್ಯೂಷನ್ ಕಾಣಿಸಿತು. ಏನು ನಡೀತಾ ಇದೆ ಅನ್ನೋದು ಅರ್ಥ ಆಗುತ್ತಿಲ್ಲ ಅಂತ ಅನಿಸಿತು. ಅಂತಹ ತಪ್ಪು ಏನು ಮಾಡಿದೆ ಅಂತ ಇಲ್ಲಿಗೆ ಬಂದಿದ್ದೀನಿ. ಒಳ್ಳೆಯದು ಮಾಡಬೇಕು ಅಂತ ಬಯಸಿ ಆ ಕೆಲಸ ಮಾಡಿದ್ದೇನೆ." ಎಂದು ರಾಕೇಶ್ ಅಡಿಗ ಬಳಿ ಅಳಲು ತೋಡಿಕೊಂಡಿದ್ದರಂತೆ.

ಇದೇ ವೇಳೆ ರಾಯಚೂರಿನ ಬಡ ಕುಟುಂಬದ ಮುದ್ದಪ್ಪ ಮತ್ತು ರಾಜೇಶ್ವರಿ ದಂಪತಿಯ ಏಳು ವರ್ಷದ ಮಗುವನ್ನು ತುಂಬಾ ಇಷ್ಟ ಪಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಆ ಮಗುವಿನ ಜೊತೆ ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿಲ್ಲ. ಕೇವಲ ವ್ಲಾಗ್ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾಗಿ ರಾಕೇಶ್ ಅಡಿಗ ಹೇಳಿಕೊಂಡಿದ್ದಾರೆ.
"ಆ ಮಗುನಾ ನಾನು ತುಂಬಾನೇ ಇಷ್ಟ ಪಟ್ಟಿದ್ದೆ. ತುಂಬಾನೇ ಚೆನ್ನಾಗಿ ನೋಡಿಕೊಂಡಿದ್ದೇನೆ. ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿಲ್ಲ ನಾನು ವ್ಲಾಗ್ಸ್ ಮಾಡುತ್ತಿದ್ದೆ ಅಷ್ಟೇ ಅಂತ ಹೇಳಿಕೊಂಡಳು." ಎಂದು ರಾಕೇಶ್ ಅಡಿಗೆ ತಿಳಿಸಿದ್ದಾರೆ.
ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ಫಾಲೋವರ್ಸ್ ಹೆಚ್ಚಾಗಿದ್ದರು. ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಆದರೆ, ಮಗುವನ್ನು ದತ್ತು ಪಡೆದಿದ್ದೇನೆ ಎಂದು ಹೇಳಿಕೊಂಡು ಪೇಚಿಗೆ ಸಿಲುಕಿದ್ದಾರೆ. ಈ ಪ್ರಕರಣದ ಬಳಿಕ ಸಾಮಾಜಿಕ ಜಾಲ ತಾಣಗಳಲ್ಲಿ ಸೋನು ಗೌಡ ದುಡಿಮೆ ಬಗ್ಗೆ ಕೆಲವು ಟೀಕೆ ಮಾಡಿದ್ದರು. ಈ ಬಗ್ಗೆ ರಾಕೇಶ್ ಅಡಿಗ ಅಸಮಧಾನ ಹೊರ ಹಾಕಿದ್ದಾರೆ.


Click it and Unblock the Notifications











