Exclusive ; ಇನ್ಮುಂದೆ ನಂದೆ ರೌಂಡು, ನಂದೆ ಸೌಂಡು ಎಂದ ರಕ್ಷಕ್ ಬುಲೆಟ್, ''ಕಲಾಸಿಪಾಳ್ಯ ಹಲ್ವಾ'' ಕೊಡೋಕೆ ಮರಿ ಬುಲೆಟ್ ರೆಡಿ..!

ತಮ್ಮ ''ಮಾತು''.. ''ಹಾವ''..''ಭಾವ''ಗಳಿಂದ ಸದಾ ಚರ್ಚೆಗೀಡಾದವರು ''ರಕ್ಷಕ್ ಬುಲೆಟ್''. ಹೆಚ್ಚೇನಿಲ್ಲ ಇನ್ನೊಂದ್ ''ಹತ್ತು‌ ಮಾಸ್ ಡೈಲಾಗ್'' ಬಿಟ್ರೆ ''ಕರ್ನಾಟಕನೇ ನಂದು'' ಅಂತೇಳಿ, ''ಬಿಗ್ ಬಾಸ್'' ನ ಹತ್ತನೇ ಮನೆಯಲ್ಲಿ ''ಹತ್ತಿಪ್ಪತ್ತು ದಿನ'' ಇದ್ದು ಬಂದ ''ರಕ್ಷಕ್'' ಅವರನ್ನ ಇಲ್ಲಿಯವರೆಗೆ ''ಆಡಿಕೊಂಡವರು'' ಒಬ್ಬಿಬ್ಬರಲ್ಲ. ಆದರೆ ಇದ್ಯಾವದಕ್ಕೂ ರಕ್ಷಕ್ ಬುಲೆಟ್ ''ತಲೆ'' ಕೆಡಿಸಿಕೊಂಡಿಲ್ಲ. ''ಟ್ರೋಲ್'' ಗಳಿಗೆ ಸೊಪ್ಪು ಹಾಕಲಿಲ್ಲ. ಬದಲಿಗೆ ತಲುಪಬೇಕಾದ ''ಗಮ್ಯ''ದ ಕಡೆ ''ಗಮನ'' ಕೊಟ್ಟರು. ''ಫಲಿತಾಂಶ'' ಸದ್ಯಕ್ಕೆ ''ಕಣ್ಮುಂದೆ'' ಇದೆ. ರಕ್ಷಕ್ ಬುಲೆಟ್ ಅಭಿನಯದ ''ಮೊದಲ ಸಿನಿಮಾ''ದ ಘೋಷಣೆ ಇಂದು ''ಅಧಿಕೃತ''ವಾಗಿ ಆಗಿದೆ.

ಇನ್ನೂ ಹೆಸರಿಡದ ಈ ಚಿತ್ರವನ್ನ ''ಕ್ರಿಶ್'' ನಿರ್ದೇಶಿಸಲಿದ್ದಾರೆ. ಇವರ ''ಹಿನ್ನೆಲೆ-ಮುನ್ನೆಲೆ'' ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ, ಸದ್ಯಕ್ಕೆ ಬಿಡಲಾಗಿರುವ ''ಪೋಸ್ಟರ್'' ರಕ್ಷಕ್ ಬುಲೆಟ್ ತಮ್ಮ ಚೊಚ್ಚಲ ಕನಸಿನಲ್ಲಿಯೇ ''ಮಾಸ್'' ಅವತಾರ ಎತ್ತಲಿದ್ದಾರೆ ಎನ್ನುವ ಸುಳಿವನ್ನ ನೀಡಿದೆ. ''ಮಚ್ಚಾ ಏರಿಯಾನಲ್ಲಿ ಕಣ್ಮುಂದೆ ಬೇಜಾನ್ ಗಾಡಿಗಳು ಸೌಂಡ್ ಮಾಡ್ತಾವೆ. ಆದರೆ ಸೌಂಡ್ ಕೇಳ್ತಿದ್ದಂಗೆ ಇದೇ ಗಾಡಿ ಅಂತ ಹೇಳೋದು ಒಂದನ್ನೇ''. ''ಬುಲೆಟ್'', ''ಇನ್ಮುಂದೆ ನಂದೆ ರೌಂಡು.. ನಂದೆ ಸೌಂಡು..'' ಎಂಬ ಸಾಲುಗಳನ್ನ ಕಂಡು ''ಅಖಿಲ್ ಕರ್ನಾಟಕ ರಕ್ಷಕ್ ಬುಲೆಟ್ ಅಭಿಮಾನಿಗಳ ಸಂಘ'' ಸದ್ಯಕ್ಕೆ ರೊಚ್ಚಿಗೆದ್ದಿದೆ. ಹುಚ್ಚೆದ್ದು ಕುಣಿಯುತ್ತಿದೆ.

Rakshak Bullet Announces His First Film As a Lead Actor

''ಶ್ರೀಹರಿ'' ಅವರ ಸಂಗೀತ ನಿರ್ದೇಶನ ರಕ್ಷಕ್ ಬುಲೆಟ್ ಅವರ ಈ ಮೊದಲ ಕನಸಿಗೆ ಬೇಕಿರುವ ''ರೆಕ್ಕೆ''ಯನ್ನು ಕಟ್ಟಲಿದೆ. ''ಶಿವು'' ನೃತ್ಯ ನಿರ್ದೇಶನ ಹಾಗೂ ''ಮಹೇಶ್ ಗಂಗಾವತಿ'' ಸಾಹಸ ನಿರ್ದೇಶನ ಚಿತ್ರಕ್ಕಿರಲಿದೆ. ಇನ್ನೂ ಈ ''ರಕ್ತ ಸಿಕ್ತ ಅಧ್ಯಾಯ'' ''ಶ್ರೀಧರ ಕಶ್ಯಪ್'' ಕ್ಯಾಮರಾದಲ್ಲಿ ಸೆರೆಯಾಗಲಿದೆ

Rakshak Bullet Announces His First Film As a Lead Actor

ಇನ್ನೂ ರಕ್ಷಕ್ ಬುಲೆಟ್ ಅವರ ಈ ಮೊದಲ ಮೆಟ್ಟಿಲಿಗೆ ''ಬಂಡವಾಳ'' ಹೂಡುವ ಮೂಲಕ ಅಡಿಪಾಯ ಹಾಕಲು ಮುಂದಾಗಿದ್ದು ''ಯಾರು'' ? ಅನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ. ತಮ್ಮ ''ತಂದೆ'' ಬುಲೆಟ್ ಪ್ರಕಾಶ್ ''ಹುಟ್ಟುಹಬ್ಬ''ದಂದು ರಕ್ಷಕ್ ತಮ್ಮ ಚೊಚ್ಚಲ ಚಿತ್ರದ ಮಾಹಿತಿಯನ್ನ ಹಂಚಿಕೊಂಡಿದ್ದು ವಿಶೇಷ.

ಉಳಿದಂತೆ ರಕ್ಷಕ್ ಬುಲೆಟ್ ಭರವಸೆ ನೀಡಿರುವಂತೆ ಚಿತ್ರದ ''ಟೈಟಲ್'' ಹಾಗೂ ಪುಟ್ಟದಾದ ''ಟೀಸರ್'' ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಇನ್ನೂ .. ಬಿಡುಗಡೆಯಾದ ಅನೌನ್ಸ್ ಮೆಂಟ್ ಪೋಸ್ಟರ್ ನಲ್ಲಿಯೂ ''ಬುಲೆಟ್'' ಎಂಬ ಪದ ಇದೆ. ಈ ಕಾರಣಕ್ಕೆ ಬುಲೆಟ್ ಪ್ರಕಾಶ್ ಅವರ ಮಗನ ಮೊದಲ ಸಿನಿಮಾದ ಹೆಸರು ಬುಲೆಟ್ ''ಬೈಕ್'' ಸುತ್ತ ಮುತ್ತವೇ ಇರಲಿದೆ ಅನ್ನುವ ಊಹೆಯನ್ನ ಗಾಂಧಿನಗರದ ಪಂಡಿತರು ಆಗ್ಲೇ ಮಾಡುತ್ತಿದ್ದಾರೆ.

ಇನ್ನೂ ಬುಲೆಟ್ ಪ್ರಕಾಶ್ ಅವರು ಬದುಕಿದ್ದಷ್ಟು ದಿನ ''ರಾಯಲ್'' ಆಗಿ ಬದುಕಿದ್ದವರು. ಹೀಗಾಗಿ ರಕ್ಷಕ್ ತಮ್ಮ ಚಿತ್ರಕ್ಕೆ ''ರಾಯಲ್ ಎನ್ ಫೀಲ್ಡ್'' ಎಂದು ''ನಾಮಕರಣ''ವನ್ನ ಮಾಡಿದರು ಮಾಡಬಹುದು ಅನ್ನುವ ಅನುಮಾನ ಕೂಡ ಅನೇಕರಲ್ಲಿದೆ. ಇದೆಲ್ಲದರ ಜೊತೆಯಲ್ಲಿ ಬುಲೆಟ್ ಪ್ರಕಾಶ್ ಅವರ ಪುತ್ರನ ಮೊದಲ ಚಿತ್ರಕ್ಕೆ ನಾಯಕಿ ಯಾರಾಗಬಹುದು ಎಂಬ ಕುತೂಹಲವೂ ಇದೆ.

ಒಟ್ನಲ್ಲಿ ಸದ್ಯಕ್ಕೆ ರಕ್ಷಕ್ ಬುಲೆಟ್ ಹೇಳಿದ್ದನ್ನ ಮಾಡಿ ತೋರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನ ಇಟ್ಟಿದ್ದಾರೆ. ತಮ್ಮ ಮೊದಲ ಚಿತ್ರದ ಘೋಷಣೆಯನ್ನ ಮಾಡಿದ್ದಾರೆ. ಉಳಿದಿರುವ ಎಲ್ಲ ವಿವರಗಳನ್ನೂ ಸವಿಸ್ತಾರವಾಗಿ ಸದ್ಯದಲ್ಲಿಯೇ ಹಂಚಿಕೊಳ್ಳಲಿದ್ದಾರೆ. ಅಲ್ಲಿಯವರೆಗೆ ರಕ್ಷಕ್ ಬುಲೆಟ್ ಅಭಿಮಾನಿಗಳು ಶಾಂತಿಯನ್ನ ಕಾಪಾಡಿಕೊಳ್ಳಬೇಕು ಎಂದು ಗಾಂಧಿನಗರದ ಮಂದಿ ಸದ್ಯಕ್ಕೆ ಮನವಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.

More from Filmibeat

English summary
Rakshak Bullet, Son Of Veteran Late Actor Bullet Prakash Announces His First Film As a Lead Actor. Yet To Be Titled Film Will Be Directed By Krish.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X