ಕರ್ಣನ ಲೈಫ್‌ನಲ್ಲಿ ಹುಡುಗಿಯರು ಬಂದಂತೆ, ನನ್ನ ಲೈಫ್‌ನಲ್ಲೂ ಒಬ್ಬಳು ಬಂದು ಹೋದಳು- ರಕ್ಷಿತ್ ಶೆಟ್ಟಿ!
'777 ಚಾರ್ಲಿ' ರಿಲೀಸ್ ಆದಲ್ಲಿಂದ ರಕ್ಷಿತ್ ಶೆಟ್ಟಿ ಬಗ್ಗೆ ಇಡೀ ದೇಶವೇ ಮಾತಾಡುವುದಕ್ಕೆ ಶುರು ಮಾಡಿದೆ. ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿಯ ಬಾಂಧವ್ಯದ ಬಗ್ಗೆ ಮಾತಾಡುತ್ತಿದ್ದಾರೆ. ಸಿನಿಮಾದ ಭಾವನಾತ್ಮಕ ಸನ್ನಿವೇಶಗಳ ಬಗ್ಗೆ ಮಾತಾಡುತ್ತಿದ್ದಾರೆ. ಧರ್ಮ ಹಾಗೂ ಚಾರ್ಲಿ ಜೋಡಿ ಭೇಷ್ ಎಂದಿದ್ದಾರೆ.
ಅದೇ ಇನ್ನೊಂದು ಕಡೆ ರಕ್ಷಿತ್ ಶೆಟ್ಟಿ ಪರ್ಸನಲ್ ಹಾಗೂ ಪ್ರೊಫೆಷನಲ್ ಕರಿಯರ್ ಬಗ್ಗೆನೂ ಮಾತಾಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಕೂಡ ಹಿಂದೆಂದೂ ತನ್ನ ಪರ್ಸನಲ್ ಲೈಫ್ ಬಗ್ಗೆ ಇಷ್ಟೊಂದು ಓಪನ್ ಆಗಿ ಮಾತಾಡಿದ್ದೇ ಇಲ್ಲ. ರಕ್ಷಿತ್ ಶೆಟ್ಟಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದ ತುಣುಕುಗಳೇ ಈಗ ವೈರಲ್ ಆಗುತ್ತಿವೆ.
ಇತ್ತೀಚೆಗೆ ರಕ್ಷಿತ್ ಶೆಟ್ಟಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಇದರೊಂದಿಗೆ 'ಕಿರಿಕ್ ಪಾರ್ಟಿ 2' ಬಗ್ಗೆನೂ ಮಾತಾಡಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಬಗ್ಗೆ ಮಾತಾಡುವಾಗ ಕರ್ಣ ಬಗ್ಗೆ ಉದಾಹರಣ ನೀಡಿದ್ದೇಕೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ನನ್ನ ಲೈಫ್‌ನಲ್ಲಿ ಬಂದು ಪಾಠ ಹೇಳಿ ಹೋದ ಹುಡುಗಿ
ರಕ್ಷಿತ್ ಶೆಟ್ಟಿ '777 ಚಾರ್ಲಿ' ಸಿನಿಮಾ ಬಿಡುಗಡೆಯಾದ ಬಳಿಕವೂ ಪ್ರಚಾರ ಮಾಡುತ್ತಲೇ ಇದ್ದಾರೆ. ಈ ವೇಳೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿರೂಪಕರೊಬ್ಬರು ರಶ್ಮಿಕಾ ಬಗ್ಗೆ ಪ್ರಶ್ನೆ ಮಾಡಿದ್ದರು. ಆಗ ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ಕರ್ಣನ ಲೈಫ್ ಒಳಗೆ ನಾಲ್ಕೈದು ಹುಡುಗಿಯರು ಬಂದು ಹೋಗುತ್ತಾರೆ. ಅಂತಲೇ ನನ್ನ ಲೈಫ್‌ನಲ್ಲಿ ರಶ್ಮಿಕಾ ಬಂದು ಹೋಗಿದ್ದಾರೆ ಎಂದಿದ್ದಾರೆ. ಇದೇ ವಿಡಿಯೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ರಶ್ಮಿಕಾ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು?
" ರಶ್ಮಿಕಾ.. ಆಗಲೇ ಹೇಳಿದ ಹಾಗೆ ಕರ್ಣನ ಲೈಫ್‌ನಲ್ಲಿ ನಾಲ್ಕೈದು ಹುಡುಗಿಯರು ಬರುತ್ತಾರೆ. ಹಾಗೆ ಒಬ್ಬಳು ಹುಡುಗಿ ನನ್ನ ಲೈಫ್‌ನಲ್ಲಿ ಬಂದಳು. ಸಾಕಷ್ಟು ಪಾಠಗಳನ್ನು ಹೇಳಿಕೊಟ್ಟು ಹೋದಳು." ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ರಕ್ಷಿತ್ ಶೆಟ್ಟಿಯ ಈ ಪ್ರಬುದ್ಧ ಹೇಳಿಕೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರೀತಿ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು?
"ಯಾರ ಲೈಫ್ ಕೂಡ ಎರಡು ಲವ್ ಸ್ಟೋರಿಯಲ್ಲಿ ಲೈಫ್ ಮುಗಿಯಲ್ಲ. ಮದುವೆ ಆಗುವುದರೊಳಗೆ ನಾಲ್ಕೈದು ಲವ್‌ಸ್ಟೋರಿ ಕಾಮನ್ ಆಗಿ ಆಗಿರುತ್ತೆ. ಅದು ಒನ್ ವೇ ಇರಲಿ. ಇಲ್ಲಾ ಟು ವೇ ಇರಲಿ ಅದು ಬೇರೆ ವಿಷ್ಯ. ಆದರೆ ಎಲ್ಲರ ಲೈಫ್‌ನಲ್ಲೂ ನಾಲ್ಕೈದು ಲವ್ ಸ್ಟೋರಿಯಂತೂ ಇದ್ದೇ ಇರುತ್ತೆ. ಐದನೆಯದ್ದೋ, ಆರನೆಯದ್ದೋ ಮದುವೆಯಾಗಿ ಕನ್ವರ್ಟ್ ಆಗುತ್ತೆ. ಇಲ್ಲಾ ಇದ್ಯಾವುದೂ ಆಗದೆ ಅರೇಂಜ್ ಮ್ಯಾರೇಜ್ ಆಗುತ್ತೆ." ಎಂದು 'ಕಿರಿಕ್ ಪಾರ್ಟಿ 2' ಸಿನಿಮಾವನ್ನು ಉದಾಹರಣೆಯಾಗಿಟ್ಟುಕೊಂಡು ಲವ್ ಸ್ಟೋರಿ ಬಗ್ಗೆ ಹೇಳಿದ್ದಾರೆ.

ಕರ್ಣನ ಲೈಫ್‌ನಲ್ಲಿ ಪ್ರೀತಿ ಇನ್ನೂ ಇದೆ
" ಕರ್ಣನ ಲೈಫ್‌ನಲ್ಲಿ ತೋರಿಸಿದ್ದು ಇನ್ನೂ ಎರಡೇ ಲವ್ ಸ್ಟೋರಿ. ಇನ್ನೂ ತುಂಬಾ ಲವ್‌ಸ್ಟೋರಿ ಇದೆ. ಅವನಿಗೆ ಬದುಕಿನ ಪಾಠ ಕಲಿಯಲು ಇನ್ನೂ ಎರಡು ಮೂರು ಲವ್‌ಸ್ಟೋರಿ ಆಗಬೇಕು. ಒಂದು ವಯಸ್ಸಿನಲ್ಲಿ ತಾಯಿಯಿಂದ ಸುಮಾರು ಕಲಿಯುತ್ತೇನೆ. ಇನ್ನು ಕೆಲವು ವಯಸ್ಸಿನವರೆಗೆ ಅಕ್ಕ-ತಂಗಿ ಬರುತ್ತಾರೆ. ಆಮೇಲೆ ಒಂದೆರಡು ಹುಡುಗಿಯರು ಬರಬೇಕು ಪಾಠ ಕಲಿಸುವುದಕ್ಕೆ. ಕರ್ಣನ ಲೈಫ್‌ನಲ್ಲಿ ಸಾನ್ವಿ ಬಂದು ಒಂದಿಷ್ಟು ಪಾಠ ಕಲಿಸಿ ಹೋದಳು. ಆರ್ಯ ಬಂದು ಪಾಠ ಕಲಿಸಲು ಶುರುವಾಗಿದ್ದಷ್ಟೇ. ಅವಳು ಒಂದಿಷ್ಟು ಪಾಠ ಕಲಿಸಿ ಹೋಗಿರುತ್ತಾಳೆ." ಎಂದು ಹೇಳುವ ಮೂಲಕ 'ಕಿರಿಕ್ ಪಾರ್ಟಿ 2' ಬಗ್ಗೆ ಕುತೂಹಲ ಕೆರಳಿಸಿದ್ದಾರೆ.


Click it and Unblock the Notifications











