Sapta Sagaradache Ello: ವಾರದ ಆರಂಭದಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಕಲೆಕ್ಷನ್ ಹೇಗಿದೆ? 5ನೇ ದಿನ ಥಿಯೇಟರ್‌ ಜನ ಬಂದಿದ್ರಾ?

'ಸಪ್ತ ಸಾಗರದಾಚೆ ಎಲ್ಲೋ' ಮೌತ್ ಪಬ್ಲಿಸಿಟಿ ಸಿನಿಮಾಗೆ ಸಾಥ್ ಕೊಟ್ಟಿತ್ತು. ಮೊದಲ ಮೂರು ದಿನ ಸಿನಿಮಾದ ಕಲೆಕ್ಷನ್ 10 ಕೋಟಿ ರೂ. ದಾಟುವಲ್ಲಿ ಯಶಸ್ವಿಯಾಗಿತ್ತು. ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲದೆ ಇರೋದ್ರಿಂದ ಬಾಕ್ಸಾಫೀಸ್‌ ಕಲೆಕ್ಷನ್ ಮೇಲೆ ಟ್ರೇಡ್ ಎಕ್ಸ್‌ಪರ್ಟ್‌ ಕಣ್ಣಿಟ್ಟಿದ್ದರು.

'777 ಚಾರ್ಲಿ' ಬಳಿಕ ರಕ್ಷಿತ್ ಶೆಟ್ಟಿ ಪ್ಯಾನ್ ಇಂಡಿಯಾ ಸಿನಿಮಾವನ್ನೇ ಮಾಡುತ್ತಾರೆ ಅನ್ನೋ ಗುಂಗಿನಲ್ಲಿ ಇದ್ದರು. ಆದರೆ, ಅಪ್ಪಟ ಕನ್ನಡವನ್ನು ಕನ್ನಡಿಗರಿಗಾಗಿಯೇ ಮಾಡಿದ ಸಿನಿಮಾವಿದು. ಇದೊಂದು ಸುಂದರವಾದ ಪ್ರೇಮಕಥೆ ಅಂತ ಸಿನಿಮಾ ನೋಡಿದವರು ಈಗಾಗಲೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ.

sapta-sagaradache-ello-box-office-day-5

ಮತ್ತೆ ಕೆಲವು ಸೈಟ್ ಎ ಬಳಿಕ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ' ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಇದೆಲ್ಲಾ ಏನೇ ಇದ್ದರೂ ಈ ಸಿನಿಮಾದ ಕಲೆಕ್ಷನ್ ಮೇಲೆ ಎಲ್ಲವೂ ನಿಂತಿದೆ. ಮೊದಲ ಮೂರು ದಿನ ಕಲೆಕ್ಷನ್ ಕಡಿಮೆ ಎನಿಸಿದ್ದರೂ, ಡಿಸೆಂಟ್ ಅಂತ ಅನಿಸಿತ್ತು. ಹೀಗಾಗಿ ವಾರದ ಆರಂಭದಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಕಲೆಕ್ಷನ್ ಹೇಗಿರುತ್ತೆ? ಅನ್ನೋ ಪ್ರಶ್ನೆ ಎದ್ದಿತ್ತು. ಅದಕ್ಕೀಗ ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕಾಚಾರ ಹಾಕಿದ್ದಾರೆ. 5 ದಿನಗಳಲ್ಲಿ ಈ ಸಿನಿಮಾದ ಗಳಿಕೆ ಹೀಗಿದೆ.

'ಸಪ್ತ ಸಾಗರದಾಚೆ ಎಲ್ಲೋ' ಗಳಿಕೆ ಹೇಗಿದೆ?

ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಕಾಂಬಿನೇಷನ್ ಸಿನಿಮಾ 'ಸಪ್ತ ಸಾಗರದಾಚೆ ಎಲ್ಲೋ' ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲೂ ಪ್ರೇಮಿಗಳಿಗೆ ಈ ಸಿನಿಮಾ ತುಂಬಾನೇ ಇಷ್ಟ ಆಗಿದೆ. ಆದರೆ, ಪ್ಯಾನ್ ಇಂಡಿಯಾ ಕಲೆಕ್ಷನ್ ನೋಡಿದವರಿಗೆ ಈ ಸಿನಿಮಾದ ಗಳಿಕೆ ಕಡಿಮೆ ಎನಿಸುತ್ತಿದೆ. ಕೇವಲ ಕನ್ನಡ ಭಾಷೆಯಲ್ಲಷ್ಟೇ ಬಿಡುಗಡೆಯಾಗಿರುವ ಸಿನಿಮಾ ಕಲೆಕ್ಷನ್ ಮೊದಲ ಮೂರು ದಿನ ಪ್ರಾಮಿಸಿಂಗ್ ಆಗಿಯೇ ಇತ್ತು. ಬಹುತೇಕ ಮಲ್ಟಿಪ್ಲೆಕ್ಸ್ ಸಿನಿಮಾ ಎನಿಸಿಕೊಂಡಿರೋ ಈ ಚಿತ್ರ ವಾರದ ಆರಂಭದಲ್ಲಿ ಕಲೆಕ್ಷನ್ ಹೇಗೆ ಮಾಡುತ್ತೆ? ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

sapta-sagaradache-ello-box-office-day-5

5ನೇ ದಿನ ಕಲೆಕ್ಷನ್ ಎಷ್ಟು?

'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಎ ಸಿನಿಮಾ 4 ಮತ್ತು 5ನೇ ದಿನದ ಕಲೆಕ್ಷನ್ ಸ್ಟಡಿಯಾಗಿಯೇ ಇದೆ. ಮೊದಲ ಮೂರು ದಿನ ಸಿನಿಮಾದ ಕಲೆಕ್ಷನ್ ಬೇರೆ ಇದ್ದರೆ. 4 ಮತ್ತು 5ನೇ ದಿನದ ಕಲೆಕ್ಷನ್ ಬೇರೆನೇ ಇದೆ. 4ನೇ ದಿನ 1.29 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅದೇ 5ನೇ ದಿನ 1.10 ಕೋಟಿ ಗಳಿಕೆ ಮಾಡಿದೆ ಎಂದು ಬಾಕ್ಸಾಫೀಸ್ ಟ್ರ್ಯಾಕ್ ಮಾಡುವ ವೆಬ್‌ಸೈಟ್ sacnilk ವರದಿ ಮಾಡಿದೆ.

5 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಹೇಮಂತ್ ಎಂ ರಾವ್ ಮೂವರು ಕಾಂಬೋ ಸಿನಿಮಾ ಕಳೆದ 5 ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಸ್ಟಡಿಯಾಗಿಯೇ ಮುನ್ನುಗ್ಗುತ್ತಿದೆ. ಕನ್ನಡದ ಮತ್ತೊಂದು ನಿರ್ಮಾಣ ಸಂಸ್ಥೆ ಕೆವಿನ್ ಪ್ರೊಡಕ್ಷನ್ ಈ ಸಿನಿಮಾವನ್ನು ವಿತರಣೆ ಮಾಡಿದ್ದು, 5 ದಿನಗಳಲ್ಲಿ ಅಂದಾಜು ಕಲೆಕ್ಷನ್ ಹೀಗಿದೆ. ಆದರೆ, ಚಿತ್ರತಂಡ ಇನ್ನೂ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡಿಲ್ಲ.

Day 1 - ₹ 3.00 Cr. (ಅಂದಾಜು)
Day 2 - ₹ 4.00 Cr. (ಅಂದಾಜು)
Day 3 - ₹ 5.00 Cr. (ಅಂದಾಜು)
Day 4 - ₹ 1.29 Cr. (ಅಂದಾಜು)
Day 5 - ₹ 1.10 Cr. (ಅಂದಾಜು)
Total - ₹ 14.39 Cr. (ಅಂದಾಜು)

ಬಾಕ್ಸಾಫೀಸ್ ಭವಿಷ್ಯವೇನು?

'ಸಪ್ತ ಸಾಗರದಾಚೆ ಎಲ್ಲೋ' ಸ್ಯಾಂಡಲ್‌ವುಡ್ ಮಟ್ಟಿಗೆ ಪ್ರಯೋಗಾತ್ಮಕ ಸಿನಿಮಾ. ಪಕ್ಕಾ ಕಮರ್ಷಿಯಲ್ ಸಿನಿಮಾ ಎನ್ನದೆ, ಕಂಟೆಂಟ್ ಅನ್ನೇ ಪ್ರಮುಖವಾಗಿಟ್ಟುಕೊಂಡು ನಿರ್ಮಿಸಿದ ಸಿನಿಮಾವಿದು. ಹೀಗಾಗಿ ಈ ವಾರ ಸಿನಿಮಾದ ಗಳಿಕೆ ಹೇಗಿರುತ್ತೆ? ಅನ್ನೋದು ಚರ್ಚೆ ವಿತರಕರ ವಲಯದಲ್ಲಿ ನಡೆಯುತ್ತಿದೆ. ಒಂದು ಅಂದಾಜಿನ ಪ್ರಕಾರ, ಮುಂದಿನ ವೀಕೆಂಡ್ ಹೊತ್ತಿಗೆ 20 ಕೋಟಿ ರೂಪಾಯಿ ದಾಟುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

More from Filmibeat

English summary
Rakshit Shetty Movie Sapta Sagaradache Ello Day 5 Box office collection
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X