Sapta Sagaradache Ello: 'ಸಪ್ತ ಸಾಗರದಾಚೆ ಎಲ್ಲೋ' ಮೊದಲ ದಿನ ಕಲೆಕ್ಷನ್ ಮಾಡಿದ್ದೆಷ್ಟು? ಸಿನಿಮಾ ಗೆದ್ದು ಬಿಡ್ತಾ?
'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ನೋಡಿ ಕಣ್ಣು ಒದ್ದೆ ಮಾಡಿಕೊಂಡು ಬಂದವರು ಅದೆಷ್ಟೋ ಮಂದಿ. ಆಗಲೂ ತೆರೆಮೇಲೆ ಜಾದು ಮಾಡಿದ್ದು ಇದೇ ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಹೇಮಂತ್ ಎಂ ರಾವ್. ಈಗ 'ಸಪ್ತ ಸಾಗರದಾಚೆ ಎಲ್ಲೋ' ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
'ಸಪ್ತ ಸಾಗರದಾಚೆ ಎಲ್ಲೋ' ಈ ಸಿನಿಮಾ ನೋಡಿದವರ ಕಣ್ಣುಗಳು ಒದ್ದೆಯಾಗುತ್ತಿವೆ. ಭಗ್ನ ಪ್ರೇಮಿಗಳು ಮತ್ತಷ್ಟು ಭಾವುಕರಾಗುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ರುಕ್ಷ್ಮಿಣಿ ವಸಂತ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡುತ್ತಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಜೋಡಿ ಸಿಕ್ಕಂತಾಗಿದೆ.

ಮೊದಲ ದಿನ ಸಿಕ್ಕಿರೋ ರಿಯಾಕ್ಷನ್ ನೋಡಿ, ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಆಗಿರಬಹುದು ಅನ್ನೋ ಲೆಕ್ಕಾಚಾರ ಶುರುವಾಗಿದೆ. ಅಡ್ವಾನ್ಸ್ ಬುಕಿಂಗ್, ಪ್ರೀ ಪೇಯ್ಡ್ ಪ್ರೀಮಿಯರ್ ಶೋ ಎಲ್ಲಾ ಸೇರಿ ಕರ್ನಾಟಕದಾದ್ಯಂತ ಮೊದಲ ದಿನದ ಒಟ್ಟು ಕಲೆಕ್ಷನ್ ಎಷ್ಟು? ಅಂತ ಟ್ರೇಡ್ ಎಕ್ಸ್‌ಪರ್ಟ್ಸ್ ಒಂದು ಅಂದಾಜು ಲೆಕ್ಕ ಹಾಕಿದ್ದಾರೆ. ಆ ಲೆಕ್ಕಾಚಾರ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ..
ಮೊದಲ ಥಿಯೇಟರ್‌ನಲ್ಲಿ ಹೇಗಿತ್ತು ರೆಸ್ಪಾನ್ಸ್?
'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಇಂದು (ಸೆಪ್ಟೆಂಬರ್ 1) ಕರ್ನಾಟಕದಾದ್ಯಂತ ರಿಲೀಸ್ ಆಗಿದೆ. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿ ರೆಸ್ಪಾನ್ಸ್ ಸಿಕ್ಕಿದೆ. ಇದೊಂದು ಪ್ರೇಮಕಥೆಯಾಗಿದ್ದರೂ, ನಗರವಾಸಿಗಳನ್ನು ಹೆಚ್ಚಾಗಿ ಸೆಳೆಯುವ ಸಿನಿಮಾ. ಬಾಯಿಂದ ಬಾಯಿಗೆ ಸಿನಿಮಾ ಬಗ್ಗೆ ಪ್ರತಿಕ್ರಿಯೆ ಹರಿಡಿ ಆ ಬಳಿಕ ಜನರು ಚಿತ್ರಮಂದಿರಕ್ಕೆ ಬರಬಹುದು. ಹೀಗಾಗಿ ಸುಮಾರು 400ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಶಿವಮೊಗ್ಗ, ಮೈಸೂರು, ಕುಂದಾಪುರ, ಮಣಿಪಾಲ್, ರಾಯಚೂರು, ಹೈದರಾಬಾದ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಥಿಯೇಟರ್ ಆಕ್ಯೂಪೆನ್ಸಿ ಎಷ್ಟು ಅನ್ನೋ ಸರಿಯಾದ ಲೆಕ್ಕಾಚಾರ ಇನ್ನಷ್ಟೇ ಸಿಗಬೇಕಿದೆ.

ಪೇಯ್ಡ್ ಪ್ರೀಮಿಯರ್‌ನಿಂದ ಗಳಿಸಿದ್ದೆಷ್ಟು?
ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಹೇಮಂತ್ ಎಂ ರಾವ್ ಸಿನಿಮಾ ಬಿಡುಗಡೆಗೂ ಮುನ್ನವೇ ಪೇಯ್ಡ್ ಪ್ರೀಮಿಯರ್ ಮಾಡಿದ್ದರು. ಎಲ್ಲೆಲ್ಲಿ ಪೇಯ್ಡ್ ಪ್ರೀಮಿಯರ್ ಮಾಡಿದ್ದರೋ ಆ ಎಲ್ಲಾ ಶೋಗಳೂ ಹೌಸ್‌ಫುಲ್ ಆಗಿದ್ದವು. ಹೀಗಾಗಿ ಸುಮಾರು 52 ಪೇಯ್ಡ್ ಪ್ರೀಮಿಯರ್ ಶೋಗಳಿಂದ 40 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ. ಇದು ಚಿತ್ರರಂಗ ಸಿಕ್ಕಾಪಟ್ಟೆ ಹುರುಪು ತಂದುಕೊಟ್ಟಿದೆ.
ಮೊದಲ ಸಿನಿಮಾದ ಲೆಕ್ಕಾಚಾರವೇನು?
'ಸಪ್ತ ಸಾಗರದಾಚೆ ಎಲ್ಲೋ' ಎಲ್ಲಾ ವರ್ಗಕ್ಕೂ ಇಷ್ಟ ಆಗುತ್ತೆ ಅಂತ ಹೇಳಲಾಗದ ಸಿನಿಮಾ. ಹೀಗಾಗಿ ಮೊದಲ ದಿನ ಕಲೆಕ್ಷನ್ ಕೆಲವು ಭಾಗಗಳಲ್ಲಿ ನಿರೀಕ್ಷೆ ಮಾಡಿದಂತೆ ಇಲ್ಲ. ಈ ಕಾರಣಕ್ಕೆ ಮೊದಲ ದಿನ ಚಿತ್ರತಂಡಕ್ಕೆ ಅಂದಾಜು 3.5 ರಿಂದ 4.5 ಕೋಟಿ ರೂಪಾಯಿವರೆಗೆ ಕಲೆಕ್ಷನ್ ಆಗಿರಬಹುದು ಎಂದು ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕ ಹಾಕಿದ್ದಾರೆ. ಇದರಲ್ಲಿ ಪೇಯ್ಡ್ ಪ್ರೀಮಿಯರ್‌ನಿಂದ ಹಣ ಕೂಡ ಸೇರಿದೆ ಅನ್ನೋದು ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ. ಆದರೆ, ಅಸಲಿ ಲೆಕ್ಕ ನಾಳೆನೇ (ಸೆಪ್ಟೆಂಬರ್ 2) ಗೊತ್ತಾಗುತ್ತೆ. ಇನ್ನು ಚಿತ್ರತಂಡ ಅಂಕಿ ಅಂಶಗಳನ್ನು ರಿವೀಲ್ ಮಾಡಬೇಕಿದೆ.
ಸಪ್ತ ಸಾಗರದ ಭವಿಷ್ಯವೇನು?
'ಸಪ್ತ ಸಾಗರದಾಚೆ ಎಲ್ಲೋ' ಕ್ಲಾಸ್ ಸಿನಿಮಾ. ಯಾರು ಏನೇ ಹೇಳಿದರೂ, ಜನರಿಗೆ ಇಷ್ಟ ಆಗೋದಕ್ಕೆ ಶುರುವಾದರೆ ಮುಗೀತು. ಎಷ್ಟು ದಿನ ಬೇಕಾದರೂ ಚಿತ್ರಮಂದಿರಲ್ಲಿ ಪ್ರದರ್ಶನ ಕಾಣಬಹುದು. ಅದೇ ಇಷ್ಟ ಪಡದೆ ಇದ್ದರೆ ಲೆಕ್ಕಾಚಾರ ತಲೆ ಕೆಳಗಾಗುತ್ತೆ. ಸದ್ಯ 'ಸೈಡ್ ಎ' ಕಲೆಕ್ಷನ್ ಮೌತ್ ಟಾಕ್ ಮೇಲೆ ನಿಂತಿದೆ. ಅಲ್ಲದೆ ವೀಕೆಂಡ್‌ನಲ್ಲಿ ಮೊದಲ ದಿನಕ್ಕಿಂತ ಹೆಚ್ಚು ಕಲೆಕ್ಷನ್ ಆಗುವ ಸಾಧ್ಯತೆಯಿದೆ. ಆ ಬಳಿಕ ಅಸಲಿ ಚಾಲೆಂಜ್ ಶುರುವಾಗುತ್ತೆ.


Click it and Unblock the Notifications











