'ಇಬ್ಬನಿ ತಬ್ಬಿದ ಇಳೆಯಲಿ' ಅಮರ ಪ್ರೇಮ ಕಾವ್ಯ; ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾ ಟ್ರೆಂಡಿಂಗೋ ಟ್ರೆಂಡಿಂಗ್
ರಕ್ಷಿತ್ ಶೆಟ್ಟಿ ಸಿನಿಮಾಗಳ ಆಯ್ಕೆ ಮಾಡುವ ಟೇಸ್ಟ್ ಬೇರೆ. ಅವರೇ ನಟಿಸುವ ಸಿನಿಮಾಗಳಾದರೂ ಅಷ್ಟೇ. ಅವರು ನಿರ್ಮಾಣ ಮಾಡುವ ಸಿನಿಮಾ ಆದರೂ ಅಷ್ಟೇ. ಇದಕ್ಕೆ ಉತ್ತಮ ಉದಾಹರಣೆ ಅಂದರೆ, ರಿಲೀಸ್‌ಗೆ ರೆಡಿಯಾಗಿರುವ 'ಇಬ್ಬನಿ ತಬ್ಬಿದ ಇಳೆಯಲಿ'. ಬಿಡುಗಡೆಗೆ ಸಿದ್ಧವಾಗಿರುವ ಈ ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿದೆ.
'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾವನ್ನು ರಕ್ಷಿತ್ ಶೆಟ್ಟಿ, ಹಾಗೂ ಜಿ ಎಸ್ ಗುಪ್ತ ನಿರ್ಮಾಣ ಮಾಡಿದ್ದಾರೆ. ಚಂದ್ರಜಿತ್ ಬೆಳ್ಳಿಯಪ್ಪ ಈ ಲವ್ ಸ್ಟೋರಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ವಿಹಾನ್ ಗೌಡ, ಅಂಕಿತ ಅಮರ್ ಹಾಗೂ ಮಯೂರಿ ನಟರಾಜ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಡೀ ತಂಡ ಇದೊಂದು ಸುಂದರ ಕಾವ್ಯ ಅಂತ ಚಿತ್ರತಂಡವೇ ಭರವಸೆ ನೀಡಿದೆ.

'ಇಬ್ಬನಿ ತಬ್ಬಿದ ಇಳೆಯಲಿ' ಟ್ರೈಲರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಈ ಟ್ರೈಲರ್ ನೋಡಿ ಸಿನಿಮಾ ಪ್ರೇಮಿಗಳು ಮೆಚ್ಚಿಕೊಂಡಿದ್ದಾರೆ. ಸಿನಿಮಾದ ಸಿನಿಮ್ಯಾಟೋಗ್ರಫಿ, ಕಲರಿಂಗ್, ತುಣುಕುಗಳು ಸುಂದರವಾಗಿ ಕಾಣುತ್ತಿವೆ. ಈಗಾಗಲೇ ಸಿನಿ ಪ್ರಿಯರ ಗಮನ ಸೆಳೆದಿರುವ ಈ ಸಿನಿಮಾ ಸೆಪ್ಟೆಂಬರ್ 5ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ.
ಈಗಾಗಲೇ ಬಿಡುಗಡೆಯಾಗಿರುವ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ಹಾಡುಗಳನ್ನು ಕೂಡ ಜನರು ಮೆಚ್ಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇದೊಂದು ಅದ್ಭುತ ಸಿನಿಮಾ ಆಗುತ್ತೆ ಅನ್ನೋ ಭರವಸೆಯನ್ನು ಚಿತ್ರತಂಡ ಇಟ್ಟುಕೊಂಡಿದೆ. ಈ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಈಗಾಗಲೇ ಮೂರು ಬಾರಿ ನೋಡಿದ್ದು, ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರೆ.

ಈ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ ಸಂದರ್ಭದಲ್ಲಿ ನಿರ್ಮಾಪಕರಾಗಿ ರಕ್ಷಿತ್ ಶೆಟ್ಟಿ ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. "ನಿರ್ದೇಶಕ ಚಂದ್ರಜಿತ್ 9 ವರ್ಷಗಳ ಹಿಂದೆ ಬ್ಲಾಗ್‌ನಲ್ಲಿ ಮೆಸೇಜ್ ಮಾಡಿದ್ರು. ಲಿಂಕ್ ಒಪನ್ ಮಾಡಿದೆ. ಅವರ ಬರವಣಿಗೆ ವಿಶೇಷ ಅನಿಸಿತು. ಬಳಿಕ ಚಂದ್ರಜಿತ್ ಭೇಟಿಯಾದಾಗ ಅವರು ಬರೆದ ಕಥೆ ಸಿನಿಮಾ ಆಯ್ತು." ಎಂದು ರಕ್ಷಿತ್ ಶೆಟ್ಟಿ ಸಿನಿಮಾ ಹೇಗಾಯ್ತು ಎಂದು ಹೇಳಿಕೊಂಡಿದ್ದಾರೆ.
ಹಾಗೇ ಸಿನಿಮಾದ ಕಥೆಯ ಬಗ್ಗೆನೂ ರಕ್ಷಿತ್ ಶೆಟ್ಟಿ ಮಾತಾಡಿದ್ದಾರೆ. "ಕನ್ನಡದಲ್ಲಿ ಈ ಕಥೆಯನ್ನು ಹೋಲುವ ಚಿತ್ರಗಳು ಬಂದಿರಬಹುದು. ಆದರೆ ಈ ರೀತಿಯ ನಿರೂಪಣೆಯ ಸಿನಿಮಾ ಬಂದಿಲ್ಲ. ನಾನು ಈಗಾಗಲೇ ಮೂರು ಸಲ ಚಿತ್ರ ನೋಡಿದ್ದೇನೆ. ಟ್ರೈಲರ್ ಹಾಗೂ ಸಿನಿಮಾ ಎರಡೂ ಸಿಕ್ಕಾಪಟ್ಟೆ ಇಷ್ಟ ಆಗಿದೆ. ವಿಹಾನ್ ಹಾಗು ಅಂಕಿತ ಇಬ್ಬರದು ಪ್ರಶಸ್ತಿ ಬರುವಂತಹ ಅಭಿನಯ." ಎಂದು ರಕ್ಷಿತ್ ಶೆಟ್ಟಿ ಭರವಸೆ ನೀಡಿದ್ದಾರೆ.
"ವಿಹಾನ್, ಅಂಕಿತ ಅಮರ್ ಹಾಗೂ ಮಯೂರಿ ಅವರ ಜೊತೆಗೆ ಈ ಸಿನಿಮಾದಲ್ಲಿ 'ಗೀತಾಂಜಲಿ' ಸಿನಿಮಾದ ಗಿರಿಜಾ ಶೆಟ್ಟರ್ ಕೂಡ ನಟಿಸಿದ್ದಾರೆ. ಇಪ್ಪತ್ತು ವರ್ಷಗಳ ನಂತರ ಅವರು ಮತ್ತೆ ನಮ್ಮ ಸಿನಿಮಾದಲ್ಲಿ ನಟಿಸಿದ್ದೇ ಖುಷಿ" ಎಂದು ಸಿನಿಮಾ ಬಗ್ಗೆ ಚಂದ್ರಜಿತ್ ಬೆಳ್ಳಿಯಪ್ಪ ಹೇಳಿದ್ದಾರೆ. ಹಾಗೇ ವಿಹಾನ್, ಅಂಕಿತಾ ಅಮರ್ ಹಾಗೂ ಮಯೂರಿ ನಟರಾಜ್ ಸಿನಿಮಾ ಬಗ್ಗೆ ಕಾನ್ಫಿಡೆಂಟ್ ಆಗಿದ್ದಾರೆ.
'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾಗೆ ಗಗನ್ ಬಡೇರಿಯಾ ಸಂಗೀತ ನೀಡಿದ್ದರೆ, ಸಿನಿಮಾದ ದೃಶ್ಯಗಳನ್ನು ಕಣ್ಣಿಗೆ ತಂಪೆನಿಸುವಂತೆ ಮಾಡಿದ್ದು ಛಾಯಾಗ್ರಾಹಕ ಶ್ರೀವತ್ಸನ್ ಸೆಲ್ವರಾಜನ್. ಇದೇ ಗಣೇಶ ಚತುರ್ಥಿಗೆ 'ಇಬ್ಬನಿ ತಬ್ಬಿದ ಇಳೆಯಲಿ' ಒಂದು ಸುಂದರು ಪ್ರೇಮಕಾವ್ಯ ಕನ್ನಡ ಪ್ರೇಕ್ಷಕರಿಗೆ ನೋಡುವುದಕ್ಕೆ ಸಿಗಬಹುದು.


Click it and Unblock the Notifications











