Don't Miss!
- Sports
ಈ ಗೆಲುವಿನ ಹೆಚ್ಚಿನ ಶ್ರೇಯಸ್ಸು ಬೌಲರ್ಗಳಿಗೆ ಸಲ್ಲಬೇಕು: ವಾಸಿಂ ಜಾಫರ್ ಹೇಳಿಕೆ
- News
ಮಕ್ಕಳಾಗಲು ಮಾನವನ ಮೂಳೆ ಪೌಡರ್ ತಿನ್ನುವಂತೆ ಒತ್ತಾಯ, ಪ್ರಕರಣ ದಾಖಲು
- Lifestyle
ಮಗುವಿಗೆ ಗ್ಯಾಸ್ ಪ್ರಾಬ್ಲಂ ಆದಾಗ ಹೀಗೆ ಮಾಡಿ
- Automobiles
ಮತ್ತಷ್ಟು ತಡವಾಗಲಿದೆ ಹೊಸ ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ಎಸ್ಯುವಿ ಬಿಡುಗಡೆ
- Finance
NRI PAN Card: ಎನ್ಆರ್ಐ ಪ್ಯಾನ್ ಕಾರ್ಡ್ಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
- Technology
2023ರಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'777 ಚಾರ್ಲಿ' ಸಿನಿಮಾಗೆ ಶ್ವಾನ ಪಡೆದ ಸಂಭಾವನೆ ಯಾವ ಸ್ಟಾರ್ ನಟನಿಗೂ ಕಮ್ಮಿಯಿಲ್ಲ!
ಕನ್ನಡದ ಮತ್ತೊಂದು ಪ್ಯಾನ್ ಸಿನಿಮಾ ಭಾರತದಾದ್ಯಂತ ಸದ್ದು ಮಾಡುತ್ತಿದೆ. ಅದುವೇ ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ'. ಶ್ವಾನ ಮತ್ತು ಮಾನವನ ಸಂಬಂಧವನ್ನು ಈ ಸಿನಿಮಾದಲ್ಲಿ ಬಿಂಬಿಸಲಾಗಿದೆ. ಚಾರ್ಲಿಯ (ನಾಯಿ) ತುಂಟಾಟ. ರಕ್ಷಿತ್ ಶೆಟ್ಟಿಯ ಪರದಾಟದ ಸನ್ನಿವೇಶಗಳು. ನಾಯಿಯೊಂದಿಗಿನ ಭಾವನಾತ್ಮಕ ಸನ್ನಿವೇಶಗಳು ಪ್ರೇಕ್ಷಕರ ಕಣ್ಣುಗಳನ್ನು ಒದ್ದೆ ಮಾಡಿವೆ.
ಶ್ವಾನ ಪ್ರಿಯರಿಗೆ 'ಚಾರ್ಲಿ' ಇಷ್ಟ ಆಗುತ್ತಿದ್ದಾಳೆ. ಸಿನಿಮಾ ಬಗ್ಗೆ ಮೌತ್ ಟಾಕ್ ಪಾಸಿಟಿವ್ ಆಗಿದೆ. ಕನ್ನಡದಲ್ಲಿ ಈ ಸಿನಿಮಾಗೆ ಪ್ರೇಕ್ಷಕರು ನಿಧಾನವಾಗಿಯೇ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಫಸ್ಟ್ ಡೇ ಸಿನಿಮಾ ಕಲೆಕ್ಷನ್ ಸಾಧಾರಣ ಅಂತ ಅನಿಸಿದ್ದರೂ, ಎರಡು ಹಾಗೂ ಮೂರನೇ ದಿನ ಕಲೆಕ್ಷನ್ ಹೆಚ್ಚಾಗಿದೆ.
ರಕ್ಷಿತ್
ಶೆಟ್ಟಿಯ
'777
ಚಾರ್ಲಿ'
ನೋಡಿ
ಶ್ವಾನ
ಪ್ರಿಯೆ
ರಮ್ಯಾ
ಭಾವನಾತ್ಮಕವಾಗಿ
ಹೇಳಿದ್ದೇನು?
Recommended Video

ಮಲ್ಟಿಪ್ಲೆಕ್ಸ್‌ನಲ್ಲಿ '777 ಚಾರ್ಲಿ' ಸಿನಿಮಾದ ಕಲೆಕ್ಷನ್ ಭರ್ಜರಿಯಾಗಿದೆ. ನಗರ ಪ್ರದೇಶಗಳಲ್ಲಿ ಅದರಲ್ಲೂ ವೀಕೆಂಡ್‌ನಲ್ಲಿ ಚಾರ್ಲಿ ಸಿನಿಮಾ ಮೋಡಿ ಮಾಡಿದೆ. ರಕ್ಷಿತ್ ಶೆಟ್ಟಿಯಂತೆಯೇ ಚಾರ್ಲಿ ಕೂಡ ಪ್ರೇಕ್ಷಕರ ಫೇಮರಿಟ್ ಎನಿಸಿದೆ. ಅಷ್ಟಕ್ಕೂ 'ಚಾರ್ಲಿ' ಈ ಸಿನಿಮಾ ಪಡೆದ ಸಂಭಾವನೆ ಬಗ್ಗೆ ಕುತೂಹಲ ಸಹಜ. ಅದಕ್ಕೆ ರಕ್ಷಿತ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ.
'ವಿಕ್ರಂ'
ಮುಂದೆ
'ಕೆಜಿಎಫ್
2'
ಬಚ್ಚಾ:
ಮತ್ತೆ
ಖ್ಯಾತೆ
ತೆಗೆದ
ಕಮಾಲ್!

ಚಾರ್ಲಿ ಸಂಭಾವನೆ ಎಷ್ಟು?
ರಕ್ಷಿತ್ ಶೆಟ್ಟಿನೇ '777 ಚಾರ್ಲಿ' ಸಿನಿಮಾ ಹೀರೊ ಅನ್ನುವುದು ಎಲ್ಲರಿಗೂ ಗೊತ್ತಿದೆ.. ಆದರೆ, ರಕ್ಷಿತ್ ಮಾತ್ರ ಚಾರ್ಲಿನೇ ಈ ಸಿನಿಮಾದ ಹೀರೊ ಅಂತ ಹೇಳಿದ್ದಾಗಿದೆ. ಚಾರ್ಲಿ ಇಲ್ಲಾ ಅಂದರೆ ಧರ್ಮ ಇಲ್ಲ. ಧರ್ಮ ಇಲ್ಲ ಅಂದರೆ ಚಾರ್ಲಿ ಇಲ್ಲ. ಈ ಕಾರಣಕ್ಕೆ ಚಾರ್ಲಿನೇ ರಿಯಲ್ ಹೀರೊ ಅಂದ್ಮೇಲೆ ಅದಕ್ಕೆ ಕೊಟ್ಟಿರೋ ಸಂಭಾವನೆ ಎಷ್ಟಿರಬಹುದು? ಅನ್ನುವುದು ಕುತೂಹಲ ಕೂಡ ಇರುತ್ತೆ. ಅದಕ್ಕೆ ರಕ್ಷಿತ್ ಶೆಟ್ಟಿನೇ ಉತ್ತರ ಕೊಟ್ಟಿದ್ದಾರೆ. ಅನುಶ್ರೀ ಜೊತೆಗಿನ ಸಂದರ್ಶನದಲ್ಲಿ ರಕ್ಷಿತ್ ರಿವೀಲ್ ಮಾಡಿದ್ದಾರೆ. "ಚಾರ್ಲಿ ಸಂಭಾವನೆ ಒಂದಷ್ಟಾಗಿದೆ. ಅದು ಕೋಟಿ ಮೊತ್ತದಲ್ಲಿದೆ." ಎಂದು ಹೇಳಿದ್ದಾರೆ.

ಚಾರ್ಲಿ ಕೊನೆಯ ಸಿನಿಮಾ
'777 ಚಾರ್ಲಿ' ಸಿನಿಮಾ ನೋಡಿ ಶ್ವಾನ ಪ್ರಿಯರು ಮತ್ತಷ್ಟು ಪ್ರೀತಿ ಮಾಡುವುದಕ್ಕೆ ಶುರು ಮಾಡಿದ್ದಾರೆ. ಹಾಗೇ ಚಾರ್ಲಿಯನ್ನು ಇಷ್ಟಪಡುವುದಕ್ಕೆ ಶುರು ಮಾಡಿದ್ದಾರೆ. ಆದರೆ, ರಕ್ಷಿತ್ ಶೆಟ್ಟಿ ಮಾತ್ರ ಚಾರ್ಲಿ ಅಭಿಮಾನಿಗಳಿಗೆ ಬೇಸರ ಪಡಿಸಿದ್ದಾರೆ. ರಕ್ಷಿತ್ ಇದು ಚಾರ್ಲಿ ಮೊದಲ ಹಾಗೂ ಕೊನೆಯ ಸಿನಿಮಾ ಎಂದು ಹೇಳಿದ್ದಾರೆ. ಚಾರ್ಲಿ ರಿಟೈರ್ ಆಗಿದ್ದಾನೆ ಎಂದು ಹೇಳಿದ್ದಾರೆ. ಈ ಮೂಲಕ ಚಾರ್ಲಿ ಮುಂದೆ ಯಾವುದೇ ಸಿನಿಮಾಗಳಲ್ಲಿ ಕಾಣಿಸುವುದಿಲ್ಲ.

ಸಿನಿಮಾ ತಡವಾಗಿದ್ದೇಕೆ?
ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಸಿನಿಮಾ ಮೇಕಿಂಗ್ ಮಾಡುವಾಗ ಸಾಕಷ್ಟು ಸಮಯ ಹಿಡಿದಿದೆ. ಹೆಚ್ಚು ಕಡಿಮೆ ಮೂರು ವರ್ಷ ಈ ಸಿನಿಮಾವನ್ನು ಮಾಡಲಾಗಿದೆ. ಕೊರೊನಾ, ಲಾಕ್‌ಡೌನ್ ಅಂತ ಶೂಟಿಂಗ್ ಸ್ಥಗಿತಗೊಂಡಿತ್ತು. ಇನ್ನೊಂದು ಕಡೆ ಶ್ವಾನದ ಮೂಡ್ ಕೂಡ ತುಂಬಾ ಮುಖ್ಯ ಆಗಿತ್ತು. ಈ ಕಾರಣಕ್ಕೆ ಸಿನಿಮಾ ಕೊಂಚ ತಡವಾಗಿತ್ತು. ಆದರೂ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಬಾಕ್ಸಾಫೀಸ್‌ನಲ್ಲೂ ಉತ್ತಮ ಗಳಿಕೆ ಕಂಡಿದೆ.

ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
'777 ಚಾರ್ಲಿ' ಸಿನಿಮಾ ಮೊದಲ ದಿನ ಗಳಿಕೆ ಕೊಂಚ ಕಡಿಮೆಯಾಗಿತ್ತು. ಆದರೆ ವೀಕೆಂಡ್‌ನಲ್ಲಿ ಸಿನಿಮಾ ಗಳಿಕೆ ಸಖತ್ ಆಗಿದೆ. ಮೂರು ದಿನಗಳಲ್ಲಿ ಸುಮಾರು 23.50 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈಗಾಗಲೇ ಮೊದಲ ಮೂರು ದಿನಗಳ ಬಳಿಕವೂ ಕಲೆಕ್ಷನ್ ಜೋರಾಗಿಯೇ ಇದೆ. ಇನ್ನು ಮುಂದಿನ ದಿನಗಳಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತೆ ಎನ್ನುವುದು ಕುತೂಹಲ ಸ್ಯಾಂಡಲ್‌ವುಡ್‌ನಲ್ಲಿ ಹುಟ್ಟಿಕೊಂಡಿದೆ.