Toby: ರಾಜ್ ಬಿ ಶೆಟ್ಟಿ ಬೆಂಕಿ ಭಯಾನಕ.. ರಕ್ಚಿತ್, ರಿಷಬ್, 'ಟೋಬಿ' ಬಗ್ಗೆ ಹೇಳಿದ್ದೇನು?

'ಟೋಬಿ' ... ಎಲ್ಲರೂ ಇದೇ ಸಿನಿಮಾ ಬಗ್ಗೆ ಮಾತಾಡುವಂತಾಗಿದೆ. ಅದಕ್ಕೆ ಕಾರಣ ರಾಜ್ ಬಿ ಶೆಟ್ಟಿ. ವಿಶಿಷ್ಠ ಮ್ಯಾನರಿಸಂ ಮೂಲಕ ಈಗಾಗಲೇ ಸಿನಿ ಪ್ರಿಯರಿಗೆ ಕಿಕ್ ಕೊಟ್ಟಿದ್ದಾರೆ.

ರಾಜ್ ಬಿ ಶೆಟ್ಟಿಯ 'ಟೋಬಿ'ಯ ಲುಕ್ ಈಗ ಟಾಕ್ ಆಫ್ ದಿ ಟೌನ್ ಆಗಿದೆ. 'ಟೋಬಿ'ಗಾಗಿ ಮತ್ತೆ ಶೆಟ್ಟರ ಗ್ಯಾಂಗ್ ಒಂದಾಗಿದೆ.‌

Rakshit Shetty, Rishab Shetty, Raj B Shetty about Toby Kannada Movie

ರಾಜ್ ಬಿ ಶೆಟ್ಟಿಗಾಗಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಟ್ರೈಲರ್ ನೋಡಿ ಥ್ರಿಲ್ ಆಗಿದ್ದ ರಕ್ಷಿತ್, ರಿಷಬ್ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ಕಮೆಂಟ್ ಮಾಡಿದ್ದಾರೆ. ಅದೇನು? ಅಂತ ತಿಳಿಯಲು ಮುಂದೆ ಓದಿ..

"ಶೆಟ್ರು ಬೆಂಕಿ ಭಯಾನಕ"- ರಿಷಬ್ ಶೆಟ್ಟಿ

"ದಯಾನಂದ್ ಟೋಬಿ ಕಥೆಯನ್ನು ನನಗೆ ಹೇಳಿದ್ದರು ಇಲ್ಲ ಅಂತಲ್ಲ. ಅದನ್ನು ರಾಜ್ ಶೆಟ್ರಿಗೆ ಹೇಳುತ್ತೀನಿ ಅಂತನೂ ಹೇಳಿದ್ದರು. ಆದರೆ ಎಲ್ಲಕ್ಕಿಂತ ಖುಷಿ ಕೊಟ್ಟಿದ್ದು ರಾಜ್ ಶೆಟ್ರು ಬರೆಯುತ್ತಿದ್ದಾರೆ ಅಂದಾಗ. ಅವರ ರೈಟಿಂಗ್‌ಗೆ ನಾನು ದೊಡ್ಡ ಫ್ಯಾನ್. ಈ ಇಡೀ ಟೀಂ ನಂದೇ ಇದೆ. ಇದರಲ್ಲಿ ಕೆಲಸ ಮಾಡಿದವರು ನನ್ನ ಸರ್ಕಾರಿಗೂ ಕೆಲಸ ಮಾಡಿದವರು. ರಾಜ್ ಶೆಟ್ರು ಬೆಂಕಿ ಭಯಾನಕವಾಗಿ ಆಕ್ಷನ್ ಮಾಡಿದ್ದಾರೆ ಅಂದ್ರೆ ಯೋಜನೆ ಮಾಡಿ." ಎಂದಿದ್ದಾರೆ ರಿಷಬ್ ಶೆಟ್ಟಿ.

Rakshit Shetty, Rishab Shetty, Raj B Shetty about Toby Kannada Movie

"ನಮ್ಮಲ್ಲೂ ಒಂದು ಸ್ವಾರ್ಥವಿದೆ"-ರಕ್ಷಿತ್ ಶೆಟ್ಟಿ

" 18 ಲಕ್ಷದಲ್ಲಿ ಸಿನಿಮಾ ಮಾಡಿ ಹಿಟ್ ಮಾಡಿ ತೋರಿಸಿದ್ರು. ಗರುಡ ಗಮನ ವೃಷಭ ವಾಹನ ಅದಕ್ಕಿಂತ ಹತ್ತು ಪಟ್ಟು ಜಾಸ್ತಿ ಅದನ್ನು ಹಿಟ್ ಮಾಡಿ ತೋರಿಸಿದ್ರು. ಈಗ ಟೋನಿ. ಇದೂ ದೊಡ್ಡ ಬಜೆಟ್ ಸಿನಿಮಾ. ಟೋಬಿಯ ಅನ್ನು ಸಪೋರ್ಟ್ ಮಾಡುತ್ತಿರುವುದಕ್ಕೆ ನಮ್ಮದೂ ಒಂದು ಸ್ವಾರ್ಥವಿದೆ. ಇಂಡಸ್ಟ್ರಿ ಬೆಳೆದರೆ ನಾವು ಬೆಳೆಯೋದು. ಈ ಚಿತ್ರರಂಗಕ್ಕೆ 10 ರಿಂದ 15 ಹೀರೊ ಬೇಕು. 10 ರಿಂದ 15 ಡೈರೆಕ್ಟರ್‌ಗಳು ಬೇಕು. ಇದಾಗಬೇಕು ಅಂದರೆ, ಒಬ್ಬರಿಗೊಬ್ಬರು ಸಪೋರ್ಟ್ ಮಾಡಬೇಕು."

Rakshit Shetty, Rishab Shetty, Raj B Shetty about Toby Kannada Movie

"ಕುರಿ ಕೆಣಕುವುದಕ್ಕೆ ಹೋಗಬೇಡಿ" - ರಾಜ್ ಬಿ ಶೆಟ್ಟಿ

"ಈ ಸಿನಿಮಾ ಮಾಡುವಾಗ ನಾನು ಗುಂಡಿಯಲ್ಲಿ ಇದ್ದೆ. ಗುಂಡಿಯಲ್ಲಿ ರೆಸ್ಟ್ ತೆಗೆದುಕೊಂಡಿರೊ ಜೀವಕ್ಕೆ ಮೇಲೆ ಬರುವ ಸಾಮರ್ಥ್ಯ ಮತ್ತು ಶಕ್ತಿ ಇರೋದು. ಗುಂಡಿಯಲ್ಲಿರುವಾಗ ನನ್ನ ತಂಡ ಯಾವಾಗಲೂ ಕೈ ಹಿಡಿಯುತ್ತಿತ್ತು. ಸೋತಾಗ ಸೋಲು ಒಪ್ಪಿಕೊಳ್ಳಬೇಕು.ಆದರೆ ಸಾವು ಒಪ್ಪಿಕೊಳ್ಳಲ್ಲ. ಯಾರು ಏನೇ ಮಾಡಲಿ. ಅವರು ಹೆಸರು ಬೇಡ. ಈಗ ಅವರ ಹೆಸರು ಹೇಳುವಷ್ಟು ದೊಡ್ಡವರಲ್ಲ. ಯಾಕಂದ್ರೆ, ಸಿನಿಮಾ ದೊಡ್ಡದಾಗಿದೆ. ಅದಕ್ಕೋಸ್ಕರ ಅವರಿಗೆ ಉತ್ತರವಾಗಿ ಟೋಬಿ. ಅಂದರೆ, ಕುರಿಗೆ ಕೆಣಕುವುದಕ್ಕೆ ಹೋಗಬೇಡಿ."

More from Filmibeat

English summary
Rakshit Shetty, Rishab Shetty, Raj B Shetty about Toby Kannada Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X