ರಿವೀಲ್ ಆಯ್ತು 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿನ ರಕ್ಷಿತ್ ಶೆಟ್ಟಿ ಪಾತ್ರ

ನಟ ರಕ್ಷಿತ್ ಶೆಟ್ಟಿ ಜನ್ಮದಿನದಂದು ಅವರ ನಟನೆಯ ಹೊಸ ಚಿತ್ರದ ಪಾತ್ರ ರಿವೀಲ್ ಆಗಿದೆ. 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಎಂಬ ವಿಶಿಷ್ಟ ಚಿತ್ರ ನೀಡಿದ್ದ ರಕ್ಷಿತ್ ಶೆಟ್ಟಿ, ನಿರ್ದೇಶಕ ಹೇಮಂತ್ ರಾವ್ ಮತ್ತು ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಜೋಡಿ ಮತ್ತೆ ಒಂದಾಗಿ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರ ಮಾಡುವುದು ಕೆಲವು ತಿಂಗಳ ಹಿಂದೆ ಬಹಿರಂಗವಾಗಿತ್ತು.

Recommended Video

ಬದಲಾಯಿಸಲು ಯಾರೆಲ್ಲಾ ಸ್ಟಾರ್ ಗಳು ಬಂದಿದ್ದಾರೆ ನೋಡಿ | Badalagu Neenu Badalayisu Neenu | Filmibeat Kannada

ಚಿತ್ರದ ಶೀರ್ಷಿಕೆಯೇ ತೀವ್ರ ಕುತೂಹಲ ಕೆರಳಿಸಿತ್ತು. ಜತೆಗೆ ಎರಡು ವಿಭಿನ್ನ ಮತ್ತು ಸಸ್ಪೆನ್ಸ್-ಥ್ರಿಲ್ಲರ್-ಎಮೋಷನಲ್ ಚಿತ್ರಗಳನ್ನು ನೀಡಿರುವ ಹೇಮಂತ್ ರಾವ್ ನಿರ್ದೇಶನ ಸಾಕಷ್ಟು ನಿರೀಕ್ಷೆಗಳನ್ನೂ ಮೂಡಿಸಿದೆ. ರಕ್ಷಿತ್ ಶೆಟ್ಟಿ ಅವರ ಜನ್ಮದಿನವಾದ ಜೂನ್ 6ರಂದು 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿನ ಅವರ ಪಾತ್ರ ಬಹಿರಂಗವಾಗಿದೆ. ಆ ಪಾತ್ರದ ಹೆಸರು ಮತ್ತು ಅದನ್ನು ಬಹಿರಂಗಪಡಿಸಿರುವ ಬಗೆ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ. ಮುಂದೆ ಓದಿ...

ಮನು ಅಲಿಯಾಸ್ ರಾಜೇಂದ್ರ

ಮನು ಅಲಿಯಾಸ್ ರಾಜೇಂದ್ರ

'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ 'ಮನು ಅಲಿಯಾಸ್ ರಾಜೇಂದ್ರ' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಈಗ ಗಡ್ಡಧಾರಿಯಾಗಿರುವ ರಕ್ಷಿತ್ ಶೆಟ್ಟಿ ಅವರ ಹಳೆಯ ಫೋಟೊ ಇದರಲ್ಲಿದೆ. ರಕ್ಷಿತ್ ಶೆಟ್ಟಿ ಗಡ್ಡ ಇಲ್ಲದೆ ತಮ್ಮ ಹಳೆಯ ಲುಕ್‌ನಲ್ಲಿಯೂ ಕಾಣಿಸಿಕೊಳ್ಳುವ ಸುಳಿವು ಈ ಚಿತ್ರದಲ್ಲಿದೆ.

ಹತ್ತು ವರ್ಷ ಹಿಂದಿನ ಲುಕ್

ಹತ್ತು ವರ್ಷ ಹಿಂದಿನ ಲುಕ್

ರಕ್ಷಿತ್ ಶೆಟ್ಟಿ ಪಾತ್ರದ ಹೆಸರು ಬಹಿರಂಗವಾಗಿರುವುದು ಪೊಲೀಸ್ ಸ್ಟೇಷನ್‌ನ ಕೈದಿಗಳ ಲೆಡ್ಜರ್ ಪುಸ್ತಕದಲ್ಲಿ. ಅಂದರೆ ರಕ್ಷಿತ್ ಶೆಟ್ಟಿ ಕೈದಿಯಾಗಿ ನಟಿಸುತ್ತಿದ್ದು, ಹೇಮಂತ್ ರಾವ್ ಅವರ ಈ ಚಿತ್ರವೂ ಸಸ್ಪೆನ್ಸ್ ಥ್ರಿಲ್ಲರ್ ಆಗಿರುವ ಸಾಧ್ಯತೆ ಇದೆ. ಈ ಕೇಸ್ ದಾಖಲಾಗಿರುವುದು 2010ರಲ್ಲಿ. ಅದೇ ವರ್ಷ ರಕ್ಷಿತ್ ಶೆಟ್ಟಿ ಅವರ ಮೊದಲ ಚಿತ್ರ 'ನಮ್ ಏರಿಯಾದಲ್ ಒಂದಿನ' ಬಿಡುಗಡೆಯಾಗಿತ್ತು. ಆ ಫೋಟೊ ಕೂಡ ಅದೇ ವರ್ಷದಲ್ಲಿ ತೆಗೆದಿರುವಂತೆ ಕಾಣಿಸುತ್ತದೆ.

ಗೋಧಿ ಬಣ್ಣದ ನೆನಪು

ಗೋಧಿ ಬಣ್ಣದ ನೆನಪು

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿ ಕಾಣೆಯಾದವರ ವಿವರ ಹೇಳುವಂತೆ ಇಲ್ಲಿ ಕೈದಿಯ ವಿವರಗಳಿದೆ. ಇಲ್ಲಿ ನಾಯಕನಿಗೆ ಅಣ್ಣ 'ಪ್ರಸನ್ನ', ತಾಯಿ 'ಸರೋಜಮ್ಮ' ಇದ್ದಾರೆ. ಅಂದಹಾಗೆ ನಾಯಕ ವೃತ್ತಿಯಿಂದ ಚಾಲಕ ಎನ್ನುವುದು ಕೈದಿಗಳ ಶೋಧನೆ ರಿಜಿಸ್ಟರ್‌ನಲ್ಲಿ ನಮೂದಾಗಿದೆ!

ಲಾಕಪ್ ಹಾಕಲು ಕಾಯುತ್ತಿದ್ದೇನೆ

ಲಾಕಪ್ ಹಾಕಲು ಕಾಯುತ್ತಿದ್ದೇನೆ

ಸಾಕಷ್ಟು ಆಸಕ್ತಿಕರವಾದ ಕಥೆಯೊಂದನ್ನು ಹೇಮಂತ್ ರಾವ್ ಹೇಳಲು ಹೊರಟಿದ್ದಾರೆ ಎನ್ನುವುದನ್ನು ಅವರು ರಕ್ಷಿತ್ ಶೆಟ್ಟಿ ಜನ್ಮದಿನದಂದು ಹಂಚಿಕೊಂಡಿರುವ ಚಿತ್ರ ತಿಳಿಸುತ್ತದೆ. ಚಿತ್ರ ಆರಂಭಿಸಲು ಕಾಯಲು ಸಾಧ್ಯವಾಗುತ್ತಿಲ್ಲ ಎಂದಿರುವ ಹೇಮಂತ್, ನಿಮ್ಮಲ್ಲರನ್ನೂ ಲಾಕ್ ಅಪ್ ಮಾಡಲು ಸಿದ್ಧನಾಗಿದ್ದೇನೆ ಎಂದಿದ್ದಾರೆ.

ಆಗ ಪೊಲೀಸ್ ಈಗ ಕೈದಿ

ಆಗ ಪೊಲೀಸ್ ಈಗ ಕೈದಿ

ರಕ್ಷಿತ್ ಶೆಟ್ಟಿ ಈ ಹಿಂದೆ ಬಿಡುಗಡೆಯಾಗಿದ್ದ 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿ ಕೈದಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅವರ ಪಾತ್ರ ಒಂದು ಆಯಾಮವಷ್ಟೇ. ಈ ಚಿತ್ರದಲ್ಲಿ ಎರಡು ಗೆಟಪ್‌ಗಳಲ್ಲಿ ರಕ್ಷಿತ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

More from Filmibeat

English summary
Rakshit Shetty's character in the next movie of Hemanth Rao directorial Sapta Sagaradache Yello revealed on his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X