Rakshit-Rashmika: "ರಶ್ಮಿಕಾ ನಾನು ಇನ್ನೂ ಟಚ್‌ನಲ್ಲಿದ್ದೇವೆ" ಅಚ್ಚರಿ ಹೇಳಿಕೆ ಕೊಟ್ಟ ರಕ್ಷಿತ್

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ತೆಲುಗು ಡಬ್ ಆಗಿ ರಿಲೀಸ್ ಆಗುತ್ತಿದೆ. ತೆಲುಗೂ ಮಂದಿಗೂ ರಕ್ಷಿತ್ ಶೆಟ್ಟಿ 'ಸಪ್ತ ಸಾಗರಾಲು ದಾಟಿ' ಸಿನಿಮಾ ತೋರಿಸುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ನಾಳೆ (ಸೆಪ್ಟೆಂಬರ್ 22) ಈ ಸಿನಿಮಾ ತೆಲುಗು ರಾಜ್ಯಗಳಲ್ಲಿ ರಿಲೀಸ್ ಆಗಲಿದೆ.

ಹೀಗಾಗಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಇಬ್ಬರೂ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಒಂದರ ಹಿಂದೊಂದು ಸಂದರ್ಶನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು ಮಾಧ್ಯಮಗಳಲ್ಲಿ ರಕ್ಷಿತ್ ತಮ್ಮ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಮುಕ್ತವಾಗಿ ಮಾತಾಡುತ್ತಿದ್ದಾರೆ.

rakshit-shetty-rashmika-mandanna

'ಸಪ್ತ ಸಾಗರಾಲು ದಾಟಿ' ಸಿನಿಮಾದ ಸಂದರ್ಶನ ಆಗಿದ್ದರೂ, ರಕ್ಷಿತ್ ಶೆಟ್ಟಿಗೆ ರಶ್ಮಿಕಾ ಮಂದಣ್ಣ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಮದುವೆ, ರಶ್ಮಿಕಾ ಮಂದಣ್ಣ ಬಗ್ಗೆ ಓಪನ್ ಆಗಿ ಮತಾಡಿರೋ ರಕ್ಷಿತ್ ಕೊನೆಯಲ್ಲಿ ರುಕ್ಮಿಣಿಗೆ ಪ್ರಪೋಸ್ ಕೂಡ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ರಶ್ಮಿಕಾ-ರಕ್ಷಿತ್ ಸಂಬಂಧ ಹೇಗಿದೆ?

ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ನಡುವೆ ನಡೆದ ಘಟನೆಗಳು ಮತ್ತೆ ಹೇಳುವ ಅಗತ್ಯವಿಲ್ಲ. ರಕ್ಷಿತ್ ಜೊತೆ ನಿಶ್ಚಿತಾರ್ಥ ಮುರಿದುಕೊಂಡ ಬಳಿಕ ರಶ್ಮಿಕಾ ವೃತ್ತಿ ಬದುಕಿನ ಬಗ್ಗೆ ಹೆಚ್ಚು ಗಮನ ಹರಿಸಿದ್ದರು. ಇತ್ತ ರಕ್ಷಿತ್ ಕೂಡ ಸಿನಿಮಾದಲ್ಲಿ ಬ್ಯುಸಿಯಾಗಿಬಿಟ್ಟರು. ಬ್ರೇಕಪ್ ಬಳಿಕ ಇಬ್ಬರೂ ನಾನೊಂದು ತೀರ.. ನೀನೊಂದು ತೀರದಂತಾಗಿದ್ದಾರೆಂದು ಭಾವಿಸಿದ್ದರು. ಆದ್ರೀಗ ರಕ್ಷಿತ್ ಶೆಟ್ಟಿ ತಾವಿಬ್ಬರೂ ಟಚ್‌ನಲ್ಲಿ ಇದ್ದೇವೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

rakshit-shetty-rashmika-mandanna

ರಶ್ಮಿಕಾ ಬಗ್ಗೆ ರಕ್ಷಿತ್ ಹೇಳಿದ್ದೇನು?

ತೆಲುಗಿನ ತೆಲುಗು ಒನ್ ಯೂಟ್ಯೂಬ್ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ್ದಾರೆ. ನಾವಿಬ್ಬರು ಇನ್ನೂ ಸಂಪರ್ಕದಲ್ಲಿದ್ದೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ. "ಹೌದು ರಶ್ಮಿಕಾ ಮಂದಣ್ಣ ಹಾಗೂ ನಾನು ಇಬ್ಬರೂ ಸಂಪರ್ಕದಲ್ಲಿ ಇದ್ದೇವೆ. ಅವರ ಲೈಫ್ ಚೆನ್ನಾಗಿದೆ. ಅವರು ಯಾವಾಗಲೂ ದೊಡ್ಡ ಕನಸು ಕಾಣುತ್ತಿದ್ದರು. ಅದನ್ನು ಅವರು ಅಚೀವ್ ಮಾಡುತ್ತಿದ್ದಾರೆ. ಅದಕ್ಕೆ ಅವರಿಗೆ ಯಾವಾಗಲೂ ಕ್ರೆಡಿಟ್ ಕೊಡಲೇ ಬೇಕು." ಎಂದು ರಕ್ಷಿತ್ ಶೆಟ್ಟಿ ಸಂದರ್ಶನದ ವೇಳೆ ಹೇಳಿದ್ದಾರೆ.

ಮದುವೆ ಬಗ್ಗೆ ಏನಂದ್ರು ರಕ್ಷಿತ್?

ರಕ್ಷಿತ್ ಶೆಟ್ಟಿ ಎಲ್ಲಿಗೆ ಹೋದರೂ ಅವರ ಮದುವೆ ಬಗ್ಗೆ ಚರ್ಚೆಯಾಗದೇ ಇರುವುದಿಲ್ಲ. ಎಲ್ಲರೂ ಮದುವೆ ಯಾವಾಗ ಅಂತಲೇ ಪ್ರಶ್ನೆ ಮಾಡುತ್ತಾರೆ. ಈ ಬಾರಿ ಕೂಡ ಗೂಗಲ್‌ನಲ್ಲಿ ಸಾಮಾನ್ಯವಾಗಿ ಸರ್ಚ್ ಮಾಡಲಾದ ಪ್ರಶ್ನೆಯನ್ನು ತೆಲುಗು ನಿರೂಪಕ ಕೇಳಿದ್ದರು. ಅದಕ್ಕೆ ನಾಚಿ ನೀರಾಗುತ್ತಲೇ ಪ್ರಶ್ನೆ ಮಾಡಿದ್ದಾರೆ. "ಖಂಡಿತವಾಗಿಯೂ ನಾನು ಯಾವಾಗ ಮದುವೆ ಆಗುತ್ತೇನೆಂದು ಗೂಗಲ್‌ಗೆ ಗೊತ್ತಾಗುತ್ತೆ" ಎಂದು ರಕ್ಷಿತ್ ಶೆಟ್ಟಿ ನಗು ನಗುತ್ತಲೇ ಉತ್ತರ ಕೊಟ್ಟಿದ್ದಾರೆ.

ರುಕ್ಮಿಣಿ ವಸಂತ್‌ಗೆ ರಕ್ಷಿತ್ ಪ್ರಪೋಸ್

ಇದೇ ವೇಳೆ ನಿರೂಪಕ ನಟಿ ರುಕ್ಮಿಣಿ ವಸಂತ್‌ಗೆ ಪ್ರಪೋಸ್ ಮಾಡುವಂತೆ ರಕ್ಷಿತ್ ಮನವಿ ಮಾಡಿದ್ದರು. ಎರಡು ಗುಲಾಬಿ ಹೂವನ್ನು ಕೈಗೆ ಕೊಟ್ಟು ರಕ್ಷಿತ್‌ಗೆ ಪ್ರಪೋಸ್ ಮಾಡುವಂತೆ ಹೇಳಿದಾಗ, ನಾಚುತ್ತಲೇ ರಕ್ಷಿತ್ ನಟಿ ರುಕ್ಮಿಣಿಗೆ ಪ್ರಪೋಸ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಇನ್ನೂ ಟಚ್‌ನಲ್ಲಿರುವ ಸುದ್ದಿ ಬೇಜಾನ್ ಸದ್ದು ಮಾಡುತ್ತಿದೆ.

More from Filmibeat

English summary
Rashmika Mandanna still in touch with Rakshit Shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X