ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಕಲೆಕ್ಷನ್ ಎಷ್ಟು? 'ಕೆಜಿಎಫ್ 2' ಬಳಿಕ ಪಂಡಿತರ ಲೆಕ್ಕಾಚಾರವೇನು?

ರಕ್ಷಿತ್ ಶೆಟ್ಟಿಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ '777 ಚಾರ್ಲಿ'. ಇಂದು ( ಜೂನ್ 10) ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. 5 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. 'ಕೆಜಿಎಫ್ 2' ಸಿನಿಮಾ ಬಳಿಕ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿದ್ದು ಸಹಜವಾಗಿಯೇ ಕುತೂಹಲ ಗರಿಗೆದರಿದೆ.

'ಕೆಜಿಎಫ್ 2' ಹಾಗೂ '777 ಚಾರ್ಲಿ' ಈ ಎರಡೂ ಸಿನಿಮಾಗಳ ಶೈಲಿ ಬೇರೆ ಬೇರೆ. 'ಕೆಜಿಎಫ್ 2' ಮಾಸ್ ಸಿನಿಮಾ ಆಗಿದ್ದರೆ, '777 ಚಾರ್ಲಿ' ಎಮೋಷನಲ್ ಅಡ್ವೆಂಚರಸ್ ಸ್ಟೋರಿ. ಪ್ರಾಣಿಪ್ರಿಯರನ್ನೂ ಗಮನದಲ್ಲಿಟ್ಟುಕೊಂಡು ನಿರ್ಮಿಸಿರುವ ಸಿನಿಮಾವಿದು. ಈ ಕಾರಣಕ್ಕೆ ಸಿನಿಮಾದ ಬಾಕ್ಸಾಫೀಸ್‌ ಲೆಕ್ಕಾಚಾರದ ಬಗ್ಗೆನೂ ಕೌತಕ ಹೆಚ್ಚಾಗಿದೆ.

ವಿಶ್ವದಾದ್ಯಂತ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಬೇಜಾನ್ ಸದ್ದು ಮಾಡಿ ಬಂದಿದೆ. ಇದರ ಹಿಂದೆನೇ ಇನ್ನೊಂದು ಕನ್ನಡದ ಪ್ಯಾನ್ ಇಂಡಿಯಾ ಚಿತ್ರ '777 ಚಾರ್ಲಿ ಕೂಡ ಬಿಡುಗಡೆಯಾಗಿದೆ. ಈ ಕಾರಣಕ್ಕೆ ಚಾರ್ಲಿ ಕೂಡ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಲಿದೆ ಎಂಬ ನಿರೀಕ್ಷೆಯಿದೆ. ಸಿನಿಮಾ ಪಂಡಿತರು '777 ಚಾರ್ಲಿ' ಬಗ್ಗೆ ತಮ್ಮದೇ ಆದ ಲೆಕ್ಕಾಚಾರವನ್ನು ಮುಂದಿಟ್ಟಿದ್ದಾರೆ.

ರಾಜ್ಯದಲ್ಲಿ '777 ಚಾರ್ಲಿ' ಕಲೆಕ್ಷನ್ ಎಷ್ಟು?

ರಾಜ್ಯದಲ್ಲಿ '777 ಚಾರ್ಲಿ' ಕಲೆಕ್ಷನ್ ಎಷ್ಟು?

ಸಿನಿಮಾದ ಗೆಲುವು ಅನ್ನುವುದು ಈಗ ಬಾಕ್ಸಾಫೀಸ್‌ ಗಳಿಕೆ ಮೇಲೆ ನಿಂತಿದೆ. ಗಲ್ಲಾಪೆಟ್ಟಿಗೆಯಲ್ಲಿ '777 ಚಾರ್ಲಿ' ಘರ್ಜಿಸಿದರೆ, ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಗೆದ್ದಂತೆ. ಸಿನಿಮಾ ಪಂಡಿತರ ಪ್ರಕಾರ, ಈ ಸಿನಿಮಾ ಕರ್ನಾಟಕದಲ್ಲಿ ಉತ್ತಮ ಗಳಿಕೆಯನ್ನೇ ಮಾಡುತ್ತೆ. ಪ್ರೀಮಿಯರ್ ಶೋಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಮೊದಲ ದಿನವೇ ಬಾಕ್ಸಾಫೀಸ್‌ ಚಿಂದಿ ಉಡಾಯಿಸುತ್ತೆ ಎಂದು ಪಂಡಿತರು ಲೆಕ್ಕ ಹಾಕಿದ್ದಾರೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, '777 ಚಾರ್ಲಿ' ಕರ್ನಾಟಕದಲ್ಲಿ ಮೊದಲ ದಿನ ₹8 ಕೋಟಿಯಿಂದ ₹10 ಕೋಟಿ ಗಳಿಸಬಹುದು ಎನ್ನಲಾಗಿದೆ.

ವರ್ಲ್ಡ್‌ವೈಡ್ '777 ಚಾರ್ಲಿ' ಗಳಿಕೆ ಲೆಕ್ಕವೇನು?

ವರ್ಲ್ಡ್‌ವೈಡ್ '777 ಚಾರ್ಲಿ' ಗಳಿಕೆ ಲೆಕ್ಕವೇನು?

'ಅವನೇ ಶ್ರೀಮನ್ನಾರಾಯಣ' ಬಳಿಕ ರಕ್ಷಿತ್ ಶೆಟ್ಟಿ ಮತ್ತೊಂದು ಸಿನಿಮಾ ಬಿಡುಗಡೆಯಾಗಿದೆ. ಎಲ್ಲಾ ಕಡೆಯಲ್ಲೂ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ರೆಸ್ಪಾನ್ಸ್ ಉತ್ತಮವಾಗಿಯೇ ಇದೆ. ಸಿನಿಮಾ ನೋಡಿದವರೆಲ್ಲ ಕಣ್ಣೀರು ಹಾಕಿಕೊಂಡು ಹೊರಬರುತ್ತಿದ್ದಾರೆ. ಎಲ್ಲಾ ಕಡೆಯಿಂದ ಸಿಕ್ಕಿರುವ ರೆಸ್ಪಾನ್ಸ್ ಅನ್ನು ಗಮನದಲ್ಲಿಟ್ಟುಕೊಂಡು '777 ಚಾರ್ಲಿ' ವಿಶ್ವದಾದ್ಯಂತ ಮೊದಲ ದಿನ ₹12 ರಿಂದ ₹15 ಕೋಟಿ ಮೇಲೆ ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಲಾಗಿದೆ.

ರಕ್ಷಿತ್ ಕರಿಯನ್‌ನ ಬೆಸ್ಟ್ ಸಿನಿಮಾ ಆಗುತ್ತಾ?

ರಕ್ಷಿತ್ ಕರಿಯನ್‌ನ ಬೆಸ್ಟ್ ಸಿನಿಮಾ ಆಗುತ್ತಾ?

'777 ಚಾರ್ಲಿ' ರಕ್ಷಿತ್ ಶೆಟ್ಟಿ ಕರಿಯರ್‌ನ ಬೆಸ್ಟ್ ಸಿನಿಮಾ ಆಗಬಹುದು. ಇದೂವರೆಗೂ ರಕ್ಷಿತ್ ಶೆಟ್ಟಿ ಸಿನಿಮಾಗಳಲ್ಲಿ ಎಷ್ಟೋ ಎಕ್ಸ್‌ಪೆರಿಮೆಂಟ್ ಮಾಡಿದ್ದಾರೆ. ಅದರಲ್ಲಿ '777 ಚಾರ್ಲಿ' ಕೂಡ ಒಂದು. ಹೀಗಾಗಿ ಪ್ರಾಣಿ ಪ್ರಿಯರು ವಿಶ್ವದಾದ್ಯಂತ ಈ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ ಎನ್ನುವ ನಿರೀಕ್ಷೆಯಲ್ಲಿ ಸಿನಿಮಾ ಪಂಡಿತರಿದ್ದಾರೆ. ಈ ಕಾರಣಕ್ಕೆ ಸಿನಿಮಾ ಲೈಫ್ ಟೈಮ್ ಕಲೆಕ್ಷನ್ ₹70 ರಿಂದ ₹80 ಕೋಟಿ ಆಗಬಹುದು ಎಂದೂ ಹೇಳುತ್ತಿದ್ದಾರೆ.

'777 ಚಾರ್ಲಿ' ಬಜೆಟ್ ಎಷ್ಟು?

'777 ಚಾರ್ಲಿ' ಬಜೆಟ್ ಎಷ್ಟು?

ರಕ್ಷಿತ್ ಶೆಟ್ಟಿ ಗಳಿಕೆ ಬಗ್ಗೆ ಕುತೂಹಲವಿರುವುದಂತೂ ನಿಜ. ಆದರೊಂದಿಗೆ ಈ ಸಿನಿಮಾ ಬಗ್ಗೆ ಬಗ್ಗೆನೂ ಲೆಕ್ಕ ಹಾಕಲಾಗುತ್ತಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ₹30 ಕೋಟಿವರೆಗೂ ಖರ್ಚಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ವಾರದ ಅಂತ್ಯದೊಳಗೆ ಸಿನಿಮಾದ ಬಜೆಟ್ ರಿಕವರಿ ಆಗುತ್ತೆ ಎನ್ನುವುದು ಸಿನಿಮಾ ಪಂಡಿತರ ಲೆಕ್ಕಚಾರ.

More from Filmibeat

English summary
Rakshit Shetty Starrer 777 Charlie Released: Here Is The Boxoffice Prediction, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X