ಒಟಿಟಿ ಲಗ್ಗೆ ಇಡಲು ಸಜ್ಜಾದ '777 ಚಾರ್ಲಿ': ವಿಶೇಷ ದಿನದಂದೇ ಸ್ಟ್ರೀಮಿಂಗ್

'ಕೆಜಿಎಫ್ 2' ಬಳಿಕ ಸದ್ದು ಮಾಡಿದ ಮತ್ತೊಂದು ಸ್ಯಾಂಡಲ್‌ವುಡ್‌ನ ಪ್ಯಾನ್ ಇಂಡಿಯಾ ಸಿನಿಮಾ '777 ಚಾರ್ಲಿ'. ಮೂರು ವರ್ಷಗಳ ಬಳಿಕ ರಕ್ಷಿತ್ ಶೆಟ್ಟಿಯ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದೆ. ಐದೂ ಭಾಷೆಯಲ್ಲಿ ಸಿನಿಮಾ ಮೆಚ್ಚುಗೆ ವ್ಯಕ್ತವಾಗಿದ್ದು, ಕನ್ನಡ ಸಿನಿಮಾ ಮೇಲೆ ಬೇರೆ ಚಿತ್ರರಂಗ ಕಣ್ಣಿಡುವಂತೆ ಮಾಡಿದೆ.

'777 ಚಾರ್ಲಿ' ಕನ್ನಡದ ಮಟ್ಟಿಗೆ ವಿಶಿಷ್ಟ ಸಿನಿಮಾ. ಶ್ವಾನ ಹಾಗೂ ವ್ಯಕ್ತಿಯ ಬಾಂಧವ್ಯವನ್ನು ಚಿತ್ರೀಕರಿಸಿರುವ ಈ ಸಿನಿಮಾ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 'ಅವನೇ ಶ್ರೀಮನ್ನಾರಾಯಣ' ಸೋಲಿನ ಬೇಸರದಲ್ಲಿದ್ದ ರಕ್ಷಿತ್‌ಗೆ ಪ್ರೇಕ್ಷಕರು '777 ಚಾರ್ಲಿ' ಮೂಲಕ ಮತ್ತೆ ಬೂಸ್ಟ್ ನೀಡಿದ್ದಾರೆ. ಈಗ ಇದೇ ಸಿನಿಮಾ ಒಟಿಟಿಗೂ ಲಗ್ಗೆ ಇಡುತ್ತಿದೆ.'

'777 ಚಾರ್ಲಿ' ಒಟಿಟಿಗೆ ಲಗ್ಗೆ

ಇತ್ತೀಚೆಗೆಷ್ಟೇ '777 ಚಾರ್ಲಿ' ಸಿನಿಮಾ 25 ದಿನಗಳನ್ನು ಮುಗಿಸಿ ಮುನ್ನುಗ್ಗುತ್ತಿದೆ. ಇದೇ ವೇಳೆ ಇಡೀ ಚಿತ್ರತಂಡ ಸಿನಿಮಾದ ಗಳಿಕೆ ಬಗ್ಗೆ ಖುಷಿಯ ಮಾತುಗಳನ್ನು ಆಡಿದ್ದರು. ಸಿನಿಮಾ ಗಳಿಕೆ ಬಗ್ಗೆ ಮನಬಿಚ್ಚಿ ಮಾತಾಡಿದ್ದರು. ಅಲ್ಲದೆ ಒಟಿಟಿಗೆ ಉತ್ತಮ ಮೊತ್ತಕ್ಕೆ ಸೇಲ್ ಆಗಿದೆ. ಶೀಘ್ರದಲ್ಲಿಯೇ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದು ಹೇಳಿದ್ದರು.

Rakshit Shetty Starrer 777 Charlie Will be Streaming On Voot Select

ಸ್ಯಾಂಡಲ್‌ವುಡ್‌ನ ಮೂಲಗಳ ಪ್ರಕಾರ '777 ಚಾರ್ಲಿ' ಜುಲೈ 29ರಂದು ಒಟಿಟಿಯಲ್ಲಿ ಲಗ್ಗೆ ಇಡುತ್ತಿದೆ. ಚಾರ್ಲಿ ತಂಡಕ್ಕೆ ಇದೊಂದು ವಿಶೇಷ ದಿನವಾಗಿದ್ದು, ಅಂದೇ ಸಿನಿಮಾ ಒಟಿಟಿಗೆ ಲಗ್ಗೆ ಇಡುತ್ತಿದೆ. ಈ ವಿಷಯವನ್ನು ಅಧಿಕೃತವಾಗಿ ವೂಟ್ ಸೆಲೆಕ್ಟ್ ಅನೌನ್ಸ್ ಮಾಡಿದೆ.

50 ದಿನ ಪೂರೈಸಿಲಿರೋ '777 ಚಾರ್ಲಿ'

25ನೇ ದಿನವೇ ರಕ್ಷಿತ್ ಶೆಟ್ಟಿ ಭರವಸೆಯ ಮಾತುಗಳನ್ನು ಆಡಿದ್ದರು. ಈ ಸಿನಿಮಾ 50 ದಿನಗಳನ್ನು ಪೂರೈಸುತ್ತೆ ಎಂಬ ಭರವಸೆಯಿದೆ. ಅಂದು ಸಿನಿಮಾ ಯಶಸ್ಸನ್ನು ಸಂಭ್ರಮಿಸುತ್ತೇವೆ ಎಂದು ಹೇಳಿದ್ದರು. ಅಂತೆಯೇ ಜುಲೈ 29ರಂದು '777 ಚಾರ್ಲಿ' ಸಿನಿಮಾ 50 ದಿನಗಳನ್ನು ಪೂರೈಸಲಿದೆ. ಹೀಗಾಗಿ ಇದೇ ದಿನ ವೂಟ್ ಸೆಲೆಕ್ಟ್‌ನಲ್ಲಿ '777 ಚಾರ್ಲಿ' ಬಿಡುಗಡೆಯಾಗುತ್ತೆ ಎಂದು ಹೇಳಲಾಗುತ್ತಿದೆ.

'777 ಚಾರ್ಲಿ' ಎಲ್ಲಾ ಭಾಷೆಯಿಂದ ಥಿಯೇಟರ್ ಹಾಗೂ ಒಟಿಟಿಯಿಂದ ಸುಮಾರು 150 ಕೋಟಿ ರೂ. ಬ್ಯುಸಿನೆಸ್ ಮಾಡಿದೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದರು. ಅಲ್ಲದೆ ಸುಮಾರು 90 ರಿಂದ 100 ಕೋಟಿ ನಿರ್ಮಾಪಕರಿಗೆ ಬಂದಿದೆ ಎಂದು ಹೇಳಿದ್ದಾರೆ. ಇದೇ ಮೊದಲ ಬಾರಿಗೆ ನಿರ್ಮಾಪಕರೊಬ್ಬರು ಕನ್ನಡದಲ್ಲಿ ಧೈರ್ಯವಾಗಿ ಇಷ್ಟು ಕಲೆಕ್ಷನ್ ಮಾಡಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ, ಸಿನಿಮಾ ಬ್ಲಾಕ್‌ ಬಸ್ಟರ್ ಲಿಸ್ಟ್ ಸೇರಿದೆ ಎಂದೇ ಹೇಳಬಹುದು.

More from Filmibeat

English summary
Rakshit Shetty Starrer 777 Charlie Will be Streaming On Voot Select, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X