Don't Miss!
- News
Shimoga airport; ಸಿವಿಲ್ ಏವಿಯೇಷನ್ ಕಾರ್ಯದರ್ಶಿಗಳ ಭೇಟಿ
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡಿಸೆಂಬರ್ 31ಕ್ಕೆ 777 ಚಾರ್ಲಿ ಸಿನಿಮಾ ಗೋವಾ ಕೊಂಕಣಿ ಸಾಂಗ್ ರಿಲೀಸ್
'777 ಚಾರ್ಲಿ' ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಸಿನಿಮಾ. ರಕ್ಷಿತ್ ಶೆಟ್ಟಿ ಹಾಗೂ ಶ್ವಾನದ ನಡುವಿನ ಭಾವನಾತ್ಮಕ ಸಂಬಂಧವನ್ನು ತೆರೆಮೇಲೆ ತೋರಿಸಲಿದೆ ಈ ಸಿನಿಮಾ. 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಬಳಿಕ 777 ಚಾರ್ಲಿ ಕೂಡ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಆಗುತ್ತಿದೆ. ಚಿತ್ರತಂಡ ಮೊದಲೇ ಹೇಳಿದಂತೆ ಡಿಸೆಂಬರ್ 31ರಂದು ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಕೆಲವು ದಿನಗಳ ಹಿಂದೆ ಈ ವರ್ಷ ಚಾರ್ಲಿ ಸಿನಿಮಾ ಬಿಡುಗಡೆ ಆಗುವುದಿಲ್ಲವೆಂದು ತಂಡ ಸ್ಪಷ್ಟ ಪಡಿಸಿತ್ತು.
ಡಿಸೆಂಬರ್ 31ರಂದು ಸಿನಿಮಾ ಬಿಡುಗಡೆ ಆಗದೆ ಹೋದರೆ ಏನಂತೆ? ಅಭಿಮಾನಿಗಳಿಗೆ ನಿರಾಸೆ ಮಾಡುವುದಕ್ಕೆ ರಕ್ಷಿತ್ ಶೆಟ್ಟಿಗೆ ಇಷ್ಟವಿಲ್ಲ. ಹೀಗಾಗಿ ತಮ್ಮ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಡಲು ಚಿತ್ರತಂಡ ಮುಂದಾಗಿದೆ. ಡಿಸೆಂಬರ್ 31 ರಂದು 777 ಚಾರ್ಲಿ ಸೂಪರ್ ಡೂಪರ್ ಸಾಂಗ್ ಒಂದನ್ನು ಬಿಡುಗಡೆ ಮಾಡಲು ಮುಂದಾಗಿದೆ. ಅಂದಹಾಗೆ ಈ ಹಾಡಿನ ವಿಶೇಷತೆಯೇನು? ಎಂದು ತಿಳಿಯಲು ಮುಂದೆ ಓದಿ.

'777 ಚಾರ್ಲಿ' ಚಿತ್ರದ ಗೋವನ್ ಕೊಂಕಣಿ ಸಾಂಗ್
ಹೊಸ ವರ್ಷ ಬರುತ್ತಿದೆ ಅಂದರೆ, ಯುವಕರೆಲ್ಲಾ ಪಾರ್ಟಿ ಮೂಡಿನಲ್ಲಿ ಇರುತ್ತಾರೆ. ಖುಷಿ ಖುಷಿಯಾಗಿ ಹೊಸ ವರ್ಷವನ್ನು ಸ್ವಾಗತ ಮಾಡಿಕೊಳ್ಳುತ್ತಾರೆ. ಈ ವೇಳೆ ಯುವಕ-ಯುವತಿಯರಿಗೆ ಗೋವಾ ನೆನಪಾಗುತ್ತೆ. ಆದರೆ, ಎಲ್ಲರಿಗೂ ಗೋವಾಗೆ ಹೋಗಲು ಸಾಧ್ಯವಿಲ್ಲ. ಹೀಗಿರುವಾಗ, ಗೋವಾದ ಪ್ಲೇವರ್‌ನಲ್ಲೇ ಒಂದು ಹಾಡು ರಿಲೀಸ್ ಆದರೆ ಹೇಗಿರುತ್ತೆ? ಈ ಕಾರಣಕ್ಕೆ '777 ಚಾರ್ಲಿ' ತಂಡ ಸಿನಿಮಾದಲ್ಲಿರುವ ಗೋವನ್ ಕೊಂಕಣಿ ಹಾಡನ್ನು ಬಿಡುಗಡೆ ಮಾಡಲು ಮುಂದಾಗಿದೆ.
|
ಗೋವವ್ ಕೊಂಕಣಿ ಸಾಂಗ್ ವಿಶೇಷತೆಯೇನು?
'777 ಚಾರ್ಲಿ'ಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಶ್ವಾನ ಚಾರ್ಲಿ ಜಾಲಿ ಮೂಡಿನಲ್ಲಿ ಸಂದರ್ಭದಲ್ಲಿ ಬರುವ ಹಾಡಿದು ಎಂಬ ಸುಳಿವನ್ನು ಚಿತ್ರತಂಡ ನೀಡಿದೆ. ಈ ಹಾಡು ಹೊಸ ವರ್ಷದ ಮೂಡ್‌ನಲ್ಲಿರುವವರಿಗೆ ಪಕ್ಕಾ ಸೂಟ್ ಆಗುತ್ತೆ. ಗೋವನ್ ಕೊಂಕಣಿಯ ಒ'ಗಾ ಪಕ್ಕಾ ಮಸ್ತಿ ಹಾಡು ಎನ್ನಲಾಗಿದೆ. "777 ಚಾರ್ಲಿ ಚಿತ್ರದ ಗೋವನ್ ಕೊಂಕಣಿ ಹಾಡು OGa ಲಿರಿಕಲ್ ವಿಡಿಯೋ ಇದೇ ಡಿಸೆಂಬರ್ 31ಕ್ಕೆ ಬಿಡುಗಡೆ. ನಿಮ್ಮೆಲ್ಲರ ಪ್ರೀತಿಯಿರಲಿ." ಎಂದು ಸ್ವತ: ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿ ಅಭಿಮಾನಿಗಳಿ ತಿಳಿಸಿದ್ದಾರೆ.

Short Title: 164 ದಿನ '777 ಚಾರ್ಲಿ' ಶೂಟಿಂಗ್
ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನಿಮಾ ಶೂಟಿಂಗ್ ಮುಗಿದಿದ್ದು, ಬರೋಬ್ಬರಿ 164 ದಿನಗಳ ಶೂಟಿಂಗ್ ಮಾಡಿದೆ. ಯುವ ನಿರ್ದೇಶಕ ಕಿರಣ್ ರಾಜ್ ಕಥೆ, ಚಿತ್ರಕಥೆ ಬರೆದು '777 ಚಾರ್ಲಿ' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ಸಂಗೀತಾ ಶೃಂಗೇರಿ ಚಿತ್ರದಲ್ಲಿ ನಾಯಕಿಯಾಗಿದ್ದು, ರಾಜ್ ಬಿ. ಶೆಟ್ಟಿ, ಡ್ಯಾನಿಶ್ ಸೇಠ್, ಬಾಬಿ ಸಿಂಹ, ಬೇಬಿ ಶಾರ್ವರಿ ಸೇರಿದಂತೆ ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದೆ.

ರಕ್ಷಿತ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ
ರಕ್ಷಿತ್ ಶೆಟ್ಟಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಅವನೇ ಶ್ರೀಮನ್ನಾರಾಯಣ'. ಈ ಸಿನಿಮಾದ ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ '777 ಚಾರ್ಲಿ'. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ಟಾರ್ಚರ್ ಸಾಂಗ್ ರಿಲೀಸ್ ಆಗಿದ್ದು, ಕನ್ನಡದಲ್ಲಿ ವಿಜಯ್ ಪ್ರಕಾಶ್ ಈ ಹಾಡಿಗೆ ಧ್ವನಿಯಾದರೆ, ಮಲಯಾಳಂನಲ್ಲಿ ಜೆಸ್ಸಿ ಗಿಫ್ಟ್, ತಮಿಳಿನಲ್ಲಿ ಗಾನ ಬಾಲಚಂದರ್, ತೆಲುಗಿನಲ್ಲಿ ರಾಮ್ ಮಿರಿಯಾಲ ಮತ್ತು ಹಿಂದಿಯಲ್ಲಿ ಸ್ವರೂಪ್ ಖಾನ್ ಹಾಡಿದ್ದಾರೆ.