ರಕ್ಷಿತ್ ಎಗರಿ ಓಡಿ ಬಂದು ಹಗ್ ಮಾಡಿದ ವಿಡಿಯೋ 'ಕಾಂತರ' ಗತಿ ಬದಲಿಸಿದ್ದೇಗೆ? ರಿಲೀಸ್‌ಗೂ ಮುನ್ನ ಏನಾಯ್ತು?

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಸಿಕ್ಕ ಕೊನೆಯ ಕನ್ನಡ ಸಿನಿಮಾ 'ಕಾಂತಾರ'. ಅಲ್ಲಿಂದ ಮತ್ತೆ ಆ ಮಟ್ಟಿಗೆ ಬೇರೆ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾಗೂ ಇಂತಹ ಯಶಸ್ಸು ಸಿಕ್ಕಿಲ್ಲ. ರಿಷಬ್ ಶೆಟ್ಟಿ ವೃತ್ತಿ ಬದುಕಿಗೆ 'ಕಾಂತಾರ' ಅಚ್ಚರಿಯ ಸಕ್ಸಸ್ ಸಿಕ್ಕಿತ್ತು. ಅಲ್ಲಿವರೆಗೂ ರಿಷಬ್ ಸಿನಿಮಾಗಳು ಆ ಮಟ್ಟಿಗೆ ಸದ್ದು ಮಾಡಿರಲಿಲ್ಲ

'ಕಾಂತಾರ' ಪಕ್ಕಾ ಕನ್ನಡದ ಸೊಗಡಿನ ಸಿನಿಮಾ. ಈ ಕಥೆಯನ್ನು ದೇಶಾದ್ಯಂತ ಭಾಷೆಯ ಭೇದ ಭಾವವನ್ನು ಮರೆತು ಸಿನಿಮಾ ನೋಡಿದ್ದರು. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಕಂಡಿತ್ತು. ಇದೆಲ್ಲವೂ ರಿಷಬ್ ಶೆಟ್ಟಿಯ ಪಾಲಿಗೆ ರಾತ್ರೋ ರಾತ್ರಿ ನಡೆದು ಹೋಗಿತ್ತು. ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದರು.

Rakshit Shetty who jumed and hugged Rishab Shetty in Kantara Premier which changed senerio

ಆದರೆ, 'ಕಾಂತಾರ' ಬಿಡುಗಡೆಗೆ ಕೆಲವೇ ಗಂಟೆಗಳ ಮುನ್ನ ಒಂದು ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋ ರಿಷಬ್ ಶೆಟ್ಟಿಯ 'ಕಾಂತಾರ' ಬಗ್ಗೆ ಕುತೂಹಲವನ್ನು ಹೆಚ್ಚಿಸಿತ್ತು. ಈ ಸಿನಿಮಾ ಪ್ರೀಮಿಯರ್‌ ಮುಗಿದ ಬಳಿಕ ರಕ್ಷಿತ್ ಶೆಟ್ಟಿ ಓಡಿ ಬಂದು ರಿಷಬ್ ಶೆಟ್ಟಿಯನ್ನು ಅಪ್ಪಿಕೊಂಡು ಎಮೋಷನಲ್ ಆಗುತ್ತಾರೆ. ಅದೇ ಸಿನಿಮಾದ ಗತಿಯನ್ನು ಬದಲಿಸಿತ್ತು ಎಂದು ರಿಷಬ್ ಶೆಟ್ಟಿ ಫಿಲ್ಮ್ ಕಂಪಾನಿಯನ್ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

'ಕಾಂತಾರ' ಬಿಡುಗಡೆಗೂ ಮುನ್ನ ಹೆಚ್ಚು ಪ್ರಚಾರ ಮಾಡಿರಲಿಲ್ಲ. ಒಂದು ವಾರದ ಮುನ್ನವಷ್ಟೇ ಹೋರ್ಡಿಂಗ್ಸ್‌ ಅನ್ನು ಹಾಕಲಾಗಿತ್ತು. ಸಿನಿಮಾ ರಿಲೀಸ್ ಆದ್ಮೇಲೆ ಚಮತ್ಕಾರ ಮಾಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಪ್ರೀಮಿಯರ್‌ನಲ್ಲಿ ರಕ್ಷಿತ್ ಶೆಟ್ಟಿ ಹಾರಿ ಬಂದು ರಿಷಬ್ ಶೆಟ್ಟಿಯನ್ನು ಹಗ್ ಮಾಡಿದ್ದು ಬೇರೆಯದ್ದೇ ವೈಬ್ ಕ್ರಿಯೇಟ್ ಮಾಡಿತ್ತು. ಈ ವಿಷಯವನ್ನು ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

"ವಿಜಯಣ್ಣ ನನಗೆ ಕ್ಲಿಯರ್‌ ಆಗಿ ಹೇಳಿದ್ದು, ನನಗೆ ಈ ಸಿನಿಮಾ ರಾಜಕುಮಾರ ತರ ಫೀಲ್ ಆಗುತ್ತಿದೆ. ರಾಜಕುಮಾರನೂ ಹಾಗೇ ರಿಲೀಸ್ ಆಗಿದ್ದಕ್ಕಿಂತ ರಿಲೀಸ್ ಆದ್ಮೇಲೆ ತೆಗೆದುಕೊಂಡು ಹೋಗಿದ್ದ ರೀತಿ ಬೇರೆ ಅಂದಿದ್ದರು. ಅಪ್ಪು ಸರ್ ಸಿನಿಮಾ ರಾಜಕುಮಾರ ತುಂಬಾನೇ ದೊಡ್ಡ ಮಟ್ಟಕ್ಕೆ ಹೋಯ್ತು. ಆ ತರ ವೈಬ್ ಇದೆ ನನಗೆ. ರಿಲೀಸ್ ಆದ್ಮೇಲೆ ನೋಡಿ ಬೇರೆ ತರ ಆಗುತ್ತೆ ಅಂತ ಅವರು ಹೇಳುತ್ತಿದ್ದರು. ನಾನು ಟೀಮ್‌ನವರಿಗೆ ಹೇಳಿದರೆ, ಇಲ್ಲ ಪ್ರಮೋಷನ್ ಆಗುತ್ತಿಲ್ಲ ಅಂತ ಹೇಳಿದರು." ಸಿನಿಮಾ ಬಿಡುಗಡೆಗೂ ಮುನ್ನ ಇದ್ದ ಆತಂಕವನ್ನು ಹೇಳಿಕೊಂಡಿದ್ದಾರೆ.

Rakshit Shetty who jumed and hugged Rishab Shetty in Kantara Premier which changed senerio

ರಿಷಬ್ ಶೆಟ್ಟಿಯ ಇಂದಿಗೂ 'ಕಾಂತಾರ' ಯಶಸ್ಸಿನ ಪಾಲಿನಲ್ಲಿ ರಕ್ಷಿತ್ ಶೆಟ್ಟಿಗೂ ಕ್ರೆಡಿಟ್ ಕೊಡುವುದನ್ನು ಮರೆಯಲಿಲ್ಲ. "ಕೊನೆಯ ವಾರ ದೊಡ್ಡ ದೊಡ್ಡ ಹೋರ್ಡಿಂಗ್‌ಗಳನ್ನು ಮಾಡಿದ್ದರು. ಆದರೆ, ಸಿನಿಮಾ ಪ್ರೀಮಿಯರ್ ಮಾಡಿದಾಗ ಅಲ್ಲಿ ರಕ್ಷಿತ್ ರಿಯಾಕ್ಷನ್ ಸಿಕ್ಕಾಪಟ್ಟೆ ವೈರಲ್ ಆಗಿ ಬಿಡ್ತು. ಎಗರಿ ಓಡಿ ಬಂದು ಹಗ್ ಮಾಡಿಕೊಂಡಿದ್ದು, ಎಮೋಷನಲ್ ಆಗಿದ್ದು, ಜೊತೆ ಪ್ರಗತಿ ಅವರು ಇವರು ಎಲ್ಲರೂ ಹಾಗೇ ಮಾಡಿದ್ದರು. ಅದು ತುಂಬಾ ದೊಡ್ಡ ಮಟ್ಟಕ್ಕೆ ಹೈಪ್ ಕ್ರಿಯೇಟ್ ಮಾಡಿತು. ಏನಿದೆ? ಏನಿದೆ? ಅನ್ನೋದು ಬಂದುಬಿಡ್ತು. ಕ್ಲೈಮ್ಯಾಕ್ಸ್ ಬಗ್ಗೆ ತುಂಬಾನೇ ಜನರು ಮಾತಾಡುವುದಕ್ಕೆ ಶುರು ಮಾಡಿದ್ದರು." ಎಂದು ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.

'ಕಾಂತಾರ; ಚಾಪ್ಟರ್ 1' ಮೂಲಕ 'ಕಾಂತಾರ' ಜನರು ಕೊಟ್ಟ ಯಶಸ್ಸಿನ ಋಣವನ್ನು ತೀರಿಸುವುದಕ್ಕೆ ರಿಷಬ್ ಪ್ರಯತ್ನಿಸುತ್ತಿದ್ದಾರೆ. "ಕಾಂತಾರ ಜನರು ಕೊಟ್ಟ ಯಶಸ್ಸು. ಅದನ್ನು ನಾವು ಇನ್ನೂ ಜಾಸ್ತಿ ಕೊಡಬೇಕು. ಅದನ್ನು ಋಣ ಅಂತ ಟ್ರೀಟ್ ಮಾಡುತ್ತೇನೆ. ಆ ಋಣ ತೀರಿಸುವುದಕ್ಕೆ ಇನ್ನೂ ಹೆಚ್ಚು ಎಫರ್ಟ್ ಹಾಕೋಣ. ಆಕ್ಟರ್ ಆಗಿ ಇನ್ನೂ ಉತ್ತಮ ರೀತಿಯ ಆಕ್ಷನ್ ಮಾಡಬಹುದು. ಹೀಗೆ ಏನೆಲ್ಲ ಮಾಡಬೇಕು ಅನ್ನೋದನ್ನು ಮಾಡುತ್ತಾ ಹೋಗುತ್ತೇವೆ ಅಷ್ಟೇ." ಎಂದಿದ್ದಾರೆ ರಿಷಬ್ ಶೆಟ್ಟಿ.

More from Filmibeat

English summary
Rishab Shetty about Rakshit Shetty viral video in the Kantara movie premier:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X