ರಮ್ಯಾಗೆ ಟಕ್ಕರ್ ಕೊಟ್ಟರೇ ರಕ್ಷಿತಾ ಪ್ರೇಮ್? ಏನು ಹೇಳುತ್ತೆ ಆ ಎರಡು ಇನ್‌ಸ್ಟಾಗ್ರಾಂ ಸ್ಟೋರಿ?
ಮೋಹಕತಾರೆ ರಮ್ಯಾ ತನಗೆ ಸರಿಯಲ್ಲ ಅನಿಸಿದ್ದರ ವಿರುದ್ಧ ತಿರುಗಿ ಬೀಳುತ್ತಾರೆ. ಸಮಾಜದಲ್ಲಿ ಯಾರೇ ಆಗಿದ್ದರೂ, ಕೆಟ್ಟ ಕೆಲಸ ಮಾಡಿದರೆ ಅವರನ್ನೋ ಹಿಂದೆ ಮುಂದೆ ನೋಡದೇ ವಿರೋಧಿಸುತ್ತಾರೆ. ಹೀಗಾಗಿ ಕೆಲವೊಮ್ಮೆ ರಮ್ಯಾ ವಿವಾದಕ್ಕೆ ಸಿಕ್ಕಿಕೊಂಡಿದ್ದು ಕೂಡ ಇದೆ. ಈಗ ದರ್ಶನ್ ಅಭಿಮಾನಿಗಳ ನಿಂದನೆಗೆ ಗುರಿಯಾಗಿರುವ ಲಕ್ಕಿ ಗರ್ಲ್ ದರ್ಶನ್ ಅಭಿಮಾನಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ದೂರು ನೀಡುವುದಕ್ಕೆ ರಮ್ಯಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್‌ಗೆ ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ದರ್ಶನ್ ಜಾಮೀನು ರದ್ದು ಮಾಡುವ ಬಗ್ಗೆ ವಿಚಾರಣೆ ನಡೆದಿತ್ತು. ಈ ವೇಳೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹೈಕೋರ್ಟ್ ತೀರ್ಪಿನ ಬಗ್ಗೆ ಅಸಮಧಾನ ಹೊರ ಹಾಕಿದ್ದರು. ಇದನ್ನು ಇಟ್ಟುಕೊಂಡು ರಮ್ಯಾ ಜನ ಸಾಮಾನ್ಯರಿಗೆ ಸುಪ್ರೀಂ ಕೋರ್ಟ್ ಆಶಾಕಿರಣ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆಯಿದೆ ಎಂದು ಬರೆದು ಪೋಸ್ಟ್ ಮಾಡಿದ್ದರು.

ಇಲ್ಲಿಂದ ರಮ್ಯಾ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಕಿತ್ತಾಟ ಶುರುವಾಗಿದೆ. ದರ್ಶನ್ ಫ್ಯಾನ್ಸ್ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ರಮ್ಯಾ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿರುವುದಾಗಿ ತಿಳಿದಿದ್ದರು. ಅಲ್ಲದೇ ಮಹಿಳಾ ಆಯೋಗ ಕೂಡ ಎಂಟ್ರಿ ಕೊಟ್ಟಿದೆ. ಇಷ್ಟೆಲ್ಲ ನಡೆಯುತ್ತಿರುವಾಗ ರಕ್ಷಿತಾ ಪ್ರೇಮ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪರೋಕ್ಷವಾಗಿ ರಮ್ಯಾಗೆ ಟಕ್ಕರ್ ಕೊಟ್ಟು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ರಕ್ಷಿತಾ ಮಾಡಿದ ಈ ಪೋಸ್ಟ್‌ನಲ್ಲಿ ಏನಿದೆ? ಎಂದು ನೋಡುವುದಾರೇ..
ದರ್ಶನ್ ಫ್ಯಾನ್ಸ್‌ಗೆ ಸಂಕಷ್ಟ?
ಇಷ್ಟೆಲ್ಲ ಬೆಳವಣಿಗೆಗಳು ಆದ್ಮೇಲೆ ರಮ್ಯಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ದರ್ಶನ್ ಅಭಿಮಾನಿಗಳ ಕಮೆಂಟ್‌ಗಳನ್ನು ನೋಡಿದರೆ, ರೇಣುಕಾಸ್ವಾಮಿಗೂ ಇವರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದಿದ್ದರು. ಇಂತಹವರಿಗೆ ಕಾನೂನಾತ್ಮಕವಾಗಿ ಬುದ್ದಿ ಕಲಿಸಲೇಬೇಕು ಎಂದು ಹೇಳಿದ್ದರು. ಹಾಗೇ ಸೈಬರ್ ಕ್ರೈಂಗೆ ದೂರು ನೀಡಲು ಮುಂದಾಗಿದ್ದಾರೆ. ಹೀಗಾಗಿ ರಮ್ಯಾ ಹಾಗೂ ದರ್ಶನ್ ಫ್ಯಾನ್ಸ್ ನಡುವಿನ ಕಿತ್ತಾಟ ಬೇರೆಯದೇ ಹಾದಿ ಹಿಡಿಯುತ್ತಿದೆ. ಇದೇ ಬೆನ್ನಲ್ಲೇ ರಕ್ಷಿತಾ ಪ್ರೇಮ್ ಹಂಚಿಕೊಂಡ ಇನ್‌ಸ್ಟಾಗ್ರಾಂ ಸ್ಟೋರಿ ಟ್ರಿಗರ್ ಆಗಿದೆ.

ರಕ್ಷಿತಾ ಪ್ರೇಮ್ ಪೋಸ್ಟ್‌ನಲ್ಲಿ ಏನಿದೆ?
ದರ್ಶನ್ ಅಭಿಮಾನಿಗಳ ಕೆಟ್ಟ ಕಮೆಂಟ್‌ಗಳಿಗೆ ರಮ್ಯಾ ತಿರುಗಿಬಿದ್ದ ಬೆನ್ನಲ್ಲೇ ರಕ್ಷಿತಾ ಪ್ರೇಮ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಆ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ರಕ್ಷಿತಾ ಪ್ರೇಮ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಏನಿದೆ? ಅಂತ ನೋಡುವುದಾರೇ, "ನೀವು ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯವನ್ನು ನೋಡುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ದಯವಿಟ್ಟು ಅವರ ಮೇಲೆ ದಯೆ ಇಡಿ" ಎಂದು ಬರೆದು ಪೋಸ್ ಮಾಡಿದ್ದಾರರೆ.
ರಮ್ಯಾಗೆ ಟಕ್ಕರ್ ಕೊಟ್ಟರೇ ರಕ್ಷಿತಾ?
ರಕ್ಷಿತಾ ಮಾಡಿದ ಪೋಸ್ಟ್‌ನಲ್ಲಿ ರಮ್ಯಾ ಹೆಸರನ್ನು ಉಲ್ಲೇಖ ಮಾಡಿಲ್ಲ. ಹಾಗೇ ಎರಡೆರಡು ಇನ್‌ಸ್ಟಾಗ್ರಾಂ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಇನ್ನೊಂದು ಪೋಸ್ಟ್‌ನಲ್ಲಿ "ನಾನು ಏನು ವೈರಲ್ ಆಗಬೇಕು ಅಂತ ಬಯಸುತ್ತಿದ್ದೇನೆ ಅನ್ನೋದು ಗೊತ್ತಾ? ಅದು ಮಾನವೀಯ ಸಭ್ಯತೆ" ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಆದರೆ ಎರಡೂ ಸ್ಟೋರಿಗಳಲ್ಲೂ ರಮ್ಯಾ ಹೆಸರು ಎಲ್ಲೂ ಹೆಸರಿಸಿಲ್ಲ.
ರಕ್ಷಿತಾ-ದರ್ಶನ್ ಸ್ನೇಹಿತರು
ರಕ್ಷಿತಾ ಪ್ರೇಮ್ ಹಾಕಿದ ಇನ್‌ಸ್ಟಾಗ್ರಂ ಸ್ಟೋರಿಗಳು ಸಂಚಲನ ಸೃಷ್ಟಿಸುತ್ತಿದೆ. ಇನ್ನೊಂದು ಕಡೆ ರಕ್ಷಿತಾ ಹಾಗೂ ದರ್ಶನ್ ಇಬ್ಬರೂ ಉತ್ತಮ ಗೆಳೆಯರು. ಇಬ್ಬರೂ ಬಳಿ ಒಳ್ಳೆಯ ಬಾಂಡಿಂಗ್ ಇದೆ. ಆಗಾಗ ಇವರಿಬ್ಬರೂ ಭೇಟಿ ಮಾಡುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ರಕ್ಷಿತಾ ಪ್ರೇಮ್ ಮಾಡಿದ ಎರಡು ಇನ್‌ಸ್ಟಾಗ್ರಂ ಪೋಸ್ಟ್‌ಗಳನ್ನು ದರ್ಶನ್ ಪರವಾಗಿ ಮಾಡಿದ್ದು, ರಮ್ಯಾಗೆ ಈಮೂಲಕ ಟಕ್ಕರ್ ಕೊಟ್ಟಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.


Click it and Unblock the Notifications










