ರಕ್ಷಿತಾ ಪ್ರೇಮ್ ಸಹೋದರ ಈಗ 'ಇಡಿಯೆಟ್', ಚೊಚ್ಚಲ ತೆಲುಗು ಚಿತ್ರದ ಟೈಟಲ್ ಇಟ್ಟ ಕ್ರೇಜಿ ಕ್ವೀನ್

ಸ್ಯಾಂಡಲ್‌ವುಡ್‌ನ ʻಕ್ರೇಜಿ ಕ್ವೀನ್‌ʼ ರಕ್ಷಿತಾ ಪ್ರೇಮ್‌ ಇಂದು (ಮಾರ್ಚ್ 31) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರತಿ ವರ್ಷದಂತೆ ರಕ್ಷಿತಾ ಪ್ರೇಮ್ ಬರ್ತ್‌ಡೇ ಅದ್ದೂರಿಯಾಗಿ ನಡೆಯುತ್ತೆ. ಪತಿ ಜೋಗಿ ಪ್ರೇಮ್, ಪುತ್ರ ಸೇರಿದಂತೆ ಕುಟುಂಬಸ್ಥರು, ಅವರ ಆಪ್ತರು ಸೇರಿಕೊಂಡು ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಇದೇ ವೇಳೆ ತಮ್ಮ ಅಭಿಮಾನಿಗಳಿಗಾಗಿ ಸರ್ಪ್ರೈಸ್ ಅನ್ನು ಕೊಟ್ಟಿದ್ದಾರೆ.

ಈ ವರ್ಷದ ಬರ್ತ್‌ಡೇ ರಕ್ಷಿತಾ ಪ್ರೇಮ್‌ಗೆ ಸ್ಪೆಷಲ್. ಯಾಕಂದ್ರೆ, ಈ ಬಾರಿ ಪುತ್ರ ಸೂರ್ಯ ಅಮ್ಮನಿಗಾಗಿ ಸ್ಪೆಷಲ್ ಉಡುಗೊರೆಯನ್ನು ನೀಡಿದ್ದಾರೆ. ಮಗನೇ ಅಮ್ಮನ ಹುಟ್ಟುಹಬ್ಬಕ್ಕೆ ಸ್ಪೆಷಲ್ ಅರೇಂಜ್‌ಮೆಂಟ್ ಮಾಡಿದ್ದರು ಎನ್ನಲಾಗಿದೆ. ಈ ಸಂಭ್ರಮದಲ್ಲಿ ಜೋಗಿ ಪ್ರೇಮ್, ರಕ್ಷಿತಾ ಅವರ ತಾಯಿ ಮಮತಾ, ಸಹೋದರ ರಾಣಾ, ನಿರ್ದೇಶಕ ಮಹೇಶ್ ಬಾಬು ಸೇರಿದಂತೆ ಆಪ್ತರು ಸಮಾರಂಭದಲ್ಲಿ ಭಾಗಿಯಾಗಿದ್ದರು.

Rakshitha Prem first Telugu movie title Idiot is her brother Rana next movie title

ಇದೇ ವೇಳೆ ರಕ್ಷಿತಾ ಪ್ರೇಮ್ ಮತ್ತೆ ನಿರ್ಮಾಪಕರಾಗಿ ಆಕ್ಟಿವ್ ಆಗಿದ್ದಾರೆ. ಇತ್ತೀಚೆಗೆ ಪ್ರೇಮ್ ಹಾಗೂ ರಕ್ಷಿತಾ ಇಬ್ಬರೂ ಸೇರಿಕೊಂಡು ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆಯನ್ನು ಹುಟ್ಟಾಕಿದ್ದರು. ಆ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದರು. ಈ ಬ್ಯಾನರ್‌ನಲ್ಲಿ ರಕ್ಷಿತಾ ತಮ್ಮ ಸಹೋದರ ರಾಣಾಗಾಗಿ ಸಿನಿಮಾ ಮಾಡುತ್ತಿದ್ದಾರೆ. ಹುಟ್ಟುಹಬ್ಬದ ಈ ಸಂದರ್ಭದಲ್ಲಿ ರಾಣಾ ನಟಿಸುತ್ತಿರುವ ಸಿನಿಮಾದ ಟೈಟಲ್ ಅನೌನ್ಸ್ ಮಾಡಲಾಗಿದೆ.

ಹೌದು, ಸಹೋದರನಿಗಾಗಿ ನಿರ್ಮಾಣ ಮಾಡುತ್ತಿರುವ ಸಿನಿಮಾಗೆ 'ಇಡಿಯಟ್' ಎಂದು ಟೈಟಲ್ ಇಡಲಾಗಿದೆ. ವಿಶೇಷ ಅಂದರೆ, ಇದು ರಕ್ಷಿತಾ ನಟಿಸಿದ ಮೊದಲ ತೆಲುಗು ಸಿನಿಮಾ ಟೈಟಲ್. ಜೊತೆಗೆ ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್ ಸಂಸ್ಥೆಯಲ್ಲಿ ನಿರ್ಮಾಣ ಆಗುತ್ತಿರುವ ಮೊದಲ ಸಿನಿಮಾ ಕೂಡ ಹೌದು. ಹೀಗಾಗಿ 'ಇಡಿಯಟ್' ಸಿನಿಮಾ ರಕ್ಷಿತಾ ಪ್ರೇಮ್‌ಗೆ ತುಂಬಾನೇ ಸ್ಪೆಷಲ್.

Rakshitha Prem first Telugu movie title Idiot is her brother Rana next movie title

ಇನ್ನು 'ಏಳುಮಲೆ' ಸಿನಿಮಾ ಬಳಿಕ ರಾಣಾ ನಟಿಸುತ್ತಿರುವ ಮತ್ತೊಂದು ಸಿನಿಮಾವಿದು. ಜೋಗಿ ಪ್ರೇಮ್ ಶಿಷ್ಯ ಮಂಜುನಾಥ್ ಬಿ.ಎಸ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಜೋಗಿ ಪ್ರೇಮ್ ಹಾಗೂ ರಕ್ಷಿತಾ ಪ್ರೇಮ್ ಇಬ್ಬರೂ ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್ ಸಂಸ್ಥೆ ಹುಟ್ಟಾಕಿದ್ದಕ್ಕೆ ಕಾರಣವನ್ನೂ ಈಗಾಗಲೇ ರಿವೀಲ್ ಮಾಡಿದ್ದಾರೆ. ಕೇವಲ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುವುದಷ್ಟೇ ಅಲ್ಲದೆ, ಯುವ ಪ್ರತಿಭೆಗಳಿಗೆ, ಹೊಸ ಆಲೋಚನೆಗಳನ್ನು ಈ ಬ್ಯಾನರ್ ಮೂಲಕ ಪ್ರೋತ್ಸಾಹಿಸಲಿದ್ದಾರೆ.

Also Read
ಶ್ರೀರಾಮನವಮಿ ಸಂಭ್ರಮದಲ್ಲಿ ಜೋಗಿ ಪ್ರೇಮ್ ಹಾಗೂ ರಕ್ಷಿತಾ ಪ್ರೇಮ್ ಹೊಸ ಅಧ್ಯಾಯ
ಶ್ರೀರಾಮನವಮಿ ಸಂಭ್ರಮದಲ್ಲಿ ಜೋಗಿ ಪ್ರೇಮ್ ಹಾಗೂ ರಕ್ಷಿತಾ ಪ್ರೇಮ್ ಹೊಸ ಅಧ್ಯಾಯ

ತಮ್ಮ ಬ್ಯಾನರ್ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ದಿಸೆ ನೀಡಲು ಪ್ರೇಮ್-ರಕ್ಷಿತಾ ದಂಪತಿ ಮುಂದಾಗಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ ಶಿಷ್ಯನ ಸಿನಿಮಾಗೆ ಗುರು ಜೋಗಿ ಪ್ರೇಮ್ ಬಂಡವಾಳ ಹೂಡುತ್ತಿದ್ದಾರೆ. ಪ್ರೇಮ್ ಶಿಷ್ಯ ಮಂಜುನಾಥ್ ಬಿ.ಎಸ್. ಕಳೆದ ಹಲವು ವರ್ಷಗಳಿಂದ ಇವರೊಂದಿಗೆ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಸಿನಿಮಾಗಳಿಗೆ ಸಾಹಿತ್ಯವನ್ನೂ ರಚಿಸಿದ್ದಾರೆ. ಈಗ ತಮ್ಮದೇ ಗುರುವಿನ ಬ್ಯಾನರ್‌ನಲ್ಲಿ ಮಂಜುನಾಥ್‌ಗೆ ಚೊಚ್ಚಲ ಸಿನಿಮಾ ನಿರ್ದೇಶಿಸುವ ಅವಕಾಶ ಸಿಕ್ಕಿದೆ.

'ಏಕ್‌ ಲವ್‌ ಯಾ', 'ಏಳುಮಳೆ' ಸಿನಿಮಾ ಮೂಲಕ ಗಮನ ಸೆಳೆದಿರುವ ರಾಣಾ ಮತ್ತೊಂದು ಸಿನಿಮಾ ಸೆಟ್ಟೇರಿದೆ. ತಮ್ಮದೇ ಬ್ಯಾನರ್‌ನ ಸಿನಿಮಾದಲ್ಲಿ ರಾಣಾ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ವಿಲಿಯಂ ಡೇವಿಡ್ ಈ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ. ಇನ್ನು ಯುವ ಪ್ರತಿಭೆ ರೋಮಿಯೋ ಟ್ಯೂನ್‌ಗಳನ್ನು ಹಾಕುತ್ತಿದ್ದಾರೆ. ಶ್ರೀರಾಮನವಮಿ ದಿನ ಮಾಹಿತಿಯನ್ನು ಹಂಚಿಕೊಂಡಿದ್ದ ಪ್ರೇಮ್ ಮತ್ತು ರಕ್ಷಿತಾ ಈಗ ಟೈಟಲ್‌ ಅನ್ನು ರಿವೀಲ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸ್ಟಾರ್ ಕಾಸ್ಟ್‌ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದು.

More from Filmibeat

English summary
Rakshitha Prem first Telugu movie title Idiot is her brother Rana next movie title;
Read more about: rakshitha jogi prem kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X