ಕಾಂಡೋಮ್ ಪರೀಕ್ಷೆ ಮಾಡಲು ನಿಂತ ರಕುಲ್ ಪ್ರೀತ್ ಸಿಂಗ್

ರಕುಲ್ ಪ್ರೀತ್ ಸಿಂಗ್ ಯಾರಿಗೆ ಗೊತ್ತಿಲ್ಲಾ ಹೇಳಿ? ಸಿನಿಪ್ರಿಯರಿಗೆ ರಕುಲ್ ಪ್ರೀತ್ ಸಿಂಗ್ ಒಂದೊಂದು ಸಿನಿಮಾನೂ ಗೊತ್ತು. ಒಂದೊಂದು ಪಾತ್ರವೂ ಕಣ್ಮುಂದೆ ಇದೆ. ದಕ್ಷಿಣ ಭಾರತದಲ್ಲಿ ಒಂದಿಷ್ಟು ದಿನ ಗ್ಲಾಮರ್ ರೋಲ್‌ನಲ್ಲಿ ಮಿಂಚಿದ್ದ ನಟಿ ದಕ್ಷಿಣ ಭಾರತೀಯರಿಗೆ ಚಿರಪರಿಚಿತ. ಅದರಲ್ಲೂ ತೆಲುಗು ಸಿನಿಮಾ ಪ್ರಿಯರಿಗಂತೂ ರಕುಲ್ ಪ್ರೀತ್ ಸಿಂಗ್ ಸಿನಿಮಾಗಳ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿದ್ದ ರಕುಲ್ ಅದೆಷ್ಟೋ ಯುವಕರ ಹೃದಯ ಕದ್ದಿದ್ದ ನಟಿ.

ತೆಲುಗು, ತಮಿಳು, ಕನ್ನಡ ಸಿನಿಮಾಗಳ ಬಳಿಕ ದಕ್ಷಿಣ ಭಾರತದಿಂದ ಕಾಲ್ಕಿತ್ತಿರೋ ರಕುಲ್ ಬಾಲಿವುಡ್‌ನಲ್ಲಿ ನೆಲೆಯೂರಿದ್ದಾರೆ. ಹಿಂದಿ ಸಿನಿಮಾಗಳಲ್ಲಿ ಉತ್ತಮ ಪಾತ್ರಗಳನ್ನು ಹುಡುಕುತ್ತಿರುವ ಈ ಗ್ಲಾಮರ್ ಗೊಂಬೆಗೆ ಹೊಸ ಸಿನಿಮಾ ಸಿಕ್ಕಿದೆ. ಈ ಸಿನಿಮಾದ ಫಸ್ಟ್‌ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಇಡೀ ಭಾರತದಾದ್ಯಂತ ಈ ಚಿತ್ರದ ಬಗ್ಗೆನೇ ಚರ್ಚೆಯಾಗುತ್ತಿದೆ. ಯಾಕಂದ್ರೆ, ರಕುಲ್ ಪ್ರೀತ್ ಸಿಂಗ್ ತನ್ನ ಹೊಸ ಸಿನಿಮಾದ ಪೋಸ್ಟರ್‌ನಲ್ಲಿ ಕಾಂಡೋಮ್ ಹಿಡಿದು ನಿಂತಿದ್ದಾರೆ. ಇದು ಬಾಲಿವುಡ್‌ನಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

ಕಾಂಡೋಮ್ ಹಿಡಿದು ನಿಂತ 'ಛತ್ರಿವಾಲಿ' ರಕುಲ್

ರಕುಲ್ ಪ್ರೀತ್ ಸಿಂಗ್ ನಟನೆಯ ಹೊಸ ಬಾಲಿವುಡ್ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾದ ಹೆಸರು 'ಛತ್ರಿವಾಲಿ'. ಬಾಲಿವುಡ್ ಸ್ಟಾರ್ ನಿರ್ಮಾಪಕ ರೋನಿ ಸ್ಕ್ರೂವಾಲಾ ಈ ಸಿನಿಮಾವನ್ನು ತನ್ನ RVSP ಸಂಸ್ಥೆಯಿಂದ ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಬಾಲಿವುಡ್‌ನಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಇದಕ್ಕೆ ಕಾರಣ ಕಾಂಡೋಮ್ ಹಿಡಿದು ನಿಂತ ರಕುಲ್ ಪ್ರೀತ್ ಸಿಂಗ್ ಸಿನಿಮಾದ ಪೋಸ್ಟರ್. ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರುವ ರಕುಲ್ ಪ್ರೀತ್ ಸಿಂಗ್ 'ಛತ್ರಿವಾಲಿ' ಚಿತ್ರದ ಒಂದು ಪೋಸ್ಟರ್‌ನಿಂದ ಸಿನಿಪ್ರಿಯರಿಗೆ ಕಿಕ್ ಕೊಟ್ಟಿದ್ದಾರೆ.

Rakul Preet Singh playing the role of a condom tester film title Chhatriwali

'ಮಳೆಗಾಲ ಅಲ್ಲದೆ ಇದ್ದರೂ ಮಳೆ ಬರಬಹುದು ಛತ್ರಿ ರೆಡಿ ಇಟ್ಟುಕೊಳ್ಳಿ'

ರಕುಲ್ ಪ್ರೀತ್ ಸಿಂಗ್ ಹೇಳಿ-ಕೇಳಿ ಕಾಂಡೋಮ್ ಹಿಡಿದು ನಿಂತಿರುವುದರಿಂದ ಸ್ವಲ್ಪ ಜೋರಾಗೇ ಚರ್ಚೆಯಾಗ್ತಿದೆ. ಈ ಸಿನಿಮಾದಲ್ಲಿ ರಕುಲ್ ಕಾಂಡೋಮ್‌ಗಳನ್ನು ಪರೀಕ್ಷೆ ಮಾಡುವ ಪಾತ್ರ. ಹೀಗಾಗಿ ಸಿನಿಮಾ ತಂಡ ಹೀಗೆ ವಿಶಿಷ್ಟವಾದ ಪೋಸ್ಟರ್ ಬಿಟ್ಟು ಗಮನ ಸೆಳೆದಿದೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ನಿರ್ಮಾಣ ಸಂಸ್ಥೆ ನೀಡಿದ ಕ್ಯಾಪ್ಷನ್ ಮತ್ತಷ್ಟು ಕಿಕ್ ಕೊಡುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟರ್ ಶೇರ್ ಮಾಡಿ, 'ಮಳೆಗಾಲ ಅಲ್ಲದೆ ಇದ್ದರೂ ಮಳೆ ಬರಬಹುದು ಛತ್ರಿ ರೆಡಿ ಇಟ್ಟುಕೊಳ್ಳಿ' ಎಂದು ಕ್ಯಾಪ್ಷನ್ ಕೊಟ್ಟಿದೆ.

Rakul Preet Singh playing the role of a condom tester film title Chhatriwali

" ಇದು ಖಡಕ್ ಹಾಗೂ ಆಸಕ್ತಿದಾಯಕ ವಿಷಯ. ಈ ಪಾತ್ರದ ಆರಂಭದ ಜರ್ನಿಯೇ ಸಿಕ್ಕಾಪಟ್ಟೆಸ ಥ್ರಿಲ್ ಆಗಿದೆ. ತುಂಬಾ ಪ್ರಮುಖವಾದ ಸಮಸ್ಯೆಯನ್ನು ತಿಳಿಯಾಗಿ ಹೇಳುವುದು ಮುಖ್ಯ. ಇದು ನನ್ನನ್ನು ಮತ್ತಷ್ಟು ಉತ್ಸಾಹಳನ್ನಾಗಿಸಿದೆ." ಎಂದು ರಕುಲ್ ಪ್ರೀತ್ ಸಿಂಗ್ ಛತ್ರಿವಾಲಿ ಸಿನಿಮಾ ಬಗ್ಗೆ ಹೇಳಿದ್ದಾರೆ. ಸ್ನಾತಕೋತ್ತರ ಪದವಿ ಪಡೆದ ಯುವತಿಯೊಬ್ಬಳು ಕೆಲಸ ಸಿಗದೇ ಇದ್ದಾಗ, ಸಣ್ಣ ನಗರವೊಂದರಲ್ಲಿ ಕಾಂಡೋಮ್ ಟೆಸ್ಟ್ ಮಾಡುವ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಬಳಿಕ ಆಕೆಯನ್ನು ಸಮಾಜ ನೋಡುವ ರೀತಿ ಹಾಗೂ ಆಕೆ ಎದುರಿಸುವ ಸವಾಲುಗಳನ್ನು ಹಾಸ್ಯದ ರೂಪ ಕೊಡಲಾಗಿದೆ.

ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವನ್ನು ತೇಜಸ್ ಪ್ರಭ ಡಿಯೋಸ್ಕರ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಉತ್ತರಪ್ರದೇಶದ ಲಕ್ನೋದಲ್ಲಿ ಈ ಸಿನಿಮಾದ ಚಿತ್ರೀಕರಣ ಆರಂಭ ಆಗಿದೆ. ಇತ್ತೀಚೆಗೆ ರಕುಲ್ ಪ್ರೀತ್ ಸಿಂಗ್ ಪ್ರೀತಿಸುತ್ತಿರುವ ವಿಷಯವನ್ನು ಪ್ರಸ್ತಾಪಿಸಿದ್ದರು. ಬಾಲಿವುಡ್ ನಿರ್ಮಾಪಕ ಹಾಗೂ ನಟ ಜ್ಯಾಕಿ ಭಗ್ನಾನಿ ಜೊತೆ ಡೇಟ್ ಮಾಡುತ್ತಿರುವುದನ್ನು ತನ್ನ 31ನೇ ಹುಟ್ಟುಹಬ್ಬದಂದು ಇಡೀ ವಿಶ್ವಕ್ಕೆ ತಿಳಿಸಿದ್ದರು.

More from Filmibeat

English summary
Rakul Preet Singh playing the role of a condom tester in her next film titled Chhatriwali. The social family entertainer starring Rakul film has recently gone on floors in Lucknow.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X