Peddi Pre-Release Business: ಹೇಗಿದೆ 'ಪೆದ್ದಿ' ಪ್ರಿ-ರಿಲೀಸ್ ಬ್ಯುಸಿನೆಸ್? ಕನ್ನಡ ವರ್ಷನ್‌ಗೆ ಯಾಕಿಷ್ಟು ಬೇಡಿಕೆ?

ಟಾಲಿವುಡ್‌ನಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್‌ಗೆ ಸಜ್ಜಾಗುತ್ತಿದೆ. ರಾಮ್ ಚರಣ್, ಜಾಹ್ನವಿ ಕಪೂರ್, ಶಿವರಾಜ್‌ಕುಮಾರ್ ನಟನೆಯ 'ಪೆದ್ದಿ' ಕ್ರೇಜ್ ಎಲ್ಲೆಡೆಯೂ ಜೋರಾಗಿದೆ. ಇನ್ನೇನು ಜೂನ್ 5 ರಂದು 'ಪೆದ್ದಿ' ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಹೇಳಿ-ಕೇಳಿ ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ದಕ್ಷಿಣ ಭಾರತದಲ್ಲಿ ಇಡೀ ತಂಡ ಭರ್ಜರಿ ಪ್ರಚಾರ ಮಾಡುತ್ತಿದೆ. ಇತ್ತೀಚೆಗೆ ರಾಜ್ ಚರಣ್, ಜಾಹ್ನವಿ ಕಪೂರ್ ಹಾಗೂ ಶಿವರಾಜ್‌ಕುಮಾರ್ ಮೂವರೂ ಬೆಂಗಳೂರಿಗೆ ಬಂದು ಭರ್ಜರಿ ಪ್ರಚಾರ ಮಾಡಿದ್ದರು.

ಮೊದಲಿನಿಂದಲೂ ತೆಲುಗು ಸಿನಿಮಾಗಳಿಗೆ ಕರ್ನಾಟಕದಲ್ಲಿ ಭಾರೀ ಕ್ರೇಜ್ ಇದೆ. ಅದರಲ್ಲೂ ಬೆಂಗಳೂರಿನಲ್ಲಿ ತೆಲುಗು ಸಿನಿಮಾಗಳು ಉತ್ತಮ ಕಲೆಕ್ಷನ್ ಮಾಡುತ್ತವೆ. ಹೀಗಾಗಿ ತೆಲುಗು ಫಿಲ್ಮ್ ಮೇಕರ್ಸ್ ಬೆಂಗಳೂರನ್ನು ಗಮನದಲ್ಲಿ ಇಟ್ಟುಕೊಂಡು ಬ್ಯುಸಿನೆಸ್ ಮಾಡುತ್ತಾರೆ. 'ಪುಷ್ಪ'ದಂತೆ 'ಪೆದ್ದಿ' ಕೂಡ ಕ್ರೇಜ್ ಸೃಷ್ಟಿಸಿರುವುದರಿಂದ ಕರ್ನಾಟಕದಲ್ಲಿಯೂ ಭರ್ಜರಿ ಬ್ಯುಸಿನೆಸ್ ಆಗಿದೆ.

Ram Charan Shivarajkumar movie Peddi Pre-Release Business and Karnataka Release details

ಪುನೀತ್ ಕೊನೆಯ ಸಿನಿಮಾ 'ಜೇಮ್ಸ್' ನಿರ್ಮಾಣ ಮಾಡಿದ್ದ ಕಿಶೋರ್ ಫಿಲ್ಮ್ಸ್ ಕರ್ನಾಟಕದಲ್ಲಿ ಈ ಸಿನಿಮಾವನ್ನು ವಿತರಣೆ ಮಾಡುತ್ತಿದೆ. ಈಗಾಗೇ ಸುಮಾರು 18 ಕೋಟಿ ರೂಪಾಯಿ ಹಾಗೂ ಜಿಎಸ್‌ಟಿ ಸೇರಿ ಸುಮಾರು 21.50 ಕೋಟಿ ರೂಪಾಯಿಗೆ ಸಿನಿಮಾವನ್ನು ಖರೀದಿ ಮಾಡಿದೆ ಎಂದು ಸಿನಿಮಾ ವಲಯದಲ್ಲಿ ಚರ್ಚೆಯಾಗುತ್ತಿದೆ. ಹಾಗಿದ್ದರೆ, 'ಪೆದ್ದಿ' ಪ್ರಿ-ರಿಲೀಸ್ ಬ್ಯುಸಿನೆಸ್ ಎಷ್ಟು? ವಿದೇಶದಲ್ಲಿ ಎಷ್ಟು ಕೋಟಿಗೆ ಡೀಲ್ ಆಗಿದೆ? ಕನ್ನಡ ಡಬ್ ವರ್ಷನ್‌ ಅನ್ನು ಯಾಕಿಷ್ಟು ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡ್ತಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.

ಕನ್ನಡ ವರ್ಷನ್ ಭಾರೀ ಬೇಡಿಕೆ?

ಸ್ಯಾಂಡಲ್‌ವುಡ್‌ನಲ್ಲಿ 'ಪೆದ್ದಿ' ಬಗ್ಗೆ ಕ್ರೇಜ್ ಹೆಚ್ಚಾಗಿದೆ. ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿರುವುದರಿಂದ ಕರ್ನಾಟಕದಲ್ಲಿ ಈ ಸಿನಿಮಾದ ರಿಲೀಸ್ ಪ್ಲ್ಯಾನ್ ಬೇರೆನೇ ಇದೆ. ಸ್ಯಾಂಡಲ್‌ವುಡ್‌ ಮೂಲಗಳ ಪ್ರಕಾರ 'ಪೆದ್ದಿ' ಕನ್ನಡ ವರ್ಷನ್ ಸುಮಾರು 100ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ. ಜೂನ್ 5ರ ವೇಳೆಗೆ ಕನ್ನಡ ಡಬ್ ವರ್ಷನ್ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

Also Read
ಪೋಸ್ಟರ್, ಸಾಂಗ್, ಟ್ರೈಲರ್ ಎಲ್ಲೆಲ್ಲೂ ಚಿಕುಬುಕು ಸದ್ದು; 'ಪೆದ್ದಿ' ಕಥೆಗೂ ರೈಲಿಗೂ ಇರುವ ನಂಟೇನು?
ಪೋಸ್ಟರ್, ಸಾಂಗ್, ಟ್ರೈಲರ್ ಎಲ್ಲೆಲ್ಲೂ ಚಿಕುಬುಕು ಸದ್ದು; 'ಪೆದ್ದಿ' ಕಥೆಗೂ ರೈಲಿಗೂ ಇರುವ ನಂಟೇನು?

ಕರ್ನಾಟಕದಲ್ಲಿ ಎಷ್ಟು ಸ್ಕ್ರೀನ್‌ಗಳಲ್ಲಿ ರಿಲೀಸ್?

ಕರ್ನಾಟಕದಲ್ಲಿ ಜೂನ್ 5ರಂದು ಸುಮಾರು 350 ರಿಂದ 400 ಸ್ಕ್ರೀನ್‌ಗಳಲ್ಲಿ 'ಪೆದ್ದಿ'ಯನ್ನು ರಿಲೀಸ್ ಮಾಡಲಾಗುತ್ತಿದೆ. ಕರ್ನಾಟಕದ ವಿತರಕರ ವಲಯದಲ್ಲಿ ಚರ್ಚೆ ಆಗುತ್ತಿರುವಂತೆ ತೆಲುಗು ವರ್ಷನ್ ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿದೆ. ಸುಮಾರು 250ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗುತ್ತಿದೆ. ಹಾಗೇ ಕನ್ನಡ ವರ್ಷನ್ 100 ರಿಂದ 150 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಒಂದು ಅಂದಾಜಿನ ಪ್ರಕಾರ, ಬೆಂಗಳೂರು, ಕೋಲಾರ, ತುಮಕೂರು ಭಾಗಗಳಲ್ಲಿ ತೆಲುಗು ವರ್ಷನ್ ಹಾಗೂ ಮಂಡ್ಯ, ಮೈಸೂರು, ಕೊಡಗು, ಹಾಸನ ಭಾಗಗಳಲ್ಲಿ ಕನ್ನಡ ವರ್ಷನ್‌ಗೆ ಬೇಡಿಕೆಯಿದೆ ಎನ್ನಲಾಗಿದೆ.

Ram Charan Shivarajkumar movie Peddi Pre-Release Business and Karnataka Release details

ಓಟಿಟಿ ಬ್ಯುಸಿನೆಸ್‌ ಎಷ್ಟು?

'ಪೆದ್ದಿ' ಬಿಡುಗಡೆಗೂ ಮುನ್ನವೇ ಓಟಿಟಿಯಲ್ಲಿ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಓಟಿಟಿ ಡೀಲ್‌ ಅನ್ನು ಕೂಡ ಮುಗಿಸಿದೆ. ಮೂಲಗಳ ಪ್ರಕಾರ, ನೆಟ್‌ಫ್ಲಿಕ್ಸ್‌ ಸುಮಾರು 81 ಕೋಟಿ ರೂಪಾಯಿಗೆ ಓಟಿಟಿ ಡೀಲ್ ಮುಗಿಸಿದೆ ಎನ್ನಲಾಗಿದೆ. ಹಾಗೇ ಜೀ ಸ್ಯಾಟಲೈಟ್ ಹಕ್ಕುಗಳನ್ನು 18 ಕೋಟಿ ರೂಪಾಯಿಗೆ ಖರೀದಿ ಮಾಡಿದೆ ಎನ್ನುತ್ತಿವೆ ಇಂಡಸ್ಟ್ರಿ ಮೂಲಗಳು. ಇನ್ನು ಓವರ್‌ಸೀಸ್ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದು, 45 ಕೋಟಿ ರೂಪಾಯಿ ಮುಂಗಡ ಹಣವನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ಕರ್ನಾಟಕದಲ್ಲಿ ಯಾಕಿಷ್ಟು ಕ್ರೇಜ್?

'ಪೆದ್ದಿ'ಯಲ್ಲಿ ಕೇವಲ ರಾಮ್ ಚರಣ್ ಅಷ್ಟೇ ಇದ್ದಿದ್ದರೆ, ಕನ್ನಡ ವರ್ಷನ್‌ಗೆ ಇಷ್ಟೊಂದು ಬೇಡಿಕೆ ಬರುತ್ತಿರಲಿಲ್ಲ. ಆದ್ರೀಗ ಶಿವಣ್ಣ ವಿಶೇಷ ಪಾತ್ರದಲ್ಲಿ ನಟಿಸಿದ್ದು, ರಾಮ್ ಚರಣ್ ಹಾಗೂ ಶಿವಣ್ಣ ಕಾಂಬಿನೇಷನ್ ನೋಡುವುದಕ್ಕೆ ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಶಿವಣ್ಣ ಈ ಸಿನಿಮಾದಲ್ಲಿ ಇರುವ ಏಕೈಕ ಕಾರಣಕ್ಕೆ ಕನ್ನಡ ವರ್ಷಕ್ಕೆ ಈ ಮಟ್ಟಿಗೆ ಬೇಡಿಕೆ ಬಂದಿದೆ. ಒಂದು ವೇಳೆ ಕನ್ನಡ ವರ್ಷನ್ ಅತೀ ಹೆಚ್ಚು ಕಲೆಕ್ಷನ್ ಮಾಡಿದರೆ, ಡಬ್ ಸಿನಿಮಾಗಳಿಗೆ ಮತ್ತೆ ಬೇಡಿಕೆ ಹೆಚ್ಚಾಗಬಹುದು.

English summary
Ram Charan, Janhavi Kapoor, Shivarajkumar movie Peddi Pre-Release Business and Karnataka Release details.
Read more about: ram charan shivarajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X