ಬಿಡುಗಡೆ ಮುನ್ನ 'ವಿಕ್ರಾಂತ್ ರೋಣ' ಸಿನಿಮಾ ನೋಡಿದ ಮೂವರು ದಿಗ್ಗಜರು ಯಾರು?

ಈ ವರ್ಷ ರಿಲೀಸ್ ಆಗುತ್ತಿರುವ ಸ್ಯಾಂಡಲ್‌ವುಡ್‌ನ ಮೂರನೇ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ'. ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕೆ ಸಿನಿ ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ಕೆಲವರು 3ಡಿಯಲ್ಲಿಯೇ ಸಿನಿಮಾ ನೋಡಬೇಕು ಅಂತ ಥಿಯೇಟರ್ ಮುಂದೆ ಮುಗಿಬಿದ್ದಿದ್ದಾರೆ.

'ವಿಕ್ರಾಂತ್ ರೋಣ' ಮಾಸ್ ಸಿನಿಮಾನಾ? ಕ್ಲಾಸ್ ಸಿನಿಮಾ? ಥ್ರಿಲ್ಲರ್ ಸ್ಟೋರಿನಾ? ಸಸ್ಪೆನ್ಸ್ ಇದೆಯಾ? ಹೀಗೆ ಒಂದಿಷ್ಟು ಕುತೂಹಲ ಸಿನಿಪ್ರಿಯರ ತಲೆಯೊಳಗೆ ಹೊಕ್ಕಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಈ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅದರಲ್ಲೂ ದುಬೈನಲ್ಲಿ ಪ್ರೀಮಿಯರ್ ಆಗುತ್ತಿದೆ. ಆದರೆ ಬಿಡುಗಡೆಗೂ ಮೊದಲೇ 'ವಿಕ್ರಾಂತ್ ರೋಣ' ಸಿನಿಮಾವನ್ನುಮೂವರು ದಿಗ್ಗಜರು ಈಗಾಗಲೇ ನೋಡಿದ್ದಾರೆ.

ಹೌದು, ಮೂವರು ದಿಗ್ಗಜರಿಗೆ ಇಡೀ ಚಿತ್ರತಂಡ 'ವಿಕ್ರಾಂತ್ ರೋಣ' ಸಿನಿಮಾವನ್ನು ತೋರಿಸಿದೆ. ಅವರು ಸಿನಿಮಾ ನೋಡಿ ಏನಂದ್ರು? ಅನ್ನೋದನ್ನು ಸಿನಿಮಾ ತಂಡ ಹೇಳಿಕೊಂಡಿದೆ. ಹಾಗಿದ್ದರೆ, ಈ ಸಿನಿಮಾವನ್ನು ಮೊದಲು ನೋಡಿದವರು ಯಾರು? ಸಿನಿಮಾ ನೋಡಿ ಅವರು ಏನಂದರು? ಈ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಲು ಮುಂದೆ ಓದಿ.

ಆರ್‌ಜಿವಿಯಿಂದ ಸಿನಿಮಾ ವೀಕ್ಷಣೆ

ಆರ್‌ಜಿವಿಯಿಂದ ಸಿನಿಮಾ ವೀಕ್ಷಣೆ

ಕಿಚ್ಚ ಸುದೀಪ್ ಹಾಗೂ ರಾಮ್‌ ಗೋಪಾಲ್ ವರ್ಮಾ ಇಬ್ಬರೂ ಮೊದಲಿನಿಂದಲೂ ಆತ್ಮೀಯರು. ಇಬ್ಬರೂ ಸಿನಿಮಾ ವಿಚಾರದಲ್ಲಿ ಆಗಾಗ ಒಂದಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ರಾಮ್‌ ಗೋಪಾಲ್ ವರ್ಮಾ ನಿರ್ದೇಶನದ 'ಲಡ್ಕಿ' ಸಿನಿಮಾ ಬಿಡುಗಡೆಯಾಗಲೂ ಕಿಚ್ಚ ಸಾಥ್ ಕೊಟ್ಟಿದ್ದರು. ಇಷ್ಟೊಂದು ಆತ್ಮೀಯರಾಗಿರುವ ವರ್ಮಾಗೆ 'ವಿಕ್ರಾಂತ್ ರೋಣ' ಸಿನಿಮಾ ತಂಡ ಮೊದಲು ಸಿನಿಮಾವನ್ನು ತೋರಿಸಿತ್ತು. ಈ ವಿಚಾರವನ್ನು ನಿನ್ನೆ (ಜುಲೈ 26) ನಡೆದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ವೇದಿಕೆ ಮೇಲೆ ಹೇಳಿದ್ದರು. ಆರ್‌ಜಿವಿ ಸಿನಿಮಾ ನೋಡಿ ಥ್ರಿಲ್ ಆಗಿದ್ದನ್ನು ಚಿತ್ರತಂಡ ನೆನಪಿಸಿಕೊಂಡಿದ್ದಾರೆ.

ರಮೇಶ್ ಅರವಿಂದ್ ಸಿನಿಮಾ ವೀ‍ಕ್ಷಣೆ

ರಮೇಶ್ ಅರವಿಂದ್ ಸಿನಿಮಾ ವೀ‍ಕ್ಷಣೆ

ಆರ್‌ಜಿವಿ ಬಳಿಕ 'ವಿಕ್ರಾಂತ್ ರೋಣ' ಸಿನಿಮಾವನ್ನು ನೋಡಿದ ಎರಡನೇ ಸೆಲೆಬ್ರೆಟಿ ರಮೇಶ್ ಅರವಿಂದ್. ಕನ್ನಡದ ಚಿತ್ರರಂಗದ ಪ್ರಬುದ್ಧ ನಟ ಕಮ್ ನಿರ್ದೇಶಕ. ಕಿಚ್ಚ ಸುದೀಪ್ ಹಾಗೂ ರಮೇಶ್ ಅರವಿಂದ್ ಇಬ್ಬರೂ ಆತ್ಮೀಯರು. ಕಿಚ್ಚನೊಂದು ಉತ್ತಮ ಬಾಂಧವ್ಯ ಹೊಂದಿರೋ ಸ್ಟಾರ್ ನಟನಿಗೆ ಚಿತ್ರತಂಡ ಸಿನಿಮಾ ತೋರಿಸಿದೆ. ರಮೇಶ್ ಅರವಿಂದ್ ಈ ಸಿನಿಮಾವನ್ನು ನೋಡಿ ಖುಷಿ ವ್ಯಕ್ತಪಡಿಸಿದ್ದಾರೆಂದು ಚಿತ್ರತಂಡ ಹೇಳಿದೆ. ಇಬ್ಬರು ಪ್ರಮುಖ ವ್ಯಕ್ತಿಗಳಿಂದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ರಿಯಲ್ ಸ್ಟಾರ್ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ

ರಾಮ್‌ ಗೋಪಾಲ್ ವರ್ಮಾ, ರಮೇಶ್ ಅರವಿಂದ್ ಬಳಿಕ ಸಿನಿಮಾ ನೋಡಿದ ಮೂರನೇ ಸೆಲೆಬ್ರೆಟಿ ರಿಯಲ್‌ಸ್ಟಾರ್ ಉಪೇಂದ್ರ. ನಿನ್ನೆ( ಜುಲೈ 27) ನಡೆದ ಸಮಾರಂಭದಲ್ಲಿ ಸ್ವತ: ಉಪೇಂದ್ರ ಅವರೇ ಸಿನಿಮಾ ಹಲವು ದೃಶ್ಯಗಳನ್ನು ನೋಡಿರುವುದಾಗಿ ಹೇಳಿಕೊಂಡಿದ್ದರು. ಉಪೇಂದ್ರ ಅಂತಹವರೇ ಈ ಸಿನಿಮಾ ನೋಡಿ ಭೇಷ್ ಅಂದಿದ್ದಾರೆ. "ಇಂತಹ ಸಿನಿಮಾವನ್ನು ತೆಗೆಯಲು ನಿಮಗೆ ಧೈರ್ಯ ಎಲ್ಲಿಂದ ಬರುತ್ತೆ" ಎಂದು ಪ್ರಶ್ನೆ ಮಾಡಿದ್ದರು. ಈ ಮೂಲಕ ಬಿಡುಗಡೆಗೂ ಮುನ್ನವೇ ಮೂವರು ದಿಗ್ಗಜರಿಂದ 'ವಿಕ್ರಾಂತ್ ರೋಣ'ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಕೆಲವೇ ಆಪ್ತರಿಂದ ಸಿನಿಮಾ ವೀಕ್ಷಣೆ

ಕೆಲವೇ ಆಪ್ತರಿಂದ ಸಿನಿಮಾ ವೀಕ್ಷಣೆ

ರಾಮ್‌ ಗೋಪಾಲ್ ವರ್ಮಾ, ರಮೇಶ್ ಅರವಿಂದ್ ಹಾಗೂ ಉಪೇಂದ್ರ ಬಳಿಕ 'ವಿಕ್ರಾಂತ್ ರೋಣ' ಸಿನಿಮಾವನ್ನು ಕೆಲ ಆಪ್ತರು ಸಿನಿಮಾ ನೋಡಿದ್ದಾರೆ. 'ವಿಕ್ರಾಂತ್ ರೋಣ' ಹಾಗೂ ಚಿತ್ರತಂಡಕ್ಕೆ ಆತ್ಮೀಯರಾಗಿರುವರಿಗೆ ಸಿನಿಮಾ ತೋರಿಸಲಾಗಿದೆ. ಅವರೆಲ್ಲರೂ ಸಿನಿಮಾ ಸೂಪರ್‌ ಹಿಟ್ ಆಗುತ್ತೆ ಎಂದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಪ್ಯಾನ್ ಇಂಡಿಯಾ ಸಿನಿಮಾವನ್ನು ಕೆಲವೇ ಕೆಲವು ಮಂದಿ ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ಕ್ಷಣಗಳಲ್ಲಿ ಪ್ರೇಕ್ಷಕರೇ ಸಿನಿಮಾ ನೋಡಿ ರಿಸಲ್ಟ್ ಕೊಡಲಿದ್ದಾರೆ.

More from Filmibeat

English summary
Ram Gopal Varma, Ramesh Aravind, Upendra First Watched Vikrant Rona Movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X