ಇದು ಅಧಿಕೃತ: ರಾಮ್ ಗೋಪಾಲ್ ವರ್ಮಾ ಕನ್ನಡಕ್ಕೆ

ಕಿಚ್ಚ ಸುದೀಪ್ ಮತ್ತು ಕನ್ನಡದ ಖ್ಯಾತ ನಿರ್ಮಾಪಕ ಎನ್ ಕುಮಾರ್ ಸೇರಿ ಕನ್ನಡ ಚಿತ್ರವನ್ನು ನಿರ್ಮಿಸಲಿದ್ದಾರೆ.
ಸದ್ಯ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು ಕನ್ನಡದ ಜೊತೆಗೆ ಹಿಂದಿಯಲ್ಲೂ ಅಂದರೆ ದ್ವಿಭಾಷಾ ಚಿತ್ರ ನಿರ್ಮಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.
ಒಂದು ವೇಳೆ ಹಿಂದಿಯಲ್ಲೂ ಚಿತ್ರ ನಿರ್ಮಾಣವಾದರೆ ರಾಮ್ ಗೋಪಾಲ್ ವರ್ಮಾ ಕೂಡಾ ನಿರ್ಮಾಪಕರಾಗಲಿದ್ದಾರೆ.
ಜನಶ್ರೀ ಟಿವಿಗೆ ನೀಡಿದ 'ಸವಿ ಸವಿ ಸುದೀಪ್' ಕಾರ್ಯಕ್ರಮದಲ್ಲಿ ಖುದ್ದು ಸುದೀಪ್ ಈ ಮೇಲಿನ ಹೇಳಿಕೆ ನೀಡಿದ್ದಾರೆ. ಈ ಕಾರ್ಯಕ್ರಮ ಮಕರ ಸಂಕ್ರಾಂತಿಯ ದಿನವಾದ ಸೋಮವಾರದಂದು (ಜ 14) ಮಧ್ಯಾಹ್ನ 3.15 ರಿಂದ ಪ್ರಸಾರವಾಯಿತು.
ನಿರ್ಮಾಪಕ ಎನ್ ಕುಮಾರ್ ವೃತ್ತಿಪರರು. ಅವರ ಜೊತೆ ಸಿನಿಮಾ ಮಾಡಿದರೆ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ತಕರಾರು ಇರುವುದಿಲ್ಲ. ಹಾಗಾಗಿ ನನ್ನ ಹೋಮ್ ಬ್ಯಾನರ್ 'ಕಿಚ್ಚ ಬ್ಯಾನರ್' ಮತ್ತು ಎನ್ ಕುಮಾರ್ ಜಂಟಿಯಾಗಿ ಚಿತ್ರ ನಿರ್ಮಿಸುತ್ತಿದ್ದೇವೆ.
ಕಳೆದ ಎರಡು ವರ್ಷಗಳಿದ ಕನ್ನಡ ಚಿತ್ರರಂಗ ಗರಿಗೆದರಿದೆ, ಈ ಬಗ್ಗೆ ನನಗೆ ಬಹಳ ಸಂತೋಷವಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳ hit ratio ಗಮನಾರ್ಹವಾಗಿ ಹೆಚ್ಚಾಗಿರುವುದು ರಾಮ್ ಗೋಪಾಲ್ ವರ್ಮಾ ಗಮನಕ್ಕೂ ಬಂದಿದೆ.
ರಾಮ್ ಗೋಪಾಲ್ ವರ್ಮಾ ಬಳಿ ಮಾತುಕತೆ ನಡೆಸಿದ್ದೇವೆ. ಕನ್ನಡದಲ್ಲಿ ಚಿತ್ರ ನಿರ್ದೇಶಿಸಲು ಅವರೂ ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಸುದೀಪ್ ಈ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಚಿತ್ರ ಎಪ್ರಿಲ್ ನಲ್ಲಿ ಸೆಟ್ಟೇರುವ ಸಾಧ್ಯತೆಯಿದೆ.
ಕನ್ನಡ ಬಿಗ್ ಬಾಸ್ ಸುದೀಪ್ ನೀಡಿದ ಸ್ಪಷ್ಟನೆ ಏನು ಮುಂದಿನ ಪುಟ ಕ್ಲಿಕ್ಕಿಸಿ


Click it and Unblock the Notifications











