For Quick Alerts
  ALLOW NOTIFICATIONS  
  For Daily Alerts

  ವಿಶೇಷ ವಿನ್ಯಾಸದ ಬೈಕ್ ಏರಿದ 'ರಾಮಾ ರಾಮಾ ರೇ' ಖ್ಯಾತಿಯ ಧರ್ಮಣ್ಣ ಕಡೂರು

  |

  'ರಾಮಾ ರಾಮಾ ರೇ' ಚಿತ್ರದ ವಿಭಿನ್ನ ಪಾತ್ರದ ಮೂಲಕ ಚಿತ್ರರಂಗದಲ್ಲಿ ಹೆಸರು ಮಾಡಿದವರು ಧರ್ಮಣ್ಣ ಕಡೂರು. ಅಲ್ಲಿಂದ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತಿವೆ.

  ಮುದ್ದು ಮಗಳ ಹುಟ್ಟುಹಬ್ಬಕ್ಕೆ ಸುದೀಪ್ ವಿಶ್ ಮಾಡಿದ್ದು ಹೇಗೆ ನೋಡಿ | Sudeep wish to daughter

  ಈಗ ಧರ್ಮಣ್ಣ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಹಾಲಿವುಡ್ ಶೈಲಿಯ ಬೈಕ್ ಒಂದರ ಮೇಲೆ ಕಾಣಿಸಿಕೊಂಡಿದ್ದಾರೆ. ಹೇಗಿದೆ ನನ್ನ ಅವತಾರ? ಇದು ಯಾವ ಸಿನಿಮಾಕ್ಕಾಗಿ ಎಂಬುದನ್ನು ಸದ್ಯದಲ್ಲೇ ಹೇಳ್ತೀನಿ ಎಂದು ಇತ್ತೀಚೆಗೆ ಫೋಟೊ ಹಂಚಿಕೊಂಡಿದ್ದ ಧರ್ಮಣ್ಣ, ಅದರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

  ಆಗ ದೊಡ್ಡಣ್ಣ.. ನಂತರ ಚಿಕ್ಕಣ್ಣ.. ಮುಂದೆ ಧರ್ಮಣ್ಣ..ಆಗ ದೊಡ್ಡಣ್ಣ.. ನಂತರ ಚಿಕ್ಕಣ್ಣ.. ಮುಂದೆ ಧರ್ಮಣ್ಣ..

  'ಐ ಆಮ್ ಪ್ರೆಗ್ನೆಂಟ್' ಎಂಬ ಹಾರರ್ ಕಾಮಿಡಿ ಚಿತ್ರಕ್ಕಾಗಿ ನಿರ್ದೇಶಕ ಸಂಜಯ್ ಈ ಸ್ಪೆಷಲ್ ಬೈಕ್ ಸಿದ್ಧಪಡಿಸಿಕೊಟ್ಟಿದ್ದಾರೆ. ಈ ವಿನ್ಯಾಸಕ್ಕೆ ಸುಮಾರು 2 ಲಕ್ಷ ರೂ ಖರ್ಚಾಗಿದೆ. ಇದು ಧರ್ಮಣ್ಣ ಅವರ ಪಾತ್ರಕ್ಕಾಗಿಯೇ ವಿನ್ಯಾಸಗೊಳಿಸಿರುವ ಬೈಕ್.

  ಬೈಕ್ ಚಿತ್ರ ನೋಡಿದವರು ಅನೇಕರು, ಈ ಬೈಕ್‌ಗೆ ಎಂಜಿನ್ ಇಲ್ಲ, ಮುಂದಕ್ಕೆ ಹೋಗೊಲ್ಲ ಎಂದಿದ್ದಾರೆ. ಎಂಜಿನ್ ಇದ್ದರೂ ನಿಮಗೆ ಓಡಿಸಲು ಬರೊಲ್ಲ ಎಂದು ಅನೇಕ ಪ್ರಶ್ನೆಗಳನ್ನು ಧರ್ಮಣ್ಣ ಅವರಿಗೆ ಕೇಳಿದ್ದಾರೆ. ಈ ಪ್ರಶ್ನೆಗಳು, ಟೀಕೆಗಳಿಗೆ ಧರ್ಮಣ್ಣ ಬೈಕ್ ಓಡಿಸುವ ವಿಡಿಯೋ ಹಂಚಿಕೊಂಡು ಉತ್ತರ ನೀಡಿದ್ದಾರೆ.

  'ಬೆಂಕಿಪಟ್ನ' ಚಿತ್ರದಲ್ಲಿ ನಟಿಸಿದ್ದ ಪ್ರತಾಪ್ ನಾರಾಯಣ್ ಈ ಚಿತ್ರದ ನಾಯಕ. ಅವರಿಗೆ ನಾಯಕಿಯಾಗಿ ಅರ್ಪಿತಾ ನಟಿಸುತ್ತಿದ್ದಾರೆ. ಧರ್ಮಣ್ಣ ಅವರಿಗೆ ಜೋಡಿಯಾಗಿ ಚೈತ್ರಾ ಕೋಟೂರ್ ಅಭಿನಯಿಸುತ್ತಿದ್ದಾರೆ. ಹಳ್ಳಿಯಿಂದ ಚಿತ್ರರಂಗಕ್ಕೆ ಬಂದ ತಮಗಾಗಿ ಸಿನಿಮಾವೊಂದರಲ್ಲಿ ಈ ರೀತಿಯ ವಿಶಿಷ್ಟ ಬೈಕ್ ಸಿದ್ಧವಾಗಿದೆ ಎನ್ನುವುದೇ ಖುಷಿಯ ಸಂಗತಿ ಎಂದು ಧರ್ಮಣ್ಣ ಹೇಳಿಕೊಂಡಿದ್ದಾರೆ.

  ಅಂದಹಾಗೆ ಇಂದು (ಮೇ 21), ಧರ್ಮಣ್ಣ ಕಡೂರು ಬಾಳ ಸಂಗಾತಿ ಕಾವ್ಯಾ ಅವರ ಕೈ ಹಿಡಿದು ಆರು ವರ್ಷ. ಆ ಖುಷಿಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  English summary
  Rama Rama Re fame actor Dharmanna Kadur got a special modified bike for is upcoming movie I Am Pregnant.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X