"ಮೊದಲು ದರ್ಶನ್ ಜೈಲಿಗೆ ಹೋಗಿ 15 ದಿನ ಇದ್ದರು, ಅಲ್ಲಿ ನನ್ನ ಪಾತ್ರವೂ ಇದೆ": ರಾಮಚಂದ್ರ ಗುರೂಜಿ
ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸ್ಪಿರಿಚ್ಯುವಲ್ ಗುರು ಡಾ. ಶ್ರೀ ರಾಮಚಂದ್ರ ಗುರೂಜಿ ಇತ್ತೀಚೆಗೆ ಪುನೀತ್ ರಾಜ್‌ಕುಮಾರ್ ಆತ್ಮದ ಜೊತೆ ಮಾತಾಡಿದ್ದೆ ಎಂದು ಹೇಳಿ ಸುದ್ದಿಯಲ್ಲಿ ಇದ್ದರು. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಅಪ್ಪು ಆತ್ಮದ ಬಳಿ ಮೂರು ಪ್ರಶ್ನೆಗಳನ್ನು ಕೇಳಿದ್ದೆ ಎಂದು ಹೇಳಿದ್ದರು. ಈಗ ಮತ್ತೆ ದರ್ಶನ್ ಬಗ್ಗೆ ಹೇಳಿಕೆ ಕೊಟ್ಟು ಸುದ್ದಿಯಲ್ಲಿದ್ದಾರೆ.
ಮತ್ತೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಪುನರ್ಜನ್ಮ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತಾಡಿದ್ದಾರೆ. ಈ ಸಂದರ್ಶನದಲ್ಲಿ ದರ್ಶನ್ ಮೊದಲ ಬಾರಿಗೆ ಜೈಲಿಗೆ ಹೋದಾಗ ಅಲ್ಲಿ ನನ್ನ ಪಾತ್ರವೂ ಇತ್ತು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ರಾಮಚಂದ್ರ ಗುರೂಜಿಯ ಈ ಹೇಳಿಕೆಯ ಉದ್ದೇಶವೇನು? ಈ ಸಂದರ್ಶನದ ಝಲಕ್ ಹೀಗಿದೆ.

"ದರ್ಶನ್ ಸಂಸ್ಕಾರ ತೆಗೆದುಕೊಂಡು ಬಂದಿದ್ದಾರೆ"
ರಾಮಚಂದ್ರ ಗುರೂಜಿ ಸಂಸ್ಕಾರದ ಬಗ್ಗೆ ಮಾತಾಡುವಾಗ ದರ್ಶನ್ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. "ದರ್ಶನ್ ಅಂತಹವರು ಸಂಸ್ಕಾರ ತೆಗೆದುಕೊಂಡು ಬಂದಿದ್ದಾನೆ. ಆ ಸಂಸ್ಕಾರ ಎರಡು ವಿಧದಲ್ಲಿ ಇದೆ. ಒಂದು ದು:ಖದ ಸಂಸಾರವಿದೆ. ಇನ್ನೊಂದು ಸಂತೋಷ ತುತ್ತತುದಿಯನ್ನು ತಲುಪಿದ್ದಾನೆ. ಅಂದರೆ, ಉಚ್ಚ್ರಾಯ ಸ್ಥಿತಿಯನ್ನು ಕಂಡವರು ನಿಚಾಯ ಸ್ಥಿತಿಯಗೆ ಹೋಗುವವರನ್ನೂ ಕಂಡಿದ್ದೇನೆ. ಕೆಲವರು ಈ ಎರಡೂ ಸಂಸ್ಕಾರವನ್ನು ತೆಗೆದುಕೊಂಡು ಬಂದಿರುತ್ತಾರೆ." ಎಂದು ರಾಮಚಂದ್ರ ಗುರೂಜಿ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ.
"ನನ್ನ ಪಾತ್ರವೂ ಇದೆ"
ದರ್ಶನ್ ಈಗ ಸದ್ಯ ಸೆರೆವಾಸವನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆನೂ ರಾಮಚಂದ್ರ ಗುರೂಜಿ ಮಾತಾಡಿದ್ದಾರೆ. ದರ್ಶನ್ ಮೊದಲಬಾರಿಗೆ ಜೈಲಿಗೆ ಹೋದಾಗ ಏನಾಯ್ತು ಅನ್ನೋದನ್ನು ಹೇಳಿಕೊಂಡಿದ್ದಾರೆ. "ದರ್ಶನ್ ಎಪಿಸೋಡ್ ಒನ್ ಆಗಿದೆ. ಜೈಲಿಗೆ ಹೋಗಿದ್ದು ದರ್ಶನ್ ಎಪಿಸೋಡ್ 2. ಎಪಿಸೋಡ್ ಒಂದನ್ನು ನೋಡಿದರೆ, ಅವರು ಜೈಲಿಗೆ ಹೋಗಿ 15 ದಿನಗಳು ಇದ್ದರು ಅಂತ ಕಾಣುತ್ತೆ. ಅಲ್ಲಿ ನನ್ನ ಪಾತ್ರವೂ ಇದೆ." ಎಂದು ಹೇಳುವ ಮೂಲಕ ಕುತೂಹಲವನ್ನು ಕೆರಳಿಸಿದ್ದಾರೆ.

"ಪ್ರಾರ್ಥನೆ ಮಾಡಿದ್ದಕ್ಕೆ ಜಾಮೀನಿ ಸಿಕ್ಕಿತ್ತು"
ಪತ್ನಿ ಮೇಲೆ ಹಲ್ಲೆ ವಿಚಾರಕ್ಕೆ ಮೊದಲ ಬಾರಿ ಜೈಲಿಗೆ ಹೋದಾಗ ತಮ್ಮ ಪ್ರಾರ್ಥನೆಯಿಂದಲೇ ಬೇಲ್ ಸಿಕ್ಕಿತ್ತು ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ. "ಅವರು ಜೈಲ್‌ಗೆ ಹೋಗಿ ಬೇಲ್ ಸಿಕ್ಕಿತಲ್ಲ. ಆ ಎರಡು ಮೂರು ದಿವಸ (ಮಧ್ಯದಲ್ಲಿ ಆಡಿಯೋ ಮ್ಯೂಟ್ ಮಾಡಲಾಗಿದೆ). ಅಂದರೆ ರಾಮಚಂದ್ರ ಗುರೂಜಿ ಪ್ರಾರ್ಥನೆ ಮಾಡಿದಕ್ಕೆ ಜಾಮೀನು ಸಿಕ್ಕಿತು ಅನ್ನೋದೇ ಸಾರಾಂಶ. ಯಾಕಂದ್ರೆ ಅವರ ಸಾರಥಿ ಸಿನಿಮಾ ನನ್ನ ಸ್ಟುಡೆಂಟ್ ಅನ್ನು ಪರಿಚಯ ಮಾಡಿದ್ದೆ. ಆ ಸಮಯದಲ್ಲಿ ಆಕೆನೇ ಅವರ ಗಮನಕ್ಕೆ ತಂದು ಇದೆಲ್ಲ ಆಗಿದ್ದು, ಹಾಯ್ ಬೆಂಗಳೂರಿನಲ್ಲಿ ಸಾಕ್ಷಿ ಸಮೇತ, ಫೋಟೊ ಸಮೇತ ಆರ್ಟಿಲ್ ಇದೆ. ಪರೀಕ್ಷೆ ಮಾಡಿಕೊಳ್ಳಬಹುದು." ಎಂದು ಹೇಳಿದ್ದಾರೆ.
"ಈಗ ಪಾರ್ಥನೆ ಯಾಕೆ ಮಾಡಲ್ಲ?"
"ಆಗ ಪ್ರಾರ್ಥನೆ ಮಾಡಿದ್ದು ಇದೆ. ಈಗಲೂ ಮಾಡಬಹುದಲ್ಲ ಅಂತ ಕೇಳಿದರೆ, ಈಗ ಮಾಡುವ ಅವಶ್ಯಕತೆಯಿಲ್ಲ. ಯಾಕಂದ್ರೆ, ಯಾರೇ ತಪ್ಪು ಮಾಡಿದರೂ ತಪ್ಪೇ. ಒಂದು ತಪ್ಪಿಗೆ ಕ್ಷಮೆಯಿದೆ. ಅದೇ ವ್ಯಕ್ತಿ ಪದೇ ಪದೆ ತಪ್ಪುಗಳನ್ನು ಮಾಡಿದಾಗ ಪ್ರಾರ್ಥನೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ." ಎಂದು ಸಂದರ್ಶನದಲ್ಲಿ ರಾಮಚಂದ್ರ ಗುರೂಜಿ ಹೇಳಿದ್ದಾರೆ.


Click it and Unblock the Notifications











