ರಮೇಶ್-ಕಮಲ್ ಹಾಸನ್ 'ರಾಮ ಶಾಮ ಭಾಮ' ಚಿತ್ರಕ್ಕೆ 15 ವರ್ಷ

ರಮೇಶ್ ಅರವಿಂದ್ ಮತ್ತು ಕಮಲ್ ಹಾಸನ್ ನಟನೆಯಲ್ಲಿ ಮೂಡಿ ಬಂದಿದ್ದ ಸೂಪರ್ ಹಿಟ್ ಕಾಮಿಡಿ ಚಿತ್ರ 'ರಾಮ ಶಾಮ ಭಾಮ' ಚಿತ್ರರಂಗದಲ್ಲಿ 15 ವರ್ಷ ಪೂರೈಸಿದೆ. 2005ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಡಿಸೆಂಬರ್ 9ಕ್ಕೆ 15 ವರ್ಷಕ್ಕೆ ಪೂರ್ಣಗೊಳಿಸಿದೆ.

ಈ ಸಂತಸವನ್ನು ಸಂಗೀತ ನಿರ್ದೇಶಕ ಗುರುಕಿರಣ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 2005ರ ಹಿಟ್ ಚಿತ್ರ ಎನಿಸಿಕೊಂಡಿದ್ದ ರಾಮ ಶಾಮ ಭಾಮ ರಮೇಶ್ ಅರವಿಂದ್ ನಿರ್ದೇಶನದ ಚೊಚ್ಚಲ ಸಿನಿಮಾ ಎನ್ನುವುದು ವಿಶೇಷ.

ರಮೇಶ್ ನಿರ್ದೇಶನದ ಜೊತೆಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಕಮಲ್ ಹಾಸನ್, ಶ್ರುತಿ ಹಾಗೂ ಊರ್ವಶಿ, ಡೈಸಿ ಭೋಪಣ್ಣ, ಅನಿರುದ್ಧ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

Ramesh and Kamal Hassan Starrer Rama Shama Bhama Movie Completes 15 years

ಈ ಚಿತ್ರಕ್ಕೆ ಗುರು ಕಿರಣ್ ಸಂಗೀತ ಒದಗಿಸಿದ್ದು, ಚಿತ್ರದಲ್ಲಿದ್ದ ಎರಡು ಹಾಡು ಹಿಟ್ ಆಗಿತ್ತು. ಕೆ ಮಂಜು ಈ ಸಿನಿಮಾ ನಿರ್ಮಿಸಿದ್ದರು.

ರಾಮ ಶಾಮ ಭಾಮ ಸಿನಿಮಾ ಮೂಲಕ ನಿರ್ದೇಶನದಲ್ಲಿ ಯಶಸ್ಸು ಕಂಡ ರಮೇಶ್ ಅರವಿಂದ್, ನಂತರ ಸತ್ಯವನ್ ಸಾವಿತ್ರಿ, ಆಕ್ಸಿಡೆಂಟ್, ವೆಂಕಟ ಇನ್ ಸಂಕಟ, ನಮ್ಮಣ್ಣ ಡಾನ್, ಉತ್ತಮ ವಿಲನ್, ಸುಂದರಾಂಗ ಜಾಣ ಅಂತಹ ಸಿನಿಮಾ ನಿರ್ದೇಶಿಸಿದರು.

ಹಿಂದಿಯ ಕ್ವೀನ್ ಚಿತ್ರವನ್ನು ದಕ್ಷಿಣ ಭಾರತದ ಕನ್ನಡ ಹಾಗೂ ತೆಲುಗಿನಲ್ಲಿ ರೀಮೇಕ್ ಮಾಡಿರುವ ರಮೇಶ್ ಅರವಿಂದ್ ಎರಡು ಭಾಷೆಯಲ್ಲಿ ತಾವೇ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Kannada actor Ramesh Aravind and Kamal Hassan Starrer Rama Shama Bhama Movie Completes 15 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X