Mothers Day: ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳ ಶುಭಾಶಯ.. ಅಮ್ಮಂದಿರ ನೆನೆದು ಹೇಳಿದ್ದೇನು?
ಪ್ರತಿಯೊಂದು ಮಗುವಿಗೂ ತಾಯಿಯೇ ಮೊದಲ ಗುರು. ತನ್ನ ಮಕ್ಕಳನ್ನು ತನಗಿಂತ ಹೆಚ್ಚು ಪ್ರೀತಿಸುವ ವ್ಯಕ್ತ ಭೂಮಿ ಮೇಲೆ ಯಾರಾದರೂ ಇದ್ದರೆ ಅದು ಅಮ್ಮ ಮಾತ್ರ. ಅದಕ್ಕೆ ಇಂದು (ಮೇ 14) ಇಡೀ ವಿಶ್ವವೇ ಅಮ್ಮಂದಿರ ದಿನವನ್ನಾಗಿ ಆಚರಿಸುತ್ತಿದೆ.
ಪ್ರತಿಯೊಬ್ಬ ಜೀವನದಲ್ಲಿ ಬರೋ ತಾಯಿ ಅನ್ನೋ ಪಾತ್ರವೇ ಹಾಗೇ. ಅದೆಷ್ಟೇ ವರ್ಷಗಳು ಉರುಳಿದರೂ, ಅದು ಬದಲಾಗುವುದಿಲ್ಲ. ಆಕೆ ಪ್ರೀತಿ, ಮಮಕಾರ ಕಡಿಮೆ ಆಗುವುದಿಲ್ಲ. ಮಕ್ಕಳು ಬೆಳೆದು ಅವರು ಪೋಷಕರಾದಾಗಲೂ ಅಷ್ಟೇ.. ಅಮ್ಮ ಪಾತ್ರ ಮಾತ್ರ ಬದಲಾಗುವುದಿಲ್ಲ.

ಮಗ, ಮಗಳು ಬೆಳೆದು ಅದೆಷ್ಟೇ ದೊಡ್ಡವರಾದರೂ, ಅಮ್ಮ ತನ್ನ ಬದುಕನ್ನು ರೂಪಿಸಿದನ್ನು ಮಾತ್ರ ಎಂದಿಗೂ ಮರೆಯೋದಿಲ್ಲ. ಜಗತ್ತಿನ ಅತ್ಯಂತ ನಿಸ್ವಾರ್ಥ ಮಹಿಳೆಯ ದಿನಕ್ಕೆ ಸ್ಯಾಂಡಲ್‌ವುಡ್‌ನ ತಾರೆಯರು ಮನಸಾರೆ ಶುಭಾಶಗಳನ್ನು ಅರ್ಪಿಸಿದ್ದಾರೆ.
ರಮೇಶ್ ಅರವಿಂದ್
ಸ್ಯಾಂಡಲ್‌ವುಡ್ ಅತ್ಯಂತ ಶಿಸ್ತಿನ ನಟ ರಮೇಶ್ ಅರವಿಂದ್. ಇವರ ಬದುಕು, ಆದರ್ಶಗಳೇ ಅದೆಷ್ಟೊ ಮಂದಿಗೆ ಒಂದು ಅತ್ಯುತ್ತಮ ಉದಾಹರಣೆ. ಇವರಿಗೂ ಅಮ್ಮ ಅಂದರೆ, ಬಲು ಪ್ರೀತಿ. ಹೀಗಾಗಿ ತನ್ನ ತಾಯಿಯ ಫೋಟೊ ಹಂಚಿಕೊಂಡು ಅಮ್ಮನ ಬಗ್ಗೆ ಸುಂದರವಾಗಿ ಒಂದು ಸಾಲನ್ನು ಬರೆದಿದ್ದಾರೆ.
'ರಾಷ್ಟ್ರಗೀತೆ' ತರಹ 'ವ್ಯಕ್ತಿಗೀತೆ' ಇದ್ದಿದ್ದರೆ ನಮ್ಮೆಲ್ಲರ ಆಯ್ಕೆ ಒಂದೇ "ನಮ್ಮಮ್ಮ ಅಂದ್ರೆ ನನಗೇ ಇಷ್ಟ" ಅಲ್ವಾ? ಎಂದು ನಟ ರಮೇಶ್ ರಮೇಶ್ #MotherDay, #momiswow ಅಂತ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ರಾಘವೇಂದ್ರ ರಾಜ್‌ಕುಮಾರ್
ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ವಿಶ್ವ ಅಮ್ಮಂದಿರ ದಿನವನ್ನು ನೆನಪಿಸಿಕೊಂಡಿದ್ದಾರೆ. ಅಮ್ಮ ಪಾರ್ವತಮ್ಮ ರಾಜ್‌ಕುಮಾರ್ ಜೊತೆ ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್ ಹಾಗೂ ತಾವಿರುವ ಫೋಟೊವನ್ನು ಅವರು ಹಂಚಿಕೊಂಡಿದ್ದಾರೆ.
ರವಿವರ್ಮಾ
ಸ್ಯಾಂಡಲ್‌ವುಡ್‌ನ ಸಾಹಸ ನಿರ್ದೇಶಕ ಕೇವಲ ಕನ್ನಡ ಸಿನಿಮಾಗಳಲ್ಲಿ ಮಾತ್ರ ಅಲ್ಲ. ಪರಭಾಷೆಯ ಸಿನಿಮಾಗಳಲ್ಲೂ ಜನಪ್ರಿಯರಾಗಿದ್ದಾರೆ. ಭಾರತ ಕಂಡ ಅತ್ಯದ್ಭುತ ಸಾಹಸ ನಿರ್ದೇಶಕರಲ್ಲಿ ರವಿವರ್ಮಾ ಕೂಡ ಒಬ್ಬರು. ಇವರು ತಮ್ಮ ಅಮ್ಮನ ಫೋಟೊ ಪೋಸ್ಟ್ ಮಾಡಿ, ಅಮ್ಮಂದಿರ ದಿನಕ್ಕೆ ಶುಭಕೋರಿದ್ದಾರೆ.
"ಸದಾ ನನ್ನೊಂದಿಗೆ ಇರುವ ದೇವರಿಗೆ ಪದಗಳಿಗೇ ಸಿಗದ ಪ್ರೀತಿಯ ಅಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು!" ಎಂದು ಸ್ಯಾಂಡಲ್‌ವುಡ್‌ನ ಸಾಹಸ ನಿರ್ದೇಶಕ ರವಿವರ್ಮಾ ಟ್ವೀಟ್ ಮಾಡಿ ವಿಶ್ವ ಅಮ್ಮಂದಿರ ದಿನಕ್ಕೆ ಶುಭಾಶಗಳನ್ನು ತಿಳಿಸಿದ್ದಾರೆ.
ಅಜನೀಶ್ ಬಿ ಲೋಕನಾಥ್
'ಕಾಂತಾರ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮ್ಯೂಸಿಕ್ ಡೈರೆಕ್ಟರ್ ಆಗಿರೋ ಅಜನೀಶ್ ಬಿ ಲೋಕನಾಥ್ ವಿಶ್ವ ಅಮ್ಮಂದಿರ ದಿನಕ್ಕೆ ಶುಭ ಕೋರಿದ್ದಾರೆ. ಅಮ್ಮನ ಬಗ್ಗೆ ಭಾವನಾತ್ಮಕವಾಗಿ ಸಾಲುಗಳನ್ನು ಬರೆದಿದ್ದು, ಚಿತ್ರತಂಡಕ್ಕೆ ಶುಭಕೋರಿದ್ದಾರೆ.
"ಈ ಜಗತ್ತಿನಲ್ಲಿ ಅಮ್ಮನನ್ನು ಮೀರಿಸುವ ಶಕ್ತಿ ಮತ್ತೊಂದಿಲ್ಲ. ದೇವರಿಗೂ ಮಿಗಿಲಾದ ಪ್ರೀತಿಯ ಅಮ್ಮನಿಗೆ ವಿಶ್ವ ತಾಯಂದಿರ ದಿನದ ಶುಭಾಶಯಗಳು" ಎಂದು ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಟ್ವೀಟ್ ಮಾಡಿದ್ದಾರೆ.


Click it and Unblock the Notifications











