ವೀಕೆಂಡ್ ಖುಷಿಯಲ್ಲಿ ₹1 ಕೋಟಿ ಬೆಲೆಯ ಮರ್ಸಿಡೀಸ್ ಖರೀದಿಸಿದ ರಮೇಶ್ ಅರವಿಂದ್: ಕಾರಿನ ಹೈಲೈಟ್ ಏನು?

ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಹೀರೊ ರಮೇಶ್ ಅರವಿಂದ್. ಸದಾ ನಗುಮುಖದ ಹೀರೊ ಕಂಡರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. ಹಾಗಂತ ನಟನೆಯಷ್ಟೇ ಅಲ್ಲ. ನಿರೂಪಣೆಯಿಂದಲೂ ಮನಗೆದ್ದಿದ್ದಾರೆ. ಇತ್ತೀಚೆಗಷ್ಟೇ 'ವೀಕೆಂಡ್ ವಿತ್ ರಮೇಶ್' ಸೀಸನ್ 5 ಆರಂಭ ಆಗಿದ್ದು, ವೀಕ್ಷಕರನ್ನು ಸೆಳೆಯುತ್ತಿದೆ.

'ವೀಕೆಂಡ್ ವಿತ್ ರಮೇಶ್ 5' ನಾಲ್ಕು ವರ್ಷಗಳ ಬಳಿಕ ಮತ್ತೆ ಅರಂಭ ಆಗಿದೆ. ರಮೇಶ್ ಅರವಿಂದ್ ಅದೇ ಜೋಷ್‌ನಲ್ಲಿ ಕಿರುತೆರೆಯಲ್ಲಿ ಮತ್ತೆ ಪ್ರತ್ಯಕ್ಷ ಆಗಿದ್ದಾರೆ. ಅದೇ ನಿರೂಪಣಾ ಶೈಲಿ, ಅದೇ ಲುಕ್ ನೋಡುಗರಿಗೆ ವೀಕೆಂಡ್‌ನಲ್ಲಿ ಸಖತ್ ಮನರಂಜನೆ ನೀಡುತ್ತಿದೆ. ಇದೇ ಖುಷಿಯಲ್ಲಿ ದುಬಾರಿ ಕಾರೊಂದನ್ನು ಖರೀದಿ ಮಾಡಿದ್ದಾರೆ.

Ramesh Aravind bought Mercedes Benz car worth Rs 1 cr

ವೀಕೆಂಡ್ ವಿತ್ ರಮೇಶ್ ಸಕ್ಸಸ್ ಖುಷಿಯಲ್ಲಿ ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಕಾರನ್ನು ಖರೀದಿ ಮಾಡಿದ್ದಾರೆ. ಇದರ ಬೆಲೆ ಬರೋಬ್ಬರಿ 1 ಕೋಟಿ ರೂಪಾಯಿ. ಈ ದುಬಾರಿ ಸುಂದರಿ ಇತ್ತೀಚೆಗೆ ರಮೇಶ್ ಅರವಿಂದ್ ಬಂಗಲೆ ಸೇರಿದೆ. ಈ ಕಾರಿನ ವಿಶೇಷತೆಯೇನು? ಯಾವಾಗ ಖರೀದಿ ಮಾಡಿದ್ರು? ಈ ಎಲ್ಲಾ ಡಿಟೈಲ್ಸ್ ತಿಳಿಯೋಕೆ ಮುಂದೆ ಓದಿ.

ರಮೇಶ್ ಅರವಿಂದ್ ಮನೆಗೆ ಬಂತು ಕೋಟಿ ಕಾರು

ನಟ ರಮೇಶ್ ಅರವಿಂದ್ ಐಷಾರಾಮಿ ಕಾರು ಖರೀದಿ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮರ್ಸಿಡೀಸ್ ಬೆನ್ಜ್ ಶೋ ಫೇಸ್‌ ಬುಕ್ ಪೇಜ್‌ನಲ್ಲಿ ರಮೇಶ್ ಅರವಿಂದ್ ಪತ್ನಿ ಅರ್ಚನಾ ಅರವಿಂದ್ ಜೊತೆ ಜೊತೆ ಹೋಗಿ ದುಬಾರಿ ಕಾರು ಖರೀದಿ ಮಾಡಿದ್ದಾರೆ. ಈ ವಿಡಿಯೋವನ್ನು ಮರ್ಸಿಡೀಸ್ ಬೆನ್ಜ್ ಶೋ ರೂಂ ಪೇಜ್ ರಿಲೀಸ್ ಮಾಡಿತ್ತು.

ರಮೇಶ್ ಅರವಿಂದ್‌ಗೆ ಕಾರಿನ ಬಗ್ಗೆ ಅಷ್ಟೊಂದು ಕ್ರೇಜ್ ಇದ್ದಂತೆ ಇಲ್ಲ. ಅಗತ್ಯವಿದ್ದರೆ ಮಾತ್ರ ಹೊಸ ಕಾರನ್ನು ಖರೀದಿ ಮಾಡುತ್ತಾರೆ. ಈ ಹಿಂದೆ ರಮೇಶ್ ಅರವಿಂದ್ ಬಳಿಕ ಟೊಯೋಟಾ ಕರೋಲಾ, ಔಡಿ ಅಂತ ಕಾರು ಇತ್ತು. ಅವರ ಗ್ಯಾರೇಜ್ ಜೊತೆ ಮರ್ಸಿಡೀಸ್ ಬೆನ್ಜ್‌ ಇ ಕ್ಲಾಸ್ ಕಾರು ಸೇರ್ಪಡೆಯಾಗಿದೆ.

Ramesh Aravind bought Mercedes Benz car worth Rs 1 cr

ಮರ್ಸಿಡಿಸ್ ಬೆಂಜ್ ಇ ಕ್ಲಾಸ್ ಹೈಲೈಟ್ ಏನು?

ರಮೇಶ್ ಅರವಿಂದ್ ಬಳಿ ಇದೂವರೆಗೂ ಬಿಳಿ ಬಣ್ಣದ ಕಾರು ಇತ್ತು. ಟೊಯೋಟಾ ಕರೋಲಾ ಹಾಗೂ ಔಡಿ ಕಾರು ಬಿಳಿ ಬಣ್ಣದಾಗಿತ್ತು. ಈ ಬಾರಿ ಬಣ್ಣ ಬದಲಿಸಿದ್ದು, ಕಪ್ಪು ಬಣ್ಣದ ಕಾರನ್ನು ಖರೀದಿ ಮಾಡಿದ್ದಾರೆ. ಶೈನಿ ಬ್ಲಾಕ್ ಬಣ್ಣದ ಕಾರು ಸಖತ್ ಸ್ಟೈಲಿಶ್ ಆಗಿದೆ. ಆರಂಭಿಕ ಬೆಲೆ 85 ಲಕ್ಷ ರೂಪಾಯಿ. ಕಾರು ರಸ್ತೆಗೆ ಇಳಿಯುವಾಗ 1 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

4 ಸಿಲಿಂಡರ್‌ನ ಮರ್ಸಿಡಿಸ್ ಬೆಂಜ್ ಇ ಕ್ಲಾಸ್ ಕಾರು ಗಂಟೆಗೆ 240 ಕಿ.ಮೀ ವೇಗದಲ್ಲಿ ಚಲಿಸುತ್ತೆ. 1991 ಸಿಸಿ ಎಂಜಿನ್, 194.44bhp ಪವರ್ ಹೊಂದಿದೆ. ಒಂದು ಲೀಟರ್ ಪೆಟ್ರೋಲ್‌ಗೆ ಸುಮಾರು 15 ಕಿ.ಮೀ ಮೈಲೇಜ್ ನೀಡುತ್ತೆ. ಜೊತೆ ಮ್ಯೂಸಿಕ್ ಸಿಸ್ಟಮ್,ಅಡ್ವಾನ್ಸ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಎಬಿಎಸ್, ಸನ್ ರೂಫ್, ಸೇರಿದಂತೆ ಅತ್ಯಾದುನಿಕ ಸವಲತ್ತುಗಳನ್ನು ಹೊಂದಿದೆ.

ರಮೇಶ್ ಅರವಿಂದ್ ಫುಲ್ ಬ್ಯುಸಿ

ರಮೇಶ್ ಅರವಿಂದ್ ಸುಮ್ಮನೆ ಕೂರುವವರೇ ಅಲ್ಲ. ಏನಾದರೂ ಒಂದು ಕೆಲಸದಲ್ಲಿ ಬ್ಯುಸಿಯಾಗಿ ಇರುತ್ತಾರೆ. ಸದ್ಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಇನ್ನೊಂದು ಅವರೇ ಅಭಿನಯದ 'ಶಿವಾಜಿ ಸುರತ್ಕಲ್ 2' ಸಿನಿಮಾ ಬಿಡುಗಡೆ ಸಜ್ಜಾಗಿದೆ.

ಇನ್ನೊಂದು ಕಡೆ ರಮೇಶ್ ಅರವಿಂದ್ ಮೋಟಿವೇಷನಲ್ ಸ್ವೀಕರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ನಿರ್ದೇಶನ, ನಟನೆ, ನಿರ್ಮಾಣ ಅಂತ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸದಾ ಬ್ಯುಸಿಯಾಗಿರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ವಿವಾದಗಳಿಂದ ದೂರ ಇರುವ ನಟ ಸದಾ ಪಾಸಿಟಿವ್ ಆಟಿಟ್ಯೂಡ್‌ನಿಂದ ಅಭಿಮಾನಿಗಳ ಮನಗೆದ್ದಿದ್ದಾರೆ.

More from Filmibeat

English summary
Ramesh Aravind bought Mercedes Benz car worth Rs 1 cr. On other side Weekend With Ramesh going successful, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X