ಗಡಿದಾಟಿ ಹೋಗಲಿದೆ ರಮೇಶ್ ಅರವಿಂದ್ ನಟನೆಯ 'ಶಿವಾಜಿ ಸುರತ್ಕಲ್'
ರಮೇಶ್ ಅರವಿಂದ್ ಅಭಿನಯದ 'ಶಿವಾಜಿ ಸುರತ್ಕಲ್' ಈ ವರ್ಷದ ಗಮನ ಸೆಳೆದ ಹಿಟ್ ಚಿತ್ರಗಳಲ್ಲಿ ಒಂದು. ಸಸ್ಪೆನ್ಸ್ ಥ್ರಿಲ್ಲರ್ ಕಥೆಯ 'ಶಿವಾಜಿ ಸುರತ್ಕಲ್' ವ್ಯಾಪಕ ಮೆಚ್ಚುಗೆಗೆ ಒಳಗಾಗಿತ್ತು. ಫೆಬ್ರವರಿ 21ರಂದು ಈ ಚಿತ್ರ ಬಿಡುಗಡೆಯಾಗಿತ್ತು. ಮೂರು ವಾರ ಉತ್ತಮ ಪ್ರದರ್ಶನ ನೀಡುತ್ತಿದ್ದಾಗಲೇ ಕೊರೊನಾ ವೈರಸ್ ಕಾರಣದಿಂದ ಚಿತ್ರಮಂದಿರಗಳು ಬಂದ್ ಆಗಿದ್ದರಿಂದ ಅನಿವಾರ್ಯವಾಗಿ ಪ್ರೇಕ್ಷಕರಿಂದ ದೂರವಾಗಬೇಕಾಯಿತು.
Recommended Video
ಇದರ ಬಳಿಕ ಅನೇಕರು ಶಿವಾಜಿ ಸುರತ್ಕಲ್ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಬರಲಿದೆಯೇ ಎಂದು ಕಾದಿದ್ದರು. ಆದರೆ ಚಿತ್ರತಂಡ ಒಟಿಟಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿಲ್ಲ. ಬದಲಾಗಿ ಸಿನಿಮಾ ಮಂದಿರಗಳನ್ನು ತೆರೆದು ಚಿತ್ರ ಪ್ರದರ್ಶನ ಮಾಡಲು ಸರ್ಕಾರ ಅವಕಾಶ ನೀಡಿದರೆ ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದೆ. ಸದ್ಯಕ್ಕೆ ಚಿತ್ರರಂಗ ಮಾಡಿಕೊಂಡರುವ ಒಪ್ಪಂದದ ಪ್ರಕಾರ ಲಾಕ್ ಡೌನ್ ಮುನ್ನ ಪ್ರದರ್ಶನಗೊಳ್ಳುತ್ತಿದ್ದ ಚಿತ್ರಗಳಿಗೆ ಆದ್ಯತೆ ನೀಡಬೇಕು. ಹೀಗಾಗಿ 'ಶಿವಾಜಿ ಸುರತ್ಕಲ್' ಆದ್ಯತೆ ಮೇರೆಗೆ ಚಿತ್ರಮಂದಿರಕ್ಕೆ ತರಲು ಅವಕಾಶವಿದೆ. ಈ ಮಧ್ಯೆ ಮತ್ತೊಂದು ಶುಭ ಸುದ್ದಿ ಚಿತ್ರತಂಡದಿಂದ ಬಂದಿದೆ. ಮುಂದೆ ಓದಿ...

ನೆರೆಯ ಭಾಷೆಗಳಿಗೆ 'ಶಿವಾಜಿ...'
ಶಿವಾಜಿ ಸುರತ್ಕಲ್ ಪರಭಾಷೆಯ ಚಿತ್ರರಂಗದವರನ್ನು ಸೆಳೆದಿದೆ. ಇದರಿಂದ ಕನ್ನಡದ ಗಡಿ ದಾಟಿ ಬೇರೆ ಭಾಷೆಗಳಿಗೂ 'ಶಿವಾಜಿ ಸುರತ್ಕಲ್' ಹೋಗಲಿದೆ. ರೀಮೇಕ್ ಮತ್ತು ಡಬ್ಬಿಂಗ್ ಹಕ್ಕುಗಳು ಎರಡನ್ನೂ ಪಡೆದುಕೊಳ್ಳಲು ಅನ್ಯಭಾಷೆಯ ಚಿತ್ರರಂಗದವರು ಮುಂದೆ ಬಂದಿದ್ದಾರೆ.

ಉತ್ತರ ಭಾರತದ ಭಾಷೆಗಳಿಗೆ ಡಬ್
ಆಕಾಶ್ ಶ್ರೀವತ್ಸ ನಿರ್ದೇಶನದ ಈ ಚಿತ್ರವನ್ನು ಬಾಲಿವುಡ್‌ನಲ್ಲಿ ರೀಮೇಕ್ ಮಾಡಲು ಬಿ4ಯು ಮೂವೀಸ್ ಸಂಸ್ಥೆ ಮುಂದಾಗಿದೆ. ಜತೆಗೆ ಉತ್ತರ ಭಾರತದ ಎಲ್ಲ ಭಾಷೆಗಳಿಗೂ ಡಬ್ ಮಾಡುವ ಹಕ್ಕುಗಳನ್ನು ಕೂಡ ಖರೀದಿಸಿದ್ದಾರೆ. ಉಳಿದಂತೆ ಹಿಂದಿಯಲ್ಲಿ ಯಾರು ನಟಿಸಲಿದ್ದಾರೆ? ಯಾವ ಯಾವ ಭಾಷೆಗಳಗೆ ಡಬ್ ಆಗಲಿದೆ ಎನ್ನುವುದು ಇನ್ನೂ ತಿಳಿದಿಲ್ಲ.

ಎರಡನೆಯ ಭಾಗಕ್ಕೆ ಸಿದ್ಧತೆ
ಮತ್ತೊಂದು ಖುಷಿಯ ಸಂಗತಿಯೆಂದರೆ 'ಶಿವಾಜಿ ಸುರತ್ಕಲ್'ಗೆ ದೊರೆತಿರುವ ಜನ ಮೆಚ್ಚುಗೆ ಕಂಡು ಪುಳಕಿತರಾಗಿರುವ ಚಿತ್ರತಂಡ ಅದರ ಮುಂದುವರಿದ ಭಾಗ ಮಾಡಲು ಸಹ ಮುಂದಾಗಿದೆ. ಶಿವಾಜಿಯ ಎರಡನೆಯ ಭಾಗದ ಚಿತ್ರಕಥೆ ಬರೆಯುವ ಕಾರ್ಯವನ್ನು ಕೂಡ ಆರಂಭಿಸಲಾಗಿದೆ. ಇದರಲ್ಲಿಯೂ ರಮೇಶ್ ಅರವಿಂದ್ ಅವರೇ ನಾಯಕರಾಗಿರಲಿದ್ದಾರೆ.

ಎರಡನೆಯ ಭಾಗ ಹೇಗಿರಲಿದೆ?
ಲಾಕ್ ಡೌನ್ ಸಮಯದಲ್ಲಿ ನಿರ್ದೇಶಕ ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆಯುವ ಕೆಲಸ ಶುರು ಮಾಡಿದ್ದರು. ರಮೇಶ್ ಅರವಿಂದ್ ಜತೆ ಈ ಬಗ್ಗೆ ವಿಡಿಯೋ ಕಾಲ್ ಮೂಲಕ ಚರ್ಚಿಸುತ್ತಿದ್ದಾರೆ. ಮೊದಲ ಭಾಗದಲ್ಲಿ ರಾಧಿಕಾ ಆರಾಯಣ್, ಆರೋಹಿ ನಾರಾಯಣ್ ಮುಂತಾದವರು ನಟಿಸಿದ್ದರು. ಎರಡನೆಯ ಭಾಗದಲ್ಲಿಯೂ ಅವರು ಇರಲಿದ್ದಾರೆಯೇ? ಇದು ಅದೇ ಕಥೆಯ ಮುಂದುವರಿದ ಭಾಗವೇ ಅಥವಾ ಬೇರೆಯದೇ ಕಥೆ ಮತ್ತು ಪಾತ್ರವರ್ಗವನ್ನು ಹೊಂದಿರಲಿದೆಯೇ ಮುಂತಾದ ಕುತೂಹಲಗಳಿಗೆ ಚಿತ್ರತಂಡ ಮುಂದೆ ಉತ್ತರ ನೀಡಲಿದೆ.


Click it and Unblock the Notifications











