41ನೇ ವರ್ಷಕ್ಕೆ ಕಾಲಿಟ್ಟ ನಟಿ ರಮ್ಯಾ: ಚುನಾವಣೆಗೆ ಸ್ಪರ್ಧಿಸುವ ವೇಳೆ ಮಾಡಿದ್ದ ಆಸ್ತಿ ಘೋಷಣೆ ಎಷ್ಟು? ಈಗ ಎಷ್ಟು?

ಮೋಹಕತಾರೆ ರಮ್ಯಾ ಕನ್ನಡದ ಚಿತ್ರರಂಗದ ನಂಬರ್ ನಟಿ. ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರಿಂದ ಇಂದಿಷ್ಟು ದಿನ ಸಿನಿಮಾ ರಂಗದಿಂದ ದೂರ ಉಳಿದಿದ್ದರು. ಆದರೂ, ರಮ್ಯಾ ಮೇಲಿದ್ದ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಅದಕ್ಕೆ ಅಭಿಮಾನಿಗಳು ಪ್ರೀತಿಯಿಂದ 'ಮೋಹಕತಾರೆ', 'ಲಕ್ಕಿ ಗರ್ಲ್' ಅಂತೆಲ್ಲ ಬಿರುದು ಕೊಟ್ಟಿದ್ದಾರೆ. ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಮಿಂಚಿದ ಈ ನಟಿ ಇಂದು (ನವೆಂಬರ್ 29) 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ರಮ್ಯಾ ಸದ್ಯ ರಾಜಕೀಯದಿಂದ ದೂರು ಉಳಿದಿದ್ದಾರೆ. ಮತ್ತೆ ಸಿನಿಮಾ ಕಡೆ ಮುಖ ಮಾಡಿರೋ ರಮ್ಯಾ 'ಉತ್ತರಕಾಂಡ' ಮೂಲಕ ಗ್ರ್ಯಾಂಡ್ ಆಗಿ ಕಮ್‌ ಬ್ಯಾಕ್ ಮಾಡುತ್ತಿದ್ದಾರೆ. ಕೆಆರ್‌ಜಿ ಸ್ಟುಡಿಯೋ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಸುಸಂದರ್ಭದಲ್ಲಿ ರಮ್ಯಾ ಫಸ್ಟ್ ಲುಕ್ ರಿಲೀಸ್ ಮಾಡಬಹುದೆಂದು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.

ramya-birthday-property-display

ಒಂದು ಕಾಲದಲ್ಲಿ ರಮ್ಯಾ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು. ಸುಮಾರು ಒಂದು ದಶಕಗಳ ಕಾಲ ರಮ್ಯಾ ನಂಬರ್‌ ಒನ್ ನಟಿಯಾಗಿ ಮಿಂಚಿದ್ದರು. ಈಗ ಮತ್ತೆ ಸಿನಿಮಾಗಳಲ್ಲಿ ಸಕ್ರಿಯರಾಗಿರೋದು ಲಕ್ಕಿಸ್ಟಾರ್ ಅಭಿಮಾನಿಗಳಿಗಂತೂ ಸಖತ್ ಖುಷಿಕೊಟ್ಟಿದೆ. ಈ ಸಂದರ್ಭದಲ್ಲಿ ರಮ್ಯಾ ಬಳಿ ಇರುವ ಆಸ್ತಿ ಕೇವಲ 5 ಕೋಟಿ ರೂಪಾಯಿ ಎಂದು ತಮಿಳು ಮಾಧ್ಯಮಗಳು ವರದಿ ಮಾಡುತ್ತಿವೆ. ಅಸಲಿಗೆ ರಮ್ಯಾ ಬಳಿ ಇರೋ ಆಸ್ತಿ ಇಷ್ಟೇನಾ?

ಅತೀ ಹೆಚ್ಚು ಸಂಭಾವನೆ ಪಡೆದ ನಟಿ: 2003ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ 'ಅಭಿ' ಸಿನಿಮಾ ಮೂಲಕ ಮೋಹಕತಾರೆ ರಮ್ಯಾ ಸಿನಿಮಾ ಜರ್ನಿ ಶುರುವಾಗಿತ್ತು. ಅಲ್ಲಿಂದ ರಮ್ಯಾ ಮತ್ತೆಂದು ಹಿಂದೆ ತಿರುಗಿ ನೋಡಲಿಲ್ಲ. ಸರಿ ಸುಮಾರು 40 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಸುಮಾರು 10 ರಿಂದ 12 ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಹೀಗಾಗಿ ಹೆಚ್ಚು ಬೇಡಿಕೆಯಲ್ಲಿದ್ದ ನಟಿಯೀಕೆ. ಒಂದು ಕಾಲದಲ್ಲಿ ರಮ್ಯಾ ಅತೀ ಹೆಚ್ಚು ಸಂಭಾವನೆ ಪಡೆಯೋ ನಟಿ ಅಂತ ವರದಿಗಳಾಗಿದ್ದವು. ಅಷ್ಟೇ ಅಲ್ಲ, ಕನ್ನಡದ ಶ್ರೀಮಂತ ನಟಿ ಅಂತಾನೂ ಸುದ್ದಿಯಾಗಿತ್ತು.

ramya-birthday-property-display

ರಮ್ಯಾ ಆಸ್ತಿ 4-5 ಕೋಟಿ ರೂ. ಅಷ್ಟೇನಾ?: ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಮೋಹಕತಾರೆ ರಮ್ಯಾ ಆಸ್ತಿ ನಾಲ್ಕೈದು ಕೋಟಿ ರೂಪಾಯಿ ಅಷ್ಟೇ ಅಂತ ತಮಿಳು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಸುಮಾರು ಎರಡು ದಶಕಗಳಿಂದ ರಮ್ಯಾ ಸಿನಿಮಾ ಹಾಗೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಹೀಗಿದ್ದೂ ರಮ್ಯಾ ಬಳಿ ಇರುವ ಆಸ್ತಿ ಇಷ್ಟೇನಾ? ಅನ್ನೋ ಅನುಮಾನ ಮೂಡಿದೆ. ಆದರೆ, ರಮ್ಯಾ 10 ವರ್ಷದ ಹಿಂದೆ, ಚುನಾವಣೆಗೆ ಸ್ಪರ್ಧಿಸುವಾಗಲೇ ಆಸ್ತಿ ಘೋಷಣೆ ಮಾಡಿಕೊಂಡಿದ್ದರು.

ಚುನಾವಣೆ ಸಂದರ್ಭದಲ್ಲಿ ಘೋಷಿಸಿಕೊಂಡಿದ್ದೆಷ್ಟು?: 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಮ್ಯಾ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದರು. ತಮ್ಮ ಬಳಿ 2 ಕೋಟಿ 80 ಲಕ್ಷದ 43 ಸಾವಿರದ 931 ರೂಪಾಯಿ ಅಸೆಟ್ ಇದೆ ಎಂದು ಮಾಹಿತಿ ಹಂಚಿಕೊಂಡಿದ್ದರು. ಹಾಗೇ 55 ಲಕ್ಷದ 30 ಸಾವಿರ ರೂಪಾಯಿ ಸ್ವತ್ತು ಇರುವುದಾಗಿ ರಮ್ಯಾ ಮಾಹಿತಿದ್ದರ ಬಗ್ಗೆ ಮೈನೇತಾ.ಇನ್‌ಫೋದಲ್ಲಿ ವರದಿಯಾಗಿದೆ. ಈ 12 ವರ್ಷಗಳಲ್ಲಿ ರಮ್ಯಾ ಆಸ್ತಿಯಲ್ಲಿ ಸಾಕಷ್ಟು ಏರಿಕೆ ಆಗಿರಬಹುದು. ಆದ್ರೆ, ಕಳೆದ ಚುನಾವಣೆಗೆ ಸ್ಪರ್ಧಿಸದ ಕಾರಣ ಆಸ್ತಿಯ ವಿವರ ಲಭ್ಯವಾಗಿಲ್ಲ.

ನಿರ್ಮಾಣ ಸಂಸ್ಥೆ, ಕಾರು ಅಪಾರ್ಟೆಂಟ್: ಮೋಹಕತಾರೆ ರಮ್ಯಾ ಬಳಿ ಬೆಂಗಳೂರಿನಲ್ಲಿ ಐಶಾರಾಮಿ ಅಪಾರ್ಟ್‌ಮೆಂಟ್ ಇದೆ. ಇತ್ತೀಚೆಗಷ್ಟೇ ಆಪಲ್ ಬಾಕ್ಸ್ ಅನ್ನೋ ನಿರ್ಮಾಣ ಸಂಸ್ಥೆ ಹುಟ್ಟಾಕಿದ್ದಾರೆ. ಅದರಿಂದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ನಿರ್ಮಾಣ ಆಗಿ ರಿಲೀಸ್ ಆಗಿದೆ. ದುಬಾರಿ ಕಾರುಗಳಿವೆ. ಒಟ್ನಲ್ಲಿ ರಮ್ಯಾ ಮೋಹಕತಾರೆ ಅಷ್ಟೇ ಅಲ್ಲ. ಕನ್ನಡ ಚಿತ್ರರಂಗದ ರಿಚ್ ಸ್ಟಾರ್ ಅಂತ ಆರಾಮಾಗಿ ಹೇಳಬಹುದು.

More from Filmibeat

English summary
Ramya aka Divya Spandana's 41st Birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X