For Quick Alerts
  ALLOW NOTIFICATIONS  
  For Daily Alerts

  ರಾಜ್ ಬಿ ಶೆಟ್ಟಿ ಸಿನಿಮಾ ಮಾಡ್ತಿಲ್ಲ ರಮ್ಯಾ: ಗ್ರ್ಯಾಂಡ್ ಎಂಟ್ರಿಗೆ ಇನ್ನೂ ಕಾಲ ಕೂಡಿಬಂದಿಲ್ಲ!

  |

  ಮೋಹಕತಾರೆ ರಮ್ಯಾ ಇತ್ತೀಚೆಗೆ ಫುಲ್ ಡಯೆಟ್‌ನಲ್ಲಿ ಇದ್ದರು. ಸಿನಿಮಾಗೆ ಎಂಟ್ರಿ ಕೊಡೋಕೆ ಬೇಕಿರೋ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ರಾಜ್‌ ಬಿ ಶೆಟ್ಟಿ ಜೊತೆ ಸಿನಿಮಾ ಮಾಡುವುದಾಗಿಯೂ ಅನೌನ್ಸ್ ಮಾಡಿದ್ದರು.

  ಮೋಹಕತಾರೆ ಸ್ಯಾಂಡಲ್‌ವುಡ್ ಎಂಟ್ರಿ ನೋಡಲು ಕಾತುರದಿಂದ ಕಾದು ಕೂತಿದ್ದವರಿಗೆ ರಮ್ಯಾ ಸರ್ಪ್ರೈಸ್‌ ಕೊಟ್ಟಿದ್ದೇನೋ ನಿಜ. ಆದ್ರೀಗ ಹಾಗೇ ನಿರಾಸೆಯನ್ನೂ ಮಾಡಿದ್ದಾರೆ. 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಹೊರಬಿದ್ದಿದ್ದಾರೆ ಅನ್ನೋ ಸುದ್ದಿ ಹೊರಬಿದ್ದದಿದೆ. ಅಸಲಿಗೆ ಮೋಹಕತಾರೆ ಹೊರಬೀಳಲು ಕಾರಣವೇನು? ಗಾಂಧಿನಗರದಲ್ಲಿ ಓಡಾಡುತ್ತಿರುವ ಸುದ್ದಿಯೇನು? ಅನ್ನೋವುದನ್ನು ತಿಳಿಯಲು ಮುಂದೆ ಓದಿ.

  'ಹೆಡ್ ಬುಷ್' ಟ್ರೈಲರ್ ಲಾಂಚ್ ವೇಳೆ ಅಪ್ಪು ಎಂದ ಫ್ಯಾನ್ಸ್ ಮುಂದೆ ರಮ್ಯಾ ಭಾವುಕ'ಹೆಡ್ ಬುಷ್' ಟ್ರೈಲರ್ ಲಾಂಚ್ ವೇಳೆ ಅಪ್ಪು ಎಂದ ಫ್ಯಾನ್ಸ್ ಮುಂದೆ ರಮ್ಯಾ ಭಾವುಕ

  ರಾಜ್ ಬಿ ಶೆಟ್ಟಿ ಸಿನಿಮಾ ಮಾಡ್ತಿಲ್ಲ ರಮ್ಯಾ!

  ರಾಜ್ ಬಿ ಶೆಟ್ಟಿ ಸಿನಿಮಾ ಮಾಡ್ತಿಲ್ಲ ರಮ್ಯಾ!

  ಮೋಹಕತಾರೆ ರಮ್ಯಾ ಕಮ್‌ಬ್ಯಾಕ್ ಮಾಡುವುದಕ್ಕೆ ವೇದಿಕೆ ರೆಡಿಯಾಗಿತ್ತು. ರಾಜ್‌ ಬಿ ಶೆಟ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಡೋದು ಅಂತ ನಿರ್ಧಾರನೂ ಮಾಡಿ ಆಗಿತ್ತು. ಸ್ಯಾಂಡಲ್‌ವುಡ್ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗೆ 'ಸ್ವಾತಿ ಮುತ್ತಿನ ಮಳೆ ಹನಿಯೇ' ಅಂತಾನೂ ಟೈಟಲ್ ಕೂಡ ಇಟ್ಟಾಗಿತ್ತು. ಆದ್ರೀಗ ರಮ್ಯಾ ದಿಢೀರನೇ ಈ ಸಿನಿಮಾದಲ್ಲಿ ನಟಿಸುವುದಿಲ್ಲ ಅಂತ ಹೇಳಿ ಹೊರಬಿದ್ದಿದ್ದಾರೆ ಅನ್ನೋದು ಸದ್ಯಕ್ಕೆ ಓಡಾಡುತ್ತಿರೋ ಮಾಹಿತಿ.

  ದಾವಣಗೆರೆಯಲ್ಲಿ ಬೆಣ್ಣೆದೋಸೆ ಸವಿದ ನಟಿ ರಮ್ಯಾದಾವಣಗೆರೆಯಲ್ಲಿ ಬೆಣ್ಣೆದೋಸೆ ಸವಿದ ನಟಿ ರಮ್ಯಾ

  ರಮ್ಯಾ ನೋ ಎಂದಿದ್ದೇಕೆ?

  ರಮ್ಯಾ ನೋ ಎಂದಿದ್ದೇಕೆ?

  ರಾಜ್ ಬಿ ಶೆಟ್ಟಿ ನಿರ್ದೇಶಿಸಿದ್ದ 'ಗರುಡ ಗಮನ ವೃಷಭ ವಾಹನ' ಸಿನಿಮಾ ನೋಡಿ ಮೋಹಕತಾರೆ ಫಿದಾ ಆಗಿದ್ದರು. ಆ ಸಿನಿಮಾವನ್ನು ಹಾಡಿ ಹೊಗಳಿದ್ದರು. ಅಲ್ಲಿಂದ ಶೆಟ್ಟರ ಗ್ಯಾಂಗ್‌ನಲ್ಲಿ ರಮ್ಯಾ ಹೆಸರು ಓಡಾಡುತ್ತಲೇ ಇತ್ತು. ನಿರೀಕ್ಷೆಯಂತೆಯೇ ರಮ್ಯಾ ಹಾಗೂ ರಾಜ್ ಬಿ ಶೆಟ್ಟಿ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡೋದು ಅಂತ ಅನೌನ್ಸ್ ಕೂಡ ಆಯ್ತು. ಈ ಸಿನಿಮಾ ಮೂಲಕ ರಮ್ಯಾ ಕೇವಲ ನಾಯಕಿ ಅಷ್ಟೇ ಅಲ್ಲ ನಿರ್ಮಾಪಕಿಯಾಗಿಯೂ ಎಂಟ್ರಿ ಕೊಟ್ಟಿದ್ದರು. ಆದ್ರೀಗ ದಿಢೀರನೇ ನಿರ್ಮಾಪಕಿಯಾಗಿ ಮಾತ್ರ ಮುಂದುವರೆಯುತ್ತೇನೆ ಎಂದು ಚಿತ್ರತಂಡಕ್ಕೆ ಹೇಳಿದ್ದಾರೆ ಎನ್ನಲಾಗಿದೆ. ಅಸಲಿಗೆ ರಮ್ಯಾ ಹೊರಬೀಳುವುದಕ್ಕೆ ಕಾರಣವೇನು? ಅನ್ನೋದು ನಿಖರವಾಗಿ ಗೊತ್ತಲ್ಲ. ಆದರೂ, ಕನ್ನಡದ ದೊಡ್ಡ ನಿರ್ಮಾಣ ಸಂಸ್ಥೆಯ ಸಿನಿಮಾ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಡಲು ಮನಸ್ಸು ಮಾಡಿದ್ದಾರೆ ಗುಸು ಗುಸು ಗಾಂಧಿನಗರದಲ್ಲಿ ಓಡಾಡುತ್ತಿದೆ.

  ನಿರ್ಮಾಪಕಿಯಾಗಿ ಇರುತ್ತಾರೆ ರಮ್ಯಾ!

  ನಿರ್ಮಾಪಕಿಯಾಗಿ ಇರುತ್ತಾರೆ ರಮ್ಯಾ!

  ಮೋಹಕತಾರೆ ರಮ್ಯಾ ಮತ್ತೆ ಸಿನಿಮಾರಂಗಕ್ಕೆ ಎಂಟ್ರಿ ಕೊಡಲು ನಿರ್ಧರಿಸಿದಾಗ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದರು. ತಮ್ಮದೇ ಆ್ಯಪಲ್ ಬಾಕ್ಸ್ ಸಂಸ್ಥೆ ನಿರ್ಮಾಣದಲ್ಲಿ ನಟಿಸಲು ನಿರ್ಧರಿಸಿದ್ದರು. ಆದ್ರೀಗ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದಲ್ಲಿ ನಟಿಸುತ್ತಿಲ್ಲ ಅನ್ನೋದು ಬಿಟ್ಟರೆ, ನಿರ್ಮಾಪಕಿಯಾಗಿ ಮುಂದುವರೆಯುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ರಮ್ಯಾ ಜಾಗಕ್ಕೆ ಮತ್ತೊಬ್ಬ ನಟಿ ಸಿರಿ ರವಿಕುಮಾರ್ ಎಂಟ್ರಿ ಕೊಟ್ಟಿರೋದನ್ನು ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿಯೇ ಅಧಿಕೃತವಾಗಿ ಹೇಳಲಾಗಿದೆ.

  ಸ್ವಲ್ಪ ವೇಟ್ ಮಾಡಿ

  ಸ್ವಲ್ಪ ವೇಟ್ ಮಾಡಿ

  ಹಾಗಿದ್ದರೆ, ಮೋಹಕತಾರೆ ರಮ್ಯಾ ಸ್ಯಾಂಡಲ್‌ವುಡ್ ಎಂಟ್ರಿ ಯಾವಾಗ? ಮತ್ಯಾವ ಸಿನಿಮಾ ಮೂಲಕ ಎಂಟ್ರಿ ಕೊಡುತ್ತಾರೆ? ಆ ಸಿನಿಮಾ ನಿರ್ದೇಶನ ಮಾಡುವುದು ಯಾರು? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಅಭಿಮಾನಿಗಳ ಮುಂದಿದೆ. ಸದ್ಯಕ್ಕೆ ಇದ್ಯಾವುದಕ್ಕೂ ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಉತ್ತರ ನೀಡಿಲ್ಲ. ಆದರೆ, ರಮ್ಯಾ ಬೆಳ್ಳಿಪರೆದೆ ಮೇಲೆ ಆದಷ್ಟು ಬೇಗ ಕಮ್‌ಬ್ಯಾಕ್‌ ಮಾಡುತ್ತಾರೆ. ಸ್ವಲ್ಪ ವೇಟ್ ಮಾಡಿ ಅಂತಷ್ಟೇ ಹೇಳಿದೆ.

  English summary
  Ramya Comes Out Of Raj B Shetty Movie Swathi Mutthina Male Haniye, Know More.
  Friday, October 21, 2022, 11:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X