For Quick Alerts
  ALLOW NOTIFICATIONS  
  For Daily Alerts

  'ಹೆಡ್ ಬುಷ್' ಟ್ರೈಲರ್ ಲಾಂಚ್ ವೇಳೆ ಅಪ್ಪು ಎಂದ ಫ್ಯಾನ್ಸ್ ಮುಂದೆ ರಮ್ಯಾ ಭಾವುಕ

  |

  ಧನಂಜಯ್ ನಿರ್ಮಿಸಿ, ನಟಿಸಿದ ಸಿನಿಮಾ 'ಹೆಡ್ ಬುಷ್' ಟ್ರೈಲರ್ ಲಾಂಚ್ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ದಾವಣಗೆರೆಯಲ್ಲಿ ಅದ್ಧೂರಿ ಕಾರ್ಯಕ್ರಮ ನಡೆದಿದ್ದು, ಇಡೀ ಸಿನಿಮಾ ತಂಡ ರೆಟ್ರೋ ಲುಕ್‌ನಲ್ಲಿ ವೇದಿಕೆ ಮೇಲೆ ಅಬ್ಬರಿಸಿತ್ತು.

  'ಹೆಡ್ ಬುಷ್' ಟ್ರೈಲರ್ ಲಾಂಚ್‌ ಕಾರ್ಯಕ್ರಮದಲ್ಲಿ ಸಿನಿಪ್ರಿಯರಿಗೆ ಸರ್ಪ್ರೈಸ್ ಇತ್ತು. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಮೋಹಕತಾರೆ ರಮ್ಯಾ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಇದು ರಮ್ಯಾ ಅಭಿಮಾನಿಗಳಿಗೆ ದಿಲ್ ಖುಷ್ ಮಾಡಿತ್ತು. ಈ ವೇಳೆ ಮಾತಾಡುವಾಗ, ದಾವಣಗೆರೆ ಜನರು ಅಪ್ಪು. ಅಪ್ಪು ಎಂದು ಕೂಗು ಹಾಕಿದ್ದರು. ಇದು ರಮ್ಯಾರನ್ನು ಭಾವುಕರನ್ನಾಗಿಸಿತ್ತು.

  ಅಪ್ಪು ಹೆಸರು ಕೇಳಿ ಒಂದು ಕ್ಷಣ ಭಾವುಕ

  ಅಪ್ಪು ಹೆಸರು ಕೇಳಿ ಒಂದು ಕ್ಷಣ ಭಾವುಕ

  ಮೋಹಕ ತಾರೆ ರಮ್ಯಾ ಹಾಗೂ ಪುನೀತ್ ರಾಜ್‌ಕುಮಾರ್ ನಡುವಿನ ಸ್ನೇಹ ವಿಶೇಷವಾಗಿ ಹೇಳಬೇಕಿಲ್ಲ. ರಮ್ಯಾ ತಮ್ಮ ಸಿನಿಮಾ ಕರಿಯರ್ ಆರಂಭ ಮಾಡಿದ್ದೇ ಅಪ್ಪು ಸಿನಿಮಾದಿಂದ. ಅಲ್ಲಿಂದ ಶುರುವಾದ ಜರ್ನಿ ಇನ್ನೂ ಮುಂದುವರೆಯುತ್ತಲೇ ಇದೆ. ಹೀಗಾಗಿ ಅಪ್ಪು ಹೆಸರು ಕೇಳಿದರೆ ಸಾಕು ಅವರು ಭಾವುಕರಾಗುತ್ತಾರೆ. ನಿನ್ನೆ (ಅಕ್ಟೋಬರ್ 17) ಕೂಡ ಮೋಹಕತಾರೆ ರಮ್ಯಾ ಹೆಡ್ ಬುಷ್ ಟ್ರೈಲರ್ ಲಾಂಕ್ ಕಾರ್ಯಕ್ರಮದ ಮೂಡಿನಲ್ಲಿ ಇದ್ದರು. ಈ ವೇಳೆ ಅಭಿಮಾನಿಗಳು ಅಪ್ಪು ಬಗ್ಗೆ ಮಾತಾಡುವಂತೆ ಒತ್ತಾಯ ಮಾಡಿದ್ದರು. ಅಪ್ಪು ಹೆಸರು ಕೇಳುತ್ತಿದ್ದಂತೆ ರಮ್ಯಾ ಒಂದು ಭಾವುಕರಾದರು. ತಕ್ಷಣ ಮತ್ತೆ ಸಂಬಾಳಿಸಿಕೊಂಡು 'ಹೆಡ್ ಬುಷ್' ಸಿನಿಮಾದ ಬಗ್ಗೆ ಮಾತಾಡುವುದಕ್ಕೆ ಆರಂಭಿಸಿದ್ದರು.

  'ಹೆಡ್‌ ಬುಷ್' ಟ್ರೈಲರ್ ನೋಡಿಲ್ವಾ?

  'ಹೆಡ್‌ ಬುಷ್' ಟ್ರೈಲರ್ ನೋಡಿಲ್ವಾ?

  ಅಪ್ಪು ಸಿನಿಮಾದ ಹಾಡಿಗೆ ತಂಡವೊಂದು ಹೆಜ್ಜೆ ಹಾಕಿತ್ತಿತ್ತು. ಇದೇ ಹಾಡಿನ ಮೂಲಕವೇ ಮೋಹಕತಾರೆ ರಮ್ಯಾ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಸೀರೆಯುಟ್ಟು ದೇಸಿ ಗೆಟಪ್‌ನಲ್ಲಿ ವೇದಿಕೆ ಮೇಲೆ ಬಂದಿದ ರಮ್ಯಾ ನೋಡಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದರು. "ನಿಮ್ಮೆಲ್ಲರನ್ನೂ ನೋಡಿ ತುಂಬಾನೇ ಖುಷಿ ಆಯ್ತು. ಇಷ್ಟು ಮಳೆ ಬಂದರೂ ನೀವೆಲ್ಲರೂ ಕಾಯ್ತಾ ಇದ್ದೀರಾ.. ಹೆಡ್ ಬುಷ್ ಟ್ರೈಲರ್ ನೋಡಿದ್ರಾ? ನೋಡಿಲ್ವಾ? ಯೂಟ್ಯೂಬ್ ಇದೆಯಾ? ಅದರಲ್ಲಿ ಹೆಡ್ ಬುಷ್ ಟ್ರೈಲರ್ ನೋಡಿ. ನನಗಂತೂ ತುಂಬಾನೇ ಇಷ್ಟ ಆಯ್ತು." ಎಂದು ಹೆಡ್‌ ಬುಷ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.

  'ಧನು ನನಗೆ ತುಂಬಾ ಓಳ್ಳೆ ಫ್ರೆಂಡ್

  'ಧನು ನನಗೆ ತುಂಬಾ ಓಳ್ಳೆ ಫ್ರೆಂಡ್

  ಧನಂಜಯ್ ಹಾಗೂ ಮೋಹಕತಾರೆ ರಮ್ಯಾ ಇಬ್ಬರ ಪರಿಚಯ ಹಳೆಯದ್ದೇನಲ್ಲ. ಇತ್ತೀಚೆಗಷ್ಟೇ ಇಬ್ಬರ ಪರಿಚಯ ಆಗಿತ್ತು. ಧನಂಜಯ್ ಹಾಗೂ ರಮ್ಯಾ ಹಲವು ಬಾರಿ ಭೇಟಿ ಆಗಿದ್ದಾರೆ. ಧನಂಜಯ್ ಶೂಟಿಂಗ್ ಸೆಟ್ಟಿಗೂ ಹೋಗಿದ್ದರು. ಇದೇ ಸ್ನೇಹಕ್ಕೆ ಹೆಡ್ ಬುಷ್ ಟ್ರೈಲರ್ ಲಾಂಚ್‌ಗೂ ಬಂದಿದ್ದರು. ಈ ವೇಳೆ ಧನಂಜಯ್ ಹಾಗೂ ಯೋಗಿ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. "ಧನು ಬಗ್ಗೆ ಹೇಳಬೇಕು ಅಂದ್ರೆ, ನನಗೆ ಇತ್ತೀಚೆಗೆ ಪರಿಚಯ ಆಗಿದ್ದು, ಬಟ್ ನನಗೆ ಒಂದೊಳ್ಳೆ ಫ್ರೆಂಡ್ ಅಂತಾನೇ ಹೇಳಬಹುದು. ಹೆಡ್ ಬುಷ್ ರಿಲೀಸ್ ಆಗ್ತಿರೋದು ಯಾವಾಗ ಅಂತ ಗೊತ್ತಾ ನಿಮಗೆ? ಅಕ್ಟೋಬರ್ 21ನೇ ತಾರೀಕು. ನೀವೆಲ್ಲರೂ ನೋಡ್ತೀರಾ? ನಾನು ಹೆಡ್ ಬುಷ್ ಟೀಮ್‌ಗೆ ಶುಭ ಕೋರುತ್ತೇನೆ. ವಿಶೇಷವಾಗಿ ಧನುಗೆ, ಶ್ರುತಿ ಹರಿಹರನ್, ಮತ್ತೆ ಯೋಗಿಗೆ. ನೀವು ಸಿದ್ಲಿಂಗು ಪಿಚ್ಚರ್ ನೋಡಿದ್ದೀರಾ?" ಅಂತ ಆ ಸಿನಿಮಾದ ಹಾಡು ಹಾಡಿದ್ರು.

  'ದಾವಣಗೆರೆ ಬೆಣ್ಣೆ ದೋಸೆ ತಿಂತೀನಿ'

  'ದಾವಣಗೆರೆ ಬೆಣ್ಣೆ ದೋಸೆ ತಿಂತೀನಿ'

  ರಮ್ಯಾ ತಮ್ಮ ಮಾತಿನ ಮಧ್ಯೆನೇ ತಮ್ಮ ಅಭಿಮಾನಿಯನ್ನು ಕರೆದು ಸ್ಟೇಜ್ ಮೇಲೆ ಸೆಲ್ಫಿ ಕೊಟ್ರು. ಅಭಿಮಾನಿಗಳ ಜೊತೆ ಒಂದಿಷ್ಟು ಹೊತ್ತು ಕನೆಕ್ಟ್ ಆದರು. ಹಾಗೇ ದಾವಣಗೆರೆ ಹಾಗೂ ದಾವಣಗೆರೆ ದೋಸೆ ಬಗ್ಗೆನೂ ಮಾತಾಡಿದ್ರು. "ನಾನು ಇಷ್ಟು ದೂರ ಬಂದಿದ್ದೀನಿ. ಡಯಟ್‌ನಲ್ಲಿ ಇದ್ದರೂ ನಾನು ಬೆಳಗ್ಗೆ ದಾವಣಗೆರೆ ಬೆಣ್ಣೆ ದೋಸೆ ತಿಂತೀನಿ. ಗುರು ಕೊಟ್ಟೂರೇಶ್ವರದಲ್ಲೇ ಬೆಣ್ಣೆ ದೋಸೆ ತಿನ್ನುತ್ತೇನೆ. ಬೆಳಗ್ಗೆ ತಿಂಡಿ ಅಲ್ಲೇನೇ." ಎಂದು ರಮ್ಯಾ ದಾವಣಗೆರೆ ಅಭಿಮಾನಿಗಳಿಗೆ ಮಾತು ಕೊಟ್ಟರು.

  English summary
  Ramya Got Emotional About Puneeth Rajkumar In Head Bush Trailer Launch In Davanagere, Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X