ಡಿಕೆ ಶಿವಕುಮಾರ್ ಸಿಎಂ; ಕಾವೇರಿ ಮಡಿಲ ಹೆಣ್ಣುಮಗಳು ರಮ್ಯಾ ರಾಜ್ಯ ರಾಜಕಾರಣಕ್ಕೆ ಬರ್ತಾರಾ? ಇದುವೇ ಮೋಹಕ ಪ್ರತಿಕ್ರಿಯೆ

ಇಂದಿನಿಂದ (ಜೂನ್ 3) ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ರಾಜ್ಯಬಾರ ಶುರುವಾಗಿದೆ. ಉಳಿದಿರುವ ಎರಡು ವರ್ಷಗಳಲ್ಲಿ ಡಿಕೆಶಿ ಮುಖ್ಯಮಂತ್ರಿಯಾಗಿ ಏನೆಲ್ಲ ಸಾಧನೆಗಳನ್ನು ಮಾಡುತ್ತಾರೆ? ಇವರ ಆಡಳಿತ ವೈಖರಿ ಕನ್ನಡಿಗರನ್ನು ಸೆಳೆಯುತ್ತಾ? ಇಂತಹ ಒಂದಿಷ್ಟು ಸಹಜವಾಗಿಯೇ ಹುಟ್ಟಿಕೊಂಡಿವೆ. ಅದಕ್ಕೆ ಮುಂದಿನ ದಿನಗಳಲ್ಲಿ ಉತ್ತರವೂ ಸಿಗಲಿದೆ.

ಡಿಕೆ ಶಿವಕುಮಾರ್ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ನೂರೆಂಟು ಲೆಕ್ಕಾಚಾರಗಳು ಶುರುವಾಗಿವೆ. ಡಿಕೆಶಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಯಾರೆಲ್ಲ ಆಗಮಿಸಿದ್ದರು ಅನ್ನುವುದರಿಂದ ಹಿಡಿದು ಆತ್ಮೀಯರವರೆಗೂ ನೂರೆಂಟು ವಿಶ್ಲೇಷನೆಗಳು ನಡೆಯುತ್ತಿವೆ. ಅದರಲ್ಲಿ ಮೋಹಕತಾರೆ ರಮ್ಯಾ ಹೆಸರು ಕೂಡ ಕೇಳಿ ಬರುತ್ತಿದೆ. ಕರ್ನಾಟಕ ರಾಜಕೀಯದಲ್ಲಿ ಮತ್ತೆ ರಮ್ಯಾ ಹೆಸರು ಓಡಾಡುತ್ತಿದೆ.

Ramya may enter Karnataka Politics after DK Shivakumar take oath as CM here is her reaction

ಸಿಎಂ ಡಿಕೆಶಿಗೆ ಆತ್ಮೀಯರಾಗಿರುವ ರಮ್ಯಾ ಕರ್ನಾಟಕದ ರಾಜಕೀಯಕ್ಕೆ ಎಂಟ್ರಿ ಕೊಡುಬಹುದೇ? ಮತ್ತೆ ರಾಜಕಾರಣಕ್ಕೆ ಮರು ಪ್ರವೇಶ ಮಾಡುತ್ತಾರಾ? ಇಂತಹ ರಾಜಕೀಯ ಲೆಕ್ಕಾಚಾರಗಳು ಆರಂಭ ಆಗಿವೆ. ಮೋಹಕತಾರೆಗೆ ಡಿಕೆ ಶಿವಕುಮಾರ್ ಪ್ರಮುಖ ಜವಾಬ್ದಾರಿಯನ್ನು ಕೊಡಬಹುದೆಂಬ ಲೆಕ್ಕಾಚಾರಗಳು ಹಾಕಲಾಗುತ್ತಿದೆ. ಆದರೆ, ಈ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ರಮ್ಯಾ ನ್ಯೂಸ್ 18ಗೆ ಪ್ರತಿಕ್ರಿಯೆ ನೀಡಿದ್ದಾರೆ.

ರಮ್ಯಾ ರಾಜಕಾರಣಕ್ಕೆ ಮರಳಬಹುದೇ?

ಮೋಹಕತಾರೆ ರಮ್ಯಾ ಬಗ್ಗೆ ರಾಜಕೀಯ ವಿಶ್ಲೇಷಕರು ಕಣ್ಣಿಟ್ಟಿದ್ದಾರೆ. ಡಿಕೆಶಿ ಸಿಎಂ ಆಗುತ್ತಿದ್ದಂತೆ ರಮ್ಯಾ ರಾಜ್ಯ ರಾಜಕಾರಣಕ್ಕೆ ಪ್ರವೇಶ ಮಾಡುವ ಬಗ್ಗೆ ಅವರದ್ದೇ ಆದ ಲೆಕ್ಕಾಚಾರಗಳು ಶುರುವಾಗಿವೆ. ರಾಜಕೀಯ ವಿಶ್ಲೇಷಕರ ಪ್ರಕಾರ, ರಮ್ಯಾ ಮರುಪ್ರವೇಶ ಈ ಎಲ್ಲಾ ಕಾರಣಗಳಿಗೆ ಆಗಬಹುದೆಂದು ವಿಶ್ಲೇಷಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ಹಾಗೂ ಜನಪ್ರಿಯ ಯುವ ಮಹಿಳಾ ನಾಯಕಿಯ ಕೊರತೆಯಿದೆ. ಹೀಗಾಗಿ ಮಹಿಳೆಯನ್ನು ಕಾಂಗ್ರೆಸ್‌ನತ್ತ ಸೆಳೆಯುವುದಕ್ಕೆ ರಮ್ಯಾ ಅವರ ವರ್ಚಸ್ಸು ದೊಡ್ಡ ಅಸ್ತ್ರವಾಗಬಲ್ಲದು.

ಅಲ್ಲದೇ ಹಳೇ ಮೈಸೂರು ಭಾಗದಲ್ಲಿ ರಮ್ಯಾ ಪ್ರಬಲ ನಾಯಕಿಯಾಗಬಹುದು. ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ರಮ್ಯಾಗೆ ಜನ ಬೆಂಬಲ ಸಿಗಬಹುದು. ರಮ್ಯಾ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾದರೆ ಈ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಅನುಕೂಲ ಆಗಬಹುದು. ಹೀಗಾಗಿ ಡಿಕೆ ಶಿವಕುಮಾರ್ ಮುಂದಿನ ಚುನಾವಣೆಗೆ ಈಗಿನಿಂದಲೇ ರಮ್ಯಾ ಅವರನ್ನು ಅಖಾಡಕ್ಕೆ ಇಳಿಸುವ ಸಾಧ್ಯತೆಯಿದೆ.

Ramya may enter Karnataka Politics after DK Shivakumar take oath as CM here is her reaction

ರಮ್ಯಾ ಪ್ರತಿಕ್ರಿಯೆ ಏನು?

ಮೋಹಕತಾರೆ ರಮ್ಯಾ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ? ಎನ್ನುವ ಚರ್ಚೆಯಂತೂ ಜೋರಾಗಿಯೇ ನಡೆಯುತ್ತಿದೆ. ರಾಜ್ಯ ಸಭೆಗೆ ರಮ್ಯಾ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲೇ ನ್ಯೂಸ್​18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ಸದ್ಯಕ್ಕೆ ಅದ್ಯಾವುದೂ ಇಲ್ಲ. ಎಲ್ಲದ್ದಕ್ಕೂ ಕಾಲ ಕೂಡಿ ಬರಬೇಕು" ಎಂದು ರಮ್ಯಾ ಹೇಳಿದ್ದಾರೆ.

English summary
Ramya may enter Karnataka Politics after DK Shivakumar take oath as CM. Ramya reacted to media that it has lot of time.
Read more about: ramya dk shivakumar politics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X