ರಮ್ಯಾ, ರಶ್ಮಿಕಾ ಮಂದಣ್ಣ ವೋಟ್ ಹಾಕಿಲ್ವಂತೆ; ಅಂತಹ ಕೆಲಸ ಏನಿತ್ತು?

ಈಗಾಗಲೇ ಮೊದಲ ಹಂತದ ಲೋಕಸಭೆ ಚುನಾವಣೆ ನಡೆದಿದೆ. ಇಂದು (ಏಪ್ರಿಲ್ 26) ಎರಡನೇ ಹಂತದ ಚುನಾವಣೆ ಕೂಡ ನಡೆದಿದೆ. ಇದರಲ್ಲಿ ಕರ್ನಾಟಕದ ಸುಮಾರು 14 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದೆ. ಎಂದಿನಂತೆ ಸಿನಿಮಾ ತಾರೆಯರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿ ಜನರಿಗೆ ಪ್ರೇರಣೆಯಾಗುವ ಕೆಲಸ ಮಾಡಿದ್ದರು.

ಕೆಲವು ಸೆಲೆಬ್ರೆಟಿಗಳು ಅದೆಷ್ಟೇ ಬ್ಯುಸಿಯಾಗಿದ್ದರೂ ಇದೊಂದು ದಿನ ಬಿಡುವು ಮಾಡಿಕೊಂಡು ಮತದಾನ ಮಾಡಲು ಬರುತ್ತಾರೆ. ಮತ್ತೆ ಕೆಲವರು ವೋಟ್ ಮಾಡುವುದನ್ನು ಮರೆತುಬಿಟ್ಟಂತೆ ಕಾಣುತ್ತಿದೆ. ಈ ಬಾರಿ ವೋಟ್ ಮಾಡದವರ ಪಟ್ಟಿಯಲ್ಲಿ ಮೋಹಕತಾರೆ ರಮ್ಯಾ, ರಶ್ಮಿಕಾ ಮಂದಣ್ಣ ಹೆಸರುಗಳು ಸೇರಿಕೊಂಡಿವೆ.

Ramya Rashmika Mandanna did not cast a vote in the Karnataka Lok Sabha Election 2024

ಮೋಹಕ ತಾರೆ ರಮ್ಯಾ ಇತ್ತೀಚೆಗೆ ಆಕ್ಟಿವ್ ಆಗಿಲ್ಲ. ರಾಜಕೀಯದಿಂದ ದೂರ ಉಳಿದಿದ್ದ ರಮ್ಯಾ, ಸಿನಿಮಾಗಳ ಕಡೆ ಮುಖ ಮಾಡಿದ್ದರು. ಡಾಲಿ ಧನಂಜಯ್ ನಟಿಸುತ್ತಿರುವ 'ಉತ್ತರಕಾಂಡ' ಸಿನಿಮಾದಲ್ಲಿ ನಾಯಕಿಯಾಗಿ ಕಮ್‌ಬ್ಯಾಕ್ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ, ಇತ್ತೀಚೆಗೆ ಆ ಸಿನಿಮಾದಿಂದಲೂ ಹೊರ ಬಂದಿದ್ದರು. ಆಗ ರಮ್ಯಾ ಮತ್ತೆ ರಾಜಕೀಯಕ್ಕೆ ಎಂಟ್ರಿ ಕೊಡಬಹುದೆಂದು ನಿರೀಕ್ಷೆ ಮಾಡಲಾಗಿತ್ತು.

2014ರ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ರಮ್ಯಾ ಸೋಲಿನ ರುಚಿ ಕಂಡಿದ್ದರು. ಅಲ್ಲಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ. ಆದರೆ, ಕಾಂಗ್ರೆಸ್‌ನ ಸೋಶಿಯಲ್ ಮೀಡಿಯಾವನ್ನು ರಮ್ಯಾ ನೋಡಿಕೊಳ್ಳುತ್ತಿದ್ದರು. ಬಳಿಕ ಅಲ್ಲಿಂದಲೂ ಹೊರಬಂದಿರೋ ನಟಿ ಮತ್ತೆ ರಾಜಕೀಯದ ಕಡೆ ಮುಖ ಮಾಡುವುದಿಲ್ಲ ಅನ್ನೋ ಸುಳಿವು ನೀಡಿದ್ದರು.

ಇವರ ರಾಜಕಿಯ, ಸಿನಿಮಾ ನಡೆ ಏನೇ ಇದ್ದರೂ ಮತದಾನ ಮಾಡುವುದಕ್ಕೆ ಬರುತ್ತಾರೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಬಾರಿ ಕೂಡ ರಮ್ಯಾ ವೋಟ್ ಮಾಡಿಲ್ಲ. ಇದಕ್ಕೆ ಕಾರಣವೇನು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ರಮ್ಯಾ ಮಂಡ್ಯದ ಪಿ ಎಲ್‌ ಡಿ ಬ್ಯಾಂಕ್ ಮತಗಟ್ಟೆಯಲ್ಲಿ ಹೆಸರಿದೆ ಎಂದು ವರದಿಯಾಗಿದೆ.

Ramya Rashmika Mandanna did not cast a vote in the Karnataka Lok Sabha Election 2024

ರಮ್ಯಾ ವೋಟ್ ಹಾಕದೇ ಇರೋದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದಿನ ಎರಡು ಚುನಾವಣೆಯಲ್ಲೂ ರಮ್ಯಾ ವೋಟ್ ಮಾಡಿಲ್ಲ ಎಂದು ವರದಿಯಾಗಿದೆ. 2019ರ ಲೋಕಸಭೆ ಚುನಾವಣೆ ಹಾಗೂ 2023ರ ವಿಧಾನಸಭೆ ಚುನಾವಣೆಯಲ್ಲೂ ಮೋಹಕತಾರೆ ಮತದಾನ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಈಗ 2024ರಲ್ಲೂ ರಮ್ಯಾ ವೋಟ್ ಮಾಡಿಲ್ಲ.

ಇವರೊಂದಿಗೆ ರಶ್ಮಿಕಾ ಮಂದಣ್ಣ ಕೂಡ ಮತದಾನ ಮಾಡಿಲ್ಲ ಎಂದು ವರದಿಯಾಗಿದೆ. ರಶ್ಮಿಕಾ ಹುಟ್ಟೂರು ವಿರಾಜಪೇಟೆಯಲ್ಲಿ ಮತಚಲಾಯಿಸಬೇಕಿತ್ತು ಎನ್ನಲಾಗಿದೆ. ಆದರೆ, ರಶ್ಮಿಕಾ ಬಹುಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾದ ಬಳಿಕ ಕರ್ನಾಟಕದಲ್ಲಿ ಇರುವು ಕಡಿಮೆಯಾಗಿದೆ. ಹೀಗಾಗಿ ವೋಟ್ ಹಾಕದೇ ಇರುವುದಕ್ಕೆ ಅಸಲಿ ಕಾರಣವೇನು? ಅನ್ನೋದು ಇನ್ನೂ ತಿಳಿದು ಬಂದಿಲ್ಲ.

ಸ್ಯಾಂಡಲ್‌ವುಡ್ ನಟ ಪ್ರಮುಖ ತಾರೆಯರು ವೋಟ್ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್​, ದರ್ಶನ್, ಸುದೀಪ್, ಉಪೇಂದ್ರ, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ರವಿಚಂದ್ರನ್​, ರಮೇಶ್ ಅರವಿಂದ್​​ ಮತಚಲಾಯಿಸಿದ್ದಾರೆ. ಇನ್ನು ಯಾರೆಲ್ಲ ವೋಟ್ ಮಾಡಿಲ್ಲ ಅನ್ನೋದು ಇನ್ನಷ್ಟೇ ತಿಳಿದು ಬರಬೇಕಿದೆ.

More from Filmibeat

English summary
Ramya and Rashmika Mandanna did not cast a vote Lok Sabha Election 2024:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X