ಡಾಲಿ–ಅಮೃತಾ 'ಆಫ್‌ಲೈನ್' ಕೆಮಿಸ್ಟ್ರಿನೂ ಸೂಪರ್ ಎಂದ ರಮ್ಯಾ: ನೆಟ್ಟಿಗರು ಮಲೆ ಮಾದೇಶ್ವರ ದೇವಸ್ಥಾನ ನೆನೆದಿದ್ದೇಕೆ?

ಮೋಹಕತಾರೆ ರಮ್ಯಾ ಹಾಗೂ ಡಾಲಿ ಧನಂಜಯ್ ಇಬ್ಬರೂ ಕ್ಲೋಸ್ ಫ್ರೆಂಡ್ಸ್ ಆಗಿದ್ದಾರೆ. ಜೊತೆಗೆ 'ಯುದ್ಧಕಾಂಡ' ಸಿನಿಮಾವನ್ನೂ ಮಾಡುತ್ತಿದ್ದಾರೆ. ಹೀಗಾಗಿ ಆತ್ಮೀಯತೆ ಮತ್ತಷ್ಟು ಹೆಚ್ಚಾಗಿದೆ. ಈ ಹಿಂದೆ ರಮ್ಯಾ ಹಲವು ಬಾರಿ ಧನಂಜಯ್‌ರನ್ನು ಹಲವು ಬಾರಿ ಹಾಡಿ ಹೊಗಳಿದ್ದೂ ಇದೆ.

ಇನ್ನೊಂದ್ಕಡೆ ರಮ್ಯಾ ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟಿಯರೊಂದಿಗೂ ಆತ್ಮೀಯರಾಗಿದ್ದಾರೆ. 'ಗುರುದೇವ್ ಹೊಯ್ಸಳ'ದ ಹೀರೊಯಿನ್ ಅಮೃತಾ ಅಯ್ಯಂಗಾರ್, ದಿಯಾ ನಟಿ ಖುಷಿ ಹೀಗೆ ಹಲವು ನಟಿಯರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದಾರೆ. ಈ ಎಲ್ಲಾ ಕಾರಣಕ್ಕೆ ರಮ್ಯಾ ಇಂದು ಡಾಲಿಯ 25ನೇ ಸಿನಿಮಾವನ್ನು ಅವರೊಂದಿಗೆ ಕೂತು ವೀಕ್ಷಿಸಿದ್ದಾರೆ.

Ramya says Online And offline Chemistry Of Dhananjay and Amrutha Iyengar Is in Hoysala

ರಮ್ಯಾಗೆ ಸಿನಿಮಾ ನೋಡಿ ಹೊರಬರುತ್ತಿದ್ದಂತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಕೆಮಿಸ್ಟ್ರಿ ಬಗ್ಗೆನೂ ಮಾತಾಡಿದ್ದಾರೆ. ಈ ಜೋಡಿ ಮೇಲೆ ಸ್ಯಾಂಡಲ್‌ವುಡ್ ಸೀನಿಯರ್‌ಗಳು ಕಣ್ಣು ಇಟ್ಟಿರೋ ಹಾಗಿದೆ. ಮೊನ್ನೆ ಕಿಚ್ಚ ಇವರಿಬ್ಬರ ಕಾಲೆಳೆದ್ರೆ, ಇಂದು ರಮ್ಯಾ ಕೆಮಿಸ್ಟ್ರಿ ಬಗ್ಗೆ ಮಾತಾಡಿದ್ದಾರೆ. ಅಷ್ಟಕ್ಕೂ ರಮ್ಯಾ ಹೇಳಿದ್ದೇನು? ಈ ಜೋಡಿ ಮಧ್ಯೆ ಏನು ನಡೀತಿದೆ? ನೆಟ್ಟಿಗರು ಏನಂತಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಡಾಲಿ-ಅಮೃತಾ ಬಗ್ಗೆ ಮೋಹಕ ಮಾತುಗಳೇನು?

ಸ್ಯಾಂಡಲ್‌ವುಡ್‌ನ ಸೂಪರ್ ಜೋಡಿಗಳಲ್ಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಕೂಡ ಇದ್ದಾರೆ. 'ಗುರುದೇವ್ ಹೊಯ್ಸಳ' ಈ ಜೋಡಿ ಜೊತೆಯಾಗಿ ನಟಿಸುತ್ತಿರುವ ಮೂರನೇ ಸಿನಿಮಾ. 'ಪಾಪ್‌ಕಾರ್ನ್ ಮಂಕಿ ಟೈಗರ್','ಬಡವ ರಾಸ್ಕಲ್' ಉಳಿದ ಎರಡು ಸಿನಿಮಾಗಳು. ಈ ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. ಈಗ ಹೊಯ್ಸಳದಲ್ಲಿ ಮತ್ತೆ ಒಂದಾಗಿದ್ದಾರೆ. ಮೋಹಕತಾರೆ ರಮ್ಯಾಗೂ ಈ ಜೋಡಿ ತುಂಬಾನೇ ಹಿಡಿಸಿದ್ದು, 10ಕ್ಕೆ 10 ಮಾರ್ಕ್ಸ್ ಕೊಟ್ಟಿದ್ದಾರೆ.

Ramya says Online And offline Chemistry Of Dhananjay and Amrutha Iyengar Is in Hoysala

"ನನಗೆ ಸಿನಿಮಾ ತುಂಬಾನೇ ಇಷ್ಟ ಆಯ್ತು. ಹಾಗೇ ಇಬ್ಬರಿಗೂ ಮಾರ್ಕ್ಸ್ ಕೊಡೋಕೆ ಆಗಲ್ಲ. ಇಬ್ಬರೂ ಒಂದೇ ಪಾತ್ರ ಮಾಡಿದ್ರೆ, ಕೊಡಬಹುದಿತ್ತು. ಅವರು ಬೇರೆ ಪಾತ್ರ, ಇವರು ಬೇರೆ ಪಾತ್ರ ಮಾಡಿದ್ದಾರೆ. ಹಾಗೆ ಹೋಲಿಕೆ ಮಾಡುವುದಕ್ಕೆ ಆಗುವುದಿಲ್ಲ. ಇಬ್ಬರಿಗೂ 10ಕ್ಕೆ 10 ಅಂಕ." ಎಂದು ರಮ್ಯಾ ಈ ಜೋಡಿಗೆ ಮಾರ್ಕ್ಸ್ ಕೊಟ್ಟಿದ್ದಾರೆ.

ಏನದು ಆನ್‌ಲೈನ್ ಹಾಗೂ ಆಫ್‌ಲೈನ್ ಕೆಮಿಸ್ಟ್ರಿ?

'ಗುರುದೇವ್ ಹೊಯ್ಸಳ'ದಲ್ಲಿ ಇಬ್ಬರ ಪಾತ್ರದ ಬಗ್ಗೆ ಮಾತಾಡುವಾಗ, ರಮ್ಯಾ ತೆರೆಯಲ್ಲಿ ಹಾಗೂ ತೆರೆಯ ಹಿಂದೆ ಕೆಮಿಸ್ಟ್ರಿ ಚೆನ್ನಾಗಿದೆ ಎಂದು ಹೇಳಿದ್ದಾರೆ. "ಇಬ್ಬರದ್ದು ಆನ್‌ಲೈನ್ ಹಾಗೂ ಆಫ್‌ಲೈನ್ ಕೆಮಿಸ್ಟ್ರಿ ಎರಡೂ ಸೂಪರ್ ಆಗಿರುತ್ತೆ. ಈಗಲೇ ನೋಡಿ ಇಬ್ಬರು ಎಷ್ಟು ನಾಚಿಕೊಳ್ಳುತ್ತಾರೆ ಅಂತ. ಸಿನಿಮಾದಲ್ಲೂ ನಿಮ್ಮಿಬ್ಬರ ಜೋಡಿ ತುಂಬಾನೇ ಚೆನ್ನಾಗಿದೆ." ಎಂದು ಕಾಲೆಳೆದಿದ್ದಾರೆ.

ಈ ಸಿನಿಮಾದಲ್ಲಿ ಧನಂಜಯ್ ಹಾಗೂ ಅಮೃತಾ ಪತಿ-ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ರಮ್ಯಾಗೆ ಇಷ್ಟ ಆಗಿತ್ತು. "ಗಂಡ ಹೆಂಡತಿ ಪಾತ್ರದಲ್ಲಿ ನಿಮ್ಮಲ್ಲಿ ನಟನೆ ಅನ್ನೋದನ್ನು ನೋಡಿಲ್ಲ. ಅಷ್ಟು ನ್ಯಾಚುರಲ್ ಆಗಿ ಬಂದಿದೆ." ಎಂದು ಈ ಜೋಡಿಯನ್ನು ಹಾಡಿ ಹೊಳಿದಿದ್ದಾರೆ.

ನೆಟ್ಟಿಗರ ಕಮೆಂಟ್ ಏನು?

ಡಾಲಿ ಹಾಗೂ ಅಮೃತಾ ಅಯ್ಯಂಗಾರ್ ಆನ್‌ಲೈನ್ ಆಫ್‌ಲೈನ್ ಕೆಮಿಸ್ಟಿ ಬಗ್ಗೆ ರಮ್ಯಾ ಮಾತಾಡುತ್ತಿದ್ದಂತೆ, ನೆಟ್ಟಿಗರು ಅಲರ್ಟ್ ಆಗಿದ್ದಾರೆ. " ರಮ್ಯಾ ಹೇಳಿದ ಮೇಲೆ ಮದುವೆ ಕನ್ಫರ್ಮ್" ಅಂತ ಒಬ್ಬರು ಕಮೆಂಟ್ ಮಾಡುತ್ತಿದ್ದಾರೆ. ಇನ್ನೊಬ್ಬರು "2023ರಲ್ಲಿ ಮಲೆ ಮಾದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಡಾಲಿ, ಅಮೃತಾ ಮದುವೆ ಫಿಕ್ಸ್ ಅಂತ ಕಮೆಂಟ್ ಮಾಡಿದ್ದಾರೆ.

'ಗುರುದೇವ್ ಹೊಯ್ಸಳ' ಸಿನಿಮಾ ಟ್ರೈಲರ್ ಲಾಂಚ್ ಮಾಡಲು ಬಂದಿದ್ದ ಕಿಚ್ಚ ಸುದೀಪ್ ಕೂಡ ಇಬ್ಬರ ಕಾಲೆಳೆದಿದ್ದರು. ವೇದಿಕೆ ಮೇಲೆ ಅಮೃತಾ ಅಯ್ಯಂಗಾರ್ ಜೊತೆನೇ ಯಾಕೆ ಹೆಚ್ಚಾಗಿ ನಟಿಸುತ್ತೀರಾ? ಅಂತ ಪ್ರಶ್ನೆ ಮಾಡಿದ್ದರು. ಆಗಲೂ ಇಬ್ಬರು ನಾಚಿಕೊಂಡಿದ್ದರು.

More from Filmibeat

English summary
Ramya says Online And offline Chemistry Of Dhananjay and Amrutha Iyengar Is in Hoysala, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X